ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Sunday, 2 August 2026

ಮಕ್ಕಳ ಮನೆ ಮನೆಗೆ marks rigister app

📱 'ಮಾರ್ಕ್ಸ್ ರಿಜಿಸ್ಟರ್' (Marks Register) ಆ್ಯಪ್ !! 
 ಶಿಕ್ಷಕರ ಶ್ರಮಕ್ಕೆ ತಂತ್ರಜ್ಞಾನದ ಆಸರೆ!

ಶಿಕ್ಷಕರ ಕೆಲಸ ಇಂದು ಮುಂಚಿನಂತಿಲ್ಲ. ಬದಲಾಗುತ್ತಿರುವ ಕಾಲಘಟ್ಟದಲ್ಲಿ ಶಿಕ್ಷಕ ವೃತ್ತಿಯ ಸವಾಲುಗಳೂ ಹೆಚ್ಚುತ್ತಿವೆ. ತಂತ್ರಜ್ಞಾನ ಎಷ್ಟೇ ಬೆಳೆದರೂ, ಕಲಿಕೆಯ ನೈಜ ಯಶಸ್ಸು ಇರುವುದು **'ಗುರು-ಶಿಷ್ಯರ ಆತ್ಮೀಯ ಬಂಧ'**ದಲ್ಲಿ ಮಾತ್ರ. ಆದರೆ ಇಂದಿನ ಹತ್ತು-ಹಲವು ಆಡಳಿತಾತ್ಮಕ ಕೆಲಸಗಳು, ಶಿಕ್ಷಕನನ್ನು ತರಗತಿ ಕೋಣೆಯಲ್ಲಿ ಬೋಧನೆ ಮಾಡುವುದಕ್ಕಿಂತ ಹೆಚ್ಚಾಗಿ ರಿಜಿಸ್ಟರ್‌ ಹಾಗೂ ಫೈಲ್‌ಗಳ ನಡುವೆಯೇ ಬ್ಯುಸಿಯಾಗಿಟ್ಟುಬಿಡುತ್ತವೆ.
ಈ 'ಜೆನ್ ಜಿ' (Gen Z) ಪೀಳಿಗೆಯ ವಿದ್ಯಾರ್ಥಿಗಳಿಗೆ ಕಲಿಸಲು ತಂತ್ರಜ್ಞಾನದ ಬಳಕೆ ಅನಿವಾರ್ಯ ನಿಜ. ಆದರೆ, ಇಂದು ಸಿಗುತ್ತಿರುವ ಹಲವು ಅಪ್ಲಿಕೇಶನ್‌ಗಳ ಕಠಿಣ ನಿಯಮಗಳು, ನೆಟ್‌ವರ್ಕ್ ಸಮಸ್ಯೆಗಳು ಮತ್ತು ಕ್ಲಿಷ್ಟಕರ ವಿನ್ಯಾಸಗಳು (Not User-Friendly) ಶಿಕ್ಷಕರಿಗೆ ಸಹಾಯ ಮಾಡುವ ಬದಲು ಮತ್ತಷ್ಟು ಹೈರಾಣಾಗಿಸುತ್ತಿವೆ.
ಸಮಾಜದ ಆಸ್ತಿಯಾದ ಮಕ್ಕಳನ್ನು ಬೆಳೆಸುವ ಶಿಕ್ಷಕರ ಅಮೂಲ್ಯ ಸಮಯವನ್ನು ಉಳಿಸಲು, ಅವರ ಮಾನಸಿಕ ಕಿರಿಕಿರಿಯನ್ನು ತಪ್ಪಿಸಿ, ತಂತ್ರಜ್ಞಾನವನ್ನು ಸರಳವಾಗಿ ಬಳಸಿಕೊಳ್ಳಲು ಸಿಕ್ಕ ಒಂದು ಪುಟ್ಟ ಪರಿಹಾರವೇ 'Marks Register' ಆ್ಯಪ್.

🎯 ಆ್ಯಪ್ ರೂಪುಗೊಂಡ ಉದ್ದೇಶ:
ವಿದ್ಯಾರ್ಥಿಯ ಶೈಕ್ಷಣಿಕ ಪ್ರಗತಿ ಮತ್ತು ಹಾಜರಾತಿ ವಿಶ್ಲೇಷಣೆ ಎಂಬುದು ಶಿಕ್ಷಕರು, ಮುಖ್ಯಶಿಕ್ಷಕರು ಮತ್ತು ಪೋಷಕರು ಎಂಬ ಮೂರು ಪ್ರಮುಖ ಕೊಂಡಿಗಳ ಮೇಲೆ ನಿಂತಿದೆ. ಮಗುವಿನ ಬೆಳವಣಿಗೆಗೆ ಈ ಮೂವರಿಗೂ ಕ್ಲಪ್ತ ಸಮಯದಲ್ಲಿ, ಕೈ ತುದಿಯಲ್ಲಿ ನಿಖರವಾದ ಮಾಹಿತಿ ಸಿಗುವುದು ಅತ್ಯಗತ್ಯ.
ಸಾಮಾನ್ಯವಾಗಿ ಪರೀಕ್ಷೆ ಮುಗಿದ ನಂತರ ಅಂಕಗಳನ್ನು ತಿದ್ದಿ, ಕ್ರೋಢೀಕರಿಸಲು ಕನಿಷ್ಠ ಒಂದು ವಾರ ಬೇಕಾಗುತ್ತದೆ. ಇದಕ್ಕಾಗಿ ಶಿಕ್ಷಕರ ಬೋಧನಾ ಅವಧಿಯೂ ವ್ಯಯವಾಗುತ್ತದೆ. ನಂತರ ಇದನ್ನು SATS ನಂತಹ ಪೋರ್ಟಲ್‌ಗಳಿಗೆ ಅಪ್‌ಲೋಡ್ ಮಾಡುವುದು ಮತ್ತೊಂದು ದೊಡ್ಡ ಸವಾಲು.

💡 'ಮಾರ್ಕ್ಸ್ ರಿಜಿಸ್ಟರ್' ಆ್ಯಪ್‌ನ ವಿಶೇಷತೆಗಳು:
ಇದೊಂದು "ಶಿಕ್ಷಕರಿಂದ, ಶಿಕ್ಷಕರಿಗಾಗಿ" ರೂಪುಗೊಂಡ ಆ್ಯಪ್. ರಾಜ್ಯದ ವಿವಿಧ ವಿಷಯಗಳ 250ಕ್ಕೂ ಹೆಚ್ಚು ಶಿಕ್ಷಕರು ಇದನ್ನು ತಿಂಗಳುಗಳ ಕಾಲ ಸ್ವತಃ ಬಳಸಿ, ಹಲವು ಹಂತಗಳಲ್ಲಿ ಪರೀಕ್ಷಿಸಿ ತಿದ್ದಿ-ತೀಡಿದ ಸಂಪೂರ್ಣ 'ಶಿಕ್ಷಕ ಸ್ನೇಹಿ' ಅಪ್ಲಿಕೇಶನ್ ಇದಾಗಿದೆ.
📶 100% ಆಫ್‌ಲೈನ್ ಕೆಲಸ: ನೆಟ್‌ವರ್ಕ್ ಇಲ್ಲದಿದ್ದರೂ ಆ್ಯಪ್ ಸುಲಭವಾಗಿ ಕೆಲಸ ಮಾಡುತ್ತದೆ.
☁️ ಗೂಗಲ್ ಡ್ರೈವ್ ಬ್ಯಾಕಪ್: ಶಿಕ್ಷಕರು ತಮ್ಮ ಸಂಪೂರ್ಣ ಸರ್ವಿಸ್ ಅವಧಿಯ ಡಾಟಾವನ್ನು ಸುರಕ್ಷಿತವಾಗಿಡಬಹುದು. ಡಾಟಾ ಕಳೆದುಹೋಗುವ ಭಯವಿಲ್ಲ.
📊 ಸಂಪೂರ್ಣ ಅನಾಲಿಟಿಕ್ಸ್: ವಿಷಯ ಶಿಕ್ಷಕರು ಮತ್ತು ಮುಖ್ಯಗುರುಗಳು (HM) ಪ್ರತಿಯೊಬ್ಬ ವಿದ್ಯಾರ್ಥಿಯ ಶೈಕ್ಷಣಿಕ ಪ್ರಗತಿಯನ್ನು ಸುಲಭವಾಗಿ ವಿಶ್ಲೇಷಿಸಬಹುದು.
📄 ಒಂದೇ ಕ್ಲಿಕ್‌ನಲ್ಲಿ ಪ್ರಗತಿ ಪತ್ರ: ಒಂದೇ ಕ್ಲಿಕ್‌ನಲ್ಲಿ ಎಲ್ಲಾ ವಿಷಯಗಳ ಅಂಕಗಳು ಕ್ರೋಢೀಕರಣಗೊಂಡು Progress Card ಮತ್ತು Excel ಶೀಟ್ ಪ್ರಿಂಟ್ ಪಡೆಯಬಹುದು.
👥 ಮೂರು ಪಾತ್ರಗಳ ವ್ಯವಸ್ಥೆ: ವಿಷಯ ಶಿಕ್ಷಕ, ವರ್ಗ ಶಿಕ್ಷಕ ಮತ್ತು ಮುಖ್ಯಶಿಕ್ಷಕ — ಪ್ರತಿಯೊಬ್ಬರಿಗೂ ಅವರದೇ ಆದ ಸುಲಭ ಕಾರ್ಯವಿಧಾನ.
💬 WhatsApp/SMS ಮೂಲಕ ನೇರ ಫಲಿತಾಂಶ: ಪ್ರತಿ ಪರೀಕ್ಷೆಯ ನಂತರ ಒಂದೇ ಟ್ಯಾಪ್‌ನಲ್ಲಿ ಪೋಷಕರಿಗೆ ಫಲಿತಾಂಶ ಸ್ಲಿಪ್ ರವಾನೆ.
🌉 ಸೇತು ಬಂಧ (Bridge Course) ಪರೀಕ್ಷೆ: Pre-Test/Post-Test ಮತ್ತು ಸಾಮರ್ಥ್ಯ ಆಧಾರಿತ ವಿಶ್ಲೇಷಣೆ ಇದರಲ್ಲೇ ಲಭ್ಯ.
✅ ನಿಖರತೆಗೆ ಬದ್ಧತೆ: KSEAB ಗ್ರೇಡಿಂಗ್ ನಿಯಮಗಳ ಪ್ರಕಾರ ಸಾವಿರಾರು ಸ್ವಯಂಚಾಲಿತ ಪರಿಶೀಲನೆಗಳ ಮೂಲಕ ಪ್ರತಿ ಲೆಕ್ಕಾಚಾರವನ್ನೂ ದೃಢಪಡಿಸಲಾಗಿದೆ — ವಿದ್ಯಾರ್ಥಿಯ ಅಂಕದಲ್ಲಿ ತಪ್ಪಾಗುವ ಪ್ರಶ್ನೆಯೇ ಇಲ್ಲ.

🏆 ನಮ್ಮ ಹೆಮ್ಮೆಯ ಸಾಧನೆ:
ನಿಮ್ಮೆಲ್ಲರ ಬೆಂಬಲದಿಂದ 'ಮಾರ್ಕ್ಸ್ ರಿಜಿಸ್ಟರ್' ಆ್ಯಪ್ ...ಜುಲೈ ತಿಂಗಳ AppBrain ಸಂಸ್ಥೆಯ ಶಿಕ್ಷಣ ವಿಭಾಗದ (Education Category) ಭಾರತದ ಶ್ರೇಯಾಂಕದಲ್ಲಿ 3ನೇ ಸ್ಥಾನ (3rd Rank in India, as per AppBrain) ಪಡೆದುಕೊಂಡಿದೆ...

🎥 ಟ್ಯುಟೋರಿಯಲ್ ವೀಡಿಯೊಗಳು ಲಭ್ಯವಿದೆ:
ಆ್ಯಪ್ ಅನ್ನು ಸುಲಭವಾಗಿ ಬಳಸುವುದು ಹೇಗೆ ಎಂದು ತಿಳಿಸಲು YouTube Tutorial Channel ಪ್ರಾರಂಭಿಸಲಾಗಿದೆ.

 Channel ನ ಲಿಂಕ್
https://youtube.com/@santhoshakodi?si=WFk_QbqYHTTeqcrP

ಅಪ್ಲಿಕೇಶನ್ ಲಿಂಕ್
https://play.google.com/store/apps/details?id=com.marksregister.app

 ಅಗತ್ಯವಿರುವ ಎಲ್ಲಾ ಶಿಕ್ಷಕ ವೃಂದದವರಿಗೆ ಈ ಮಾಹಿತಿ ಮತ್ತು ಲಿಂಕ್ ಗಳನ್ನು ತಲುಪಿಸಿ.
ಶಿಕ್ಷಕರ ಸಮಯ ಉಳಿಯಲಿ, ಕಲಿಕೆ ಸುಗಮವಾಗಲಿ! 💐

Wednesday, 24 September 2025

ಜಾನಪದ ವಿಶ್ವವಿದ್ಯಾಲಯದ ಡಿಪ್ಲೋಮಾ ಕೋರ್ಸ್ ಗಳಿಗೆ ಅರ್ಜಿ ಆಹ್ವಾನ ..


 ಜಾನಪದ ವಿಶ್ವವಿದ್ಯಾಲಯದ ಡಿಪ್ಲೋಮಾ ಕೋರ್ಸ್ ಗಳಿಗೆ ಅರ್ಜಿ ಆಹ್ವಾನ . ಹಸೆ ಚಿತ್ತಾರ , ನಾಟಿ ವೈದ್ಯ ,ವಿವಿಧ ಜಾನಪದ ನಿಕಾಯಗಳಲ್ಲಿ ಸ್ನಾತಕೋತ್ತರ ಡಿಪ್ಲೋಮಾ ,ಡಿಪ್ಲೋಮಾ ಅರ್ಜಿ ಆಹ್ವಾನಿಸಲಾಗಿದೆ.  ಸಂಪರ್ಕಿಸಿ . ೮೬೬೦೪೮೯೯೦೧

Tuesday, 13 August 2024

ಸುಳ್ಳೂರ ಶಾಲೆಯಲ್ಲಿ ಪಾಲಕರಿಂದ ಸ್ವಚ್ಛತಾ ಸಪ್ತಾಹ


ಊರಿನ ಗ್ರಾಮಸ್ಥರಿಂದ ಸುಳ್ಳೂರು ಶಾಲೆಯಲ್ಲಿ ಸ್ವಚ್ಛತಾ ಸಪ್ತಾಹ



ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸುಳ್ಳೂರಿನ ಹಿರಿಯ ವಿದ್ಯಾರ್ಥಿಗಳು , ಪಾಲಕರೆಲ್ಲರೂ ಸೇರಿ ಶಾಲಾ ಮಕ್ಕಳ ಆಟದ ಮೈದಾನ  ನಿರ್ಮಾಣ, ಸ್ವಚ್ಛತೆ, ಶಾಲಾವನ ಮತ್ತು ಶಾಲಾ ಕೈತೋಟ  ನಿರ್ವಹಣಾ ಕಾರ್ಯವನ್ನು ಸ್ವಯಂ ಸೇವಾ ಆಸಕ್ತಿಯಿಂದ ಸ್ವತಹ ನಿರ್ವಹಿಸಿ ಮಾದರಿಯಾಗಿದ್ದಾರೆ. ತಮ್ಮ ಊರಿಗೆ ಸರ್ಕಾರಿ ಶಾಲೆಯ ಬಗ್ಗೆಗಿನ ಕಾಳಜಿಯ ಕುರಿತು ಶಿಕ್ಷಣ ಇಲಾಖೆಯ ಅಧಿಕಾರಿಗಳು ಮೆಚ್ಚುಗೆ ಸೂಚಿಸಿದ್ದಾರೆ.


ನಮ್ಮ ಶಾಲೆ ನಮ್ಮ ಹೆಮ್ಮೆ ತಂಡ ಮತ್ತು ಮಕ್ಕಳ ಮಂದಾರ ತಂಡದ ವತಿಯಿಂದ ಪೋಷಕರ ಮಹಾಸಭೆ ಮತ್ತು ಸ್ವಚ್ಛತಾ ಸಪ್ತಾಹವನ್ನು ಆಯೋಜಿಸಲಾಗಿತ್ತು. ಈ ವರ್ಷ ಸುರಿದ ಅಧಿಕ ಮಳೆಯಿಂದ ಶಾಲಾ ಆವರಣ ಬೃಹತ್ ಕಳೆ, ಹುಲ್ಲಿನಿಂದಾಗಿ ಹಾವುಗಳ ಹಾವಳಿ ಅಧಿಕವಾಗಿತ್ತು. ಇದನ್ನು ಗಮನಿಸಿದ ಮುಖ್ಯ ಗುರುಗಳಾದ ರವಿಚಂದ್ರರವರು ಮಕ್ಕಳೊಂದಿಗೆ ತಾವೇ ಸ್ವತಹ ಶಾಲಾ ಸ್ವಚ್ಚತೆ ಆರಂಭಿಸಿ ಊರಿನ ಪಾಲಕರಿಗೆ ಶಾಲಾ ಸ್ವಚ್ಛತಾ ನಿರ್ವಹಣೆಗೆ ಬರುವಂತೆ ಕರೆ ನೀಡಿದ್ದರು.  20ಕ್ಕೂ ಅಧಿಕ ಪಾಲಕರು  ತಮ್ಮ ಜವಾಬ್ದಾರಿ ಅರಿತು   ಗುದ್ದಲಿ, ಕುಡುಗೋಲು ಹಿಡಿದುಕೊಂಡು  ಬಂದು ಸುಮಾರು ಎರಡು ಎಕರೆಗಿಂತಲೂ ಅಧಿಕ ವಿಸ್ತೀರ್ಣ ಹೊಂದಿರುವ ಶಾಲಾ ಆವರಣವನ್ನು ಸ್ವಚ್ಛಗೊಳಿಸಿದರು.   ಕೈತೋಟದ ಅಡಿಕೆ ಗಿಡ, ತೆಂಗಿನ ಮರ, ವಿವಿಧ ಹೂವಿನ ಗಿಡಗಳು ಮತ್ತು ಮತ್ತಿತರ ಗಿಡಗಳಿಗೆ ಮಣ್ಣು ಹಾಕುವುದು, ಕಳೆ ನಿರ್ವಹಣೆ, ಚರಂಡಿ ಸ್ವಚ್ಛತೆ ಮತ್ತಿತರ ಕೆಲಸಗಳನ್ನು ಮಾಡಿ ತಮ್ಮ ಊರಿನ ಶಾಲೆಯನ್ನ ಸುಂದರಗೊಳಿಸಿದ್ದು ಶ್ಲಾಘನೀಯ ವಿಷಯವಾಗಿದೆ. ಎಸ್ ಡಿ ಎಂ ಸಿ ಅಧ್ಯಕ್ಷರಾದ ಬೀರನ್ ಕುಟ್ಟಿ, ಮುಖ್ಯ ಶಿಕ್ಷಕರಾದ ರವಿಚಂದ್ರ,  ಹಿರಿಯ ಶಿಕ್ಷಕರಾದ ಪರುಶುರಾಮಪ್ಪ  ಅವರು ಸಹ ಸ್ವಚ್ಛತಾ ಕೆಲಸದಲ್ಲಿ ತೊಡಗಿಕೊಂಡು ಮಾರ್ಗದರ್ಶನ ಮಾಡಿದ್ದರು.

ಬೇಸಿಗೆ ಶಿಬಿರ ಕುರಿತು ಪತ್ರಿಕ ವರದಿ

ಮಕ್ಕಳ ಬೇಸಿಗೆ ಸಂಭ್ರಮ ವಿಶೇಷ ಶಿಬಿರದ ಕುರಿತು ವಿಜಯ ಕರ್ನಾಟಕ ವರದಿಯನ್ನು ಓದುತ್ತಿರುವ ವಿದ್ಯಾರ್ಥಿಗಳು.


ಮಕ್ಕಳ ಮನೆ ಮನೆಗೆ marks rigister app

📱 'ಮಾರ್ಕ್ಸ್ ರಿಜಿಸ್ಟರ್' (Marks Register) ಆ್ಯಪ್ !!   ಶಿಕ್ಷಕರ ಶ್ರಮಕ್ಕೆ ತಂತ್ರಜ್ಞಾನದ ಆಸರೆ! ಶಿಕ್ಷಕರ ಕೆಲಸ ಇಂದು ಮುಂಚಿನಂತಿಲ್ಲ. ಬದಲಾಗುತ್ತಿರುವ...