ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Friday 5 February 2016

ಮುಳುಗಡಲೇ. .(ಮಂಡಗಳಲೆ )

ಮುಳುಗಡಲೇ...(ಮಂಡಗಳಲೆ)

ಅತ್ತ ಸಹ್ಯಾದ್ರಿ ಕಣಿವೆಯಲಿ
  ಸೊಗಸಾಗಿ  ದುಮುಕುವ ಶರಾವತಿ
ಇತ್ತ ಅಬ್ಬರಿಸುತ  ವಯ್ಯಾರದಿ ಬರುವ ವರದಾ ನದಿ
ನಾನೇನು ಕಡಿಮೆಯೇ ಎನ್ನುವ ಕನ್ನೆಹೊಳೆ
ಆದ್ರೆ ಮಳೆಯನುಂಡು
ಅಣ್ಣ ತಮ್ಮನ ಮಳೆಯಲಿ
ಮೈದುಂಬಿ ಮೆರೆದು
ನಮ್ಮೂರ ಮುಳುಗಿಸಿ
ಮಜ ನೋಡುವಳು...
ಆದರೂ ಮಳುಗಡೆಯ ಮಕ್ಕಳು ನಾವು
ಮುಳುಗಿ ಹೋಗುವೆವೇ..?
ದೀವರ ಕುಲದ ದಿಟ್ಟರು ನಾವು
ಕಾಯಕವೇ ಕೈಲಾಸ ಎನ್ನುತ
ಆಳಾಗಲೂ ಸೈ.. ಅರಸಾಗಲೂ ಜೈ,
            ಸಹ್ಯಾದ್ರಿಯ ಹೆಬ್ಬಾಗಿಲ
  ಪುಟ್ಟ  ತಗ್ಗು ಬಯಲು ನನ್ನೂರು..
ಸಮಾಜವಾದಿಗಳ ಕಾಗೋಡು ಚಳುವಳಿಗೆ
ಜೂತೆಯಾದವರು ನನ್ನೋರು..
  ಶೂದ್ರ ಕುಲಗಳ ಸುಶಿಕ್ಷಿತರ ನೆಲೆಬೀಡು
  ದಂಡು ದಾಳಿಗೆ ಅಂಜದ ದೀವರ ಗೂಡು.
ಮುಳುಗೇಳುವ  ಮಂಡಗಳಲೆ
ಶ್ರಮಿಕರ ಸಹಬಾಳ್ವೆಯ ನೆಲೆ.
- ರವಿರಾಜ್ ಸಾಗರ್.ಮಂಡಗಳಲೆ.

No comments:

Post a Comment