ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Tuesday 24 November 2015

ಅವಳ ಓಣಿಯಲಿ. ...!

ಅವಳ ಓಣಿಯಲಿ. ...!
......................
ಮುಂಜಾನೆಯೆ ಆಂಗಳದಲಿ
ದಿನವೂ ನಗುನಗುವ ಬಣ್ಣದಲಿ
ನನ್ನ ಹೆಸರನು ಅವಳು ಬರೆದಂತೆ ಕನಸು;
ನಿತ್ಯ ಕಾಡುವುದು ನನ್ನ. .!
         ಹಾಗಾಗಿಯೇ , ನನಗರಿವಿಲ್ಲದೆ
        ನಿಲ್ಲದ ಕಾಲುಗಳು
          ಅವಳ ಓಣಿಯ ತುಂಬಾ
         ಮೂಡಿಸಿದ ಹೆಜ್ಜೆಗಳ ಲೆಕ್ಕವಿಲ್ಲ...!
ಮುಂಜಾನೆಯ ಬೆಳ್ಳಿ
ಕೊಂಚ ಆಗೀಗ  ಕಾಂತಿಹೀನವಾದರೂ
ಅವಳು ಮಾತ್ರ  ಹಗಲಿರುಳು ಹೊಳೆವ
ಓಣಿಯ  ಮಹಾ ಬೆಳ್ಳಿ. .!
              ಲಗೋರಿ ಚಾಲಾಕಿಗಳು
              ಅವಳ  ಓಣಿಯಲಿ
              ದಿನವೆಲ್ಲ ದೂಳೆಬ್ಬಿಸಿದರೂ
              ಅವಳು ಮಾತ್ರ ಪುಟ್ಬಾಲ್ ಆಡುವಳು.!
ಅವಳ ಓಣಿಯಲಿ
ನನ್ನ ಹೆಜ್ಜೆ ಗುರುತುಗಳ ಹುಡುಕಿ 
ಹೆಜ್ಜೆಯ ಮೇಲೆ ಹೆಜ್ಜೆಯನಿಟ್ಟಂತೆ
ಹಗಲೂ ಕೆಣಕುತಿವೆ ಕನಸು.
         ನಿಜಕ್ಕೂ ಕನಸೇ ಸೊಗಸು..
         ಅತಿ ಕನಸು, ಅತಿ ಮುದ್ದಿನ ಪರಿಣಾಮ
         ನಾನೀಗ ಕ್ಯೂ ನಿಂತಿರುವೆ..
          ಅವಳ ಓಣಿಯ ನಲ್ಲೀ ನೀರಿಗೆ....!

No comments:

Post a Comment