ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

ಮಕ್ಕಳು ಬರೆದ ಕತೆ /ಕವನಗಳು

ಹಲಸಿನ ಮರ ಮತ್ತು ಬಡಗಿ   

       


    ಚಂದಾಪುರ ಎಂಬ ಊರಿನ ಕೊನೆಯಲ್ಲಿ ಒಂದು ಬಡಗಿಯ ಮನೆ ಇತ್ತು . ಆ ಬೆಡಗಿಯ ಹೆಸರು ರಾಮಾಚಾರಿ .ಅವನ ಮನೆ ಕಾಡಿನ ಹತ್ತಿರ ಇತ್ತು .ಅವನು ದಿನ ಬೆಳಗ್ಗೆ ಕಾಡಿಗೆ ಹೋಗಿ ಮರಗಳನ್ನು ಕಡಿದು ತಂದು ಹೊಸ ಹೊಸ ಪೀಠೋಪಕರಣಗಳನ್ನು ತಯಾರು ಮಾಡುತ್ತಿದ್ದ .ಗುರುವಾರ ಅವನು ತಯಾರಿಸಿದ ಪೀಠೋಪಕರಣಗಳನ್ನು ಸಂತೆಗೆ ತೆಗೆದುಕೊಂಡು ಹೋಗಿ ಮಾರುತ್ತಿದ್ದ ಒಳ್ಳೆಯ ವ್ಯಾಪಾರ ಕೂಡ ಆಗುತ್ತಿತ್ತು .

            ಅವನ ಮನೆಯ ಪಕ್ಕದಲ್ಲಿ ಒಂದು ಹಲಸಿನ ಮರ ಇತ್ತು .ಅದರ ಹಣ್ಣು ತುಂಬಾ ರುಚಿಯಾಗಿತ್ತು .ಆ ಹಣ್ಣಿನ ವಾಸನೆಗೆ ಬಾಯಲ್ಲಿ ನೀರು ಬರುತ್ತಿತ್ತು .ರಾಮಾಚಾರಿ ಆ ಮರದ ಕೊಂಬೆಯನ್ನು ಕಡಿದು ಬಾಗಿಲು, ಚೌಕಟ್ಟು ಇನ್ನೂ ಹಲವಾರು ವಸ್ತುಗಳನ್ನು ತಯಾರು ಮಾಡುತ್ತಿದ್ದ . ತುಂಬಾ ಬೇಡಿಕೆಯೂ ಇತ್ತು . ಆದರೆ ಅವನು ಆ ಮರವನ್ನು ಸರಿಯಾಗಿ ನೋಡಿಕೊಳ್ತಾನೆ ಇರಲಿಲ್ಲ . ಸರಿಯಾಗಿ ನೀರು ಕೂಡ ಹಾಕುತ್ತಾ ಇರಲಿಲ್ಲ. ಆದರೆ ಆ ಮರ ಅವನಿಗೆ ಒಳ್ಳೆಯ ಗಾಳಿ,  ಹಣ್ಣು ,ಕೊಂಬೆ ಎಲ್ಲವನ್ನೂ ಕೊಡುತ್ತಿತ್ತು .

             ಒಂದು ದಿನ ಹಲಸಿನ ಮರ ಪಕ್ಕ ಇದ್ದ ಸಸಿ ಹಲಸಿನ ಮರ ಕೇಳಿತು. "ದೊಡ್ಡ ಹಲಸಿನ ಮರ ಏಕೆ ನೀನು ಆ ಬಡಗಿಗೆ ಒಳ್ಳೆಯ ಹಣ್ಣು, ಗಾಳಿ, ಕೊಂಬೆ ಎಲ್ಲವನ್ನೂ ಕೊಡುತ್ತೀಯಾ . ನಿನಗೆ ನೋವು ಬೇಜಾರು ಆಗೋದಿಲ್ವಾ ." ಅಂತ ಕೇಳಿತು. ಅದಕ್ಕೆ ಆ ಹಲಸಿನ ಮರ ಹೇಳಿತು  " ನೋಡು ಅವನು ನನ್ನ ಮಗ ಅದಕ್ಕೆ ನಾನು ಅವನಿಗೆ ಒಳ್ಳೆಯ ಗಾಳಿ, ವಾತಾವರಣ, ಹಣ್ಣು ,ಕೊಂಬೆ ನನ್ನ ಹತ್ತಿರ ಏನು ಇದೆಯೋ ಎಲ್ಲವನ್ನೂ ನಾನು ಅವನಿಗೆ ಕೊಡುತ್ತೇನೆ.ಆದ್ರೆ ನಾನು ಅವನಿಂದ ಏನು ನಿರೀಕ್ಷೆ ಮಾಡುವುದಿಲ್ಲ . ಆದ್ರೂ ನನಗೆ ನೋವು ಬೇಜಾರು ಮತ್ತು ಕೋಪ ಇದೆ . ಈ ಮಾನವರು ಪರಿಸರ ಮತ್ತು ಭೂಮಿಯನ್ನು ತುಂಬಾ ಹಾಳು ಮಾಡುತ್ತಿದ್ದಾರೆ . ಹೀಗೆ ಪರಿಸರ ಮತ್ತು ಭೂಮಿಯನ್ನು ನಾಶ ಮಾಡಿದರೆ ಒಳ್ಳೆಯ ವಾತಾವರಣ, ಗಾಳಿ ಇರುವುದಿಲ್ಲ . ಹಣ್ಣುಗಳು ಕೊಂಬೆಗಳು ಸಹ ಇರುವುದಿಲ್ಲ ಮತ್ತು ಗಿಡ ಮರಗಳಿಲ್ಲ ಅಂದರೆ ಜನರ ಜೀವನವೇ ಇರುವುದಿಲ್ಲ .ಒಂದು ದಿನ ಪರಿಸರ ದಿನಾಚರಣೆ ಮಾಡ್ತಾರೆ ಮತ್ತು ಆ  ದಿನ ಗಿಡವನ್ನು ನೆಟ್ಟು ಫೋಟೋ ತೆಗೆಸಿ ಕೊಳ್ತಾರೆ. ಇನ್ನು ಉಳಿದ ದಿನ ನೀರು ಹಾಕೋದಿಲ್ಲ ನಮ್ಮನ್ನು ಕಾಪಾಡುವುದು ಇಲ್ಲ . " ಪರಿಸರವನ್ನು ರಕ್ಷಿಸಿ ಭೂಮಿಯನ್ನು ಕಾಪಾಡಿ " ಎಂದು ಆಂದೋಲನ ಮಾಡುತ್ತಾರೆ . ಅದೆಲ್ಲ ಒಂದೇ ದಿನ  ಎಂದು ಹಲಸಿನ ಮರ ಹೇಳಿತು. 

              ಹೌದಲ್ವಾ ಗೆಳೆಯರೇ ನಾವೆಲ್ಲ ಒಂದೇ ದಿನಕ್ಕೆ ಪರಿಸರ ದಿನಾಚರಣೆಯನ್ನು ಸೀಮಿತವಾಗಿಡದೆ ಪ್ರತಿದಿನ ನಮ್ಮ ಅಕ್ಕಪಕ್ಕ ಇರುವ ಗಿಡಗಳಿಗೆ ನೀರು ಹಾಕಬೇಕು ಹಾಗೂ ಅನೇಕ ಗಿಡಗಳನ್ನು ನೆಡಬೇಕು . ಎಲ್ಲರೂ ಹೀಗೆ ಮಾಡಿದರೆ ಪರಿಸರವೂ ಉಳಿಯುತ್ತದೆ ಭೂಮಿಯೂ ಉಳಿಯುತ್ತದೆ . ಪರಿಶುದ್ಧವಾದ ಪರಿಸರ ಇರುವುದರಿಂದ ನಮಗೆ ಒಳ್ಳೆಯ ಗಾಳಿ, ವಾತಾವರಣ, ಹಣ್ಣು ಸಿಗುತ್ತದೆ . ನಾವೆಲ್ಲ  ಪರಿಸರವನ್ನು ಕಾಪಾಡೋಣ ಗೆಳೆಯರೇ. 

                     ನೀತಿ :- ಗಿಡ ಮರಗಳನ್ನು ರಕ್ಷಿಸಿ ಭೂಮಿಯನ್ನು ಉಳಿಸಿ .

 

ಧೃತಿ ಎಸ್ ಭಾರದ್ವಾಜ್

6ನೇ ತರಗತಿ

ಭಾರತೀಯ ವಿದ್ಯಾ ಭವನ ಶಾಲೆ

ಶಿವಮೊಗ್ಗ  





No comments:

Post a Comment

ಸುಳ್ಳೂರ ಶಾಲೆಯಲ್ಲಿ ಪಾಲಕರಿಂದ ಸ್ವಚ್ಛತಾ ಸಪ್ತಾಹ

ಊರಿನ ಗ್ರಾಮಸ್ಥರಿಂದ ಸುಳ್ಳೂರು ಶಾಲೆಯಲ್ಲಿ ಸ್ವಚ್ಛತಾ ಸಪ್ತಾಹ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸುಳ್ಳೂರಿನ ಹಿರಿಯ ವಿದ್ಯಾರ್ಥಿಗಳು , ಪಾಲಕರೆಲ್ಲರೂ ಸೇರ...