ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

ಸಂಪಾದಕೀಯ

 

ಮಕ್ಕಳ ಮಂದಾರ

ನಿಮ್ಮ ಮಕ್ಕಳ ಬರಹಗಳಿಗೆ ಸುಂದರ ವೇದಿಕೆ

ನೀವು ನಮ್ಮ ಪತ್ರಿಕೆಯ ಸಹ ಭಾಗಿಗಳಾಗಲು ಸ್ವಾಗತ.

ಆತ್ಮೀಯರೇ ನಮಸ್ಕಾರ

ನಿಮ್ಮ ಮಕ್ಕಳು ಬರೆದ ಯಾವುದೇ ರೀತಿಯ ಬರಹಗಳನ್ನು, ಕಥೆ ಕವನ ಪ್ರಬಂಧ ಚುಟುಕು, ಪ್ರವಾಸ ಬರಹ, ಅನುಭವ ಲೇಖನ,ಸಂಗ್ರಹಿಸಿದ ಜಾನಪದಗಳನ್ನು, ಚಿತ್ರಗಳನ್ನು ಕಳುಹಿಸಬಹುದು.

Makkalamandara@Gmail.com

ಗೆ ಕಳುಹಿಸಿ.ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ

ನನ್ನ ವಾಟ್ಸಪ್ 9980952630.

12 ವರ್ಷಗಳ ನಿರಂತರ ಪಯಣದ ಮಕ್ಕಳಿಂದ ಮಕ್ಕಳಿಗಾಗಿ ಮಕ್ಕಳೆ ಬರೆದ ಬರಹಗಳ "ಮಕ್ಕಳ ಮಂದಾರ "ಪತ್ರಿಕೆಯ ಮೇ-ಜೂನ್ ಸಂಚಿಕೆ ಸಿದ್ದವಾಗುತ್ತಿದೆ.ಇದು ಮಕ್ಕಳ  ಸೃಜನಾತ್ಮಕ ಆಂತರಿಕ ಸಂವಹನಕ್ಕಾಗಿ ಉಚಿತ ಪತ್ರಿಕೆಯಾಗಿ ಮುನ್ನಡೆಯುತ್ತಿದೆ.

ಈ ಪತ್ರಿಕೆಗೆ ಮಕ್ಕಳೇ ವರದಿಗಾರರು ಮಕ್ಕಳೇ ಬರಹಗಾರರು ಮಕ್ಕಳೇ  ವಿದ್ಯಾರ್ಥಿ ಸಂಪಾದಕರು ಆಗಿರುತ್ತಾರೆ.ಹಿರಿಯರಾದ ತಾವುಗಳು ಸಹ ನಮ್ಮ ಸಂಪಾದಕೀಯ ಮಂಡಳಿ ಜೊತೆಗೂಡಬಹುದು. ಮಕ್ಕಳಿಗಾಗಿ ಪತ್ರಿಕೆಯೊಂದಿಗೆ ಕೈಜೋಡಿಸಬಹುದು. ಪತ್ರಿಕೆಯ ಸದಸ್ಯರಾಗಬಹುದು. ನಿಮ್ಮ ಪ್ರೋತ್ಸಾಹ ಬಯಸುತ್ತೇವೆ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ

ನನ್ನ ವಾಟ್ಸಪ್ 9980952630.ನಿಮ್ಮ ರವಿರಾಜ್ ಸಾಗರ್.


------------------------------------------------------------------------------------------------------------------------

  ಶಾಲಾ ಮಕ್ಕಳಲ್ಲಿ  ಜ್ಞಾನಾರ್ಜನೆ ಮತ್ತು ಜ್ಞಾನ ಸಂರಚನೆ 

ಪಠ್ಯಪುಸ್ತಕದಲ್ಲಿನ ಪಠ್ಯಾಂಶಗಳನ್ನು ಸ್ಮರಿಸುವುದು, ತಿಳಿದುಕೊಳ್ಳುವುದು ಜ್ಞಾನಾರ್ಜನೆಯಾದರೆ ಈಗಾಗಲೇ ತಿಳಿದುಕೊಂಡ ಜ್ಞಾನದ ಅನುಭವಗಳಿಂದ ತಾವೇ ತಮ್ಮದೇ ಆದ ಜ್ಞಾನದ ತಿಳಿವನ್ನು ಪಡೆದುಕೊಂಡು  ಹೊಸತನ್ನು ಸೃಷ್ಟಿಸುವ ಸೃಜನಶೀಲತೆಯತ್ತ  ತೊಡಗಿಸಿಕೊಳ್ಳುವಿಕೆ ಜ್ಞಾನಸಂರಚನೆಯಾಗಿದೆ.ಇAದು ಜ್ಞಾನಸಂರಚನೆಯ ಸಾಧ್ಯತೆಗಳತ್ತ ಮಕ್ಕಳನ್ನು ತೊಡಗಿಸುವ ಶೈಕ್ಷಣಿಕ ಪದ್ದತಿಗಳ ಬಗ್ಗೆಯೇ ಹೆಚ್ಚು ಚರ್ಚೆಯಾಗುತ್ತಿದ್ದರೂ  ನಮ್ಮ ದೇಶದಲ್ಲಿ ಇನ್ನೂ ಈ ನಿಟ್ಟಿನಲ್ಲಿ ಶಾಲಾ ಹಂತದಲ್ಲಿ ಹೆಚ್ಚಿನ ಆದ್ಯತೆ ನೀಡಬೇಕಿದೆ. ಹಳೆಯ ಸಿದ್ದಮಾದರಿಯೇ ಚೆನ್ನಾಗಿತ್ತು ಎನ್ನುವ ಮನಸ್ಥಿತಿಯ ಜ್ಞಾನಾರ್ಜನೆಯ ಪರಿಧಿಯೊಳಗೇ ಯೋಚಿಸುವವರು ಇನ್ನೂ ಹಲವರಿದ್ದಾರೆ. ಭಾರತದ ಭವಿಷ್ಯದ ಮಕ್ಕಳು ಜಾಗತಿಕ ಸ್ಪರ್ಧೆಗೆ ಸಿದ್ದವಾಗಬೇಕಾದರೆ ಕೌಶಲಾಧಾರಿತ ಸೃಜನಶೀಲ ಶಿಕ್ಷಣದ ಅಗತ್ಯವಿದೆ. ಅದಕ್ಕಾಗಿ ಮಕ್ಕಳಿಗೆ ಜ್ಞಾನಸಂರಚನೆಯ ಮಾರ್ಗದತ್ತ  ಮಾರ್ಗದರ್ಶನ ಮಾಡಬೇಕಾಗಿದೆ.

         ಕಲಾಂತರ್ಗತ ಪ್ರಯೋಗಗಳು,ಸೃಜನಶೀಲ ಬರಹಗಳು, ವೈಜ್ಞಾನಿಕ ಪ್ರಯೋಗಗಳು,ಪಠ್ಯಂತರ್ಗತ ಕ್ರೀಡೆಗಳು,ಅಭಿವ್ಯಕ್ತಿ ಚಟುವಟಿಕೆಗಳತ್ತ ಮಕ್ಕಳು ಸಾಕಷ್ಟು ತೊಡಗಿಸಿಕೊಳ್ಳುವಂತೆ ಶಾಲೆಯಲ್ಲಿ ಹೆಚ್ಚು ಹೆಚ್ಚು ಪಠ್ಯಂತರ್ಗತ ಚಟುವಟಿಕೆ ಕೈಗೊಳ್ಳಬೇಕು. ಆಗ ಮಕ್ಕಳು ಜ್ಞಾನಸಂರಚನೆಯ ಮಾರ್ಗದತ್ತ ಸುಲಭವಾಗಿ ಸಾಗಬಲ್ಲರು. ಸೃಜನಶೀಲರಾಗಿ ಕೌಶಲಗಳನ್ನು ವೃದ್ದಿಸಿಕೊಳ್ಳುವರು. ಆ ನಿಟ್ಟಿನಲ್ಲಿ ನಾನು ಸ್ವತಃ ನಮ್ಮ ಮಲ್ಕಾಪುರ ಶಾಲೆಯಲ್ಲಿ ಹಲವಾರು  ನಾವಿನ್ಯ ಪ್ರಯೋಗಗಳನ್ನು ಕೈಗೊಂಡು  ಮಕ್ಕಳಲ್ಲಿ ಉತ್ತಮ ಸೃಜನಾತ್ಮಕ ಬದಲಾವಣೆ ಕಂಡಿದ್ದೇನೆ. ೨೦೦೮ ರಲ್ಲಿ ಆರಂಭಿಸಿದ ಮಕ್ಕಳೆ ಸಂಪಾದಿಸಿ ಪ್ರಕಟಿಸುತ್ತಿರುವ ಈ ಮಕ್ಕಳ ಮಂದಾರ ಪತ್ರಿಕೆ ಸಹ ಅಂತಹುದೇ ಒಂದು ಪ್ರಯೋಗದ ಫಲ. ಮಕ್ಕಳಿಂದ ಜಾನಪದ ಕ್ಷೇತ್ರ ಕಾರ್ಯ, ಜಾನಪದ ಪಠ್ಯಂತರ್ಗತ ಪ್ರಯೋಗ, ಆಕಾಶವಾಣಿ ನಾಟಕ, ಮಕ್ಕಳ ನಾಟಕ, ಬೀದಿ ನಾಟಕ, ನಮ್ಮೂರ ಜಾನಪದ ಬಳಗ ತಂಡದ ಕಾರ್ಯಗಳು, ಶಾಲಾ ಮಕ್ಕಳ ನರ್ಸರಿ, ಹಲವಾರು ಜಾಗೃತಿ ಆಂದೋಲನಗಳು, ಮುಂತಾದ ಹಲವು ಹೊಸ ಪರಿಕಲ್ಪನೆಯ ಜ್ಞಾನಸಂರಚನಾ ಮಾರ್ಗಗಳತ್ತ ಕೊಂಡೊಯ್ಯಬಲ್ಲ ಚಟುವಟಿಕೆಗಳ ಫಲಶೃತಿಗೆ ನಮ್ಮ ಶಾಲೆಯನ್ನೇ ನಾನು ಹೆಮ್ಮೆಯಿಂದ ಉದಾಹರಿಸುವೆ. ನಾವೆಲ್ಲ ಜ್ಞಾನಾರ್ಜನೆಯಿಂದ ಜ್ಞಾನ ಸಂರಚನೆಯ ಮಾರ್ಗದತ್ತ ಮಕ್ಕಳನ್ನು ಕೊಂಡೊಯ್ಯಲು ಶಾಲೆಯಲ್ಲಿ ಹೆಚ್ಚಿನ ಸಮಯ ಬಳಸಿಕೊಳ್ಳೋಣ . 

 ಮಕ್ಕಳನ್ನು ಅಂಕವೀರರನ್ನಾಗಿಸಿದರೆ ಸಾಲದು .ಸೃಜನಶೀಲರನ್ನಾಗಿಸಿ.ಸಂವೇದನಾಶೀಲರನ್ನಾಗಿಸಿ.ಹನ್ನೆರಡು ವರ್ಷಗಳ ಮಕ್ಕಳ ಮಂದಾರ ಪತ್ರಿಕೆಯ ಈ ಪಯಣಕ್ಕೆ ಜೊತೆಯಾದ ಎಲ್ಲರಿಗೂ ನಾನು ಅಭಾರಿ .ನಿಮ್ಮ ಸಲಹೆ ಸಹಕಾರ ಇರಲಿ .

ಸಂಪಾದಕರು — ರವಿಚಂದ್ರ .ಡಿ  (ರವಿರಾಜ್ ಸಾಗರ್ ) ಸ.ಹಿ ಪ್ರಾ.ಶಾಲೆ.ಮಲ್ಕಾಪುರ.ಮಾನವಿ.ತಾ.

                           



No comments:

Post a Comment

ಸುಳ್ಳೂರ ಶಾಲೆಯಲ್ಲಿ ಪಾಲಕರಿಂದ ಸ್ವಚ್ಛತಾ ಸಪ್ತಾಹ

ಊರಿನ ಗ್ರಾಮಸ್ಥರಿಂದ ಸುಳ್ಳೂರು ಶಾಲೆಯಲ್ಲಿ ಸ್ವಚ್ಛತಾ ಸಪ್ತಾಹ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸುಳ್ಳೂರಿನ ಹಿರಿಯ ವಿದ್ಯಾರ್ಥಿಗಳು , ಪಾಲಕರೆಲ್ಲರೂ ಸೇರ...