ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Saturday 10 September 2016

ಕಾವೇರಿ ವಿವಾದ ಇತಿಹಾಸ

|| ಶತ ಶತಮಾನಗಳಿಂದ ಸಾಗುತ್ತಲಿದೆ ಕಾವೇರಿ ಹೋರಾಟ ||

1146-1173ರ ಅವಧಿಯಲ್ಲಿ ಒಂದನೇ ನರಸಿಂಹ ಕಾವೇರಿ ನದಿಗೆ ನಿರ್ಮಿಸಿದ್ದ ತಡೆಗೋಡೆಯನ್ನು ರಾಜರಾಜ ಚೋಳ ಕೆಡವಿ ತಮಿಳುನಾಡಿಗೆ ಕಾವೇರಿ ನೀರು ಹರಿಸಿದಾಗಿನಿಂದ ಹಿಡಿದು ಇಂದಿನವರೆಗೂ ಹೋರಾಟ ನಡೆದುಕೊಂಡು ಬಂದಿದೆ.

ಹೋರಾಟ ಹಾಗೂ ವಿವಿಧ ತೀರ್ಪುಗಳ ಮುಖ್ಯಾಂಶಗಳು ಈ ಕೆಳಗಿನಂತಿವೆ

- 1803ರಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ್ ಕೆರೆ ಮೂಲಕ ನೀರಾವರಿ ಆರಂಭ. ಅದಕ್ಕೆ ಮದ್ರಾಸ್ ಪ್ರೆಸಿಡೆನ್ಸಿ ಆಕ್ಷೇಪ.

- 1892ರಲ್ಲಿ ಮೈಸೂರು- ಮದ್ರಾಸ್ ನಡುವೆ ಒಪ್ಪಂದ. ಯಾವುದೇ ನೀರಾವರಿ ಯೋಜನೆ ಕೈಗೊಳ್ಳಬೇಕಾದರೂ ಮದ್ರಾಸ್ ಆಡಳಿತದ ಅನುಮತಿ ಪಡೆಯುವ ಷರತ್ತು.

- 1911- ಕೃಷ್ಣರಾಜಸಾಗರ ನಿರ್ಮಾಣಕ್ಕೆ ನಡೆದ ಶಿಲಾನ್ಯಾಸಕ್ಕೆ ಆಕ್ಷೇಪ ಹಾಗೂ ಕಾಮಗಾರಿಗೆ ತಡೆ.

- 1924- ಹಲವು ಷರತ್ತುಗಳೊಂದಿಗೆ ಕೆಆರ್‌ಎಸ್ ನಿರ್ಮಾಣಕ್ಕೆ ಒಪ್ಪಂದ. ಮೆಟ್ಟೂರು ಜಲಾಶಯ ನಿರ್ಮಾಣಕ್ಕೆ ಅನುಮತಿ. ಕಾವೇರಿ ಉಪನದಿಗಳಿಗೂ ಅಣೆಕಟ್ಟು ನಿರ್ಮಿಸಬೇಕಾದರೆ ಮದ್ರಾಸ್ ಸರ್ಕಾರದ ಅನುಮತಿ ಪಡೆಯಬೇಕು ಎಂಬ ಷರತ್ತು.

- 1931- ಕೆಆರ್‌ಎಸ್ ಅಣೆಕಟ್ಟು ನಿರ್ಮಾಣ ಪೂರ್ಣ

-1972- ಕೇಂದ್ರದಿಂದ ಕಾವೇರಿ ಸತ್ಯಶೋಧನಾ ಸಮಿತಿ ರಚನೆ. ಅದೇ ವರ್ಷ ಸಮಿತಿ ವರದಿ ಸಲ್ಲಿಕೆ.

- 1973- ತಮಿಳುನಾಡಿನಿಂದ ಸಮಿತಿ ವರದಿ ತಿರಸ್ಕಾರ.

- 1990- ಸುಪ್ರೀಂಕೋರ್ಟ್ ಸೂಚನೆಯಂತೆ ಕೇಂದ್ರದಿಂದ ಚಿತ್ರತೋಷ್ ಮುಖರ್ಜಿ ಅಧ್ಯಕ್ಷತೆಯಲ್ಲಿ ಕಾವೇರಿ ಜಲವಿವಾದ ನ್ಯಾಯಮಂಡಳಿ ರಚನೆ.

- 1991- ನ್ಯಾಯಮಂಡಳಿಯಿಂದ ಮಧ್ಯಂತರ ತೀರ್ಪು. 205 ಟಿಎಂಸಿ ನೀರು ಹರಿಸಲು ಆದೇಶ.

- 1991- ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರಿಂದ ಕಾವೇರಿ ಕಣಿವೆ ನೀರಾವರಿ ಸಂರಕ್ಷಣಾ ಸುಗ್ರೀವಾಜ್ಞೆ.

- 1991- ನೀರು ಬಿಡಲು ಆದೇಶ. ರಾಜ್ಯದಲ್ಲಿ ತೀವ್ರ ಹೋರಾಟ.

- 1995- ಬರ ಪರಿಸ್ಥಿತಿಯ ನಡುವೆಯೂ ತಮಿಳುನಾಡಿಗೆ 11 ಟಎಂಸಿ ನೀರು ಬಿಡಲು ನ್ಯಾಯಮಂಡಳಿ ಆದೇಶ. ರಾಜ್ಯದಲ್ಲಿ ವ್ಯಾಪಕ ಪ್ರತಿಭಟನೆ. ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 6 ಟಿಎಂಸಿ ನೀರು ಬಿಡಲು ಸೂಚನೆ.

-1997-ಕಾವೇರಿ ನದಿ ಪ್ರಾಧಿಕಾರ ರಚನೆ.

- 2002- ಪ್ರಾಧಿಕಾರ ಸಭೆಯಲ್ಲಿ ನಿರ್ಧಾರವಾಗುವವರೆಗೂ ನಿತ್ಯ 1.25 ಟಿಎಂಸಿ ನೀರು ಬಿಡಲು ಸುಪ್ರೀಂಕೋರ್ಟ್ ಆದೇಶ. ಬರ ಇದ್ದದ್ದರಿಂದ ರಾಜ್ಯದಲ್ಲಿ ತೀವ್ರ ಪ್ರತಿಭಟನೆ. ಪ್ರಾಧಿಕಾರ ಸಭೆ ನಂತರ 9 ಸಾವಿರ ಕ್ಯೂಸೆಕ್ ನೀರು ಬಿಡಲು ರಾಜ್ಯದ ನಿರ್ಧಾರ.

- 2002- ಮೈಸೂರು ಜಿಲ್ಲೆಯ ಬೀಚನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಗುರುಸ್ವಾಮಿ ಕಬಿನಿಗೆ ಹಾರಿ ಹುತಾತ್ಮ.

- 2007- ನ್ಯಾಯಮಂಡಳಿ ಅಂತಿಮ ತೀರ್ಪು. ತಮಿಳುನಾಡಿಗೆ 419 ಟಿಎಂಸಿ, ಕರ್ನಾಟಕಕ್ಕೆ 270 ಟಿಎಂಸಿ ನೀರು ಹಂಚಿಕೆ. ಕರ್ನಾಟಕದಿಂದ ತಮಿಳುನಾಡಿಗೆ 192 ಟಿಎಂಸಿ ನೀರು ಬಿಡಬೇಕು.

- 2012- ರಾಜ್ಯದಲ್ಲಿರುವ ತೀವ್ರ ಬರದ ನಡುವೆಯೂ ಕಾವೇರಿ ನದಿ ಪ್ರಾಧಿಕಾರದಿಂದ ನಿತ್ಯ 9 ಸಾವಿರ ಕ್ಯೂಸೆಕ್ ನೀರು ಬಿಡಲು ಸೂಚನೆ. ರಾಜ್ಯ ಸರ್ಕಾರದ ನಕಾರ. ಸುಪ್ರೀಂಕೋರ್ಟ್‌ಗೆ ತಮಿಳುನಾಡು ಮೋರೆ. ನ್ಯಾಯಾಲಯದಿಂದಲೂ ನೀರು ಬಿಡಲು ಆದೇಶ. ರಾಜ್ಯದಲ್ಲಿ ತೀವ್ರಗೊಂಡ ಹೋರಾಟ.

2016.....ಹೋರಾಟ ಮುಂದುವರೆಯುತ್ತಲೇ ಇದೆ

ನೆರೆಯ ರಾಜ್ಯ ತಮಿಳುನಾಡು ತಮ್ಮ 4೦೦೦೦ ಎಕರೆ ಸಾಂಬಾ ಬೆಳೆಯು ನೀರಿಲ್ಲದೆ ಹಾಳು ಆಗುತ್ತದೆ ಅದಕ್ಕಾಗಿ ನಮಗೆ 5೦.52 ಟಿ.ಎಮ್.ಸಿ ನೀರನ್ನು ಕರ್ಣಾಟಕದ ಜಲಾಶಯಗಳಿಂದ ಬಿಡಬೇಕು ಎಂದು ಸುಪ್ರೀಂ ಕೋರ್ಟ್ನಲ್ಲಿ ಅರ್ಜಿಯನ್ನು ಸಲ್ಲಿಸಿ, ವಾದ ವಿವಾದ ಗಳನ್ನು ಮಂಡಿಸಿದಾಗ ಕರ್ಣಾಟಕದ ಹಿರಿಯ ವಕೀಲರಾದ ಪಾಲಿ ನಾರಿಮನ್ ವಾದ ಮಂಡಿಸಲು ವಿಫಲರಾದಾಗ ಸುಪ್ರೀಂ ಕೋರ್ಟ್ " live & let live " ಅನ್ನುವ ಪದವನ್ನು ಬಳಸಿ  ಕರ್ಣಾಟಕ ೧೦ದಿನದ ಅವಧಿಯಲ್ಲಿ ನೀರು ಬಿಡಬೇಕು ಎಂದು ಸೂಚಿಸಿ ಜಯಲಲಿತಾ ಅವರಿಗೆ ಜಯ ಎಂದು ಕರ್ಣಾಟಕದ ಜನರ ಪಾಲಿಗೆ ಮಳೆ ತರದ ಮೂಡಗಳಾಗಿ ಮರೆಮಾಚಿತು‌

ವಾತ್ಸವವಾಗಿ ಎರಡೂ ರಾಜ್ಯಗಳಲ್ಲಿ ಮಳೆ ಆಗದಿದ್ದಲ್ಲಿ ಇದಕ್ಕೆ ಯಾರು ಹೂಣೆಗಾರರು, ನಾವು ಮಾಡುವ ಎಷ್ಟೋ ತಪ್ಪುಗಳಿಂದ ಪ್ರಕೃತಿಯು ನಮ್ಮನ್ನು ಮೂಡದ ಆಚೆಗೆ ಮರೆಮಾಚಿ ನೂಡಿ ನಗುವಾಗ,‌ ವರುಣನ ವಕ್ರ ದೃಷ್ಟಿ ಕೂಡವ ನಾಡಿನಲ್ಲಿ ಮಳೆ ಆಗದ ಕಾರಣ ನೀರಿನ ಒಳ ಹರಿವು ಅಷ್ಟಕ್ಕೇ ಅಷ್ಟೇ ಇರುವುದರಿಂದ ಜಲಾಶಯಗಳು ತುಂಬದೆ ಬಾಗಿನವನ್ನು ಸ್ವೀಕಾರ ಮಾಡದೆ ಬೇಡವೆಂದು ಮುನಿಸಿ ಕೊಂಡರೆ, ನ್ಯಾಯಾಲಯದ ತೀರ್ಪು  ಕನ್ನಡಿಗರ ಕಣ್ಣಿರನ್ನು ಒರೆಸಿ ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಜಯಕಾರ ಹಾಕಿ ನೀರು ಬಿಡುಗಡೆ ಮಾಡಲು ಅನುಮೋದನೆಯನ್ನು ಸೂಚಿಸಿದರೆ ಜನಸಾಮಾನ್ಯರು ಎನು ತಾನೇ ಮಾಡಲು ಸಾದ್ಯವಾದಿತು,‌ ಕೂನೆಪಕ್ಷ ರಾಜ್ಯದ ವಕೀಲರಾಗಿ ನ್ಯಾಯ ಮಂಡಿಸುವವರನ್ನಾದರು ಬದಲಾಯಿಸಬೇಕು.

No comments:

Post a Comment