ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

ಅತಿಥಿ ಸಾಹಿತಿಗಳ ಅಂಕಣ


ಹಿಂದಿನ ಸಂಚಿಕೆಗಳಿಗೆ ಮೇಲಿನ ಲಿಂಕ್ ಕ್ಲಿಕ್ ಮಾಡಿ ಓದಿ 








                                       ಕಥೆ :-ವೃಕ್ಷವಾಸಿ ಮತ್ತು ವೃಕ್ಷ

                                          _________________

 

ವೃಕ್ಷವಾಸಿಯೊಮ್ಮೆ ಮಾವಿನ ಮರದ ಮೇಲೆ ಕುಳಿತು ಮಾವಿನ ಕಾಯಿಯನ್ನು ತಿನ್ನುತ್ತಾ ಮರದ ಸೌಭಾಗ್ಯವನ್ನು ವರ್ಣಿಸುತಿತ್ತು.' ಹೇ ಮಾಮರವೇ, "ಪರೋಪಕಾರಾರ್ಥಮಿದಂ ಶರೀರಂ" ಈ ಮಾತಿಗೆ ನೀನೆಷ್ಟು ಸಮರ್ಥವು.ಘಮಲು,ನೆಳಲು, ರುಚಿಫಲವು,ಟೊಂಗೆಟೊಂಗೆಗೂ ಸೊಗಸಾದ ಕಥನವು,ಆಹಾ!  ಯಾವ ವೃಕ್ಷಕ್ಕುಂಟು ಇಃತಹ ಭಾಗ್ಯ. ನೀನಿಲ್ಲದೆ ಹಬ್ಬ-ಹರಿದಿನಗಳಿಲ್ಲ,ಪೂಜೆಗಳಿಲ್ಲ,ಮದುವೆಗಳಿಲ್ಲ ಏನೀ ಪುಣ್ಯವು ನಿಂದು ,ನೀ ಕೊಡುವ ಫಲವಃತೂ ಅತ್ಯದ್ಭುತ 'ಎಂದು ಹೊಗಳುತ್ತಲೇ ಇತ್ತು.

                                    ಇದೆಲ್ಲವನ್ನೂ ಸಮೀಪದ ಬೇವಿನ ಮರ ಕೇಳಿಸಿಕೊಂಡು ಸಣ್ಣಗೆ ಕಣ್ಣ ಹನಿ ಹನಿಸಲು ಪ್ರಾರಂಭಿಸಿತು. ಇದನ್ನು ಗಮನಿಸಿದ ಮಾಮರವು , ' ಹೇ ವೃಕ್ಷ ವಾಸಿಯೇ, ನೀ ಹೇಳಿದಂತೆ ನಾನೆಲ್ಲ ಕೊಡುತ್ತಿರುವೆ ನಿಜ.ಅದರಿಂದ ನನಗೆ ಗರ್ವವೇನೂ ಇಲ್ಲ. ಬದಲಾಗಿ ಹೆಮ್ಮೆ ಅನಿಸುತ್ತದೆ.ನನ್ನಂತೆ ಎಲ್ಲಾ ವೃಕ್ಷಗಳೂ ಸಹಾ ಒಂದಿಲ್ಲೊಂದು ಉಪಕಾರವನ್ನು ಖಂಡಿತ ಮಾಡುತ್ತವೆ.ಕೆಲವು ಮೇಲ್ನೋಟಕ್ಕೆ ಕಾಣುತ್ತವೆ.ಕೆಲವು ಕಾಣುವುದಿಲ್ಲವಷ್ಟೆ. ಅದೋ ಈ ಬೇವಿನ ವೃಕ್ಷವನ್ನೇ ನೋಡು.ನನಗಿಂತಲೂ ಹೆಚ್ಚಿನ ಪರೋಪಕಾರಿ ಆ ವೃಕ್ಷದ್ದು.ತನ್ನ ದೇಹಪೂರ್ತಿ ಔಷಧಿಯ ಗುಣಗಳನ್ನೇ ಹೊದ್ದು, ಮಾನವ ಸಂಕುಲಕ್ಕಾಗಲಿ, ಸಸ್ಯ ಸಂಕುಲಕ್ಕಾಗಲಿ, ಮಣ್ಣಿಗಾಗಲಿ,ಗಾಳಿಗಾಗಲಿ ಕ್ರಿಮಿಕೀಟಗಳ ಬಾದೆ ಬಾರದಂತೆ ತಡೆಯುತ್ತದೆ. ಹೀಗೆ ಪ್ರತೀ ವೃಕ್ಷವು ತನ್ನ ಕೆಲಸವನ್ನು ತಾವು ಮಾಡುತ್ತವೆ.ಆದರೆ ಪರೋಪಕಾರ ಸ್ವೀಕರಿಸಿದ ಮನುಷ್ಯನು ಮಾತ್ರ ನಮ್ಮಿಂದ ಏನೂ ಸಿಗದೇ ಹೋದಾಗ ಕತ್ತರಿಸಿ ಬಿಸಾಡುತ್ತಾನೆ. ಹೇ ವೃಕ್ಷ ವಾಸಿಯೇ ನೀನಾದರೂ ತಿನ್ನುವಾಗ ಬೀಜವನ್ನು ಉದುರಿಸಿ, ನನ್ನ ಸಂತತಿ ಚಿಗುರಿಸಲು ಉಪಕಾರ ಮಾಡಿರುವೆ.ಇಂಥಾ ಉಪಕಾರ ಸ್ಮರಣೆ ಮಾನವಕುಲಕ್ಕೂ ಬರಲೆಂದು ಆಶಿಸುತ್ತೇನೆ ' ಎಂದು ಮಾಮರವು ನೋವಿನಿಂದ ಉಲಿಯಿತು.

 

     ಹೊಟ್ಟೆಯನ್ನು ತುಂಬಿಸುವ ಸಸ್ಯ ಸಂಕುಲ ಮಾತ್ರ ಪರೋಪಕಾರಿ ಎಂದರಿತಿದ್ದ ವೃಕ್ಷವಾಸಿಯು ತನಗಾಗಿ ಗಾಳಿ,ಔಷಧಿ, ಆಶ್ರಯ ಜೊತೆಗೆ ಭೂಮಿಯನ್ನು ಕಾಪಿಡುವ ಸಸ್ಯ ಸಂಕುಲದ ಪರಿವೆ ವೃಕ್ಷವಾಸಿಯನ್ನು ಜಾಗೃತಗೊಳಿಸುವಂತೆ ಮಾಡಿತು. ಅಂದೇ ತೀರ್ಮಾನಿಸಿತು, ಅವಶ್ಯಕತೆಗಿಂತ ಹೆಚ್ಚಾಗಿ ಹಣ್ಣು ಹಾಳುಮಾಡುವುದಿಲ್ಲ, ಮತ್ತೊಂದು ಸಸ್ಯದ ಸಂತಾನಕ್ಕೆ ಸದಾ ಬದ್ಧನಾಗಿರುತ್ತೇನೆ. ಮತ್ತು ಪರೋಪಕಾರ ಜೀವನವನ್ನು ತಾನು ಹೊಸರೀತಿಯಲ್ಲಿ ಪ್ರಯತ್ನಿಸುವೆನೆಂದು ವೃಕ್ಷಕ್ಕೆ ತಲೆಬಾಗಿ ವಂದಿಸಿತು. ವೃಕ್ಷವಾಸಿಗಿಂತಲೂ ಅಧಿಕವಾಗಿ ಸಸ್ಯ ಸಂಕುಲವನ್ನು ಅವಲಂಬಿಸಿರುವ ನಾವೇಕೆ ಸಸ್ಯಗಳ ಉಳಿವಿಗೆ ಶ್ರಮಿಸಬಾರದು. ಯೋಚಿಸುವ ನೀತಿಯಲ್ಲವೆ?

 

  ಸಿ.ಎನ್.ಭಾಗ್ಯಲಕ್ಷ್ಮಿ‌ಸ.ಕಿ.ಪ್ರಾ.ಶಾಲೆ, ನಂಜೇಗೌಡನ ದೊಡ್ಡಿ, ಮಳವಳ್ಳಿ,. ತಾ.,ಮಂಡ್ಯ. ಜಿ.

9980767358

---------------------------------------------------------------------------------------------------------------


ಪ್ರವಾಸ ಕಥನ--ಜೋಧಾ ಬಾಯಿ ಅರಮನೆ ಫತೇಪುರ್ ಸಿಕ್ರಿ--ಅನುಭವ ಲೇಖನ

 

ರಾಜಸ್ಥಾನ ಜಯಪುರದಲಿ ಫತೇಪುರ್ ಸಿಕ್ರಿ ಇದೆ. ಫತೇಪುರ್ಸಿಕ್ರಿ ರೇಲ್ವೆಸ್ಟೇಷನಿಂದ 1 ಕಿಲೋ ಮೀಟರ್ ದೂರದಲ್ಲಿಜೋಧಾ ಬಾಯಿ ಅರಮನೆ ಇದೆ. ಜೋಧಾ ಬಾಯಿ ಅರಮನೆ ಒಂದು ದೊಡ್ಡದಾದ ಅರಮನೆ ಆಗಿದೆ. ಈ ಅರಮನೆಯನ್ನು ಅಕ್ಬರ ತನ್ನ ಪೀತಿಯ ಹೆಂಡತಿ ಜೋಧಾ ಬಾಯಿಯಸಲುವಾಗಿ ಕಟ್ಟಿಸಿರುವನು.ಜೋಧಾ ಬಾಯಿ ರಜಪೂತ ರಾಜಕುಮಾರಿ ಆಗಿದ್ದಳು.

 ಇತಿಹಾಸದ ಪ್ರಕಾರ ಅಕ್ಬರ ಮಾಳ್ವನನ್ನು ಕೊಂದ ಮೇಲೆ ರಜಪೂತ ರಾಜರಿಂದ ಬಹಳ ತೊಂದರೆ ಉಂಟಾಯಿತು. ಆದರೂ ಅಕ್ಬರನುರಜಪೂತ ಮಹಿಳೆಯರೊದಿಗೆ ಉತ್ತಮ ಸಂಬಂಧ ಹೊಂದಿದ್ದ.ಆಮೇಲೆ ಅಕ್ಬರ್ಜೋಧಾ ಬಾಯಿಯನ್ನು ಮದುವೆ ಆದನು. ಅಕ್ಬರನು ಜಯಪುರ ದಲ್ಲಿ ಆಡಳಿತ ನಡೆಸುತ್ತಿರುವ ಮಾನಸಿoಗನ ತಂಗಿಯಾದ ಜೋಧಾಬಾಯಿ ಯನ್ನು ಮದುವೆ ಆದನು.ಜೋಧಾ ಬಾಯಿ ಅಕ್ಬರ್ ನ ಪ್ರೀತಿಯ ಹೆಂಡತಿ ಆಗಿದ್ದ ಳು. ಅಕ್ಬರ್ ನು ಅರಮನೆಯಲ್ಲಿ ಹಿಂದೂ ಧರ್ಮದ ಸಂಪ್ರದಾಯದ ಹಬ್ಬದ ಆಚರಣೆ ಮಾಡಲು ಅವಕಾಶ ಕೊಡುತಿದ್ದನು.ಅರಮನೆ ಗುಜರಾತಿ ರಾಜಸ್ಥಾನಿ ಶೈಲಿ ಯಲ್ಲಿ ಕಟ್ಟಲಾಗಿದೆ. ಅರಮನೆಯಲ್ಲಿ ಹಂಸ, ಗಿಳಿ, ಕಮಲ, ಆನೆ ಚಿತ್ರ ಗಳನ್ನು ಕೆತ್ತನೆಮಾಡಲಾಗಿದೆ. ಹೀಗೆ ಜೋಧಾ ಬಾಯಿಯ ಅರಮನೆಯು ಪ್ರವಾಸಿಗರ ಕಣ್ಮನ ಸೆಳೆಯುತ್ತದೆ.ನಾವೆಲ್ಲ ಕುಟುಂಬ ಸಮೇತ ಪ್ರವಾಸ ಮಾಡಿದೆವು. ಜೋಧಾ ಬಾಯಿ ಅರಮನೆ ನೋಡಿ ತುಂಬಾ ಸಂತೋಷವಾಯಿತು. ಅಲ್ಲಿಯಇತಿಹಾಸವನ್ನು ಗೈಡ್ ಮೂಲಕ ತಿಳಿದು ಕೊಂಡೆವು. ಹೀಗೆ ಜೋಧಾ ಬಾಯಿ ಅರಮನೆ ಭೇಟಿ ಮಾಡಿ ಸಂತೋಷ ಅನುಭವಿಸಿದೆವು.

 --ಸುಜಾತ ಭಟ್ ಬೆಂಗಳೂರು

No comments:

Post a Comment

ಸುಳ್ಳೂರ ಶಾಲೆಯಲ್ಲಿ ಪಾಲಕರಿಂದ ಸ್ವಚ್ಛತಾ ಸಪ್ತಾಹ

ಊರಿನ ಗ್ರಾಮಸ್ಥರಿಂದ ಸುಳ್ಳೂರು ಶಾಲೆಯಲ್ಲಿ ಸ್ವಚ್ಛತಾ ಸಪ್ತಾಹ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸುಳ್ಳೂರಿನ ಹಿರಿಯ ವಿದ್ಯಾರ್ಥಿಗಳು , ಪಾಲಕರೆಲ್ಲರೂ ಸೇರ...