ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

ನಮ್ಮ ಪತ್ರಿಕಾ ಅಭಿಯಾನಗಳು

ಮಕ್ಕಳ ಮಂದಾರ ಪತ್ರಿಕಾ ಬಳಗ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಲ್ಕಾಪುರ, ಶಾಲಾ ಮಕ್ಕಳ ಪರಿಸರ ಸಂಘ, ಸಹಯೋಗದಲ್ಲಿ

ನಿಮ್ಮ ಪ್ಲಾಸ್ಟಿಕ್ ಕಸ ನಿಮ್ಮದು- ಶಾಲಾ ಮಕ್ಕಳಿಂದ ಪ್ಲಾಸ್ಟಿಕ್ ಬಳಕೆ ಕುರಿತು ಜಾಗೃತಿ ಆಂದೋಲನ 



ಮಕ್ಕಳನ್ನು ಆಕರ್ಷಿಸಿ ಆಸೆ ಹೆಚ್ಚಿಸಿ ವ್ಯಾಪಾರ ಕುದುರಿಸಲು ವಿಭಿನ್ನ ಜಾಹೀರಾತು  ,ಬಣ್ಣಬಣ್ಣದ  ಪ್ಲಾಸ್ಟಿಕ್ ಪಟ್ಟಣಗಳ ಮೊರೆ ಹೋಗಿರುವ ವಿವಿಧ ತಿನಿಸುಗಳ ಕಂಪನಿಗಳು ನಾಲಿಗೆ ಚಪಲ ಹೆಚ್ಚಿಸುವ ರಾಸಾಯನಿಕ ಬಳಸಿ ಮಕ್ಕಳು ಜಂಕ್ ಫುಡ್ ನತ್ತ ಆಸೆಯ ಕಣ್ಣನ್ನು ತೆರೆಯುವಂತೆ  ಮಾಡುವುದಲ್ಲದೆ , ಅನವಶ್ಯಕ ಕೊಳ್ಳುಬಾಕ ಸಂಸ್ಕೃತಿಗೆ, ನಾಲಿಗೆ ಚಪಲ ತೀರಿಸಿಕೊಳ್ಳುವ ಗೀಳಿಗೆ ಎಳೆಯುತ್ತಿವೆ. ಮಾತ್ರವಲ್ಲ ಅವುಗಳನ್ನು  ಬಣ್ಣ ಬಣ್ಣದ ಆಕರ್ಷಕ ಪ್ಲಾಸ್ಟಿಕ್ ಕವರ್ ಗಳಲ್ಲೀಯೇ ಸರಬರಾಜು ಮಾಡುತ್ತಿರುವರಿಂದ  ನಗರ ವಲ್ಲದೆ ಹಳ್ಳಿಹಳ್ಳಿಯ ಪ್ಲಾಸ್ಟಿಕ್ ಕಸದತೊಟ್ಟಿಯಾಗುತ್ತಿದೆ.

ನಗರ, ಹಳ್ಳಿಯ ಚರಂಡಿಗಳು ಪ್ಲಾಸ್ಟಿಕ್ ಕಸದಿಂದ ಕಟ್ಟಿಕೊಂಡು ಮಳೆಗಾಲದಲ್ಲಿ ಸಣ್ಣ ಮಳೆಗೂ ರಸ್ತೆಗಳೇ ಮುಳುಗುವಂತೆ ಮಾಡುತ್ತಿರುವುದು, ಪ್ರಯಾಣಿಕರು ಪರದಾಡುವುದು ನಿಮಗೆಲ್ಲಾ ಗೊತ್ತೇ ಇದೆ.. ಈ ಪ್ಲಾಸ್ಟಿಕ್ ಕಸ ಸೃಷ್ಟಿಸುವ ಸಮಸ್ಯೆಗಳನ್ನು ಪಟ್ಟಿ ಮಾಡುತ್ತಾ ಹೋದರೆ ನೂರಾರು ಸಮಸ್ಯೆಗಳ ಪಟ್ಟಿ ಮಾಡಬಹುದು. ಈಗಾಗಲೇ ಪ್ಲಾಸ್ಟಿಕ್ ಕಸಕ್ಕೆ ಕೆರೆಗಳು ನದಿ ಹಳ್ಳಗಳ ಜೀವಸಂಕುಲಗಳು ಆಹುತಿಯಾಗುತ್ತಿವೆ. ಅಷ್ಟುಮಾತ್ರವಲ್ಲ ಪ್ಲಾಸ್ಟಿಕ್ ನಲ್ಲಿ ಸಂಗ್ರಹಿಸಿದ ಜಂಕ್ ಫುಡ್ಗಳು ಮಕ್ಕಳು ಮತ್ತು ದೊಡ್ಡವರ ದೇಹದಲ್ಲಿ ಉಂಟುಮಾಡುವ ಹಲವಾರು ಆರೋಗ್ಯ ಸಮಸ್ಯೆಗಳು ಅಧ್ಯಯನದಿಂದ ಬಹಿರಂಗವಾಗಿವೆ. ಹೀಗಿದ್ದರೂ ಪ್ರಭಾವಿ ಕಂಪನಿಗಳ  ವಿರುದ್ಧವಾಗಿ ಸರ್ಕಾರ ಯಾವ ಕಠಿಣನಿಯಮವನ್ನು ಹೇರುವತ್ತ  ಮುಂದಾಗುತ್ತಿಲ್ಲ. ಪ್ಲಾಸ್ಟಿಕ್ ವಿರುದ್ಧವಾಗಿ ನಾಗರಿಕರೇ ಆಂದೋಲನ ರೂಪಿಸಬೇಕಾಗಿದೆ.ಈ ನಿಟ್ಟಿನಲ್ಲಿ ನಮ್ಮ ಮಲ್ಕಾಪುರ ಶಾಲೆಯಲ್ಲಿ ಕಂಡುಕೊಂಡ ಆಂದೋಲನ ನಿಮ್ಮ ಪ್ಲಾಸ್ಟಿಕ್ ಕಸ ನಿಮ್ಮದು ಜನಜಾಗೃತಿ ಆಂದೋಲನ ಹಾಗೂ ಕಂಪನಿಗಳಿಗೆ  ಆಯಾ ಕಂಪನಿಗಳ ಪ್ಲಾಸ್ಟಿಕ್ ಕಸವನ್ನು ಒಂದೆಡೆ ಸಂಗ್ರಹಿಸಿ ರಿಜಿಸ್ಟರ್ ಪೋಸ್ಟ್ ಮೂಲಕ  ರವಾನೆ ಹಾಗೂ 2022ರ ಒಳಗೆ ಪ್ಲಾಸ್ಟಿಕ್ ಗೆ ಪರ್ಯಾಯ ಮಾರ್ಗ ಕಂಡುಕೊಳ್ಳುವಂತೆ ಮನವಿ ಪತ್ರ ರವಾನಿಸಲಾಗಿದೆ.


ಮುಖ್ಯವಾಗಿ ಮಕ್ಕಳಿಗಾಗಿ ತಯಾರಿಸಲಾಗುತ್ತಿರುವ ತಿನಿಸುಗಳ ಪಟ್ಟಣಗಳು ಎಲ್ಲವೂ ಪ್ಲಾಸ್ಟಿಕ್ ಮಾಯವಾಗಿದ್ದು ಬಣ್ಣ ಬಣ್ಣದ ಪ್ಲಾಸ್ಟಿಕ್ ಪೊಟ್ಟಣಗಳ ಕಂಪನಿಗಳ ಮೇಲೆ ಮಕ್ಕಳೇ ಜಾಗೃತರಾಗಬೇಕಾಗಿದೆ.

ಈ ಕಂಪನಿಗಳ ನಾನಾವಿಧಧ ನಾಲಿಗೆ ಚಪಲ ಹೆಚ್ಚಿಸುವ ರಾಸಾಯನಿಕಗಳ ತಿನಿಸುಗಳ ಮೂಲಕ ನಾಲಿಗೆ ಚಪಲದ ಗೀಳೀಗೆ ಬೀಳಿಸುತ್ತಿವೆ. ಈ ಬೆಳವಣಿಗೆ ಬಡ ಗ್ರಾಮೀಣ ಮಕ್ಕಳ ಕುಟುಂಬಗಳಿಗೆ ಆರ್ಥಿಕ ಸಂಕಷ್ಟಕ್ಕೆ ಕಾರಣವಾಗುತ್ತಿವೆ.ಮಾತ್ರವಲ್ಲ ಅಷ್ಟೇನು ಪೋಷಕಾಂಶ ವಿಲ್ಲದ ಹಾಳುಮೂಳು ಪದಾರ್ಥದಿಂದ ದೇಹದಲ್ಲಿ ಅನಗತ್ಯ ರಾಸಾಯನಿಕ ಪದಾರ್ಥ ಪ್ರಮಾಣ ಹೆಚ್ಚುವಂತೆ ಮಾಡುತ್ತಿದೆ. ಇದು ಮಕ್ಕಳ ದೈಹಿಕ ಮಾನಸಿಕ ಆರೋಗ್ಯದ ಮೇಲೆ ಕೂಡ ದುಷ್ಪರಿಣಾಮ ಬೀರುತ್ತಿದೆ.


ಮಕ್ಕಳ ನಾಳೆಗಳನ್ನು ಸುಂದರಗೊಳಿಸಬೇಕಾದ ಜವಾಬ್ದಾರಿಯುತವಾದ ಪಾಲಕರಾದ ನಾವು ಈ ನಿಟ್ಟಿನಲ್ಲಿ ಸಮುದಾಯದಲ್ಲಿ ಜಾಗೃತಿಯನ್ನು, ಕಂಪನಿಗಳಿಗೆ ಎಚ್ಚರಿಕೆಯನ್ನು ನಿಡಬೇಕಿದೆ. 


ಈಗ ಸುಮಾರು ಹತ್ತು ಕಂಪನಿಗಳಿಗೆ ಮುಖ್ಯವಾಗಿ ಕುರಿ ಕುರಿ ತಿಂಡಿ ಕಂಪನಿಗಳಿಗೆ, ಕಸ ರವಾನಿಸಿ ಪತ್ರ ಬರೆಯಲಾಗಿದೆ.

ಶಾಲೆಯಲ್ಲಿ ಪ್ಲಾಸ್ಟಿಕ್ ಕಸ ನಿರ್ವಹಣೆಗೆ ಪ್ರತ್ಯೇಕ ಸಿಮೆಂಟ್ ತೊಟ್ಟಿ ಮಾಡಲಾಗಿದೆ

ನಾವು ನಮ್ಮ ಶಾಲೆಯಲ್ಲಿ ಈಗ ಪ್ಲಾಸ್ಟಿಕ್ ಮುಕ್ತ ತಿನಿಸುಗಳ ಸರಬರಾಜಿಗಾಗಿ ಕಂಪನಿಗಳನ್ನು ಒತ್ತಾಯಿಸುವ ಅಭಿಯಾನ ಆರಂಭಿಸುತ್ತಿದ್ದೇವೆ.

 ಸಲಹೆಗಳೊಂದಿಗೆ ಸಹಕರಿಸಿ. ಸಮಾನಾಸಕ್ತರು ದೊಡ್ಡ ಮಟ್ಟದಲ್ಲಿ ರಾಜ್ಯದ ವಿವಿಧ ಶಾಲೆಗಳಲ್ಲಿ ಆರಂಭಿಸಬೇಕಿದೆ.

 


 ಪೇಪರ್ ಕಸವನ್ನು ಮರುಬಳಕೆಯತ್ತ ಆಸಕ್ತಿ ವಹಿಸಬೇಕಾಗಿದೆ. ಈಗಾಗಲೇ ಹಲವು ಮಿತ್ರರು ಸಮ್ಮತಿಸಿದ್ದು ಮುಂದೆ ಸಮಾನಾಸಕ್ತರ ನೇತೃತ್ವದಲ್ಲಿ ದೊಡ್ಡ ಆಂದೋಲನವಾಗಿ ಬೆಳೆಸಬೇಕಾಗಿದೆ.


2.ನಮ್ಮೂರ ಜಾನಪದ ಬಳಗ.

ಮಕ್ಕಳಿಂದ ಜಾನಪದ ಕ್ಷೇತ್ರಕಾರ್ಯ, ಜಾನಪದ ಪಠ್ಯ ಅಂತರ್ಗತ ಪ್ರಯೋಗ.


https://youtu.be/SbF7FvBQgBY
ಈ ಮೇಲಿನ ನೀಲಿ ಲಿಂಕ್ ಕ್ಲಿಕ್ ಮಾಡಿ
ಶಾಲಾ ಮಕ್ಕಳಿಗಾಗಿ ಜಾನಪದ ಪಠ್ಯಂತರ್ಗತ ಪ್ರಯೋಗಗಳ ಮೂಲಕ ಶಿಕ್ಷಣ.
ಇದು ನಮ್ಮ ಶಾಲಾ ಮಕ್ಕಳಿಗಾಗಿ ನಡೆಸಿದ ಪ್ರಯತ್ನ.

ಹೆಚ್ಚಿನ ಜಾನಪದ ಶೈಕ್ಷಣಿಕ ಸಾಹಿತ್ಯ ವಿಡಿಯೋಗಳಿಗಾಗಿ ನಮ್ಮ ಚಾನೆಲ್ ವಿಕ್ಷಿಸಿ ಸಬ್ಸ್ಕ್ರೈಬ್ ಮಾಡಿ.

ಈ ಕುರಿತು ಪ್ರಯೋಗದ ನಮ್ಮೂರ ಜನಪದ ಅನುಸಂಧಾನ ಕೃತಿಗಾಗಿ
ಆನ್ಲೈನ್ನಲ್ಲಿ ಸಂಪರ್ಕಿಸಿ ಕೊಳ್ಳಬಹುದು.
ಈ ಕೃತಿಗಾಗಿ ಕೆಳaಗಿನ ಲಿಂಕ್ ಕ್ಲಿಕ್ ಮಾಡಿ

ನಿಮ್ಮ ಮನೆ ಬಾಗಿಲಿಗೆ ಪುಸ್ತಕ ಪಡೆಯಬಹುದು. Instamojo:https://www.instamojo.com/srujanapustakaalaya/5afbf77fd53bb2fe56988247134f211a

ನಿಮ್ಮ ರವಿರಾಜ್ ಸಾಗರ್.
ಮಾನ್ವಿ. ರಾಯಚೂರು.
9980952630




2.ನಿಮ್ಮ ಕಥೆ ಮಕ್ಕಳ ಜೊತೆ ಅಭಿಯಾನ.

https://www.facebook.com/makkalamandara/

ಮಕ್ಕಳ ಮಂದಾರ ಪತ್ರಿಕಾ ಬಳಗ, ಹಾಗೂ ಮಕ್ಕಳ ಸಾಹಿತ್ಯ ಪರಿಷತ್ತು ಶಿವಮೊಗ್ಗ ವತಿಯಿಂದ ವಿನೂತನ ಅಭಿಯಾನ.

1.ನಿಮ್ಮ ಕಥೆ ಮಕ್ಕಳ ಜೊತೆ -ಮಕ್ಕಳ ಕಥಾ ಅಭಿಯಾನ.

ಮಕ್ಕಳಿಗೆ ಕಥೆ ಹೇಳುವ ಪರಂಪರೆ ಕಡಿಮೆಯಾಗುತ್ತಿರುವ ಈ ದಿನಗಳಲ್ಲಿ ಟಿವಿ ಮೊಬೈಲ್ ಮರೆ ಹೋಗುತ್ತಿರುವ ಸಂದರ್ಭದಲ್ಲಿ ಮಕ್ಕಳಿಗೆ ಕಥೆ ಹೇಳುವ ಮೌಖಿಕ ಪರಂಪರೆಯನ್ನು ಪ್ರೋತ್ಸಾಹಿಸುವ ಸಲುವಾಗಿ ಈ ಅಭಿಯಾನ.

ಪಾಲಕರು ಹಾಗೂ ಮಕ್ಕಳು ಶಿಕ್ಷಕರು, ಮಕ್ಕಳ ಸಾಹಿತಿಗಳು ಹೇಳಿರುವ ಭಿನ್ನ-ವಿಭಿನ್ನ ಮಕ್ಕಳ ಕಥೆಗಳನ್ನು ನೋಡಬೇಕ...
ಈ ಲಿಂಕ್ ಅನ್ನು ಕ್ಲಿಕ್ ಮಾಡಿ. ಪೇಜ್ ಲೈಕ್ ಮಾಡಿ. ಹೆಚ್ಚಿನ ಮಕ್ಕಳ ಕಥೆ ವೀಕ್ಷಿಸಿ. ಶೇರ್ ಮಾಡಿ.
ಮಕ್ಕಳ ಕಥೆ ಅಭಿಯಾನ ಬೆಂಬಲಿಸಿ.

ನೀವು ನಿಮ್ಮ ವಿಡಿಯೋ ಕಳಿಸಲು
ವಾಟ್ಸಾಪ್ ಮಾಡಿ 9980952630.
ಈ ಕೆಳಗಿನ ಲಿಂಕಿಗೆ ಕಳಿಸಿ

https://www.facebook.com/groups/makkalamandaara/

ಮಕ್ಕಳಿಗೆ ಕಥೆ ಹೇಳುವ ಪರಂಪರೆ ಪ್ರೋತ್ಸಾಹಿಸಿ.

ನಮ್ಮ ಇನ್ನೋವೇಟಿವ್ ಎಜುಕೇಶನ್ ಹೌಸ್ ಯುಟ್ಯೂಬ್ ಚಾನೆಲ್ ನಲ್ಲಿ ಕಥೆಗಳನ್ನು ನೋಡಬಹುದು.

ನಿಮ್ಮ ರವಿರಾಜ್ ಸಾಗರ್
9980952630



No comments:

Post a Comment

ಸುಳ್ಳೂರ ಶಾಲೆಯಲ್ಲಿ ಪಾಲಕರಿಂದ ಸ್ವಚ್ಛತಾ ಸಪ್ತಾಹ

ಊರಿನ ಗ್ರಾಮಸ್ಥರಿಂದ ಸುಳ್ಳೂರು ಶಾಲೆಯಲ್ಲಿ ಸ್ವಚ್ಛತಾ ಸಪ್ತಾಹ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸುಳ್ಳೂರಿನ ಹಿರಿಯ ವಿದ್ಯಾರ್ಥಿಗಳು , ಪಾಲಕರೆಲ್ಲರೂ ಸೇರ...