ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Saturday, 7 November 2015

ನನ್ನ'ಅವಳಲ್ಲ'. !

ನನ್ನ'ಅವಳಲ್ಲ...!
ನನ್ನ ಕಲ್ಪನೆಯ ಕಾವ್ಯ ನೀನಲ್ಲ
ನನ್ನ ಕುಂಚದ ಚಿತ್ರವೂ ನೀನಲ್ಲ
ನನ್ನ ಕನಸಿನ ಬೆಡಗಿ ನೀನಲ್ಲ ಹುಡುಗೀ...!
    ನನ್ನ  ನಿದ್ರೆಯ ಕದ್ದೋಳು ನೀನಲ್ಲ
   ನನ್ನ ಗೆಲುವಿಗೆ ಕಾರಣ  ನೀನಲ್ಲ
ನನ್ನ ಮನದ ತುಂಬೆಲ್ಲ ನೀನಿಲ್ಲ
ನನ್ನ ನಗುವಲಿ ಬೆರೆತವಳು ನೀನಲ್ಲ...
ನನ್ನ ನೋವಿಗೆ ಮಿಡಿದವಳು ನೀನಲ್ಲ..
ನನ್ನ ಕಣ್ಣ ತುಂಬೆಲ್ಲಾ ನೀನಿನ್ನೂ ಬಂದಿಲ್ಲ. ..
   ಆದರೂ ಯಾಕೆ ಉಳಿದುಕೊಳಲು ಬಯಸುವೆ....?
ಮುರಿದ ಮನಸಿನ ಹಾಳು ಗುಡಿಸಲ
ಬಡ ಹೃದಯದ ಒಳಗೆ...!
  ಬತ್ತಿದ ನದಿಯಲ್ಲೂ  ಪ್ರೇಮದ ನೀರುಣಿಸಿ
   ಕೊನೆಗೂ ಒಲವ ಸಾಗರದತ್ತ
ಹೆಜ್ಜೆ ಹಾಕಿಸಿ
ಅನುರಾಗ ಸರೋವರದಲಿ ಮಿಲನ ಮೋಡಿ ಮಾಡಿಬಿಟ್ಟೆಯಲ್ಲ....!
ನೀ.. ನನ್ನ'ಅವಳಲ್ಲ'.....!
ಆದರೂ...... ನಾ ನೀಗ  ನಿನ್ನವನೇ. !.!

No comments:

Post a Comment

ಮಕ್ಕಳ ಮನೆ ಮನೆಗೆ marks rigister app

📱 'ಮಾರ್ಕ್ಸ್ ರಿಜಿಸ್ಟರ್' (Marks Register) ಆ್ಯಪ್ !!   ಶಿಕ್ಷಕರ ಶ್ರಮಕ್ಕೆ ತಂತ್ರಜ್ಞಾನದ ಆಸರೆ! ಶಿಕ್ಷಕರ ಕೆಲಸ ಇಂದು ಮುಂಚಿನಂತಿಲ್ಲ. ಬದಲಾಗುತ್ತಿರುವ...