ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

ಓದುಗರ ಓಲೆ

 ರವಿರಾಜ್ ಸಾಗರ ಸರ್ ನಿಮ್ಮ ಸಂಪಾದಕತ್ವದ ತ್ರೈಮಾಸಿಕ ಸಂಚಿಕೆ  ಜೂನ್ ತಿಂಗಳದ ಮಕ್ಕಳ ಮಂದಾರ  ತುಂಬಾ ತುಂಬಾ ಚೆನ್ನಾಗಿ ಬಂದಿದೆ. 

ಇದರಲ್ಲಿ ನಿಮ್ಮ ಸಂಪಾದಕೀಯ ಲೇಖನ ಅದ್ಭುತವಾಗಿದೆ. ಹಾಗೆಯೇ ನಿಮ್ಮ ಪ್ಲಾಸ್ಟಿಕ್ ಕಸ ನಿಮ್ಮದು. ಜಾಗೃತಿ ಮೂಡಿಸುವ ಬರಹ ಜೊತೆಗೆ ಆಂದೋಲನ ತುಂಬಾ ಆಕರ್ಷಣೀಯವಾಗಿದೆ. ಹಾಗೂ ರಜೆಯಲ್ಲಿ ಮಕ್ಕಳ ನಿರ್ವಹಣೆ ಹೇಗೆ ಸೃಜನಶೀಲ ಮಾರ್ಗಗಳು. ನೀವು ಬರೆದ ಲೇಖನ ಎಲ್ಲರ ಮನಸೆಳೆಯುತ್ತದೆ. ಮತ್ತು ಈ ಒಂದು ಪತ್ರಿಕೆಯಲ್ಲಿ ಚಿನ್ನರ ಚಿತ್ರಗಳು ಬಾಲ ಪ್ರತಿಭೆಗಳ ಕುರಿತು ಪರಿಚಯ, ನೀವು ಓದಬೇಕಾದ ಪುಸ್ತಕವೊಂದರ ಪುಟಗಳು ಪುಸ್ತಕ ವಿಮರ್ಶೆ ಲೇಖನ, ಜಾನಪದ ಜಗಲಿ ಹೀಗೆ ಈ ತ್ರೈಮಾಸಿಕ ಪತ್ರಿಕೆಯಲ್ಲಿ ಲೇಖನಗಳು ಹಾಗೂ ಮಕ್ಕಳ ಕವಿತೆಗಳು ತುಂಬಾ ಸ್ವಾರಸ್ಯಕರವಾಗಿವೆ. ಒಟ್ಟಾರೆ ಪತ್ರಿಕೆ ಎಲ್ಲಾ ಓದುಗರ ಮನ ಗೆಲ್ಲುವುದರಲ್ಲಿ ಸಂದೇಹವೇ ಇಲ್ಲ. ಪತ್ರಿಕೆ ಓದಿ ನನಗೆ ತುಂಬಾ ಖುಷಿಯಾಯಿತು. ಇದರಲ್ಲಿ ನಿಮ್ಮ ಶ್ರಮ ಮತ್ತು ಸತತ ಪ್ರಯತ್ನ ಮತ್ತು ಛಲಬಿಡದೆ ಪತ್ರಿಕೆಯನ್ನು ಮುಂದುವರಿಸಿಕೊಂಡು ಬರುತ್ತಿರುವುದು ನಿಜಕ್ಕೂ ಶ್ಲಾಘನೀಯ ಕಾರ್ಯ. ನಿಮ್ಮ ಪ್ರಯತ್ನಕ್ಕೆ ನಮ್ಮ ಸಹಕಾರ ಸದಾಕಾಲ ಇರುತ್ತದೆ ಸರ್.

 ಧನ್ಯವಾದಗಳು.

ಹನುಮಂತಪ್ಪ  N . ಸ  ಹಿ  ಪ್ರಾ  ಶಾಲೆ ವಣಗೇರಿ. 

ತಾಲೂಕು: ಯಲಬುರ್ಗಾ. ಜಿಲ್ಲಾ : ಕೊಪ್ಪಳ

ಶಿಕ್ಷಕರು..

*****************************************

ಮಕ್ಕಳ ಮಂದಾರ

ಈ ಹೊತ್ತಿಗಾಗಿದೆ

ಚೆಲುವಿನ ಚಿತ್ತಾರ,

ಬಾಲರ ಮೆಲ್ನುಡಿ ಹೊತ್ತಿಸಿ

ಪಟಾಕಿಯ ಕಿಡಿ,

ಹಿಡಿ ಹಿಡಿಯಾಗಿ ಒಗ್ಗೂಡಿ

ಹೂ ಬಾಣದ ಬೆಳಕ ಬೆಳಗಿಸಿ,

ಅಬಾಲ ವೃದ್ಧರಲ್ಲಿ ಚೈತನ್ಯವ ಚಿಮ್ಮಿಸಿದೆ.

ಭಾಗ್ಯ.ಸಿ ಎನ್.

ಬರಹಗಾರರು.


ಸರ್ ಪತ್ರಿಕೆ ಮತ್ರಾ ತುಂಬಾ ಸೊಗಸಾಗಿ ಯಾವ ರಾಜ್ಯಮಟ್ಟದ ಪತ್ರಿಕೆಗೂ ಕಡಿಮೆಯಿಲ್ಲ...ಅಲ್ಲಿ ಮಕ್ಕಳಿಗೆ ಬೇಕಾದ ಕವನ ,ಕಥೆ, ಪದಬಂಧ, ಒಗಟು, ಗಾದೆ, ನಮ್ಮ ಊರು & ಶಾಲೆಯ ಸುದ್ದಿಸಮಾಚಾರ ಅಲ್ಲದೆ ತೆರೆಮರೆಗೆ ಸರಿಯುತ್ತಿರುವ ಜಾನಪದ ಸೊಗಡಿನ ಅರಿವು, ಅಷ್ಟರಜೊತೆಯಲ್ಲಿ ತರಗತಿಯ ವಿಷಯಾಂಶಗಳು, ಮತ್ತು ನಮಗೆ ಶಿಕ್ಷದ ಅವಶ್ಯಕತೆ ಹಾಗೂ ಉಚಿತ ಶಿಕ್ಷಣವಿದ್ದರೂ ಶಾಲೆಯಿಂದ ಹೊರಗುಳಿಯುವ ಮಕ್ಕಳ ಬವಣೆ ....ಹೀಗೆ ಎಲ್ಲವನ್ನೂ ಮಕ್ಕಳ ಪುಟ್ಟವಯಸ್ಸಿನಲ್ಲೆ ತಿಳಿಸಲು ನೀವು ತೊಡಗಿಸಿಕೊಂಡಿರುವ ರೀತಿ ಸೂಕ್ತ ಹಾಗೂ ಸಮಂಜಸವಾದುದಲ್ಲದೆ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಕಾರಣವಾಗಿದೆ...ನಿಮ್ಮ ಈ ಪ್ರಯತ್ನಕ್ಕೆ ಹಾಗೂ ಸಹಕಾರ ನೀಡುತ್ತಿರುವ ಎಲ್ಲಾ ಆತ್ಮೀಯರಿಗೂ ಹಾಗೂ ಪುಟಾಣಿ ಮಕ್ಕಳಿಗೂ ಮತ್ತೊಮ್ಮೆ ತುಂಬು ಹೃದಯದ ಅಭಿನಂದನೆಗಳು ಸರ್...💐💐

ಹೀಗೆ ಮುಂದುವರೆಯಲಿ  ಎಂದು ಆಶಿಸುತ್ತಾ...


ನಿಮ್ಮ ಪತ್ರಿಕೆಯ ಓದುಗ ಮಿತ್ರರಲ್ಲಿ ಒಬ್ಬರಾದ 


ಗೀತಾಮಂಜು 

ಜಗಳೂರು


No comments:

Post a Comment

ಸುಳ್ಳೂರ ಶಾಲೆಯಲ್ಲಿ ಪಾಲಕರಿಂದ ಸ್ವಚ್ಛತಾ ಸಪ್ತಾಹ

ಊರಿನ ಗ್ರಾಮಸ್ಥರಿಂದ ಸುಳ್ಳೂರು ಶಾಲೆಯಲ್ಲಿ ಸ್ವಚ್ಛತಾ ಸಪ್ತಾಹ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸುಳ್ಳೂರಿನ ಹಿರಿಯ ವಿದ್ಯಾರ್ಥಿಗಳು , ಪಾಲಕರೆಲ್ಲರೂ ಸೇರ...