ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Monday 5 September 2016

ನಾವೇಕೆ ಗುರುಗಳಿಗೆ ಋಣಿಯಾಗಿರಬೇಕು

ನಾವೇಕೆ ಗುರುಗಳಿಗೆ ಋಣಿಯಾಗಿರಬೇಕು?
ಇಲ್ಲಿವೆ 17 ಕಾರಣಗಳು ( ಸಂಗ್ರಹ. ವಾಟ್ಸ ಆಪ್)

1. ನಮಗೆ ಗೊತ್ತಿಲ್ಲದಂತೆ ನಮ್ಮೊಳಗೆ ಅಡಗಿದ್ದ ಪ್ರತಿಭೆಯನ್ನ ಹೊರಕ್ಕೆ ತಂದಿರಲ್ಲ, ಅದಕ್ಕೆ

ನಮಗೆ ಚೆನ್ನಾಗಿ ಬರೆಯೋದಕ್ಕೆ, ಲೆಕ್ಕ ಮಾಡಕ್ಕೆ, ಆಡೋದಕ್ಕೆ, ಹಾಡೋದಕ್ಕೆ ಬರುತ್ತೆ ಅಂತ ನಮಗೇ ಗೊತ್ತಿರಲಿಲ್ಲ. ಗೊತ್ತು ಮಾಡಿದ್ದು ನೀವು. ಈಗ ಇವೆಲ್ಲವೂ‌ ನಮಗೆ ಹುಟ್ಟಿದಾಗಲೇ‌ ಬರ್ತಾ ಇತ್ತೇನೋ‌ ಅನ್ನಿಸುತ್ತೆ! ಆದರೆ ಅದರ ಹಿಂದೆ ನೀವಿದ್ದೀರಿ. ಅದಕ್ಕಾಗಿ ತ್ಯಾಂಕ್ಸ್.

2. ಓದು ಮುಂದುವರೆಸು ಅಂತ ಬೆನ್ನು ತಟ್ಟಿದಿರಲ್ಲ, ಅದಕ್ಕೆ

ನಮ್ಮ ದಾರಿ ಯಾವುದು, ಏನು ಓದಬೇಕು, ಯಾವ ಕೋರ್ಸ್ ತೊಗೋಬೇಕು, ಯಾವ ಡಿಗ್ರಿ ನಮಗೆ ಸರಿಹೊಂದುತ್ತೆ... ಇದಾವುದೂ ಸರಿಯಾಗಿ ನಮಗೆ ಗೊತ್ತಿರಲಿಲ್ಲ. ಆದರೆ ನಿಮ್ಮಿಂದ ನಾವೇ ನಮ್ಮ ದಾರಿ ಕಂಡುಕೊಳ್ಳುವಂತಾಯಿತು... ಏಕಂದ್ರೆ ಆಯ್ಕೆ ಮಾಡಿಕೊಳ್ಳುವ ಶಕ್ತಿ ನಮಗಿದೆ ಅಂತ ತೋರಿಸಿಕೊಡ್ತಾ‌ ಇದ್ರಿ. ಅದಕ್ಕಾಗಿ ತ್ಯಾಂಕ್ಸ್.

3. ಮನಸ್ಸಿಟ್ಟು ಓದುವಂತೆ ಮಾಡಿದಿರಲ್ಲ, ಅದಕ್ಕೆ

ಹೋಂವರ್ಕು, ಅಸೈನ್ಮೆಂಟು ಅಂದರೆ ಸಾಕು ನಮಗೆ ಬೇಜಾರು! ಆದರೂ‌ ಮನಸ್ಸಿಟ್ಟು ಮಾಡುವಂತೆ ಪ್ರೇರಣೆ ನೀಡಿದ್ದು ನೀವೇ. ರಾತ್ರಿಯೆಲ್ಲ ಎದ್ದು ಓದುವಂತೆ ಮಾಡ್ತಾ ಇದ್ರಿ. ಆಗ ಬೈಕೊಂಡು ಮಾಡ್ತಾ ಇದ್ವಿ, ಆದ್ರೆ ಒಳ್ಳೆಯ ಫಲಿತಾಂಶ ಬಂದಾಗ ಅದೆಲ್ಲದರ ಬೆಲೆ ನಮಗೇ‌ ಗೊತ್ತಾಗ್ತಾ ಇತ್ತು. ಶುರು ಮಾಡಿದ ಪ್ರಾಜೆಕ್ಟೆಲ್ಲ ಮುಕ್ತಾಯದ ಹಂತಕ್ಕೆ ಕರೆದೊಯ್ಯುವಂತೆ ಮಾಡಿದ್ದು ನೀವೇ. ಮೊದಲ ಬಾರಿಗೆ ಗೆಲುವು ಸಿಗದೆ ಹೋದರೆ ಮತ್ತೊಮ್ಮೆ, ಮಗದೊಮ್ಮೆ ಪ್ರಯತ್ನ ಮಾಡು ಅಂತ ಹೇಳ್ತಿದ್ದಿದ್ದೂ ನೀವೇ. ಅದಕ್ಕಾಗಿ ತ್ಯಾಂಕ್ಸ್.

4. ನಿಮ್ಮ ವೈಯಕ್ತಿಕ ತೊಂದರೆ ಏನೇ ಇರಲಿ, ದಿನಾ‌ ಬಂದು ನಮಗೆ ಪಾಠ ಮಾಡ್ತಾ ಇದ್ರಲ್ಲ, ಅದಕ್ಕೆ

ವೈಯಕ್ತಿಕ ತೊಂದರೆ ಯಾರಿಗಿರೋದಿಲ್ಲ? ನಿಮಗೂ‌ ಅಂತಹ ದಿನಗಳು ಇದ್ದಿರಲೇ ಬೇಕು. ಆದರೂ ನೀವು ನಮಗಾಗಿ ಬಂದು ಪಾಠ ಮಾಡ್ತಾ‌ ಇದ್ರಿ. ನಿಮ್ಮ ತೊಂದರೆಗಳು ನಮಗೆ ಗೊತ್ತೇ ಆಗದಂತೆ ಇರ್ತಾ ಇದ್ರಿ, ನಮ್ಮನ್ನ ಮೇಲೆ ಎತ್ತಿದ್ರಿ. ಅದಕ್ಕಾಗಿ ತ್ಯಾಂಕ್ಸ್.

5. ನಮ್ಮಲ್ಲಿ ನಂಬಿಕೆ ಇಟ್ಟುಕೊಂಡಿದ್ರಲ್ಲ, ಅದಕ್ಕೆ

ನಮ್ಮ ಮೇಲೆ ನಮಗೇ‌ ಕೆಲವೊಮ್ಮೆ ನಂಬಿಕೆ ಇರ್ತಾ ಇರಲಿಲ್ಲ. ಇದು ನಮ್ಮ ಕೈಯಲ್ಲಿ ಸಾಧ್ಯಾನಾ? ನಾನು ಪಾಸಾಗ್ತೀನಾ? ನಾನು ಫರ್ಸ್ಟ್ ಕ್ಲಾಸ್ ಬರ್ತೀನಾ? ನಾನು ರನ್ನಿಂಗ್ ರೇಸಲ್ಲಿ ಗೆಲ್ತೀನಾ? ಈ‌ ಪ್ರಶ್ನೆಗಳಿಂದ ಒಳಗೊಳಗೇ ನರಳುತ್ತಿದ್ದ ನಮಗೆ ನೀವು ನಮ್ಮಲ್ಲಿಟ್ಟಿದ್ದ ನಂಬಿಕೆಯೇ ದಾರಿದೀಪವಾಗಿತ್ತು. ನಿಮಗೆ ನಮ್ಮಲ್ಲಿ ನಮಗಿಂತ ಹೆಚ್ಚಿನ ನಂಬಿಕೆ ಇತ್ತು. ಅದಕ್ಕಾಗಿ ತ್ಯಾಂಕ್ಸ್.

6. "ಸರಿ ನಾ?" ಅಂತ ಕೇಳಿದಾಗ ಅಡ್ಡಗೋಡೆಯ ಮೇಲೆ ದೀಪ ಇಡದೆ ಇರುವುದು ಇದ್ದಂತೆ ಹೇಳುತ್ತಿದ್ದರಲ್ಲ, ಅದಕ್ಕೆ

ನಮ್ಮ ಬೆನ್ನು ತಟ್ಟುತ್ತಿದ್ರಿ, ನಿಜ, ಆದರೆ ಕೆಲಸ ಇನ್ನಷ್ಟು ಚೆನ್ನಾಗಿ ಅಥವ ಸರಿಯಾಗಿ ಆಗಬೇಕಾಗಿದ್ದಾಗ ಅದನ್ನ ನೇರವಾಗಿ ಹೇಳ್ತಾ‌ ಇದ್ರಿ. ಆದರೂ‌ ಮನಸ್ಸಿಗೆ ನೋವಾಗ್ತಾ ಇರಲಿಲ್ಲ. ಅದಕ್ಕೆ ತ್ಯಾಂಕ್ಸ್.

7. ಪುಂಡ ಪೋಕರಿಗಳಂತೆ ಇರ್ತಾ‌ ಇದ್ದ ನಮಗೆ ಶಿಸ್ತು ಕಲಿಸಿದಿರಲ್ಲ, ಅದಕ್ಕೆ

ಹುಡುಗತನದಲ್ಲಿ ಬಹಳ ಆಟ ಆಡ್ತಾ ಇದ್ವಿ. ಕ್ಲಾಸ್ ಬಂಕ್ ಮಾಡೋದು, ಓದದೆ ಆಟ ಆಡೋದು, ಆಟದಲ್ಲೂ‌ ಸೋಮಾರಿತನ ತೋರಿಸೋದು... ಇದೆಲ್ಲ ತುಂಬ ಮಾಡ್ತಾ ಇದ್ವಿ. ಅಂತಹ ನಮಗೆ ನೀವು ಶಿಸ್ತು ಕಲಿಸಿದಿರಲ್ಲ, ಅದಕ್ಕೆ ತ್ಯಾಂಕ್ಸ್.

8. ಕೊಟ್ಟ ಉತ್ತರವನ್ನೇ ಬೇಜಾರಿಲ್ಲದೆ ಎಷ್ಟು ಸಾರಿ ಬೇಕಾದರೂ ಕೊಡ್ತಾ ಇದ್ರಲ್ಲ, ಅದಕ್ಕೆ

ಒಮ್ಮೊಮ್ಮೆ ನೀವು ಹೇಳಿಕೊಡ್ತಾ ಇದ್ದಿದ್ದು ನಮಗೆ ಅರ್ಥ ಆಗ್ತಾ ಇರಲಿಲ್ಲ. ಅಥವಾ ನಮ್ಮ ಗಮನ ಬೇರೆಲ್ಲೋ ಇರ್ತಾ ಇತ್ತು. ಆಗ ಎಷ್ಟು ಸಾರಿ ಬೇಕಾದರೂ‌ ಬೇಜಾರಿಲ್ಲದೆ, ತಾಳ್ಮೆಯಿಂದ, ನಮಗೆ ವಿವರಿಸ್ತಾ ಇದ್ರಿ. ಅದಕ್ಕೆ ತ್ಯಾಂಕ್ಸ್.

9. ಆಗ ಓದಕ್ಕೆ ಬೇಜಾರಾಗ್ತಿದ್ದ ವಿಷಯಗಳ ಬೆಲೆ ಏನು ಅಂತ ವಿವರಿಸ್ತಾ ಇದ್ರಲ್ಲ, ಅದಕ್ಕೆ

ಸಮಾಜ ಪಾಠ (ಸೋಶಿಯಲ್ ಸ್ಟಡೀಸ್) ಅಂದ್ರೆ ವಾಕರಿಕೆ ಬರ್ತಾ ಇತ್ತು ನಮಗೆ. ಒಮ್ಮೊಮ್ಮೆ ಗಣಿತ ತುಂಬಾ ಕಷ್ಟ ಅನ್ನಿಸ್ತಾ ಇತ್ತು. ಆದರೂ‌ ಇವೆಲ್ಲದರ ಬೆಲೆ ಏನು, ಇದನ್ನ ಸುಲಭವಾಗಿ ಕಲಿಯುವುದು ಹೇಗೆ ಅಂತ ಹೇಳ್ಕೊಡ್ತಾ ಇದ್ರಿ. ನೀವು ಆಗ ಹೇಳಿಕೊಟ್ಟಿದ್ದು ಈಗಲೂ‌ ನಮ್ಮ ಜೀವನದಲ್ಲಿ ಬಹಳ ಮುಖ್ಯವಾದ ಪಾತ್ರ ವಹಸಿದೆ. ಅದಕ್ಕೆ ತ್ಯಾಂಕ್ಸ್.

10. ಕಲಿಕೆ ಅಂದರೆ ಬರೀ‌ ಪುಸ್ತಕದ ಬದನೇಕಾಯಿ ಅಲ್ಲ ಅಂತ ಕೈಯಾರೆ ತೋರಿಸಿಕೊಟ್ರಲ್ಲ, ಅದಕ್ಕೆ

ನೀವಾಗೇ ನಮ್ಮನ್ನ ಮ್ಯೂಸಿಯಂಗಳಿಗೆ, ಪ್ರವಾಸಿ ತಾಣಗಳಿಗೆ, ಫ್ಯಾಕ್ಟರಿಗಳಿಗೆ ಕರ್ಕೊಂಡು ಹೋಗ್ತಾ ಇದ್ರಿ. ಅಲ್ಲೂ ಕಲಿಕೆ ನಡೆಯಬಲ್ಲುದು ಅಂತ ತೋರಿಸ್ತಾ ಇದ್ರಿ. ಬರೀ‌ ಪುಸ್ತಕದಿಂದಲೇ ಕಲಿಕೆಯಲ್ಲ ಅಂತ ಚೆನ್ನಾಗಿ ತೋರಿಸಿಕೊಟ್ರಿ. ಅದಕ್ಕೆ ತ್ಯಾಂಕ್ಸ್.

11. ಕಾಲಕಾಲಕ್ಕೆ ನಮ್ಮ ಕಲಿಕೆ ಹೇಗೆ ನಡೀತಾ ಇದೆ ಅಂತ ತೋರಿಸಿಕೊಡ್ತಾ‌ ಇದ್ರಲ್ಲ, ಅದಕ್ಕೆ

ತಿಂಗಳಿಗೊಮ್ಮೆ ಟೆಸ್ಟು, ವರ್ಶಕ್ಕೆ ಮೂರು-ನಾಲ್ಕು ಪರೀಕ್ಷೆ ನಡೀತಾ ಇದ್ರೂ‌, ನಾವು ಅದೇನೇನು ಬರೆದರೂ‌ ಅದನ್ನೆಲ್ಲ `ನನ್ನ ಕಾಯಕ ಇದು' ಅಂತ ಎವಾಲುಯೇಟ್ ಮಾಡ್ತಾ ಇದ್ರಿ, ನಾವು ಕಲಿಕೆಯ ಹಾದಿಯಲ್ಲಿ ಎಲ್ಲಿದ್ದೇವೆ ಅಂತ ತೋರಿಸಿ ಕೊಡ್ತಾ ಇದ್ರಿ. ಅದಿಲ್ಲದೆ ಹೋಗಿದ್ರೆ ನಾವು ಎಂದಿಗೋ ದಾರಿ ತಪ್ಪಿ ಬಿಡ್ತಾ ಇದ್ವಿ. ಅದಕ್ಕೆ ತ್ಯಾಂಕ್ಸ್.

12. ಶಾಲೆ/ಕಾಲೇಜು ವೇಳೆ ಮುಗಿದ ಮೇಲೂ ನಮ್ಮ ಶಿಕ್ಷರಾಗೇ ಇರ್ತಾ ಇದ್ರಲ್ಲ, ಅದಕ್ಕೆ

ನಿಮಗೆ ನಿಜಕ್ಕೂ‌ ದಿನಕ್ಕೆ ಇಷ್ಟು ದಿನ ಮಾತ್ರ ಕೆಲಸ ಅಂತ ಇರ್ತಾ ಇರಲಿಲ್ಲ. ಮನೆಗೆ ಬಂದರೂ ಕೂಡಿಸಿ ಪಾಠ ಹೇಳ್ತಾ ಇದ್ರಿ, ನಮ್ಮ ಪ್ರಶ್ನೆಗಳಿಗೆ ಉತ್ತರ ಕೊಡ್ತಾ ಇದ್ರಿ. ಭಾನುವಾರವೂ ತಲೆ ತಿನ್ತಾ ಇದ್ವಿ, ನೀವು ತಿನ್ನಿಸಿಕೊಳ್ತಾ ಇದ್ರಿ, ನಮ್ಮನ್ನ ಬೆಳೆಸ್ತಾ ಇದ್ರಿ. ಅದಕ್ಕೆ ತ್ಯಾಂಕ್ಸ್.

13. ಕ್ಲಾಸಲ್ಲಿ ಪ್ರತಿಯೊಬ್ಬರ ಕಾಳಜಿಯೂ ನಿಮಗೆ ಇರ್ತಾ ಇತ್ತಲ್ಲ, ಅದಕ್ಕೆ

ಕ್ಲಾಸಲ್ಲಿ ಹಲವರಿಗೆ ನೀವು ಮಾಡ್ತಿದ್ದ ಪಾಠದಲ್ಲಿ ಆಸಕ್ತಿ ಇರ್ತಾ ಇರಲಿಲ್ಲ. ನಿಮಗೆ ನಿಜಕ್ಕೂ‌ ಅವರ ಜೊತೆ ಏಗೋದು ಕಷ್ಟ ಆಗ್ತಾ ಇದ್ದಿರಬೇಕು. ಆದರೂ‌ ಎಲ್ಲರ ಕಾಳಜಿಯೂ‌ ನಿಮಗೆ ಇರ್ತಾ ಇತ್ತು. 13. ಕ್ಲಾಸಲ್ಲಿ ಪ್ರತಿಯೊಬ್ಬರ ಕಾಳಜಿಯೂ ನಿಮಗೆ ಇರ್ತಾ ಇತ್ತಲ್ಲ, ಅದಕ್ಕೆ

ಕ್ಲಾಸಲ್ಲಿ ಹಲವರಿಗೆ ನೀವು ಮಾಡ್ತಿದ್ದ ಪಾಠದಲ್ಲಿ ಆಸಕ್ತಿ ಇರ್ತಾ ಇರಲಿಲ್ಲ. ನಿಮಗೆ ನಿಜಕ್ಕೂ‌ ಅವರ ಜೊತೆ ಏಗೋದು ಕಷ್ಟ ಆಗ್ತಾ ಇದ್ದಿರಬೇಕು. ಆದರೂ‌ ಎಲ್ಲರ ಕಾಳಜಿಯೂ‌ ನಿಮಗೆ ಇರ್ತಾ ಇತ್ತು. ಎಲ್ಲರನ್ನೂ‌ ಬೆಳೆಸಿದ್ರಿ. ಅದಕ್ಕೆ ತ್ಯಾಂಕ್ಸ್.

14. ಶಿಕ್ಷಣ ವ್ಯವಸ್ಥೆಯಲ್ಲಿದ್ದ ಕೆಲವು ಹುಳುಕುಗಳಿಂದ ನಮಗೆ ತೊಂದರೆಯಾಗದಂತೆ ನೋಡಿಕೊಂಡಿರಲ್ಲ, ಅದಕ್ಕೆ

ಪಠ್ಯಪುಸ್ತಕಗಳಲ್ಲಿ ಒಮ್ಮೊಮ್ಮೆ ತಪ್ಪಿರುತ್ತಿತ್ತು. ಪರೀಕ್ಷಾ ವಿಧಾನಗಳಲ್ಲಿ ತಪ್ಪಿರುತ್ತಿತ್ತು. ವಿಷಯಗಳನ್ನೇ ಒಮ್ಮೊಮ್ಮೆ ತಪ್ಪಾಗಿ ಬರೆದಿರ್ತಾ ಇದ್ರು. ಎಲ್ಲ ಸರಿಯಾಗಿದ್ದರೂ‌ ಸಮಾಜಿಕ ಕಾಳಜಿಯೇ‌ ಹೊರಟುಹೋಗುವ ಗಂಡಾಂತರ ಇರ್ತಾ ಇತ್ತು. ಈ‌ ಹುಳುಕುಗಳಿಂದ ನಮ್ಮ ಬೆಳವಣಿಗೆಗೆ ತೊಂದರೆಯಾಗದಂತೆ ನೋಡಿಕೊಳ್ತಾ‌ ಇದ್ರಿ. ಅದಕ್ಕೆ ತ್ಯಾಂಕ್ಸ್.

15. ನಾವು ಗೊತ್ತು ಅಂದುಕೊಂಡಿದ್ದು ನಿಜವಾಗಲೂ ಗೊತ್ತಾ ಅಂತ ಪ್ರಶ್ನಿಸಿಕೊಳ್ಳುವಂತೆ ಮಾಡ್ತಾ ಇದ್ರಲ್ಲ, ಅದಕ್ಕೆ

ಒಮ್ಮೊಮ್ಮೆ ನಾವೇ ಬಹಳ ಬುದ್ಧಿವಂತರು ಅಂದುಕೊಳ್ತಾ ಇದ್ದೆವು. ಎಲ್ಲಾ ಗೊತ್ತು ಅಂದುಕೊಂಡಿರುತ್ತಿದ್ದೆವು. ಆದರೆ ನಿಜಕ್ಕೂ‌ ಗೊತ್ತಾ ಅಂತ ನಾವೇ ಪ್ರಶ್ನಿಸಿಕೊಳ್ಳುವಂತೆ ಮಾಡ್ತಾ ಇದ್ರಿ. ಪ್ರಶ್ನಿಸಿಕೊಂಡಾಗ ನಮ್ಮ ಅರಿವಿನ ಹರವು ಎಷ್ಟಿದೆ ಅಂತ ನಮಗೇ ಅರ್ಥವಾಗ್ತಾ ಇತ್ತು. ಅದಕ್ಕೆ ತ್ಯಾಂಕ್ಸ್.

16. ಕೆಲಸವನ್ನು ಮನಸಾರೆ ಮಾಡೋದು ಕಲಿಸಿದರಲ್ಲ, ಅದಕ್ಕೆ

ನೀವು ಹೇಳಿಕೊಡ್ತಾ ಇದ್ದ ಪಾಠದಲ್ಲಿ ನಿಮಗೆ ಅದೆಷ್ಟು ಪ್ರೀತಿ ಇರ್ತಾ ಇತ್ತು! ಎಷ್ಟು ಮನಸಾರೆ ಮಾಡ್ತಾ ಇದ್ರಿ! ಅದರಿಂದ ನಾವು ಮನಸಾರೆ ಕೆಲಸ ಮಾಡೋದು ಕಲಿತ್ವಿ, ಪ್ರೀತಿಯಿಂದ ಮಾಡೋದು ಕಲಿತ್ವಿ, ಇವೆರಡೂ‌ ಯಾವ ಕೆಲಸದಲ್ಲಿ ನಮಗೆ ಸಿಗುತ್ತೆ ಅಂತ ಹುಡುಕಿಕೊಳ್ಳೋದು ಕಲಿತ್ವಿ. ಅದಕ್ಕೆ ತ್ಯಾಂಕ್ಸ್.

17. ನಮ್ಮ ಜೀವನವನ್ನ ರೂಪಿಸಿದರಲ್ಲ, ಅದಕ್ಕೆ

ನಮ್ಮ ಜೀವನದಲ್ಲಿ ನಿಮ್ಮ ಪ್ರಭಾವ ಎಂದಿಗೂ‌ ಮರೆಯಕ್ಕಾಗಲ್ಲ. ನೀವು ಮಾಡಿದ ಪಾಠ, ಮಾಡುವ ಶೈಲಿ, ಕಲಿಸೇ ತೀರಬೇಕೆಂಬ ನಿಮ್ಮ ಎಡೆಬಿಡದ ಪ್ರಯತ್ನ - ಇವೆಲ್ಲವೂ‌ ನಮ್ಮ ಜೀವನವನ್ನು ರೂಪಿಸಿವೆ. ಆಗ ನಮಗೆ ಗೊತ್ತಾಗ್ತಾ ಇರಲಿಲ್ಲ, ಆದರೆ ಈಗ ಚೆನ್ನಾಗಿ ಗೊತ್ತಾಗುತ್ತದೆ: ನೀವು ನಮ್ಮ ಶಿಕ್ಷಕರಾಗದೆ ಹೋಗಿದ್ದರೆ ನಾವು ಈ ಮಟ್ಟಕ್ಕೆ ಬೆಳೀತಾ‌ ಇರಲಿಲ್ಲ. ಅದಕ್ಕೆ ತ್ಯಾಂಕ್ಸ್.

ನಾವು ನಿಮಗೆ ಎಂದೆಂದಿಗೂ‌ ಋಣಿಯಾಗಿರುತ್ತೇವೆ ಸಾರ್, ಮೇಡಂ...

No comments:

Post a Comment