ಬೋದಿಸದ ಬುದ್ಧ
.................
ನಾನೂ ಮುಗ್ದ ಮಗು....!
ಬದಲಿಸಿತು ನಿನ್ನ ನಗು.
ಬುದ್ಧನೆದುರು ಬದಲಾದರೆಲ್ಲಾ.. ..
ಮುಗ್ದನೆದುರು ನಾನೂ....
ಮುದ್ದು ಮಗು.
ನನ್ನ ಮನೆ ಗಡಿಯಾರದ
ಮುಳ್ಳುಗಳೀಗ ಚಲನೆ ಬದಲಿಸಿ
ಆಟಕ್ಕಿಳಿದಿವೆ ನನಗೇ ಚೇಷ್ಟೆ ಮಾಡುತ.
ನನ್ನ ಪುಸ್ತಕಗಳೆಲ್ಲಾ ಹಾಯಾಗಿ
ಚೂರಾಗಿ ಮುಕ್ತಿ ಪಡೆಯಲು ತವಕಿಸುತಿವೆ
ಹಸುಗೂಸಿನ ಕೋಮಲ ಕೈಗಳಲಿ
ಪರ್ರನೆ ಕೇಕೆ ಹಾಕುತಿವೆ.
ಇನ್ನು ನಾನು ಉಳಿದೆನೇ...
ಬದಲಾಗಿಬಿಟ್ಟೆ ಮಗುವಾಗಿ....
ಎಸು ಓದಿದರೂ ಬದಲಾಗದವರೆಲ್ಲ
ಬದಲಾಗಬಹುದಾದ
ಪುಸ್ತಕವೇ ಮಗು .
ಮಗುವೇ ಪುಸ್ತಕ.
ಎಲ್ಲ ಬದಲಿಸಿತು.
ಏನೂ ಹೇಳದೆ.
ಬೋದಿಸದ ಬುದ್ಧ.
ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ
- Home
- ಸಂಪಾದಕೀಯ
- ಮಕ್ಕಳು ಬರೆದ ಕತೆ /ಕವನಗಳು
- ನಮ್ಮೂರ ಸುದ್ದಿಗಳು
- ಮಕ್ಕಳ ಬರಹಗಳು
- ಬಾಲ ಸಾಧಕರು
- ಮಕ್ಕಳು ಬಿಡಿಸಿದ ಚಿತ್ರಗಳು
- ನಮ್ಮೂರ ಜಾನಪದ
- ಜ್ಞಾನ - ವಿಜ್ಞಾನ
- ಸಾಮಾನ್ಯ ಜ್ಞಾನ
- ನಮ್ಮ ಪತ್ರಿಕಾ ಅಭಿಯಾನಗಳು
- ಓದುಗರ ಓಲೆ
- ಅತಿಥಿ ಸಾಹಿತಿಗಳ ಅಂಕಣ
- ಮಕ್ಕಳ ಪುಸ್ತಕಗಳ ಪರಿಚಯ-ಆನ್ ಲೈನ್ ಬುಕ್ ಹೌಸ್
- ಶೈಕ್ಷಣಿಕ ಲೇಖನಗಳು
- ಶೈಕ್ಷಣಿಕ ಚಟುವಟಿಕೆಗಳು
- ಲಾಂಗ್ವೇಜ್ ಕಾರ್ನರ್
- 1ರಿಂದ -puc ತರಗತಿ ಈ ಶಾಲೆ
- ನನ್ನ ಶೈಕ್ಷಣಿಕ ವೀಡಿಯೋಗಳು
- ಸಾರ್ವಜನಿಕ ಶಿಕ್ಷಣ ಇಲಾಖೆ
- ಹಿಂದಿನ ಸಂಚಿಕೆಗಳು ಮತ್ತು ಪತ್ರಿಕೆ ಕುರಿತು ಮಾಧ್ಯಮ ವರದಿ ...
- ನಮ್ಮ ಕುರಿತು ಫೋಟೋ ಗ್ಯಾಲರಿ
- ಅಂಕಣ ಬರಹ- ಕನಸುಗಳೂರ ಶ್ರಮಿಕ
- ಆನ್ಲೈನ್ ಪುಸ್ತಕ ಮಳಿಗೆಗಳು
- ಪಿಡಿಎಫ್ ಪುಸ್ತಕಗಳು.
- Ravichandra
- ಆನ್ಲೈನ್ ಪಾಠಗಳು - ದೀಕ್ಷಾ ಪೊರ್ಟಲ್
- ಇನ್ನೋವೇಟಿವ್ ಎಜ್ಯುಕೇಶನ್
Wednesday, 24 February 2016
ಬೋದಿಸದ ಬುದ್ಧ
Sunday, 14 February 2016
"ಮಂದಾರ ಕನ್ನಡ". ಶಾಲಾ ಮಕ್ಕಳ ಪತ್ರಿಕೆ
ಮಕ್ಕಳಿಂದ ಮಕ್ಕಳಿಗೆ ಸೃಜನಶೀಲ ಬರವಣಿಗೆ ಗೆ ವೇದಿಕೆಗಾಗಿ "ಮಂದಾರ ಕನ್ನಡ" ಶಾಲಾ ಮಕ್ಕಳ ಪತ್ರಿಕೆಯ ಜೆಪಿ. ಜೆ ಆವೃತ್ತಿ. ನಿನಿಮಗಾಗಿ.
Friday, 5 February 2016
ಮುಳುಗಡಲೇ. .(ಮಂಡಗಳಲೆ )
ಮುಳುಗಡಲೇ...(ಮಂಡಗಳಲೆ)
ಅತ್ತ ಸಹ್ಯಾದ್ರಿ ಕಣಿವೆಯಲಿ
ಸೊಗಸಾಗಿ ದುಮುಕುವ ಶರಾವತಿ
ಇತ್ತ ಅಬ್ಬರಿಸುತ ವಯ್ಯಾರದಿ ಬರುವ ವರದಾ ನದಿ
ನಾನೇನು ಕಡಿಮೆಯೇ ಎನ್ನುವ ಕನ್ನೆಹೊಳೆ
ಆದ್ರೆ ಮಳೆಯನುಂಡು
ಅಣ್ಣ ತಮ್ಮನ ಮಳೆಯಲಿ
ಮೈದುಂಬಿ ಮೆರೆದು
ನಮ್ಮೂರ ಮುಳುಗಿಸಿ
ಮಜ ನೋಡುವಳು...
ಆದರೂ ಮಳುಗಡೆಯ ಮಕ್ಕಳು ನಾವು
ಮುಳುಗಿ ಹೋಗುವೆವೇ..?
ದೀವರ ಕುಲದ ದಿಟ್ಟರು ನಾವು
ಕಾಯಕವೇ ಕೈಲಾಸ ಎನ್ನುತ
ಆಳಾಗಲೂ ಸೈ.. ಅರಸಾಗಲೂ ಜೈ,
ಸಹ್ಯಾದ್ರಿಯ ಹೆಬ್ಬಾಗಿಲ
ಪುಟ್ಟ ತಗ್ಗು ಬಯಲು ನನ್ನೂರು..
ಸಮಾಜವಾದಿಗಳ ಕಾಗೋಡು ಚಳುವಳಿಗೆ
ಜೂತೆಯಾದವರು ನನ್ನೋರು..
ಶೂದ್ರ ಕುಲಗಳ ಸುಶಿಕ್ಷಿತರ ನೆಲೆಬೀಡು
ದಂಡು ದಾಳಿಗೆ ಅಂಜದ ದೀವರ ಗೂಡು.
ಮುಳುಗೇಳುವ ಮಂಡಗಳಲೆ
ಶ್ರಮಿಕರ ಸಹಬಾಳ್ವೆಯ ನೆಲೆ.
- ರವಿರಾಜ್ ಸಾಗರ್.ಮಂಡಗಳಲೆ.
Tuesday, 2 February 2016
ಹುಸಿಯಲ್ಲ ಹಸಿವು
ಹುಸಿಯಲ್ಲ ಹಸಿವು
...................
ಕಾಲೆಳೆವ ಕಾಲದ ಕಾಲೆಳೆದೇ ಬದುಕಬೇಕೆಂದು ಹಠ ಹಿಡಿದು
ಕಡಲಲೆಯ ತಡೆದು
ಹೊಂಬಣ್ಣದ ಕಡಲೇ ಕೆಂಪಾಗುವಂತೆ ಮುನಿದು
ಸೂರ್ಯನ ನೆತ್ತಿ ಸುಟ್ಟು
ನಗುನಗುತ ಕುಂತ ಕಾಲಬೈರವ ನಾನು.
ನಿನಗೆ ಹೆದರುವೆನೆ ಚೆಲುವೆ.?
ಅಂತೇನು ಹೇಳಲಾರೆ
ನಿನ್ನ ಅಂಗಾಲಿಗೆ ಹಾಲು ಸುರಿದು
ಮುಡಿಗೆ ಮಲ್ಲಿಗೆ ಮುಡಿಸಿ
ನಿನ್ನ ಹುಸಿ ಮುನಿಸಿಗೆ
ಕ್ಷಮೆ ಕೇಳುವಾಸೆ
ಹುಸಿ ಮುನಿಸಿಕೊಂಡಾಗ ನೀ ಬಲು ಚೆಲುವೆ
ಹಸಿ ಪ್ರೇಮದಿಂದ ಮನ್ನಿಸಿ ಬಿಡು ಒಲವೇ..
ಹುಸಿಯಲ್ಲ ನನ್ನೊಲವು
ಒಲವ ಹಸಿವಾಗಿದೆ
ಉಳಿಸಿ, ಉಣಿಸು ಬಾ ಒಲವಾಮೃತ.
ರವಿರಾಜ್ ಸಾಗರ್. - (ಬಾವಜೀವಿ ಸಂಕಲನ ದಿಂದ. )
ಮಕ್ಕಳ ಮನೆ ಮನೆಗೆ marks rigister app
📱 'ಮಾರ್ಕ್ಸ್ ರಿಜಿಸ್ಟರ್' (Marks Register) ಆ್ಯಪ್ !! ಶಿಕ್ಷಕರ ಶ್ರಮಕ್ಕೆ ತಂತ್ರಜ್ಞಾನದ ಆಸರೆ! ಶಿಕ್ಷಕರ ಕೆಲಸ ಇಂದು ಮುಂಚಿನಂತಿಲ್ಲ. ಬದಲಾಗುತ್ತಿರುವ...
-
ಚಿಕ್ಕಂದಿನಲ್ಲಿ ನಮಗೆ ಬರುತ್ತಿದ್ದ, ನಾವೆಲ್ಲಾ ಹಾಡುತ್ತಿದ್ದ ಮರೆಯಲಾಗದ ಪದ್ಯಗಳು.. ಇವುಗಳಲ್ಲಿ ನಿಮಗೆಷ್ಟು ಗೊತ್ತು.. ತಿಳಿಸಿ..* ❤️❤️❤️...
-
ಜಾಗತೀಕರಣ ನುಂಗಿದ ಹಳ್ಳಿಯ "ತಿಥಿ" .......................................... ಈಗಾಗಲೇ 15 ರಾಷ್ಟ್ರೀಯ. .. ವಿವಿಧ ಅಂತರಾಷ್ಟೀಯ ಪ್ರಶಸ್ತಿ ಪಡೆದ...
-
ಕನ್ನಡ ವ್ಯಾಕರಣ @EDUCATIONGKNEWS. •ಕನ್ನಡ ವರ್ಣಮಾಲೆ •ಸಂಧಿ ಪ್ರಕರಣ •ನಾಮ ಪದ ಪ್ರಕರಣ •ಲಿಂಗಳು •ವಚನಗಳು •ವಿಭಕ್ತಿ ಪ್ರತ್ಯಯಗಳು •ಕ್ರಿಯಾಪದ ಪ್ರಕರಣ •ಕ...