ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Thursday 26 November 2015

ಎಲ್ಲ ಹೇಳಿಕೊಡು


ನಿನ್ನ ನಗೆ ಅಮಲು ತಲೆಗೇರಿ
ಎಲ್ಲ ಮರೆತಿಹೆನು ಏನೂ ಕಾಣದೆ
ಎಲ್ಲಾ  ಹೇಳಿಕೊಡು ...
ಎಲ್ಲ ಕೇಳುವೆ  ಪಟಪಟನೇ ಹೇಳಿಬಿಡು
ಮರೆಯಬಹುದು ಏನಾದರೂ. ..
ಒಮ್ಮೆ ಕ್ಷಮಿಸಿಬಿಡು
ನೀ ಮುಡಿದ ಮಲ್ಲಿಗೆ ನೆನಪಾಗಿ
ಮರೆಯಬಹುದು ಮಾರುದ್ದದ  ಬೇಡಿಕೆ ಪಟ್ಟಿ.
ಚಿಂತೆ ಬೇಡ  ಹೇಳುವೆ ಎದೆ ಮುಟ್ಟಿ
ಎಲ್ಲ ಹೇಳಿಕೊಡು...
ನಾ ಬರುವೆ ದಿನವೂ ನಿನ್ನೊಲವ ಶಾಲೆಗೆ..
ಬೇಸಿಗೆ, ಮಳೆಗಾಲದ ರಜೆಯೂ ಬೇಡ.
ಎಲ್ಲ ಹೇಳಿಕೊಡು ಗೊತ್ತಿದ್ದರೂ ನನಗೆ...!

No comments:

Post a Comment