ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Sunday, 29 November 2015

ನನ್ನ ಕವನ

ನನ್ನ ಕವನ
.............
ಪೇಸ್ಬೂಕ್ಕಲಿ ಅಚ್ಚಾಗಿ
ಲೈಕುಗಳು ಹೆಚ್ಚಾಗಿ
ಯುವ ಕವಿಗಳಿಗೆ ತೆರೆದ ಈ ಅವಕಾಶದಿ
ಕೆಲವರ ಅಸೂಹೆಯ ಕ್ರಿಮಿಗೆ ಪಿತ್ತ ಅತಿಯಾಗಿ
ಸಾಮಾನ್ಯ ಓದುಗರ  ಕನಸು ,ಕನವರಿಕೆಗೆ
ಪದಮಾಲೆಯಾಗಿ    ಸಿಂಗಾರಗೊಂಡ
'ಅವಳು' ಮುಡಿದ ಯುವಪದ  ಪುಷ್ಪಮಾಲೆ ನನ್ನ ಕವನ.
       ' ರವಿರಾಜಮಾರ್ಗ'ದಲಿ ಸಾಗಿ
         ಯುವ ಸಂದೇಶ ಹೊತ್ತು ಬಾಗಿ
         ಬ್ಲಾಗಿನ  ಬಾಗಿಲು ತೆರೆದು
         ವಾಟ್ಸ್ಆಪ್ ನಲಿ ಸುಳಿದಾಡಿ
        ಟ್ವಿಟರ್ಗೆ ಲಗ್ಗೆ ಇಟ್ಟು
         ಹೈಕಲಿ ಹಾಡುತ್ತಾ ನಲಿವ
         ಸಮಾಜಿಕ  ಜಾಲದ ಜಾಣ
       ಜಾನಪದಸಿರಿ ಬೆಡಗು ನನ್ನ ಕವನ.
ಹೆಚ್ಚು ಹೇಳಲಾರೆ...
   ಬಾಗಿಲು ತೆರೆದ ಅಣೆಕಟ್ಟೆಯಲಿ
   ಓಡುವ ಪದಕಟ್ಟು
   ಬೋರ್ಗರೆವ ಜಲಧಾರೆ  ಅಂತಲ್ಲ
  ಆಮೆವೇಗದ ಗತಿ. ಲಯವಿದೆ.

No comments:

Post a Comment

ಮಕ್ಕಳ ಮನೆ ಮನೆಗೆ marks rigister app

📱 'ಮಾರ್ಕ್ಸ್ ರಿಜಿಸ್ಟರ್' (Marks Register) ಆ್ಯಪ್ !!   ಶಿಕ್ಷಕರ ಶ್ರಮಕ್ಕೆ ತಂತ್ರಜ್ಞಾನದ ಆಸರೆ! ಶಿಕ್ಷಕರ ಕೆಲಸ ಇಂದು ಮುಂಚಿನಂತಿಲ್ಲ. ಬದಲಾಗುತ್ತಿರುವ...