ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Monday, 30 November 2015

ಸ್ಮಶಾನ ರಂಗದಲ್ಲಿ ಕಂಡದ್ದು

ಸ್ಮಶಾನ  ರಂಗದಲ್ಲಿ ಕಂಡದ್ದು
.....  .......  ...............
ಅವಳು ಎಷ್ಟೇ ಅತ್ತರೂ ...
ಉರಿಯುತಿರುವ  ಅವನ ಚಿತೆ ಆರುವುದಿಲ್ಲ..
ಆದರೂ ಅವಳೊಂದಿಗೆ ಇನ್ನಷ್ಟು ಜನ ಅಳುವರು..
ಕೇಳಿಸಿಕೊಳ್ಳಲು ಇರದ ಅವನ ಕುರಿತು
ಈಸು ದಿನ ಬೈದವರೂ ಹೊಗಳುತಿದ್ದರು.
     ಅವನ ನಗುವ ಕಿತ್ತುಕೊಂಡವರೆಲ್ಲಾ
     ಅಳುವ ಪಾತ್ರದಲಿ ಪರಕಾಯ ಪ್ರವೇಶ ಮಾಡಿದ್ದರು.
       ಚಿತೆಯ ಬೆಂಕಿಯ ಕೆನ್ನಾಲಿಗೆ
       ಕಣ್ಣೀರಿಡುತ ಬೂದಿ ಉಗುಳಿತು.
     ನರರ ನಾಟಕಕೆ  ಶ್ಮಶಾನರಂಗ
      ನಿತ್ಯ ತೆರೆ  ತೆರೆಯಿತು. !

No comments:

Post a Comment

ಮಕ್ಕಳ ಮನೆ ಮನೆಗೆ marks rigister app

📱 'ಮಾರ್ಕ್ಸ್ ರಿಜಿಸ್ಟರ್' (Marks Register) ಆ್ಯಪ್ !!   ಶಿಕ್ಷಕರ ಶ್ರಮಕ್ಕೆ ತಂತ್ರಜ್ಞಾನದ ಆಸರೆ! ಶಿಕ್ಷಕರ ಕೆಲಸ ಇಂದು ಮುಂಚಿನಂತಿಲ್ಲ. ಬದಲಾಗುತ್ತಿರುವ...