ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Tuesday 6 September 2016

ಶಿಕ್ಷಣ ಕ್ಷೇತ್ರದ ಬಗ್ಗೆ ಸಮಾಜದ ಸಂಘಟನೆಗಳ ಮೌನವೇಕೆ

ಶಿಕ್ಷಣ ಕ್ಷೇತ್ರದ ಸಮಸ್ಯೆಗಳ ಕುರಿತು ಸಮಾಜದ ಸಂಘಟನೆಗಳ ಮೌನವೇಕೆ..?

ಬಹು ಮುಖ್ಯವಾಗಿ ಶಿಕ್ಷಣ ಕ್ಷೇತ್ರದ ಹಾಗು ಶಿಕ್ಷಕರ ಸಮಸ್ಯೆಗಳ ಪರಿಹಾರ ಮಾಸವಾಗಬೇಕಿತ್ತು  ಸೆಪ್ಟೆಂಬರ್.
   ಆದರೆ ಸೆಪ್ಟೆಂಬರ್ ಬಂತೆಂದರೆ ಅರ್ಜಿ ಹಾಕಿ ಪ್ರಭಾವ ಬೀರುವವರಿಗೆ ಪ್ರಶಸ್ತಿ ಕೊಟ್ಟು, ಪ್ರಶ್ನಿಸಿ ಮಾತಾಡುವವರನ್ನು ಸಂಘಟನೆಯಲಿ ಕೂಡಿ ಹಾಕಿ, ಯಾವುದೋ ಆರೋಪದಡಿ ಬಾಯಿಮುಚ್ಚಿಸಿ ,ಸಮಸ್ಯೆಗಳನು ಜೀವಂತವಾಗಿರಿಸಿ ಆಡಂಬರದ  ಶಿಕ್ಷಕರ ದಿನಾಚರಣೆ ಆಚರಿಸಿದರೆ ಯಾವ ಬದಲಾವಣೆ ಸಾಧ್ಯವಾದೀತು...?
  ಈಗಂತೂ ಖಾಸಗಿ ಶಿಕ್ಷಣ ಸಂಸ್ಥೆಗಳ ಹೆಚ್ಚಳಕ್ಕೆ ಯಾವುದೇ ಪಕ್ಷ ಸರ್ಕಾರ ನಡೆಸಿದರೂ ಪರೋಕ್ಷವಾಗಿ ಪ್ರತ್ಯಕ್ಷವಾಗಿಯೂ ಪ್ರೋತ್ಸಾಹಿಸುತ್ತಿವೆ. ಸರ್ಕಾರಿ ಶಾಲೆ ಸಂಖ್ಯೆ ಕಡಿಮೆ ಮಾಡಿ ಶಿಕ್ಷಣ ಕ್ಷೇತ್ರದ ಸಮಸ್ಯೆಗಳ ಪರಿಹಾರಕ್ಕೆ ಇಚ್ಛಾಶಕ್ತಿ ಪ್ರದರ್ಶಿಸಿದೆ ಹೊಣೆಗಾರಿಕೆ ಕಡಿಮೆ ಮಾಡಿಕೊಳ್ಳಲು ಹವಣಿಸುತ್ತಿವೆ.
ಹೀಗಿರುವಾಗ ಬಡವರ ಶಾಲೆಗಳಾಗಿ ಬಡವಾಗುತಿರುವ ಸರ್ಕಾರಿ ಶಾಲೆಗಳ ಉದ್ದಾರಕ್ಕಿಂತ ಅವರ ಹೆಸರಿನಲ್ಲಿ ಹಲವು ಯೋಜನೆಗಳನ್ನು ರೂಪಿಸಿ ಹೆಸರು ಹಣ ಬಿಡುಗಡೆಗೆ ಶ್ರಮಿಸುವ ಶಿಶಿಕ್ಷಣ ಇಲಾಖೆ ಸಮರ್ಪಕ ಅನುಷ್ಠಾನಕ್ಕೆ ಶ್ರಮಿಸುತ್ತಿಲ್ಲ.
ಇಲ್ಲಿ ಶಿಕ್ಷಕ ಸಂಪನ್ಮೂಲಗಳ ಅಸಮರ್ಪಕ ಬಳಕೆ , ವ್ಯವಸ್ಥೆಯ ಬಲಿಪಶುಗಳಾಗಿ ನಿಷ್ಕ್ರಿಯರಂತಾಗಿರುವ ಶಿಕ್ಷಕ ಸಮೂಹವೂ ಸಮಸ್ಯೆ ಪರಿಹರಿಸಿಕೊಳುವಲ್ಲಿ ವಿಫಲರಾಗಿದ್ದಾರೆ. ಹಾಗಾಗಿ ನದಿ, ಭಾಷೆ ,ಧರ್ಮ ,ಜಾತಿ ಹೋರಾಟಕ್ಕೆಲ್ಲ ಒಂದಾಗಿ ಹೋರಾಡುವ ಸಮಾಜ,  ಸಂಘಟನೆಗಳು ಶಿಕ್ಷಣ ಕ್ಷೇತ್ರದ ಸಮಸ್ಯೆಗಳು ಹಾಗೂ ಶಿಕ್ಷಕರ ಸಮಸ್ಯೆ ಪರಿಹಾರಕ್ಕೆ ಬೃಬೃಹತ್ ಹೋರಾಟಕ್ಕೆ ಸಜ್ಜಾಗಬೇಕಿದೆ. ಮೊದಲು ಶಿಕ್ಷಣ ಕ್ಷೇತ್ರ ಸುಧಾರಣೆಯಾದರೆ , ನಮ್ಮ ಶಾಲೆಗಳು ಸಮಸ್ಯೆಗಳಿಂದ ಮುಕ್ತವಾದರೆ, ಸಮಸ್ಯೆಗಳಿಲ್ಲದೆ  ಶಿಕ್ಷಕರು ಗುಣಮಟ್ಟದ ಶಿಕ್ಷಣ ನೀಡಲು ಮುಕ್ತವಾಗಿ ಶ್ರಮಿಸಿದರೆ  ಮಾತ್ರ ಸಮಾಜದ ಸುಧಾರಣೆ ಸಾಧ್ಯ.
-ರವಿರಾಜ್ ಸಾಗರ್ #

No comments:

Post a Comment