ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Friday 30 September 2016

"ನರಲೀಲೆ" ಕೃತಿ ಕುರಿತು ಒಂದು ವಿಮರ್ಶೆ

*ನರಲೀಲೆ* ಕವನ ಸಂಕಲನವನ್ನು ಶಿವಮೊಗ್ಗದಿಂದ ಕಳಿಸಿಕೊಟ್ಟಿರುವ ಆತ್ಮೀಯ ಸ್ನೇಹಿತರಾದ *ರವಿರಾಜ್ ಸಾಗರ* ಅವರಿಗೆ ಧನ್ಯವಾದಗಳು.
      ಎಂಥಹವರ ಹೃದಯವನ್ನು ತಟ್ಟಬಲ್ಲ, ನರನ ಕೃತ್ಯಗಳನ್ನು ವಿವೇಚಿಸುವಂತೆ ಮಾಡಬಲ್ಲ, ಸರಳವಾಗಿ ಓದಿಸಿಕೊಂಡು ಹೋಗುವ ವಿಭಿನ್ನ ಕವನ ಸಂಕಲನ. ಇತಿಹಾಸದ ಪುಟಗಳ ಸಾಕ್ಷಿಯಾಗಿ ಮನುಷ್ಯನ ನರಲೀಲೆಗಳ ರೌದ್ರತೆಯನ್ನು ವರ್ಣಿಸಿದ್ದಾರೆ. ಲೋಕದ ಬಾಯಾರಿಕೆಯನ್ನು ಹೋಗಲಾಡಿಸುವ ನೀರು ತಾನೇ ಬಾಯಾರಿ ಬಳಲಿ ಸಾಯುವ ವಸ್ತುವುಳ್ಳ ಕವಿತೆ *ಬಾಯಾರಿದ ನೀರು* ಅದ್ಭುತ, ಕಾವೇರಿದ ಕಾವೇರಿಯ ಗಲಾಟೆಯಲ್ಲಿ ಪ್ರಸ್ತುತ ಕೂಡ.ವಿಧಿಯ ದೈವದಾಟಕ್ಕೆ ಮನುಷ್ಯ ಸಾವಿನ ನಂತರ ಉಸಿರು ನಿಲ್ಲಿಸುತ್ತಾನೆ. ಆದರೆ *ಉಸಿರಾಡುತ್ತಿವೆ ಹೆಣಗಳು* ಕವನದಲ್ಲಿ ಸಾವಿನ ನಂತರವೂ ಉಸಿರಾಟ ನಡೆದಿದೆ. *ನನ್ನೊಳಗಿನ ಬೆಂಕಿ*ಯಲ್ಲಿ ಪಂಚೇಂದ್ರಿಯಗಳೇ ಸೌದೆಗಳಾಗಿ ಒಳಗಿನ ಬೆಂಕಿಯ ಜ್ವಾಲೆಯನ್ನು ಮತ್ತೆ ಹೆಚ್ಚಿಸುತ್ತಿವೆ. *ಕಲ್ಲಣ್ಣನ ಮನವಿ* ಕವನದಲ್ಲಿ 'ಕಲ್ಲು ಕಣ್ಣೀರಿಟ್ಟಿತು..! ನೀರು ಬಾಯಾರಿಕೆ ಸತ್ತ ಕಥೆ ಕೇಳಿ.ಮೋಡಣ್ಣನಿಗೆ ಮನವಿ ಮಾಡಿತು; ಧರಣಿಗೆ ಡೈವರ್ಸ್ ಕೊಡುವ ಮೊದಲು ಜೀವನಾಂಶವನ್ನಾದರೂ ಕೊಡು' ಎಂಬ ಸಾಲುಗಳು ಅದ್ಭುತ! *ತುಂಬಿದ ಹೊಟ್ಟೆಗೆ ಮತ್ತೆ ಹಸಿವು* ಕವನದಲ್ಲಿ *ಡಿ.ವಿ.ಜಿ.*ಯವರ ಅನ್ನದಾತುರಕ್ಕಿಂತ ಚಿನ್ನದಾತುರವು.... ಎಂಬ ಸಾಲುಗಳನ್ನು ಮತ್ತೆ ನೆನಪಿಸಿದ್ದಾರೆ.
    ಕೊನೆಯ ಮಾತಾಗಿ ಕವನ ಸಂಕಲನವನ್ನು ಒಂದು ಸಲ ಓದಲೇಬೇಕು.

*ಮಹೇಶ ಗಾಣಿಗೇರ, ವಿಜಯಪುರ*

ಭಾವಗಗನ ವಿಹಾರಿ

ಭಾವಗಗನ ವಿಹಾರ
......................
ಅನಂತ ಬಾವಗಳ ಗಗನ ವಿಹಾರಿ ನಾನು ಸ್ವಾತಿಮಳೆಯಲಿ ಬಿದ್ದ ಕನಸುಗಳ
ಕಪ್ಪೆಚಿಪ್ಪಿನಲಿ ಬಚ್ಚಿಟ್ಟಿರುವೆ.
ಹುಚ್ಚು ಆಸೆಗಳ ಜಡಿಮಳೆಯಲಿ ನೆನೆದವಳು
ಬಣ್ಣದ ಕೊಡೆಯೊಳಗೆ ಸೇರಿ ಬಿಸಿಲು ಮಳೆಯ ಮದುವೆ ಕತೆ ಹೇಳಿ ಸಂಜೆ ಕಡಲಂಚಲಿ
ನನ್ನ ಹೆಸರ ಗೀಚಿದಳು ಅವಳ ಹೆಸರ ಜೊತೆಗೆ. ಕೆಣಕುವ ಕಡಲೂ ಅವಳತ್ತ ಸಾಗದೇ
ಹೆಸರನು ಅಳಿಸಲೇ ಇಲ್ಲ. .!
ಜಡಿ ಮಳೆ ಗಾಳಿ ಮೌನ ತಾಳಿ
ಅವಳ ಕಣ್ಣ ಕಡಲಿಗೆ ತಳ್ಳಿದವು. ಇನ್ನೇನು ಮಾಡಲಿ...!! ಖಾಲಿ ಮನಸಿನ ಪೋಲಿ ಕನಸಿದು... ಗೇಲಿ ಮಾಡಬೇಡಿ...!!
ಈಗ ಸೂರ್ಯನೂರ ಸುಂದರಿಗೆ ಗೋರಂಟಿ ಹಾಕಿಬರುವೆ..
ಸುಟ್ಟು ಹೋಗದಿರೆ ಮತ್ತೆ ಸಿಗುವೆ.
#ರವಿರಾಜ್ ಸಾಗರ್ .

Thursday 22 September 2016

ನಿಮಗೆ ಗೊತ್ತಿರಲಿ ಸಾಮಾನ್ಯ ವಿಜ್ಞಾನ

1) ವಿಶ್ವದಲ್ಲಿ ಅತಿ ಹೆಚ್ಚಿನ
ಪ್ರಮಾಣದಲ್ಲಿರುವ ಮೂಲವಸ್ತು ಯಾವುದು?
* ಜಲಜನಕ.
2) ಅತಿ ಹಗುರವಾದ ಲೋಹ ಯಾವುದು?
* ಲಿಥಿಯಂ.
3) ಅತಿ ಭಾರವಾದ ಲೋಹ ಯಾವುದು?
* ಒಸ್ಮೆನೆಯಂ.
4) ಚಿನ್ನವನ್ನು ಶುದ್ಧೀಕರಿಸುವ ವಿಧಾನ
ಯಾವುದು?
* ಸೈನೈಡೇಶನ್.
5) ಅತಿ ಹಗುರವಾದ ಮೂಲವಸ್ತು ಯಾವುದು?
* ಜಲಜನಕ.
6) ಭೂಮಿಯ ವಾತಾವರಣದಲ್ಲಿ ಅತಿಹೆಚ್ಚಿನ
ಪ್ರಮಾಣದಲ್ಲಿರುವ ಮೂಲವಸ್ತು ಯಾವುದು?
* ಸಾರಜನಕ.
7) ಪ್ರೋಟಾನ್ ಕಂಡು ಹಿಡಿದವರು ಯಾರು?
* ರುದರ್ ಫರ್ಡ್.
8) ಭೂಮಿಯ ಮೇಲ್ಪದರಲ್ಲಿ ಅತಿ ಹೆಚ್ಚಿನ
ಪ್ರಮಾಣದಲ್ಲಿರುವ ಮೂಲವಸ್ತು ಯಾವುದು?
* ಆಮ್ಲಜನಕ.
9) ನ್ಯೂಟ್ರಾನ್ ಗಳನ್ನು ಕಂಡು ಹಿಡಿದವರು
ಯಾರು?
* ಜೇಮ್ಸ್ ಚಾಡ್ ವಿಕ್.
10) ಎಲೆಕ್ಟ್ರಾನ್ ಗಳನ್ನು ಕಂಡು ಹಿಡಿದವರು
ಯಾರು?
* ಜೆ.ಜೆ.ಥಾಮ್ಸನ್.
11) ಒಂದು ಪರಮಾಣುವಿನಲ್ಲಿರುವ
ಪ್ರೋಟಾನ್ ಅಥವಾ ಎಲೆಕ್ಟ್ರಾನ್ ಗಳ
ಸಂಖ್ಯೆಯೇ -----?
* ಪರಮಾಣು ಸಂಖ್ಯೆ.
12) ವಿಶ್ವದಲ್ಲಿ ಅತಿ ಹೆಚ್ಚು ದೊರೆಯುವ 2 ನೇ
ಮೂಲವಸ್ತು ಯಾವುದು?
* ಹಿಲಿಯಂ.
13) ಮೂರ್ಖರ ಚಿನ್ನ ಎಂದು ಯಾವುದನ್ನು
ಕರೆಯುತ್ತಾರೆ?
* ಕಬ್ಬಿಣದ ಪೈರೆಟ್ಸ್.
14) ಪೌಂಟೆನ್ ಪೇನ್ ನ ನಿಬ್ ತಯಾರಿಸಲು -----
ಬಳಸುತ್ತಾರೆ?
* ಒಸ್ಮೆನಿಯಂ.
15) ಪ್ರಾಚೀನ ಕಾಲದ ಮಾನವ ಮೊದಲ
ಬಳಸಿದ ಲೋಹ ಯಾವುದು?
* ತಾಮ್ರ.
16) ಉದು ಕುಲುಮೆಯಿಂದ ಪಡೆದ ಕಬ್ಬಿಣ
ಯಾವುದು?
RBS: * ಬೀಡು ಕಬ್ಬಿಣ.
17) ಚಾಲ್ಕೋಪೈರೇಟ್ ಎಂಬುದು ------- ದ
ಅದಿರು.
* ತಾಮ್ರದ.
18) ಟಮೋಟದಲ್ಲಿರುವ ಆಮ್ಲ ಯಾವುದು?
* ಅಕ್ಸಾಲಿಕ್.
20) "ಆಮ್ಲಗಳ ರಾಜ" ಎಂದು ಯಾವ
ಆಮ್ಲವನ್ನು ಕರೆಯುವರು?
* ಸಲ್ಫೂರಿಕ್ ಆಮ್ಲ.
21) ಕಾಸ್ಟಿಕ್ ಸೋಡದ ರಾಸಾಯನಿಕ
ಹೆಸರೇನು?
* ಸೋಡಿಯಂ ಹೈಡ್ರಾಕ್ಸೈಡ್.
22) "ಮಿಲ್ಖ್ ಆಫ್ ಮೆಗ್ನಿಷಿಯಂ" ಎಂದು
ಯಾವುದನ್ನು ಕರೆಯುವರು?
* ಮೆಗ್ನಿಷಿಯಂ ಹೈಡ್ರಾಕ್ಸೈಡ್.
23) ಅಡುಗೆ ಉಪ್ಪುವಿನ ರಾಸಾಯನಿಕ
ಹೆಸರೇನು?
* ಸೋಡಿಯಂ ಕ್ಲೋರೈಡ್.
24) ಗಡಸು ನೀರನ್ನು ಮೃದು ಮಾಡಲು -----
ಬಳಸುತ್ತಾರೆ?
* ಸೋಡಿಯಂ ಕಾರ್ಬೋನೆಟ್.
25) ಕೆಂಪು ಇರುವೆ ಕಚ್ಚಿದಾಗ ಉರಿಯಲು
ಕಾರಣವೇನು?
* ಪಾರ್ಮಿಕ್ ಆಮ್ಲ.
26) ಗೋಧಿಯಲ್ಲಿರುವ ಆಮ್ಲ ಯಾವುದು?
* ಗ್ಲುಮಟಿಕ್.
27) ಪಾಲಾಕ್ ಸೊಪ್ಪುವಿನಲ್ಲಿರುವ ಆಮ್ಲ
ಯಾವುದು?
* ಪೋಲಿಕ್.
28) ಸಾರಜನಕ ಕಂಡು ಹಿಡಿದವರು ಯಾರು?
* ರುದರ್ ಪೊರ್ಡ್.
29) ಆಮ್ಲಜನಕ ಕಂಡು ಹಿಡಿದವರು ಯಾರು?
* ಪ್ರಿಸ್ಟೆ.
30) ಗಾಳಿಯ ಆರ್ದತೆ ಅಳೆಯಲು ----
ಬಳಸುತ್ತಾರೆ?
* ಹೈಗ್ರೋಮೀಟರ್.
31) ಹೈಗ್ರೋಮೀಟರ್ ಅನ್ನು ----- ಎಂದು
ಕರೆಯುತ್ತಾರೆ?
RBS: * ಸೈಕೋಮೀಟರ್.
32) ಯಾವುದರ ವಯಸ್ಸು ಪತ್ತೆಗೆ ಸಿ-14
ಪರೀಕ್ಷೆ ನಡೆಸುತ್ತಾರೆ?
* ಪಳೆಯುಳಿಕೆಗಳ.
33) ಕೋಬಾಲ್ಟ್ 60 ಯನ್ನು ಯಾವ
ಚಿಕಿತ್ಸೆಯಲ್ಲಿ ಬಳಸುತ್ತಾರೆ?
* ಕ್ಯಾನ್ಸರ್.
34) ಡುರಾಲು ಮಿನಿಯಂ ಲೋಹವನ್ನು
ಯಾವುದರ ತಯಾರಿಕೆಯಲ್ಲಿ ಬಳಸುತ್ತಾರೆ?
* ವಿಮಾನ.
35) ನೀರಿನಲ್ಲಿ ಕರಗುವ ವಿಟಮಿನ್ ಗಳು
ಯಾವುವು?
* ಬಿ & ಸಿ.
36) ರಿಕೆಟ್ಸ್ ರೋಗ ಯಾರಲ್ಲಿ ಕಂಡು
ಬರುವುದು?
* ಮಕ್ಕಳಲ್ಲಿ.
37) ಕಾಮನ ಬಿಲ್ಲಿನಲ್ಲಿ ಅತಿ ಹೆಚ್ಚು
ಬಾಗಿರುವ ಬಣ್ಣ ಯಾವುದು?
* ನೇರಳೆ.
38) ಕಾಮನ ಬಿಲ್ಲಿನಲ್ಲಿ ಅತಿ ಕಡಿಮೆ ಬಾಗಿರುವ
ಬಣ್ಣ ಯಾವುದು?
* ಕೆಂಪು.
39) ಆಲೂಗಡ್ಡೆ ಯಾವುದರ
ರೂಪಾಂತರವಾಗಿದೆ?
* ಬೇರು.
40) ಮಾನವನ ದೇಹದ ಉದ್ದವಾದ ಮೂಳೆ
ಯಾವುದು?
* ತೊಡೆಮೂಳೆ(ಫೀಮರ್).
41) ವಯಸ್ಕರಲ್ಲಿ ಕೆಂಪು ರಕ್ತಕಣಗಳು
ಹುಟ್ಟುವ ಸ್ಥಳ ಯಾವುದು?
* ಅಸ್ಥಿಮಜ್ಜೆ.
42) ಲಿವರ್(ಯಕೃತ್)ನಲ್ಲಿ ಸಂಗ್ರಹವಾಗುವ
ವಿಟಮಿನ್ ಯಾವು?
* ಎ & ಡಿ.
43) ರಿಕೆಟ್ಸ್ ರೋಗ ತಗುಲುವ ಅಂಗ
ಯಾವುದು?
* ಮೂಳೆ.
44) ವೈರಸ್ ಗಳು ----- ಯಿಂದ
ರೂಪಗೊಂಡಿರುತ್ತವೆ?
* ಆರ್.ಎನ್.ಎ.
45) ತಾಮ್ರ & ತವರದ ಮಿಶ್ರಣ ಯಾವುದು?
* ಕಂಚು.
46) ತಾಮ್ರ & ಸತುಗಳ ಮಿಶ್ರಣ ಯಾವುದು?
* ಹಿತ್ತಾಳೆ.
47) ಎಲ್ ಪಿ ಜಿ ಯಲ್ಲಿರುವ ಪ್ರಮುಖ ಅನಿಲಗಳು
ಯಾವುವು?
* ಬ್ಯೂಟೆನ್ & ಪ್ರೋಫೆನ್.
48) ಚೆಲುವೆ ಪುಡಿಯ ರಾಸಾಯನಿಕ ಹೆಸರೇನು?
* ಕ್ಯಾಲ್ಸಿಯಂ ಆಕ್ಸಿಕ್ಲೋರೈಡ್.
49) ವನಸ್ಪತಿ ತುಪ್ಪ ತಯಾರಿಕೆಯಲ್ಲಿ
ಬಳಸುವ ಅನಿಲ ಯಾವುದು?
* ಜಲಜನಕ.
50) ಕಾಯಿಗಳನ್ನು ಹಣ್ಣು ಮಾಡಲು ಬಳಸುವ
ರಾಸಾಯನಿಕ ಯಾವುದು?
* ಎಥಲಿನ್.
51) ಆಳಸಾಗರದಲ್ಲಿ ಉಸಿರಾಟಕ್ಕೆ
ಆಮ್ಲಜನಕದೊಂದಿಗೆ ಬಳಸುವ ಅನಿಲ
ಯಾವುದು?
RBS: * ಸಾರಜನಕ.
52) ಭೂ ಚಿಪ್ಪಿನಲ್ಲಿ ಅಧಿಕವಾಗಿರುವ ಲೋಹ
ಯಾವುದು?
* ಅಲ್ಯೂಮೀನಿಯಂ.
53) ಹಾರುವ ಬಲೂನ್ ಗಳಲ್ಲಿ ಬಳಸುವ ಅನಿಲ
ಯಾವುದು?
* ಹೀಲಿಯಂ.
54) ಪರಿಶುದ್ಧವಾದ ಕಬ್ಬಿಣ ಯಾವುದು?
* ಮ್ಯಾಗ್ನಟೈಟ್.
55) ಅಗ್ನಿಶಾಮಕಗಳಲ್ಲಿ ಬಳಸುವ ಅನಿಲ
ಯಾವುದು?
* ಕಾರ್ಬನ್ ಡೈ ಆಕ್ಸೈಡ್.
56) ಮೃದು ಪಾನಿಯಗಳಲ್ಲಿ ಬಳಸುವ ಅನಿಲ
ಯಾವುದು?
* ಕಾರ್ಬೋನಿಕ್ ಆಮ್ಲ.
57) ಹಣ್ಣಿನ ರಸ ಸಂರಕ್ಷಿಸಲು ಬಳಸುವ
ರಾಸಾಯನಿಕ ಯಾವುದು?
RBS * ಸೋಡಿಯಂ ಬೆಂಜೋಯಿಟ್.
58) "ಆತ್ಮಹತ್ಯಾ ಚೀಲ"ಗಳೆಂದು ------
ಗಳನ್ನು ಕರೆಯುತ್ತಾರೆ?
* ಲೈಸೋಜೋಮ್.
59) ವಿಟಮಿನ್ ಎ ಕೊರತೆಯಿಂದ ----
ಬರುತ್ತದೆ?
* ಇರುಳು ಕುರುಡುತನ.
60) ಐಯೋಡಿನ್ ಕೊರತೆಯಿಂದ ಬರುವ ರೋಗ
ಯಾವುದು?
* ಗಳಗಂಡ (ಗಾಯಿಟರ್).

Tuesday 20 September 2016

ಅಳತೆಯ ಸಾಧನಗಳು

���� ಅಳತೆಯ ಸಾಧನಗಳು ����

೧. ದಿಕ್ಸೂಚಿ
ಉಪಯೋಗ:- ದಿಕ್ಕುಗಳನ್ನು ತಿಳಿಯಲು ಬಳಸುತ್ತಾರೆ.

೨. ರೇಡಾಕ
ಉಪಯೋಗ:- ಹಾರಾಡುವ ವಿಮಾನದ ದಿಕ್ಕು ಮತ್ತು ಮೂಲವನ್ನು ಅಳೆಯಲು ಬಳಸುತ್ತಾರೆ.

೩. ಮೈಕ್ರೊಫೋನ್
ಉಪಯೋಗ:- ಶಬ್ದ ತರಂಗಗಳನ್ನು ವಿದ್ಯುತ್ ಸಂಕೇತಗಳನ್ನಾಗಿ ಪರಿವತಿ೯ಸಲು ಬಳಸುವರು.

೪. ಮೆಘಾಪೋನ್
ಉಪಯೋಗ:- ಶಬ್ದವನ್ನು ಅತೀ ಮೂಲಕ್ಕೆ ಒಯ್ಯಲು ಬಳಸುತ್ತಾರೆ.

೫. ಟೆಲಿಫೋನ್
ಉಪಯೋಗ:- ದೂರದಲ್ಲಿರುವ ಶಬ್ದವನ್ನು ಕೇಳಲು ಬಳಸುತ್ತಾರೆ.

೬. ಲ್ಯಾಕ್ಟೋಮೀಟರ್
ಉಪಯೋಗ:- ಹಾಲಿನ ಸಾಂದ್ರತೆಯನ್ನು ಅಳೆಯಲು ಬಳಸುತ್ತಾರೆ.

೭. ಓಡೋಮೀಟರ್
ಉಪಯೋಗ:- ವಾಹನಗಳ ಚಲಿಸಿದ ದೂರ ಕಂಡುಹಿಡಿಯಲು ಬಳಸುತ್ತಾರೆ.

೮. ಮೈಕ್ರೋಮೀಟರ್
ಉಪಯೋಗ:- ಸೂಕ್ಷ್ಮ ಪ್ರಮಾಣದ ಉದ್ದ ಅಳೆಯಲು ಬಳಸುತ್ತಾರೆ.

೯. ಮೈಕ್ರೋಸ್ಕೋಪ್
ಉಪಯೋಗ:- ಸೂಕ್ಷ್ಮ ವಸ್ತುಗಳಲ್ಲಿ ದೊಡ್ಡ ಪ್ರತಿಬಿಂಬವಾಗಿ ತೋರಿಸುವುದು.

೧೦. ಹೈಗ್ರೋಮೀಟರ್
ಉಪಯೋಗ:- ವಾತಾವರಣದ ಆದ್ರ೯ತೆ ಅಳೆಯಲು ಬಳಸುತ್ತಾರೆ.

೧೧. ಹೈಡ್ರೋಮೀಟರ್
ಉಪಯೋಗ:- ದ್ರವಗಳ ನಿಧಿ೯ಷ್ಟ ಗುರುತ್ವಾಕಷ೯ಣೆ & ಸಾಂದ್ರತೆ ಅಳೆಯಲು ಬಳಸುತ್ತಾರೆ.

೧೨. ಹೈಡ್ರೋಫೋನ್
ಉಪಯೋಗ:- ನೀರಿನ ಒಳಗೆ ಶಬ್ದವನ್ನು ಅಳೆಯಲು ಬಳಸುತ್ತಾರೆ.

೧೩. ಹೈಡ್ರೋಸ್ಕೋಪ್
ಉಪಯೋಗ:- ನೀರಿನ ತಳದಲ್ಲಿರುವ ವಸ್ತುಗಳನ್ನು ಗುರುತಿಸಲು ಬಳಸುತ್ತಾರೆ

೧೪. ಥಮೋ೯ಮೀಟರ್
ಉಪಯೋಗ:- ಉಷ್ಣತೆಯನ್ನು  ಅಳೆಯಲು ಬಳಸುತ್ತಾರೆ.

೧೫. ಅಲ್ಟಿಮೀಟರ್
ಉಪಯೋಗ:- ಎತ್ತರ ಅಳೆಯಲು ಬಳಸುತ್ತಾರೆ.

೧೬. ಎಲೆಕ್ಟ್ರೋಮೀಟರ್
ಉಪಯೋಗ:- ವಿದ್ಯುತ್ ಅಳೆಯಲು ಬಳಸುತ್ತಾರೆ.

೧೭. ಪ್ಯಾದೋಮೀಟರ್
ಉಪಯೋಗ:- ಸಮುದ್ರದ ಆಳ ಕಂಡುಹಿಡಿಯಲು ಬಳಸುತ್ತಾರೆ.

೧೮. ಗ್ಯಾಲ್ವನೋಮೀಟರ್
ಉಪಯೋಗ:- ಸಣ್ಣ ಪ್ರಮಾಣದ ವಿದ್ಯುತ್ ಅಳೆಯಲು ಬಳಸುತ್ತಾರೆ.

೧೯. ಮೈಕ್ರೋ ಆ್ಯಮೀಟರ್
ಉಪಯೋಗ:- ಸೂಕ್ಷ್ಮ ಪ್ರಮಾಣದ ವಿದ್ಯುತ್ ಅಳೆಯಲು ಬಳಸುತ್ತಾರೆ.

೨೦. ವೋಲ್ಟ್ ಮೀಟರ್
ಉಪಯೋಗ:- ಎರಡು ಬಿಂದುಗಳ ನಡುವಿನ ವಿಭವಾಂತರ ಅಳೆಯಲು ( ವೋಲ್ಟೇಜ್) ಬಳಸುತ್ತಾರೆ.

೨೧. ಥಮೋ೯ ಸ್ಟ್ಯಾಟ್
ಉಪಯೋಗ:- ನಿಧಿ೯ಷ್ಠ ಮಟ್ಟದ ಉಷ್ಣತೆಯನ್ನು ಅಳೆಯಲು

೨೨:- ಮ್ಯಾನೋಮೀಟರ್
ಉಪಯೋಗ:- ಅನಿಲ ಒತ್ತಡ ಅಳೆಯಲು

೨೩. ರಿಫ್ರ್ಯಾಕ್ಟೋಮೀಟರ್
ಉಪಯೋಗ:- ವಕ್ರೀಭವನ ಸುಚಾಂಕ ಅಳೆಯಲು

೨೪. ಸಿಸ್ಮೋಗ್ರಾಫ್
ಉಪಯೋಗ:- ಭೂಕಂಪನದ ತೀವ್ರತೆ ಮತ್ತು ದೂರ ಉದ್ದ ಅಳೆಯಲು

೨೫. ಫೋಟೋಮೀಟರ್
ಉಪಯೋಗ:- ಎರಡು ಬೆಳಕಿನ ಮೂಲಗಳ ಪ್ರಕಾರವನ್ನು ತುಲನೆ ಮಾಡಲು

೨೬. ಪೈರೋಮೀಟರ್
ಉಪಯೋಗ:- ಅತೀ ಹೆಚ್ಚಿನ ಉಷ್ಣತೆ ಅಳೆಯಲು

೨೭. ರೈನಗೆಜ್
ಉಪಯೋಗ:- ನಿದಿ೯ಷ್ಟ ಪ್ರದೇಶದ  ಮಳೆಯ ಪ್ರಮಾಣ ಅಳೆಯಲು .

೨೮. ಸ್ಪೀಡೋಮೀಟರ್
ಉಪಯೋಗ:- ವಾಹನಗಳು ಚಲಿಸುತ್ತಿರುವ ವೇಗವನ್ನು ಅಳೆಯಲು

೨೯. ಇಲೆಕ್ಟ್ರೋಎನಸೆಫಲೋಗ್ರಾಫಿ
ಉಪಯೋಗ:- ಮೆದುಳಿನ ವಿದ್ಯುತ್ ಪ್ರಕ್ರಿಯೆಗಳನ್ನು ಅಧ್ಯಯನ ಮಾಡಲು ಬಳಸುತ್ತಾರೆ.

೩೦. ಸ್ಪಿಗ್ಮೋಮ್ಯಾನೋಮೀಟರ್
ಉಪಯೋಗ:- ರಕ್ತದೊತ್ತಡ ಅಳೆಯಲು ಬಳಸುತ್ತಾರೆ.

೩೧. ಸ್ಪೆಕ್ಟ್ರೋಮೀಟರ್
ಉಪಯೋಗ:- ವಣ೯ ಪಂಕ್ತಿಯನ್ನು ವಿಶ್ಲೇಷಿಸಲು ಬಳಸುತ್ತಾರೆ.

೩೨. ಅಮ್ಮೀಟರ್
ಉಪಯೋಗ:- ವಿದ್ಯುತ್ ಅಳೆಯಲು ಬಳಸುತ್ತಾರೆ.

೩೩. ಆಡಿಯೋಮೀಟರ್
ಉಪಯೋಗ:- ಶಬ್ದದದ ತೀವ್ರತೆ ಅಳೆಯಲು ಬಳಸುತ್ತಾರೆ.

೩೪. ಅನಿಯೋಮೀಟರ್
ಉಪಯೋಗ:- ಗಾಳಿಯ ವೇಗವನ್ನು ಅಳೆಯಲು

೩೫. ಸ್ಪೇಥೋಸ್ಕೋಪ್
ಉಪಯೋಗ:- ಹೃದಯ ಬಡಿತ ಆಲಿಸಲು

೩೬. ಬ್ಯಾರೋಮೀಟರ್
ಉಪಯೋಗ:- ವಾತಾವರಣದ ಒತ್ತಡ ಅಳೆಯಲು

೩೭. ಡೈನಮೋ
ಉಪಯೋಗ:- ಯಾಂತ್ರಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವತಿ೯ಸಲು ಬಳಸುತ್ತಾರೆ.

೩೮. ಎಲೆಕ್ಟ್ರೋಕಾಡಿ೯ಯೋಗ್ರಾಫಿ
ಉಪಯೋಗ:- ಹೃದಯ ಬಡಿತವನ್ನು ಗ್ರಾಫಿಕ್ ಚಿತ್ರದ ರೂಪದಲ್ಲಿ ಪಡೆಯಲು

೩೯. ಬೈನಾಕ್ಯೂಲರ್
ಉಪಯೋಗ:- ದೂರದ ವಸ್ತುಗಳನ್ನು ಸ್ಪಷ್ಟವಾಗಿ ಕಾಣಲು ಬಳಸುತ್ತಾರೆ.

೪೦. ಕಲರಿ ಮೀಟರ್
ಉಪಯೋಗ:- ಬಣ್ಣದ ತೀವ್ರತೆ ತಿಳಿಯಲು ಬಳಸುವರು.

೪೧. ಸಿನೆಮ್ಯಾಟೋಗ್ರಾಫ್
ಉಪಯೋಗ:- ಚಲನಚಿತ್ರವನ್ನು ಪರದೆಯ ಮೇಲೆ ಮೂಡಿಸಲು ಬಳಸುವರು .

೪೨. ಕಾಡಿ೯ಯೋಗ್ರಫಿ
ಉಪಯೋಗ:- ಹೃದಯದ ಚಟುವಟಿಕೆಯನ್ನು  ಕಂಡು ಹಿಡಿಯಲು

೪೩. ಕ್ರೋನೋಮೀಟರ್
ಉಪಯೋಗ:- ಹಡಗುಗಳಲ್ಲಿ ಸರಿಯಾದ ಸಮಯವನ್ನು  ಕಂಡು ಹಿಡಿಯಲು 

೪೪. ಕ್ಯಾಲಿಪರ್
ಉಪಯೋಗ:- ವಸ್ತುಗಳ ಬಾಹ್ಯಿಕ ಅಂತರಿಕ ವ್ಯಾಸಗಳನ್ನು ಅಳೆಯಲು

೪೫. ಸೋನರ್
ಉಪಯೋಗ:- ಜಲಗತ ವಸ್ತುಗಳ ಸ್ಥಾನ ದೂರ .ದಿಕ್ಕು ಜವಗಳನ್ನು ಅಳೆಯಲು

೪೬. ಉಷ್ಣಯಂತ್ರ
ಉಪಯೋಗ:- ಉಷ್ಣವನ್ನು ಯಾಂತ್ರಿಕ ಶಕ್ತಿಯನ್ನಾಗಿ ಪರಿವತಿ೯ಸಲು

೪೭. ರೋಹಿತದಶ೯ಕ
ಉಪಯೋಗ:- ಸಂಕೀರ್ಣ ಬೆಳಕಿನಿಂದ ಶುದ್ದರೋಹಿತವನ್ನು ಪಡೆಯಲು ಉಪಯೋಗಿಸುವ ವಿಧಾನ

೪೮. ಲೇಸರ್
ಉಪಯೋಗ:- ಏಕವಣಿ೯ಯ ಅತೀ ತೀವ್ರಬೆಳಕನ್ನು ಉತ್ಪಾದಿಸುವ ವಿಧಾನ

೪೯. ದ್ಯುತಿಕೋಶ
ಉಪಯೋಗ:- ಬೆಳಕಿನ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವತಿ೯ಸುವ ವಿಧಾನ

೫೦. ಸೌರಕೋಶ
ಉಪಯೋಗ:- ಸೌರಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವತಿ೯ಸುವ ಸಾಧನ

೫೧. ಶುಷ್ಕಕೋಶ
ಉಪಯೋಗ:- ರಾಸಾಯನಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನು ಪರಿವತಿ೯ಸುವ ವಿಧಾನ

೫೨. ಸೆಂಟ್ರಿಪ್ಯೂಜ್
ಉಪಯೋಗ:- ವಿಭಿನ್ನ ಸಾಂದ್ರತೆಯ ಸೂಕ್ಷ್ಮ ಕಣಗಳನ್ನು ಪ್ರತ್ಯೇಕಿಸುವ ಸಾಧನ

೫೩. ಅಸಿಲೇಟರ್
ಉಪಯೋಗ:- ಅಪೇಕ್ಷಿತ ಆವೃತ್ತಿಯ ವಿದ್ಯುತ್ ಆಂದೋಲನಗಳನ್ನು ಉತ್ಪತ್ತಿ ಮಾಡುವ ಸಾಧನ

೫೪. ಎ.ಸಿ.ಡೈನಮೋ
ಉಪಯೋಗ:- ಪಯಾ೯ಯ ವಿದ್ಯುತ್ ಶಕ್ತಿಯನ್ನು ತಯಾರಿಸುವ ಸಾಧನ

೫೫. ಡಿ.ಸಿ. ಡೈನಮೋ
ಉಪಯೋಗ:- ನೇರ ವಿದ್ಯುತ್ ಶಕ್ತಿಯನ್ನು ತಯಾರಿಸುವ ಸಾಧನ

೫೬. ಪೆರಿಸ್ಕೋಪ್
ಉಪಯೋಗ:- ನೀರಿನ ಆಳದಲ್ಲಿರುವ ಸಬ್ ಮೆರೀನ್ ನಿಂದ ಸಮುದ್ರದ ನೀರಿನ ಮೇಲಿರುವ ಹಡಗುಗಳನ್ನು ಕಂಡು ಹಿಡಿಯಲು

೫೭. ಸೈಟೋಮೀಟರ್
ಉಪಯೋಗ:- ದೇಹದಲ್ಲಿರುವ ಜೀವಕೋಶಗಳ ಸಂಖ್ಯೆಯನ್ನು ಎಣಿಕೆ ಮಾಡಲು ಬಳಸುತ್ತಾರೆ.

೫೮. ಸ್ಪೈರೋಮೀಟರ್
ಉಪಯೋಗ:- ಉಸಿರಾಡುವಾಗ ಗಾಳಿಯ ಪ್ರಮಾಣವನ್ನು  ಅಳೆಯಲು ಬಳಸುತ್ತಾರೆ.

೫೯. ಎಂಡೋಸ್ಕೋಪ್
ಉಪಯೋಗ:- ದೇಹದ ಒಳ ಅಂಗಗಳನ್ನು ಪರಿಪರಿಶೀಲನೆ ಮಾಡಲು  ಬಳಸುತ್ತಾರೆ  

೬೦. ಕ್ಯಾಥಟರ್
ಉಪಯೋಗ:- ದೇಹದ ನಾಳಗಳನ್ನು ಹಿಗ್ಗಿಸಲು ಬಳಸುತ್ತಾರೆ.

Sunday 18 September 2016

ಅನಾಮಿತೆ

ಅನಾಮಿತೆ

ಸಂಜೆ ಕಡಲಲಿ
ಮರಳ ತೀರದಲಿ
ಮನಕೆ ಮುದ ನೀಡಿದ ಆ ತಂಗಾಳಿ
ನೆನಪಿಸುತಿದೆ ಮತ್ತೆ ಮತ್ತೆ...
ಒಂಟಿ ಯಾಕೆ ನೀನು....?
  ಮೋಡಗಳನೆಲ್ಲಾ ಸೆಳೆದುಕೊಂಡು
ಮುದದಿ ನೀಲಕನಸು ಕಾಣುತಿದೆ ನೋಡು ಆ ಬಾನು.
ಇಷ್ಟು ಮೌನ ಸಾಕು...
ಸಹಿ ಮಾತು ಬೇಕು
ಉಪ್ಪು ಕಡಲಿಗೂ ಸಹಿ ನದಿಯ ಸಹವಾಸ ಸದಾ ಬೇಕು.
ನಡೆ ಎಂದು ಬಡಿದೆಚ್ಚರಿಸಿದಾಗಲೇ ಅರಿತದ್ದು ಕಡಲ ತೀರದಲ್ಲಿ
ಕನವರಿಸುತ ಬಿದ್ದ  ಅನಾಮಿಕನನು ಕೈಹಿಡಿದದ್ದು ಆ ಆನಾಮಿತೆ ....
ಆ ಚೆಲುವಿಗೆ ಹೋಲುವ ಹೆಸರು ಹೋಳೆದಿಲ್ಲ ನನಗಿನ್ನೂ .....
ಅವಳೂ ಹೇಳಲಿಲ್ಲ ಹೆಸರನ್ನು. ..!!
ರವಿರಾಜ್ ಸಾಗರ್.#

Tuesday 13 September 2016

ಒಲವಿನ ಜೀವನದಿ

ಒಲವಿನ ಜೀವನದಿ
.
ಉಕ್ಕುವ ಕಡಲಂಚಲ್ಲಿ
ಅಂಗಾತ ಮಲಗಿ ಬಂದೆ.
ಓಡುವ ನದಿ ತೀರದಲ್ಲಿ
ಧ್ಯಾನ ಮಾಡಿ ಬಂದೆ
ನಿನ್ನೆ  ಬಿದ್ದ  ಕನಸು
ನಿಜವಾಗಬಾರದೆಂದು ಯತ್ನಿಸಿದೆ.
ಕನಸೇನೆಂದು ಕೇಳಬೇಡಿ.....
ನನ್ನೊಲವ ಜೀವನದಿ ಬತ್ತಲೇಬಾರದು ...
ಸಪ್ತಕಡಲು  ಬತ್ತಿದರೂ .....!!
ದಿನಪೂರ  ಧಣಿವಳು ನನ್ನ ಮನೆಯೊಳಗೆ ಪ್ರೀತಿ ಸಹಬಾಳ್ವೆಯ ಸಿಹಿಪಾಕದ ಆಲಯದೊಳಗೆ;
ಬೇಕೆಂದೇ ಬೈದರೂ ಮುನಿಯದ ಹಸನ್ಮುಖಿ
ಖಾಲಿಜೇಬು ತೋರಿಸಿದರೆ
ತನ್ನ ಬೇಡಿಕೆಗಳನ್ನೆಲ್ಲ ತ್ಯಜಿಸುವ ಸಹನಶೀಲ
ತ್ಯಾಗ ಗುಣಸಂಪನ್ನೆ......
ಆಳ ಕಡಲು
ನೀಲ ಗಗನ
ಯಾವ ರಾಜ್ಯದವರೂ ಕಣ್ಣು ಹಾಕದ
ಯಾರಿಗೂ ಸೋಲದ
ನನ್ನ ಸ್ವಂತ ಕನಸಿನ ಕಾವೇರಿ
ನನ್ನೊಲವಿನ ಜೀವನದಿ ಆಕೆ.

Raviraj sagar.

Saturday 10 September 2016

ಕಾವೇರಿ ವಿವಾದ ಇತಿಹಾಸ

|| ಶತ ಶತಮಾನಗಳಿಂದ ಸಾಗುತ್ತಲಿದೆ ಕಾವೇರಿ ಹೋರಾಟ ||

1146-1173ರ ಅವಧಿಯಲ್ಲಿ ಒಂದನೇ ನರಸಿಂಹ ಕಾವೇರಿ ನದಿಗೆ ನಿರ್ಮಿಸಿದ್ದ ತಡೆಗೋಡೆಯನ್ನು ರಾಜರಾಜ ಚೋಳ ಕೆಡವಿ ತಮಿಳುನಾಡಿಗೆ ಕಾವೇರಿ ನೀರು ಹರಿಸಿದಾಗಿನಿಂದ ಹಿಡಿದು ಇಂದಿನವರೆಗೂ ಹೋರಾಟ ನಡೆದುಕೊಂಡು ಬಂದಿದೆ.

ಹೋರಾಟ ಹಾಗೂ ವಿವಿಧ ತೀರ್ಪುಗಳ ಮುಖ್ಯಾಂಶಗಳು ಈ ಕೆಳಗಿನಂತಿವೆ

- 1803ರಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ್ ಕೆರೆ ಮೂಲಕ ನೀರಾವರಿ ಆರಂಭ. ಅದಕ್ಕೆ ಮದ್ರಾಸ್ ಪ್ರೆಸಿಡೆನ್ಸಿ ಆಕ್ಷೇಪ.

- 1892ರಲ್ಲಿ ಮೈಸೂರು- ಮದ್ರಾಸ್ ನಡುವೆ ಒಪ್ಪಂದ. ಯಾವುದೇ ನೀರಾವರಿ ಯೋಜನೆ ಕೈಗೊಳ್ಳಬೇಕಾದರೂ ಮದ್ರಾಸ್ ಆಡಳಿತದ ಅನುಮತಿ ಪಡೆಯುವ ಷರತ್ತು.

- 1911- ಕೃಷ್ಣರಾಜಸಾಗರ ನಿರ್ಮಾಣಕ್ಕೆ ನಡೆದ ಶಿಲಾನ್ಯಾಸಕ್ಕೆ ಆಕ್ಷೇಪ ಹಾಗೂ ಕಾಮಗಾರಿಗೆ ತಡೆ.

- 1924- ಹಲವು ಷರತ್ತುಗಳೊಂದಿಗೆ ಕೆಆರ್‌ಎಸ್ ನಿರ್ಮಾಣಕ್ಕೆ ಒಪ್ಪಂದ. ಮೆಟ್ಟೂರು ಜಲಾಶಯ ನಿರ್ಮಾಣಕ್ಕೆ ಅನುಮತಿ. ಕಾವೇರಿ ಉಪನದಿಗಳಿಗೂ ಅಣೆಕಟ್ಟು ನಿರ್ಮಿಸಬೇಕಾದರೆ ಮದ್ರಾಸ್ ಸರ್ಕಾರದ ಅನುಮತಿ ಪಡೆಯಬೇಕು ಎಂಬ ಷರತ್ತು.

- 1931- ಕೆಆರ್‌ಎಸ್ ಅಣೆಕಟ್ಟು ನಿರ್ಮಾಣ ಪೂರ್ಣ

-1972- ಕೇಂದ್ರದಿಂದ ಕಾವೇರಿ ಸತ್ಯಶೋಧನಾ ಸಮಿತಿ ರಚನೆ. ಅದೇ ವರ್ಷ ಸಮಿತಿ ವರದಿ ಸಲ್ಲಿಕೆ.

- 1973- ತಮಿಳುನಾಡಿನಿಂದ ಸಮಿತಿ ವರದಿ ತಿರಸ್ಕಾರ.

- 1990- ಸುಪ್ರೀಂಕೋರ್ಟ್ ಸೂಚನೆಯಂತೆ ಕೇಂದ್ರದಿಂದ ಚಿತ್ರತೋಷ್ ಮುಖರ್ಜಿ ಅಧ್ಯಕ್ಷತೆಯಲ್ಲಿ ಕಾವೇರಿ ಜಲವಿವಾದ ನ್ಯಾಯಮಂಡಳಿ ರಚನೆ.

- 1991- ನ್ಯಾಯಮಂಡಳಿಯಿಂದ ಮಧ್ಯಂತರ ತೀರ್ಪು. 205 ಟಿಎಂಸಿ ನೀರು ಹರಿಸಲು ಆದೇಶ.

- 1991- ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರಿಂದ ಕಾವೇರಿ ಕಣಿವೆ ನೀರಾವರಿ ಸಂರಕ್ಷಣಾ ಸುಗ್ರೀವಾಜ್ಞೆ.

- 1991- ನೀರು ಬಿಡಲು ಆದೇಶ. ರಾಜ್ಯದಲ್ಲಿ ತೀವ್ರ ಹೋರಾಟ.

- 1995- ಬರ ಪರಿಸ್ಥಿತಿಯ ನಡುವೆಯೂ ತಮಿಳುನಾಡಿಗೆ 11 ಟಎಂಸಿ ನೀರು ಬಿಡಲು ನ್ಯಾಯಮಂಡಳಿ ಆದೇಶ. ರಾಜ್ಯದಲ್ಲಿ ವ್ಯಾಪಕ ಪ್ರತಿಭಟನೆ. ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 6 ಟಿಎಂಸಿ ನೀರು ಬಿಡಲು ಸೂಚನೆ.

-1997-ಕಾವೇರಿ ನದಿ ಪ್ರಾಧಿಕಾರ ರಚನೆ.

- 2002- ಪ್ರಾಧಿಕಾರ ಸಭೆಯಲ್ಲಿ ನಿರ್ಧಾರವಾಗುವವರೆಗೂ ನಿತ್ಯ 1.25 ಟಿಎಂಸಿ ನೀರು ಬಿಡಲು ಸುಪ್ರೀಂಕೋರ್ಟ್ ಆದೇಶ. ಬರ ಇದ್ದದ್ದರಿಂದ ರಾಜ್ಯದಲ್ಲಿ ತೀವ್ರ ಪ್ರತಿಭಟನೆ. ಪ್ರಾಧಿಕಾರ ಸಭೆ ನಂತರ 9 ಸಾವಿರ ಕ್ಯೂಸೆಕ್ ನೀರು ಬಿಡಲು ರಾಜ್ಯದ ನಿರ್ಧಾರ.

- 2002- ಮೈಸೂರು ಜಿಲ್ಲೆಯ ಬೀಚನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಗುರುಸ್ವಾಮಿ ಕಬಿನಿಗೆ ಹಾರಿ ಹುತಾತ್ಮ.

- 2007- ನ್ಯಾಯಮಂಡಳಿ ಅಂತಿಮ ತೀರ್ಪು. ತಮಿಳುನಾಡಿಗೆ 419 ಟಿಎಂಸಿ, ಕರ್ನಾಟಕಕ್ಕೆ 270 ಟಿಎಂಸಿ ನೀರು ಹಂಚಿಕೆ. ಕರ್ನಾಟಕದಿಂದ ತಮಿಳುನಾಡಿಗೆ 192 ಟಿಎಂಸಿ ನೀರು ಬಿಡಬೇಕು.

- 2012- ರಾಜ್ಯದಲ್ಲಿರುವ ತೀವ್ರ ಬರದ ನಡುವೆಯೂ ಕಾವೇರಿ ನದಿ ಪ್ರಾಧಿಕಾರದಿಂದ ನಿತ್ಯ 9 ಸಾವಿರ ಕ್ಯೂಸೆಕ್ ನೀರು ಬಿಡಲು ಸೂಚನೆ. ರಾಜ್ಯ ಸರ್ಕಾರದ ನಕಾರ. ಸುಪ್ರೀಂಕೋರ್ಟ್‌ಗೆ ತಮಿಳುನಾಡು ಮೋರೆ. ನ್ಯಾಯಾಲಯದಿಂದಲೂ ನೀರು ಬಿಡಲು ಆದೇಶ. ರಾಜ್ಯದಲ್ಲಿ ತೀವ್ರಗೊಂಡ ಹೋರಾಟ.

2016.....ಹೋರಾಟ ಮುಂದುವರೆಯುತ್ತಲೇ ಇದೆ

ನೆರೆಯ ರಾಜ್ಯ ತಮಿಳುನಾಡು ತಮ್ಮ 4೦೦೦೦ ಎಕರೆ ಸಾಂಬಾ ಬೆಳೆಯು ನೀರಿಲ್ಲದೆ ಹಾಳು ಆಗುತ್ತದೆ ಅದಕ್ಕಾಗಿ ನಮಗೆ 5೦.52 ಟಿ.ಎಮ್.ಸಿ ನೀರನ್ನು ಕರ್ಣಾಟಕದ ಜಲಾಶಯಗಳಿಂದ ಬಿಡಬೇಕು ಎಂದು ಸುಪ್ರೀಂ ಕೋರ್ಟ್ನಲ್ಲಿ ಅರ್ಜಿಯನ್ನು ಸಲ್ಲಿಸಿ, ವಾದ ವಿವಾದ ಗಳನ್ನು ಮಂಡಿಸಿದಾಗ ಕರ್ಣಾಟಕದ ಹಿರಿಯ ವಕೀಲರಾದ ಪಾಲಿ ನಾರಿಮನ್ ವಾದ ಮಂಡಿಸಲು ವಿಫಲರಾದಾಗ ಸುಪ್ರೀಂ ಕೋರ್ಟ್ " live & let live " ಅನ್ನುವ ಪದವನ್ನು ಬಳಸಿ  ಕರ್ಣಾಟಕ ೧೦ದಿನದ ಅವಧಿಯಲ್ಲಿ ನೀರು ಬಿಡಬೇಕು ಎಂದು ಸೂಚಿಸಿ ಜಯಲಲಿತಾ ಅವರಿಗೆ ಜಯ ಎಂದು ಕರ್ಣಾಟಕದ ಜನರ ಪಾಲಿಗೆ ಮಳೆ ತರದ ಮೂಡಗಳಾಗಿ ಮರೆಮಾಚಿತು‌

ವಾತ್ಸವವಾಗಿ ಎರಡೂ ರಾಜ್ಯಗಳಲ್ಲಿ ಮಳೆ ಆಗದಿದ್ದಲ್ಲಿ ಇದಕ್ಕೆ ಯಾರು ಹೂಣೆಗಾರರು, ನಾವು ಮಾಡುವ ಎಷ್ಟೋ ತಪ್ಪುಗಳಿಂದ ಪ್ರಕೃತಿಯು ನಮ್ಮನ್ನು ಮೂಡದ ಆಚೆಗೆ ಮರೆಮಾಚಿ ನೂಡಿ ನಗುವಾಗ,‌ ವರುಣನ ವಕ್ರ ದೃಷ್ಟಿ ಕೂಡವ ನಾಡಿನಲ್ಲಿ ಮಳೆ ಆಗದ ಕಾರಣ ನೀರಿನ ಒಳ ಹರಿವು ಅಷ್ಟಕ್ಕೇ ಅಷ್ಟೇ ಇರುವುದರಿಂದ ಜಲಾಶಯಗಳು ತುಂಬದೆ ಬಾಗಿನವನ್ನು ಸ್ವೀಕಾರ ಮಾಡದೆ ಬೇಡವೆಂದು ಮುನಿಸಿ ಕೊಂಡರೆ, ನ್ಯಾಯಾಲಯದ ತೀರ್ಪು  ಕನ್ನಡಿಗರ ಕಣ್ಣಿರನ್ನು ಒರೆಸಿ ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಜಯಕಾರ ಹಾಕಿ ನೀರು ಬಿಡುಗಡೆ ಮಾಡಲು ಅನುಮೋದನೆಯನ್ನು ಸೂಚಿಸಿದರೆ ಜನಸಾಮಾನ್ಯರು ಎನು ತಾನೇ ಮಾಡಲು ಸಾದ್ಯವಾದಿತು,‌ ಕೂನೆಪಕ್ಷ ರಾಜ್ಯದ ವಕೀಲರಾಗಿ ನ್ಯಾಯ ಮಂಡಿಸುವವರನ್ನಾದರು ಬದಲಾಯಿಸಬೇಕು.

Tuesday 6 September 2016

ಶಿಕ್ಷಣ ಕ್ಷೇತ್ರದ ಬಗ್ಗೆ ಸಮಾಜದ ಸಂಘಟನೆಗಳ ಮೌನವೇಕೆ

ಶಿಕ್ಷಣ ಕ್ಷೇತ್ರದ ಸಮಸ್ಯೆಗಳ ಕುರಿತು ಸಮಾಜದ ಸಂಘಟನೆಗಳ ಮೌನವೇಕೆ..?

ಬಹು ಮುಖ್ಯವಾಗಿ ಶಿಕ್ಷಣ ಕ್ಷೇತ್ರದ ಹಾಗು ಶಿಕ್ಷಕರ ಸಮಸ್ಯೆಗಳ ಪರಿಹಾರ ಮಾಸವಾಗಬೇಕಿತ್ತು  ಸೆಪ್ಟೆಂಬರ್.
   ಆದರೆ ಸೆಪ್ಟೆಂಬರ್ ಬಂತೆಂದರೆ ಅರ್ಜಿ ಹಾಕಿ ಪ್ರಭಾವ ಬೀರುವವರಿಗೆ ಪ್ರಶಸ್ತಿ ಕೊಟ್ಟು, ಪ್ರಶ್ನಿಸಿ ಮಾತಾಡುವವರನ್ನು ಸಂಘಟನೆಯಲಿ ಕೂಡಿ ಹಾಕಿ, ಯಾವುದೋ ಆರೋಪದಡಿ ಬಾಯಿಮುಚ್ಚಿಸಿ ,ಸಮಸ್ಯೆಗಳನು ಜೀವಂತವಾಗಿರಿಸಿ ಆಡಂಬರದ  ಶಿಕ್ಷಕರ ದಿನಾಚರಣೆ ಆಚರಿಸಿದರೆ ಯಾವ ಬದಲಾವಣೆ ಸಾಧ್ಯವಾದೀತು...?
  ಈಗಂತೂ ಖಾಸಗಿ ಶಿಕ್ಷಣ ಸಂಸ್ಥೆಗಳ ಹೆಚ್ಚಳಕ್ಕೆ ಯಾವುದೇ ಪಕ್ಷ ಸರ್ಕಾರ ನಡೆಸಿದರೂ ಪರೋಕ್ಷವಾಗಿ ಪ್ರತ್ಯಕ್ಷವಾಗಿಯೂ ಪ್ರೋತ್ಸಾಹಿಸುತ್ತಿವೆ. ಸರ್ಕಾರಿ ಶಾಲೆ ಸಂಖ್ಯೆ ಕಡಿಮೆ ಮಾಡಿ ಶಿಕ್ಷಣ ಕ್ಷೇತ್ರದ ಸಮಸ್ಯೆಗಳ ಪರಿಹಾರಕ್ಕೆ ಇಚ್ಛಾಶಕ್ತಿ ಪ್ರದರ್ಶಿಸಿದೆ ಹೊಣೆಗಾರಿಕೆ ಕಡಿಮೆ ಮಾಡಿಕೊಳ್ಳಲು ಹವಣಿಸುತ್ತಿವೆ.
ಹೀಗಿರುವಾಗ ಬಡವರ ಶಾಲೆಗಳಾಗಿ ಬಡವಾಗುತಿರುವ ಸರ್ಕಾರಿ ಶಾಲೆಗಳ ಉದ್ದಾರಕ್ಕಿಂತ ಅವರ ಹೆಸರಿನಲ್ಲಿ ಹಲವು ಯೋಜನೆಗಳನ್ನು ರೂಪಿಸಿ ಹೆಸರು ಹಣ ಬಿಡುಗಡೆಗೆ ಶ್ರಮಿಸುವ ಶಿಶಿಕ್ಷಣ ಇಲಾಖೆ ಸಮರ್ಪಕ ಅನುಷ್ಠಾನಕ್ಕೆ ಶ್ರಮಿಸುತ್ತಿಲ್ಲ.
ಇಲ್ಲಿ ಶಿಕ್ಷಕ ಸಂಪನ್ಮೂಲಗಳ ಅಸಮರ್ಪಕ ಬಳಕೆ , ವ್ಯವಸ್ಥೆಯ ಬಲಿಪಶುಗಳಾಗಿ ನಿಷ್ಕ್ರಿಯರಂತಾಗಿರುವ ಶಿಕ್ಷಕ ಸಮೂಹವೂ ಸಮಸ್ಯೆ ಪರಿಹರಿಸಿಕೊಳುವಲ್ಲಿ ವಿಫಲರಾಗಿದ್ದಾರೆ. ಹಾಗಾಗಿ ನದಿ, ಭಾಷೆ ,ಧರ್ಮ ,ಜಾತಿ ಹೋರಾಟಕ್ಕೆಲ್ಲ ಒಂದಾಗಿ ಹೋರಾಡುವ ಸಮಾಜ,  ಸಂಘಟನೆಗಳು ಶಿಕ್ಷಣ ಕ್ಷೇತ್ರದ ಸಮಸ್ಯೆಗಳು ಹಾಗೂ ಶಿಕ್ಷಕರ ಸಮಸ್ಯೆ ಪರಿಹಾರಕ್ಕೆ ಬೃಬೃಹತ್ ಹೋರಾಟಕ್ಕೆ ಸಜ್ಜಾಗಬೇಕಿದೆ. ಮೊದಲು ಶಿಕ್ಷಣ ಕ್ಷೇತ್ರ ಸುಧಾರಣೆಯಾದರೆ , ನಮ್ಮ ಶಾಲೆಗಳು ಸಮಸ್ಯೆಗಳಿಂದ ಮುಕ್ತವಾದರೆ, ಸಮಸ್ಯೆಗಳಿಲ್ಲದೆ  ಶಿಕ್ಷಕರು ಗುಣಮಟ್ಟದ ಶಿಕ್ಷಣ ನೀಡಲು ಮುಕ್ತವಾಗಿ ಶ್ರಮಿಸಿದರೆ  ಮಾತ್ರ ಸಮಾಜದ ಸುಧಾರಣೆ ಸಾಧ್ಯ.
-ರವಿರಾಜ್ ಸಾಗರ್ #

ಕನ್ನಡ ಬಿರುದಾಂಕಿತರು

ಕನ್ನಡದ ಬಿರುದಾಂಕಿತರು ♣
ಅ. ಸಂಖ್ಯೆ ಬಿರುದು ಬಿರುದಾಂಕಿತರು
1 ದಾನ ಚಿಂತಾಮಣಿ ಅತ್ತಿಮಬ್ಬೆ
2 ಕನ್ನಡ ಕುಲಪುರೋಹಿತ ಆಲೂರು ವೆಂಕಟರಾಯ
3 ಕನ್ನಡದ ಶೇಕ್ಸ್ಪಿಯರ್ ಕಂದಗಲ್ ಹನುಮಂತರಾಯ
4 ಕನ್ನಡದ ಕೋಗಿಲೆ ಪಿ.ಕಾಳಿಂಗರಾವ್
5 ಕನ್ನಡದ ವರ್ಡ್ಸ್ವರ್ತ್ ಕುವೆಂಪು
6 ಕಾದಂಬರಿ ಸಾರ್ವಭೌಮ ಅ.ನ.ಕೃಷ್ನರಾಯ
7 ಕರ್ನಾಟಕ ಪ್ರಹಸನ ಪಿತಾಮಹ ಟಿ.ಪಿ.ಕೈಲಾಸಂ
8 ಕರ್ನಾಟಕದ ಕೇಸರಿ ಗಂಗಾಧರರಾವ್ ದೇಶಪಾಂಡೆ
9 ಸಂಗೀತ ಗಂಗಾದೇವಿ ಗಂಗೂಬಾಯಿ ಹಾನಗಲ್
10 ನಾಟಕರತ್ನ ಗುಬ್ಬಿ ವೀರಣ್ಣ
11 ಚುಟುಕು ಬ್ರಹ್ಮ ದಿನಕರ ದೇಸಾಯಿ
12 ಅಭಿನವ ಪಂಪ ನಾಗಚಂದ್ರ
13 ಕರ್ನಾಟಕ ಸಂಗೀತ ಪಿತಾಮಹ ಪುರಂದರ ದಾಸ
14 ಕರ್ನಾಟಕದ ಮಾರ್ಟಿನ್ ಲೂಥರ್ ಬಸವಣ್ಣ
15 ಅಭಿನವ ಕಾಳಿದಾಸ ಬಸವಪ್ಪಶಾಸ್ತ್ರಿ
16 ಕನ್ನಡದ ಆಸ್ತಿ ಮಾಸ್ತಿ ವೆಂಕಟೇಶ ಅಯ್ಯಂಗಾರ್
17 ಕನ್ನಡದ ದಾಸಯ್ಯ ಶಾಂತಕವಿ
18 ಕಾದಂಬರಿ ಪಿತಾಮಹ ಗಳಗನಾಥ
19 ತ್ರಿಪದಿ ಚಕ್ರವರ್ತಿ ಸರ್ವಜ್ಞ
20 ಸಂತಕವಿ ಪು.ತಿ.ನ.
21 ಷಟ್ಪದಿ ಬ್ರಹ್ಮ ರಾಘವಾಂಕ
22 ಸಾವಿರ ಹಾಡುಗಳ ಸರದಾರ ಬಾಳಪ್ಪ ಹುಕ್ಕೇರಿ
23 ಕನ್ನಡದ ನಾಡೋಜ ಮುಳಿಯ ತಿಮ್ಮಪ್ಪಯ್ಯ
24 ಸಣ್ಣ ಕತೆಗಳ ಜನಕ ಮಾಸ್ತಿ ವೆಂಕಟೇಶ ಅಯ್ಯಂಗಾರ್
25 ಕರ್ನಾಟಕ ಶಾಸನಗಳ ಪಿತಾಮಹ ಬಿ.ಎಲ್.ರೈಸ್
26 ಹರಿದಾಸ ಪಿತಾಮಹ ಶ್ರೀಪಾದರಾಯ
27 ಅಭಿನವ ಸರ್ವಜ್ಞ ರೆ. ಉತ್ತಂಗಿ ಚೆನ್ನಪ್ಪ
28 ವಚನಶಾಸ್ತ್ರ ಪಿತಾಮಹ ಫ.ಗು.ಹಳಕಟ್ಟಿ
29 ಕವಿಚಕ್ರವರ್ತಿ ರನ್ನ
30 ಆದಿಕವಿ ಪಂಪ
31 ಉಭಯ ಚಕ್ರವರ್ತಿ ಪೊನ್ನ
32 ರಗಳೆಯ ಕವಿ ಹರಿಹರ
33 ಕನ್ನಡದ ಕಣ್ವ ಬಿ.ಎಂ.ಶ್ರೀ
34 ಕನ್ನಡದ ಸೇನಾನಿ ಎ.ಆರ್.ಕೃಷ್ಣಾಶಾಸ್ತ್ರಿ
35 ಕರ್ನಾಟಕದ ಉಕ್ಕಿನ ಮನುಷ್ಯ ಹಳ್ಳಿಕೇರಿ ಗುದ್ಲೆಪ್ಪ
36 ಯಲಹಂಕ ನಾಡಪ್ರಭು ಕೆಂಪೇಗೌಡ
37 ವರಕವಿ ಬೇಂದ್ರೆ
38 ಕುಂದರ ನಾಡಿನ ಕಂದ ಬಸವರಾಜ ಕಟ್ಟೀಮನಿ
39 ಪ್ರೇಮಕವಿ ಕೆ.ಎಸ್.ನರಸಿಂಹಸ್ವಾಮಿ
40 ಚಲಿಸುವ ವಿಶ್ವಕೋಶ ಕೆ.ಶಿವರಾಮಕಾರಂತ
41 ಚಲಿಸುವ ನಿಘಂಟು ಡಿ.ಎಲ್.ನರಸಿಂಹಾಚಾರ್
42 ದಲಿತಕವಿ ಸಿದ್ದಲಿಂಗಯ್ಯ
43 ಅಭಿನವ ಭೋಜರಾಜ ಮುಮ್ಮಡಿ ಕೃಷ್ಣರಾಜ ಒಡೆಯರು
44 ಪ್ರಾಕ್ತನ ವಿಮರ್ಶಕ ವಿಚಕ್ಷಣ ಆರ್.ನರಸಿಂಹಾಚಾರ್
45 ಕನ್ನಡದ ಕಬೀರ ಶಿಶುನಾಳ ಷರೀಪ
46 ಕನ್ನಡದ ಭಾರ್ಗವ ಕೆ.ಶಿವರಾಮಕಾರಂತ
47 ಕರ್ನಾಟಕದ ಗಾಂಧಿ ಹರ್ಡೇಕರ್ ಮಂಜ

Monday 5 September 2016

ನಾವೇಕೆ ಗುರುಗಳಿಗೆ ಋಣಿಯಾಗಿರಬೇಕು

ನಾವೇಕೆ ಗುರುಗಳಿಗೆ ಋಣಿಯಾಗಿರಬೇಕು?
ಇಲ್ಲಿವೆ 17 ಕಾರಣಗಳು ( ಸಂಗ್ರಹ. ವಾಟ್ಸ ಆಪ್)

1. ನಮಗೆ ಗೊತ್ತಿಲ್ಲದಂತೆ ನಮ್ಮೊಳಗೆ ಅಡಗಿದ್ದ ಪ್ರತಿಭೆಯನ್ನ ಹೊರಕ್ಕೆ ತಂದಿರಲ್ಲ, ಅದಕ್ಕೆ

ನಮಗೆ ಚೆನ್ನಾಗಿ ಬರೆಯೋದಕ್ಕೆ, ಲೆಕ್ಕ ಮಾಡಕ್ಕೆ, ಆಡೋದಕ್ಕೆ, ಹಾಡೋದಕ್ಕೆ ಬರುತ್ತೆ ಅಂತ ನಮಗೇ ಗೊತ್ತಿರಲಿಲ್ಲ. ಗೊತ್ತು ಮಾಡಿದ್ದು ನೀವು. ಈಗ ಇವೆಲ್ಲವೂ‌ ನಮಗೆ ಹುಟ್ಟಿದಾಗಲೇ‌ ಬರ್ತಾ ಇತ್ತೇನೋ‌ ಅನ್ನಿಸುತ್ತೆ! ಆದರೆ ಅದರ ಹಿಂದೆ ನೀವಿದ್ದೀರಿ. ಅದಕ್ಕಾಗಿ ತ್ಯಾಂಕ್ಸ್.

2. ಓದು ಮುಂದುವರೆಸು ಅಂತ ಬೆನ್ನು ತಟ್ಟಿದಿರಲ್ಲ, ಅದಕ್ಕೆ

ನಮ್ಮ ದಾರಿ ಯಾವುದು, ಏನು ಓದಬೇಕು, ಯಾವ ಕೋರ್ಸ್ ತೊಗೋಬೇಕು, ಯಾವ ಡಿಗ್ರಿ ನಮಗೆ ಸರಿಹೊಂದುತ್ತೆ... ಇದಾವುದೂ ಸರಿಯಾಗಿ ನಮಗೆ ಗೊತ್ತಿರಲಿಲ್ಲ. ಆದರೆ ನಿಮ್ಮಿಂದ ನಾವೇ ನಮ್ಮ ದಾರಿ ಕಂಡುಕೊಳ್ಳುವಂತಾಯಿತು... ಏಕಂದ್ರೆ ಆಯ್ಕೆ ಮಾಡಿಕೊಳ್ಳುವ ಶಕ್ತಿ ನಮಗಿದೆ ಅಂತ ತೋರಿಸಿಕೊಡ್ತಾ‌ ಇದ್ರಿ. ಅದಕ್ಕಾಗಿ ತ್ಯಾಂಕ್ಸ್.

3. ಮನಸ್ಸಿಟ್ಟು ಓದುವಂತೆ ಮಾಡಿದಿರಲ್ಲ, ಅದಕ್ಕೆ

ಹೋಂವರ್ಕು, ಅಸೈನ್ಮೆಂಟು ಅಂದರೆ ಸಾಕು ನಮಗೆ ಬೇಜಾರು! ಆದರೂ‌ ಮನಸ್ಸಿಟ್ಟು ಮಾಡುವಂತೆ ಪ್ರೇರಣೆ ನೀಡಿದ್ದು ನೀವೇ. ರಾತ್ರಿಯೆಲ್ಲ ಎದ್ದು ಓದುವಂತೆ ಮಾಡ್ತಾ ಇದ್ರಿ. ಆಗ ಬೈಕೊಂಡು ಮಾಡ್ತಾ ಇದ್ವಿ, ಆದ್ರೆ ಒಳ್ಳೆಯ ಫಲಿತಾಂಶ ಬಂದಾಗ ಅದೆಲ್ಲದರ ಬೆಲೆ ನಮಗೇ‌ ಗೊತ್ತಾಗ್ತಾ ಇತ್ತು. ಶುರು ಮಾಡಿದ ಪ್ರಾಜೆಕ್ಟೆಲ್ಲ ಮುಕ್ತಾಯದ ಹಂತಕ್ಕೆ ಕರೆದೊಯ್ಯುವಂತೆ ಮಾಡಿದ್ದು ನೀವೇ. ಮೊದಲ ಬಾರಿಗೆ ಗೆಲುವು ಸಿಗದೆ ಹೋದರೆ ಮತ್ತೊಮ್ಮೆ, ಮಗದೊಮ್ಮೆ ಪ್ರಯತ್ನ ಮಾಡು ಅಂತ ಹೇಳ್ತಿದ್ದಿದ್ದೂ ನೀವೇ. ಅದಕ್ಕಾಗಿ ತ್ಯಾಂಕ್ಸ್.

4. ನಿಮ್ಮ ವೈಯಕ್ತಿಕ ತೊಂದರೆ ಏನೇ ಇರಲಿ, ದಿನಾ‌ ಬಂದು ನಮಗೆ ಪಾಠ ಮಾಡ್ತಾ ಇದ್ರಲ್ಲ, ಅದಕ್ಕೆ

ವೈಯಕ್ತಿಕ ತೊಂದರೆ ಯಾರಿಗಿರೋದಿಲ್ಲ? ನಿಮಗೂ‌ ಅಂತಹ ದಿನಗಳು ಇದ್ದಿರಲೇ ಬೇಕು. ಆದರೂ ನೀವು ನಮಗಾಗಿ ಬಂದು ಪಾಠ ಮಾಡ್ತಾ‌ ಇದ್ರಿ. ನಿಮ್ಮ ತೊಂದರೆಗಳು ನಮಗೆ ಗೊತ್ತೇ ಆಗದಂತೆ ಇರ್ತಾ ಇದ್ರಿ, ನಮ್ಮನ್ನ ಮೇಲೆ ಎತ್ತಿದ್ರಿ. ಅದಕ್ಕಾಗಿ ತ್ಯಾಂಕ್ಸ್.

5. ನಮ್ಮಲ್ಲಿ ನಂಬಿಕೆ ಇಟ್ಟುಕೊಂಡಿದ್ರಲ್ಲ, ಅದಕ್ಕೆ

ನಮ್ಮ ಮೇಲೆ ನಮಗೇ‌ ಕೆಲವೊಮ್ಮೆ ನಂಬಿಕೆ ಇರ್ತಾ ಇರಲಿಲ್ಲ. ಇದು ನಮ್ಮ ಕೈಯಲ್ಲಿ ಸಾಧ್ಯಾನಾ? ನಾನು ಪಾಸಾಗ್ತೀನಾ? ನಾನು ಫರ್ಸ್ಟ್ ಕ್ಲಾಸ್ ಬರ್ತೀನಾ? ನಾನು ರನ್ನಿಂಗ್ ರೇಸಲ್ಲಿ ಗೆಲ್ತೀನಾ? ಈ‌ ಪ್ರಶ್ನೆಗಳಿಂದ ಒಳಗೊಳಗೇ ನರಳುತ್ತಿದ್ದ ನಮಗೆ ನೀವು ನಮ್ಮಲ್ಲಿಟ್ಟಿದ್ದ ನಂಬಿಕೆಯೇ ದಾರಿದೀಪವಾಗಿತ್ತು. ನಿಮಗೆ ನಮ್ಮಲ್ಲಿ ನಮಗಿಂತ ಹೆಚ್ಚಿನ ನಂಬಿಕೆ ಇತ್ತು. ಅದಕ್ಕಾಗಿ ತ್ಯಾಂಕ್ಸ್.

6. "ಸರಿ ನಾ?" ಅಂತ ಕೇಳಿದಾಗ ಅಡ್ಡಗೋಡೆಯ ಮೇಲೆ ದೀಪ ಇಡದೆ ಇರುವುದು ಇದ್ದಂತೆ ಹೇಳುತ್ತಿದ್ದರಲ್ಲ, ಅದಕ್ಕೆ

ನಮ್ಮ ಬೆನ್ನು ತಟ್ಟುತ್ತಿದ್ರಿ, ನಿಜ, ಆದರೆ ಕೆಲಸ ಇನ್ನಷ್ಟು ಚೆನ್ನಾಗಿ ಅಥವ ಸರಿಯಾಗಿ ಆಗಬೇಕಾಗಿದ್ದಾಗ ಅದನ್ನ ನೇರವಾಗಿ ಹೇಳ್ತಾ‌ ಇದ್ರಿ. ಆದರೂ‌ ಮನಸ್ಸಿಗೆ ನೋವಾಗ್ತಾ ಇರಲಿಲ್ಲ. ಅದಕ್ಕೆ ತ್ಯಾಂಕ್ಸ್.

7. ಪುಂಡ ಪೋಕರಿಗಳಂತೆ ಇರ್ತಾ‌ ಇದ್ದ ನಮಗೆ ಶಿಸ್ತು ಕಲಿಸಿದಿರಲ್ಲ, ಅದಕ್ಕೆ

ಹುಡುಗತನದಲ್ಲಿ ಬಹಳ ಆಟ ಆಡ್ತಾ ಇದ್ವಿ. ಕ್ಲಾಸ್ ಬಂಕ್ ಮಾಡೋದು, ಓದದೆ ಆಟ ಆಡೋದು, ಆಟದಲ್ಲೂ‌ ಸೋಮಾರಿತನ ತೋರಿಸೋದು... ಇದೆಲ್ಲ ತುಂಬ ಮಾಡ್ತಾ ಇದ್ವಿ. ಅಂತಹ ನಮಗೆ ನೀವು ಶಿಸ್ತು ಕಲಿಸಿದಿರಲ್ಲ, ಅದಕ್ಕೆ ತ್ಯಾಂಕ್ಸ್.

8. ಕೊಟ್ಟ ಉತ್ತರವನ್ನೇ ಬೇಜಾರಿಲ್ಲದೆ ಎಷ್ಟು ಸಾರಿ ಬೇಕಾದರೂ ಕೊಡ್ತಾ ಇದ್ರಲ್ಲ, ಅದಕ್ಕೆ

ಒಮ್ಮೊಮ್ಮೆ ನೀವು ಹೇಳಿಕೊಡ್ತಾ ಇದ್ದಿದ್ದು ನಮಗೆ ಅರ್ಥ ಆಗ್ತಾ ಇರಲಿಲ್ಲ. ಅಥವಾ ನಮ್ಮ ಗಮನ ಬೇರೆಲ್ಲೋ ಇರ್ತಾ ಇತ್ತು. ಆಗ ಎಷ್ಟು ಸಾರಿ ಬೇಕಾದರೂ‌ ಬೇಜಾರಿಲ್ಲದೆ, ತಾಳ್ಮೆಯಿಂದ, ನಮಗೆ ವಿವರಿಸ್ತಾ ಇದ್ರಿ. ಅದಕ್ಕೆ ತ್ಯಾಂಕ್ಸ್.

9. ಆಗ ಓದಕ್ಕೆ ಬೇಜಾರಾಗ್ತಿದ್ದ ವಿಷಯಗಳ ಬೆಲೆ ಏನು ಅಂತ ವಿವರಿಸ್ತಾ ಇದ್ರಲ್ಲ, ಅದಕ್ಕೆ

ಸಮಾಜ ಪಾಠ (ಸೋಶಿಯಲ್ ಸ್ಟಡೀಸ್) ಅಂದ್ರೆ ವಾಕರಿಕೆ ಬರ್ತಾ ಇತ್ತು ನಮಗೆ. ಒಮ್ಮೊಮ್ಮೆ ಗಣಿತ ತುಂಬಾ ಕಷ್ಟ ಅನ್ನಿಸ್ತಾ ಇತ್ತು. ಆದರೂ‌ ಇವೆಲ್ಲದರ ಬೆಲೆ ಏನು, ಇದನ್ನ ಸುಲಭವಾಗಿ ಕಲಿಯುವುದು ಹೇಗೆ ಅಂತ ಹೇಳ್ಕೊಡ್ತಾ ಇದ್ರಿ. ನೀವು ಆಗ ಹೇಳಿಕೊಟ್ಟಿದ್ದು ಈಗಲೂ‌ ನಮ್ಮ ಜೀವನದಲ್ಲಿ ಬಹಳ ಮುಖ್ಯವಾದ ಪಾತ್ರ ವಹಸಿದೆ. ಅದಕ್ಕೆ ತ್ಯಾಂಕ್ಸ್.

10. ಕಲಿಕೆ ಅಂದರೆ ಬರೀ‌ ಪುಸ್ತಕದ ಬದನೇಕಾಯಿ ಅಲ್ಲ ಅಂತ ಕೈಯಾರೆ ತೋರಿಸಿಕೊಟ್ರಲ್ಲ, ಅದಕ್ಕೆ

ನೀವಾಗೇ ನಮ್ಮನ್ನ ಮ್ಯೂಸಿಯಂಗಳಿಗೆ, ಪ್ರವಾಸಿ ತಾಣಗಳಿಗೆ, ಫ್ಯಾಕ್ಟರಿಗಳಿಗೆ ಕರ್ಕೊಂಡು ಹೋಗ್ತಾ ಇದ್ರಿ. ಅಲ್ಲೂ ಕಲಿಕೆ ನಡೆಯಬಲ್ಲುದು ಅಂತ ತೋರಿಸ್ತಾ ಇದ್ರಿ. ಬರೀ‌ ಪುಸ್ತಕದಿಂದಲೇ ಕಲಿಕೆಯಲ್ಲ ಅಂತ ಚೆನ್ನಾಗಿ ತೋರಿಸಿಕೊಟ್ರಿ. ಅದಕ್ಕೆ ತ್ಯಾಂಕ್ಸ್.

11. ಕಾಲಕಾಲಕ್ಕೆ ನಮ್ಮ ಕಲಿಕೆ ಹೇಗೆ ನಡೀತಾ ಇದೆ ಅಂತ ತೋರಿಸಿಕೊಡ್ತಾ‌ ಇದ್ರಲ್ಲ, ಅದಕ್ಕೆ

ತಿಂಗಳಿಗೊಮ್ಮೆ ಟೆಸ್ಟು, ವರ್ಶಕ್ಕೆ ಮೂರು-ನಾಲ್ಕು ಪರೀಕ್ಷೆ ನಡೀತಾ ಇದ್ರೂ‌, ನಾವು ಅದೇನೇನು ಬರೆದರೂ‌ ಅದನ್ನೆಲ್ಲ `ನನ್ನ ಕಾಯಕ ಇದು' ಅಂತ ಎವಾಲುಯೇಟ್ ಮಾಡ್ತಾ ಇದ್ರಿ, ನಾವು ಕಲಿಕೆಯ ಹಾದಿಯಲ್ಲಿ ಎಲ್ಲಿದ್ದೇವೆ ಅಂತ ತೋರಿಸಿ ಕೊಡ್ತಾ ಇದ್ರಿ. ಅದಿಲ್ಲದೆ ಹೋಗಿದ್ರೆ ನಾವು ಎಂದಿಗೋ ದಾರಿ ತಪ್ಪಿ ಬಿಡ್ತಾ ಇದ್ವಿ. ಅದಕ್ಕೆ ತ್ಯಾಂಕ್ಸ್.

12. ಶಾಲೆ/ಕಾಲೇಜು ವೇಳೆ ಮುಗಿದ ಮೇಲೂ ನಮ್ಮ ಶಿಕ್ಷರಾಗೇ ಇರ್ತಾ ಇದ್ರಲ್ಲ, ಅದಕ್ಕೆ

ನಿಮಗೆ ನಿಜಕ್ಕೂ‌ ದಿನಕ್ಕೆ ಇಷ್ಟು ದಿನ ಮಾತ್ರ ಕೆಲಸ ಅಂತ ಇರ್ತಾ ಇರಲಿಲ್ಲ. ಮನೆಗೆ ಬಂದರೂ ಕೂಡಿಸಿ ಪಾಠ ಹೇಳ್ತಾ ಇದ್ರಿ, ನಮ್ಮ ಪ್ರಶ್ನೆಗಳಿಗೆ ಉತ್ತರ ಕೊಡ್ತಾ ಇದ್ರಿ. ಭಾನುವಾರವೂ ತಲೆ ತಿನ್ತಾ ಇದ್ವಿ, ನೀವು ತಿನ್ನಿಸಿಕೊಳ್ತಾ ಇದ್ರಿ, ನಮ್ಮನ್ನ ಬೆಳೆಸ್ತಾ ಇದ್ರಿ. ಅದಕ್ಕೆ ತ್ಯಾಂಕ್ಸ್.

13. ಕ್ಲಾಸಲ್ಲಿ ಪ್ರತಿಯೊಬ್ಬರ ಕಾಳಜಿಯೂ ನಿಮಗೆ ಇರ್ತಾ ಇತ್ತಲ್ಲ, ಅದಕ್ಕೆ

ಕ್ಲಾಸಲ್ಲಿ ಹಲವರಿಗೆ ನೀವು ಮಾಡ್ತಿದ್ದ ಪಾಠದಲ್ಲಿ ಆಸಕ್ತಿ ಇರ್ತಾ ಇರಲಿಲ್ಲ. ನಿಮಗೆ ನಿಜಕ್ಕೂ‌ ಅವರ ಜೊತೆ ಏಗೋದು ಕಷ್ಟ ಆಗ್ತಾ ಇದ್ದಿರಬೇಕು. ಆದರೂ‌ ಎಲ್ಲರ ಕಾಳಜಿಯೂ‌ ನಿಮಗೆ ಇರ್ತಾ ಇತ್ತು. 13. ಕ್ಲಾಸಲ್ಲಿ ಪ್ರತಿಯೊಬ್ಬರ ಕಾಳಜಿಯೂ ನಿಮಗೆ ಇರ್ತಾ ಇತ್ತಲ್ಲ, ಅದಕ್ಕೆ

ಕ್ಲಾಸಲ್ಲಿ ಹಲವರಿಗೆ ನೀವು ಮಾಡ್ತಿದ್ದ ಪಾಠದಲ್ಲಿ ಆಸಕ್ತಿ ಇರ್ತಾ ಇರಲಿಲ್ಲ. ನಿಮಗೆ ನಿಜಕ್ಕೂ‌ ಅವರ ಜೊತೆ ಏಗೋದು ಕಷ್ಟ ಆಗ್ತಾ ಇದ್ದಿರಬೇಕು. ಆದರೂ‌ ಎಲ್ಲರ ಕಾಳಜಿಯೂ‌ ನಿಮಗೆ ಇರ್ತಾ ಇತ್ತು. ಎಲ್ಲರನ್ನೂ‌ ಬೆಳೆಸಿದ್ರಿ. ಅದಕ್ಕೆ ತ್ಯಾಂಕ್ಸ್.

14. ಶಿಕ್ಷಣ ವ್ಯವಸ್ಥೆಯಲ್ಲಿದ್ದ ಕೆಲವು ಹುಳುಕುಗಳಿಂದ ನಮಗೆ ತೊಂದರೆಯಾಗದಂತೆ ನೋಡಿಕೊಂಡಿರಲ್ಲ, ಅದಕ್ಕೆ

ಪಠ್ಯಪುಸ್ತಕಗಳಲ್ಲಿ ಒಮ್ಮೊಮ್ಮೆ ತಪ್ಪಿರುತ್ತಿತ್ತು. ಪರೀಕ್ಷಾ ವಿಧಾನಗಳಲ್ಲಿ ತಪ್ಪಿರುತ್ತಿತ್ತು. ವಿಷಯಗಳನ್ನೇ ಒಮ್ಮೊಮ್ಮೆ ತಪ್ಪಾಗಿ ಬರೆದಿರ್ತಾ ಇದ್ರು. ಎಲ್ಲ ಸರಿಯಾಗಿದ್ದರೂ‌ ಸಮಾಜಿಕ ಕಾಳಜಿಯೇ‌ ಹೊರಟುಹೋಗುವ ಗಂಡಾಂತರ ಇರ್ತಾ ಇತ್ತು. ಈ‌ ಹುಳುಕುಗಳಿಂದ ನಮ್ಮ ಬೆಳವಣಿಗೆಗೆ ತೊಂದರೆಯಾಗದಂತೆ ನೋಡಿಕೊಳ್ತಾ‌ ಇದ್ರಿ. ಅದಕ್ಕೆ ತ್ಯಾಂಕ್ಸ್.

15. ನಾವು ಗೊತ್ತು ಅಂದುಕೊಂಡಿದ್ದು ನಿಜವಾಗಲೂ ಗೊತ್ತಾ ಅಂತ ಪ್ರಶ್ನಿಸಿಕೊಳ್ಳುವಂತೆ ಮಾಡ್ತಾ ಇದ್ರಲ್ಲ, ಅದಕ್ಕೆ

ಒಮ್ಮೊಮ್ಮೆ ನಾವೇ ಬಹಳ ಬುದ್ಧಿವಂತರು ಅಂದುಕೊಳ್ತಾ ಇದ್ದೆವು. ಎಲ್ಲಾ ಗೊತ್ತು ಅಂದುಕೊಂಡಿರುತ್ತಿದ್ದೆವು. ಆದರೆ ನಿಜಕ್ಕೂ‌ ಗೊತ್ತಾ ಅಂತ ನಾವೇ ಪ್ರಶ್ನಿಸಿಕೊಳ್ಳುವಂತೆ ಮಾಡ್ತಾ ಇದ್ರಿ. ಪ್ರಶ್ನಿಸಿಕೊಂಡಾಗ ನಮ್ಮ ಅರಿವಿನ ಹರವು ಎಷ್ಟಿದೆ ಅಂತ ನಮಗೇ ಅರ್ಥವಾಗ್ತಾ ಇತ್ತು. ಅದಕ್ಕೆ ತ್ಯಾಂಕ್ಸ್.

16. ಕೆಲಸವನ್ನು ಮನಸಾರೆ ಮಾಡೋದು ಕಲಿಸಿದರಲ್ಲ, ಅದಕ್ಕೆ

ನೀವು ಹೇಳಿಕೊಡ್ತಾ ಇದ್ದ ಪಾಠದಲ್ಲಿ ನಿಮಗೆ ಅದೆಷ್ಟು ಪ್ರೀತಿ ಇರ್ತಾ ಇತ್ತು! ಎಷ್ಟು ಮನಸಾರೆ ಮಾಡ್ತಾ ಇದ್ರಿ! ಅದರಿಂದ ನಾವು ಮನಸಾರೆ ಕೆಲಸ ಮಾಡೋದು ಕಲಿತ್ವಿ, ಪ್ರೀತಿಯಿಂದ ಮಾಡೋದು ಕಲಿತ್ವಿ, ಇವೆರಡೂ‌ ಯಾವ ಕೆಲಸದಲ್ಲಿ ನಮಗೆ ಸಿಗುತ್ತೆ ಅಂತ ಹುಡುಕಿಕೊಳ್ಳೋದು ಕಲಿತ್ವಿ. ಅದಕ್ಕೆ ತ್ಯಾಂಕ್ಸ್.

17. ನಮ್ಮ ಜೀವನವನ್ನ ರೂಪಿಸಿದರಲ್ಲ, ಅದಕ್ಕೆ

ನಮ್ಮ ಜೀವನದಲ್ಲಿ ನಿಮ್ಮ ಪ್ರಭಾವ ಎಂದಿಗೂ‌ ಮರೆಯಕ್ಕಾಗಲ್ಲ. ನೀವು ಮಾಡಿದ ಪಾಠ, ಮಾಡುವ ಶೈಲಿ, ಕಲಿಸೇ ತೀರಬೇಕೆಂಬ ನಿಮ್ಮ ಎಡೆಬಿಡದ ಪ್ರಯತ್ನ - ಇವೆಲ್ಲವೂ‌ ನಮ್ಮ ಜೀವನವನ್ನು ರೂಪಿಸಿವೆ. ಆಗ ನಮಗೆ ಗೊತ್ತಾಗ್ತಾ ಇರಲಿಲ್ಲ, ಆದರೆ ಈಗ ಚೆನ್ನಾಗಿ ಗೊತ್ತಾಗುತ್ತದೆ: ನೀವು ನಮ್ಮ ಶಿಕ್ಷಕರಾಗದೆ ಹೋಗಿದ್ದರೆ ನಾವು ಈ ಮಟ್ಟಕ್ಕೆ ಬೆಳೀತಾ‌ ಇರಲಿಲ್ಲ. ಅದಕ್ಕೆ ತ್ಯಾಂಕ್ಸ್.

ನಾವು ನಿಮಗೆ ಎಂದೆಂದಿಗೂ‌ ಋಣಿಯಾಗಿರುತ್ತೇವೆ ಸಾರ್, ಮೇಡಂ...

ಸುಳ್ಳೂರ ಶಾಲೆಯಲ್ಲಿ ಪಾಲಕರಿಂದ ಸ್ವಚ್ಛತಾ ಸಪ್ತಾಹ

ಊರಿನ ಗ್ರಾಮಸ್ಥರಿಂದ ಸುಳ್ಳೂರು ಶಾಲೆಯಲ್ಲಿ ಸ್ವಚ್ಛತಾ ಸಪ್ತಾಹ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸುಳ್ಳೂರಿನ ಹಿರಿಯ ವಿದ್ಯಾರ್ಥಿಗಳು , ಪಾಲಕರೆಲ್ಲರೂ ಸೇರ...