ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Friday 30 September 2016

"ನರಲೀಲೆ" ಕೃತಿ ಕುರಿತು ಒಂದು ವಿಮರ್ಶೆ

*ನರಲೀಲೆ* ಕವನ ಸಂಕಲನವನ್ನು ಶಿವಮೊಗ್ಗದಿಂದ ಕಳಿಸಿಕೊಟ್ಟಿರುವ ಆತ್ಮೀಯ ಸ್ನೇಹಿತರಾದ *ರವಿರಾಜ್ ಸಾಗರ* ಅವರಿಗೆ ಧನ್ಯವಾದಗಳು.
      ಎಂಥಹವರ ಹೃದಯವನ್ನು ತಟ್ಟಬಲ್ಲ, ನರನ ಕೃತ್ಯಗಳನ್ನು ವಿವೇಚಿಸುವಂತೆ ಮಾಡಬಲ್ಲ, ಸರಳವಾಗಿ ಓದಿಸಿಕೊಂಡು ಹೋಗುವ ವಿಭಿನ್ನ ಕವನ ಸಂಕಲನ. ಇತಿಹಾಸದ ಪುಟಗಳ ಸಾಕ್ಷಿಯಾಗಿ ಮನುಷ್ಯನ ನರಲೀಲೆಗಳ ರೌದ್ರತೆಯನ್ನು ವರ್ಣಿಸಿದ್ದಾರೆ. ಲೋಕದ ಬಾಯಾರಿಕೆಯನ್ನು ಹೋಗಲಾಡಿಸುವ ನೀರು ತಾನೇ ಬಾಯಾರಿ ಬಳಲಿ ಸಾಯುವ ವಸ್ತುವುಳ್ಳ ಕವಿತೆ *ಬಾಯಾರಿದ ನೀರು* ಅದ್ಭುತ, ಕಾವೇರಿದ ಕಾವೇರಿಯ ಗಲಾಟೆಯಲ್ಲಿ ಪ್ರಸ್ತುತ ಕೂಡ.ವಿಧಿಯ ದೈವದಾಟಕ್ಕೆ ಮನುಷ್ಯ ಸಾವಿನ ನಂತರ ಉಸಿರು ನಿಲ್ಲಿಸುತ್ತಾನೆ. ಆದರೆ *ಉಸಿರಾಡುತ್ತಿವೆ ಹೆಣಗಳು* ಕವನದಲ್ಲಿ ಸಾವಿನ ನಂತರವೂ ಉಸಿರಾಟ ನಡೆದಿದೆ. *ನನ್ನೊಳಗಿನ ಬೆಂಕಿ*ಯಲ್ಲಿ ಪಂಚೇಂದ್ರಿಯಗಳೇ ಸೌದೆಗಳಾಗಿ ಒಳಗಿನ ಬೆಂಕಿಯ ಜ್ವಾಲೆಯನ್ನು ಮತ್ತೆ ಹೆಚ್ಚಿಸುತ್ತಿವೆ. *ಕಲ್ಲಣ್ಣನ ಮನವಿ* ಕವನದಲ್ಲಿ 'ಕಲ್ಲು ಕಣ್ಣೀರಿಟ್ಟಿತು..! ನೀರು ಬಾಯಾರಿಕೆ ಸತ್ತ ಕಥೆ ಕೇಳಿ.ಮೋಡಣ್ಣನಿಗೆ ಮನವಿ ಮಾಡಿತು; ಧರಣಿಗೆ ಡೈವರ್ಸ್ ಕೊಡುವ ಮೊದಲು ಜೀವನಾಂಶವನ್ನಾದರೂ ಕೊಡು' ಎಂಬ ಸಾಲುಗಳು ಅದ್ಭುತ! *ತುಂಬಿದ ಹೊಟ್ಟೆಗೆ ಮತ್ತೆ ಹಸಿವು* ಕವನದಲ್ಲಿ *ಡಿ.ವಿ.ಜಿ.*ಯವರ ಅನ್ನದಾತುರಕ್ಕಿಂತ ಚಿನ್ನದಾತುರವು.... ಎಂಬ ಸಾಲುಗಳನ್ನು ಮತ್ತೆ ನೆನಪಿಸಿದ್ದಾರೆ.
    ಕೊನೆಯ ಮಾತಾಗಿ ಕವನ ಸಂಕಲನವನ್ನು ಒಂದು ಸಲ ಓದಲೇಬೇಕು.

*ಮಹೇಶ ಗಾಣಿಗೇರ, ವಿಜಯಪುರ*

No comments:

Post a Comment