ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Saturday 30 April 2016

ಗುಬ್ಬಿಯ ಮನವಿ

ಗುಬ್ಬಿಯ ಮನವಿ

ಬಾಯಿ ಆರಿದೆ
ದೇಹ ದಣಿದಿದೆ
ಸಾವೇ  ಬಂದು ಕೇಕೆ ಹಾಕುತಿದೆ
ನೋವೇ ಗೂಡಲಿ  ಟಿಕಾಣಿ ಹೂಡಿದೆ..
ಗುಟುಕು ನೀರು ಕೊಡಿ ತಾಯಿ..
ಮರಿ ಗುಬ್ಬಿಗಳೆಲ್ಲಾ ಗೂಡಲೇ ಬೆಂದಿವೆ ತಾಯೀ...
ನರಮಾನವ ಹೇಗೋ ಬದುಕುಳಿಯುವನು
ಧರೆಯೆಲ್ಲಾ ಉರಿದರು ಬುದ್ಧಿ ಕಲಿಯನು
ವಿಲಾಸಿ ಬದುಕಿಗೆ ದಾಸನಾಗಿ
ವಿನಾಶದೂರಿಗೆ ಹೊರಟಿಹನು..
ವಿಶ್ವಾಪುರದ ನೆಮ್ಮದಿ ಕದಡಿ
ವನ್ಯಜೀವಿಗಳ  ಸಂಕುಲವ ಸಂಕಟಕ್ಕೆ ದೂಡಿ
ಧರೆಯೆಲ್ಲಾ  ಶಕೆಯಲಿ ಬೆವರಿ ಬಸವಳಿದಿಹುದು
ಎಚ್ಚರವಾಗದೇನು ನಾಗರೀಕ ನರನೇ.?
ಧರೆ ಉಳಿಯದಿರೆ ನಿನ್ನ ಯಂತ್ರ ತಂತ್ರ
ಉಳಿಸವು ನಿನ್ನ ಜೀವನ ಸೂತ್ರ
ಜಪಿಸು ಬೇಗ ಹಸಿರು ಮಂತ್ರ
ಮತ್ತೆ ಧರೆಯೆಲ್ಲೆಡೆ ಬರಲಿ ನಿತ್ಯ ಚೈತ್ರ-ವರ್ಷ.
ರವಿರಾಜ್ ಸಾಗರ್.

ಗುಬ್ಬಿಯ ಮನವಿ

ಗುಬ್ಬಿಯ ಮನವಿ

ಬಾಯಿ ಆರಿದೆ
ದೇಹ ದಣಿದಿದೆ
ಸಾವೇ  ಬಂದು ಕೇಕೆ ಹಾಕುತಿದೆ
ನೋವೇ ಗೂಡಲಿ  ಟಿಕಾಣಿ ಹೂಡಿದೆ..
ಗುಟುಕು ನೀರು ಕೊಡಿ ತಾಯಿ..
ಮರಿ ಗುಬ್ಬಿಗಳೆಲ್ಲಾ ಗೂಡಲೇ ಬೆಂದಿವೆ ತಾಯೀ...
ನರಮಾನವ ಹೇಗೋ ಬದುಕುಳಿಯುವನು
ಧರೆಯೆಲ್ಲಾ ಉರಿದರು ಬುದ್ಧಿ ಕಲಿಯನು
ವಿಲಾಸಿ ಬದುಕಿಗೆ ದಾಸನಾಗಿ
ವಿನಾಶದೂರಿಗೆ ಹೊರಟಿಹನು..
ವಿಶ್ವಾಪುರದ ನೆಮ್ಮದಿ ಕದಡಿ
ವನ್ಯಜೀವಿಗಳ  ಸಂಕುಲವ ಸಂಕಟಕ್ಕೆ ದೂಡಿ
ಧರೆಯೆಲ್ಲಾ  ಶಕೆಯಲಿ ಬೆವರಿ ಬಸವಳಿದಿಹುದು
ಎಚ್ಚರವಾಗದೇನು ನಾಗರೀಕ ನರನೇ.?
ಧರೆ ಉಳಿಯದಿರೆ ನಿನ್ನ ಯಂತ್ರ ತಂತ್ರ
ಉಳಿಸವು ನಿನ್ನ ಜೀವನ ಸೂತ್ರ
ಜಪಿಸು ಬೇಗ ಹಸಿರು ಮಂತ್ರ
ಮತ್ತೆ ಧರೆಯೆಲ್ಲೆಡೆ ಬರಲಿ ನಿತ್ಯ ಚೈತ್ರ-ವರ್ಷ.
ರವಿರಾಜ್ ಸಾಗರ್.

Monday 4 April 2016

ಮೌನಿಯ ಒಲವು

ಮೌನಿಯ ಒಲವು..
......................
ಇನ್ನೂ ... ಇನ್ನೇನು ಹೇಳಲಿ...
ಈ ಮೌನವೇ ಎಲ್ಲಾ ಹೇಳಿದೇ..
        ಸುಮ್ಮನಿರುವ ಸೊನ್ನೆ ನಾನು
         ಸುಮ್ಮನೆ ಒಂದಾಗಿ ಜೊತೆಯಿರು ಬೆಲೆಯಿದೆ.
ಅಲೆಯೋ ಕಡಲಲೆಗಳ ಎಣಿಸು ..
ನನ್ನೊಡನೇ  ಇನ್ನೂ ಇದ್ದರೆ ಮುನಿಸು
ದೂರ ಕೂರಬೇಡ..
ಸುಮ್ಮನೆ ಕಣ್ಣಲಿ ಗಾಳ ಹಾಕೆನು.
ಕಾಳು ಚೆಲ್ಲಬೇಡ.
ಒಲವ ಹಸಿವಿದೆ...
ಬಿಕ್ಷೆ ಬೇಡದ ಸ್ವಾಭಿಮಾನಿ ನಾ
ನೀನೇ ಉಪಚರಿಸು.
ನನಗೆ ಒಂದಿಷ್ಟು ಕನಸು ಕಳಿಸು.

ಗಿಜಿಗುಡುವ ಜನರ ನಡುವೆ ಎದೆಯಲಿ
ನಿನ್ನ ಧನಿಯದೇ ನಿಲ್ಲದ ಕಲರವ
ಗುನು ಗುನುಗುವ ಒಲವಾ ಗುಂಗಲೂ
ನಿನಗಾಗಿಯೆ ಕಲಿತೇ ಸಕಲವ.
ಒಲವಾ ಗುರುಕುಲದ ಬಾಗಿಲು ತೆರೆಯೇ
ಹೆಬ್ಬೆರಳು ನೀಡುವ ತ್ಯಾಗಿಯಲ್ಲ ...
ಸ್ವಾರ್ಥಿ ನಾ ನಿನ್ನ ಪ್ರೀತಿಗೇ...
ನನ್ನೊಲವೇ ಧಕ್ಷಿಣೇ ನಿನಗೇ.....

( ಶೀಘ್ರವೇ "ಬಾವಬಂಡಿ" ಬಾವಸಂಕಲನ ಬಿಡುಗಡೆ. )

Saturday 2 April 2016

ಸಾಮಾಜಿಕ ಜಾಲತಾಣಗಳಲಿ ಸಾಹಿತ್ಯ ಕೃಷಿ

ಸಾಮಾಜಿಕ ಜಾಲತಾಣಗಳಲಿ ಸಾಹಿತ್ಯ ಕೃಷಿ
........................................
ಕಾವ್ಯ ವಿಷಯ ವಸ್ತುವನ್ನು ಹೆಚ್ಚು ಸಂಕೀರ್ಣವಾಗಿ, ಸೂಚ್ಯವಾಗಿ.ನುಡಿಗಟ್ಟುಗಳಲಿ ಅಡಗಿಸಿ ಒಗಟಾಗಿಸಿ ಕಾವ್ಯದ ಕುಸುರಿ ಕೆಲಸ  ನಡೆಯಬೇಕು ಎಂದು ಹೇಳುವ ಹಾಗು ಅಂತಹುದು ಮಾತ್ರ ಶ್ರೇಷ್ಠ  ಕಾವ್ಯ ಎನ್ನುವ ಸಾಹಿತ್ಯ ಪಂಡಿತರು ಇಂದಿನ ಯುವ ಜನಾಂಗದ ಕಾಲ, ಅಭಿರುಚಿ, ಭಾಷೆಯ ಆಳ ಅರಿವು , ಅನಿವಾರ್ಯತೆಯನ್ನೂ  ಗಮನಿಸಿ ಪ್ರಸ್ತುತ ಕಾವ್ಯರಚನೆಯ ಮಾರ್ಗದಲ್ಲಿ ಆಗಬೇಕಾದ ಬದಲಾವಣೆ ಪ್ರಕ್ರಿಯೆ ಪಲ್ಲಟಗಳ ಬಗ್ಗೆಯೂ ಚಿಂತನೆ ನಡೆಸಬೇಕಿದೆ.ಸೂಕ್ತ ಮಾರ್ಗೋಪಾಯ ಕಂಡುಕೊಂಡು ಯುವಕರನ್ನು ಸಾಹಿತ್ಯ ಕೃಷಿಗೆ ಸೆಳೆಯಬೇಕಿದೆ. ಸಮೂಹೋಪಾದಿಯಲಿ ಸಾಗಬೇಕಿದೆ .ಆಗ ಸಾಹಿತ್ಯ ಕೃತಿಗಳು  ಗೆದ್ದಲಿನಿಂದ , ದೂಳಿನಿಂದ ರಕ್ಷಣೆ ಪಡೆಯುತ್ತವೆ.
       ಹಲವಾರು ಭಾಷೆ ಕಲಿವ
( ಇಂಗ್ಲಿಷ್ ಅಂತೂ ಅನಿವಾರ್ಯ) ಅಗತ್ಯ ಇರುವ ಇಂದು ಯಾವ ಭಾಷೆಯನ್ನೂ ಆಳವಾಗಿ ಅಧ್ಯಯನ ಮಾಡುವ ಗೊಡವೆಗೆ ಹೋಗದವರೆ ಹೆಚ್ಚಿನವರಿದ್ದು ಡಿಕ್ಷನರಿ ತೆಗೆದು ಅರ್ಥ ಹುಡುಕಿ ಕಾವ್ಯ ಆಸ್ವಾದಿಸುವ ಕವಿಮನಸುಗಳು ಕಡಿಮೆಯಾಗುತಿದ್ದು ಮನರಂಜನೆಗೆ.. ಸಮಯಕಳೆಯಲು ಹಲವು ಮಾಧ್ಯಮಗಳು,  ಕ್ರೀಡೆಗಳು ಬರಸೆಳೆದು ಕರೆವ ಆಕರ್ಷಕತೆ , ಪ್ರಭಾವ ಬೀರುತ್ತಿರುವ ದಿನಗಳಲ್ಲಿ  ಅತಿ ಸಂಕೀರ್ಣ ಸೂಚ್ಚ ಸಾಹಿತ್ಯ ರಚನೆ ಕೆಲವೇ ಪಂಡಿತೋತ್ತಮರಿಂದ ಪಂಡಿತೋತ್ತಮರಿಗಾಗಿ ಎನಿಸಿಬಿಟ್ಟಿದೆ.
ಹಾಗಾಗಿ  ಸರಳ ಲಾಲಿತ್ಯದ  ,ಜನಬಳಕೆಯ  ಸರಳ ನುಡಿಗಟ್ಟುಗಳ, ಇಂದು ಹೆಚ್ಚು ಬಳಕೆಯಲ್ಲಿರುವ  ಪದಗಳ ಬಳಕೆ ಒಳಗೊಂಡ ಸಾಹಿತ್ಯ ಕೃತಿಗಳನ್ನು ಹೆಚ್ಚು ಪ್ರೋತ್ಸಾಹಿಸಬೇಕಿದೆ. ಸಾಹಿತ್ಯ ಕೃತಿಗಳ ಹೆಚ್ಚಿನ ಬಳಕೆ ಬದಲಾವಣೆಗೆ
ಸಾಹಿತ್ಯ ಕ್ಷೇತ್ರ ತೆರೆದುಕೂಳುವ ದಿನಗಳನ್ನು ಹಿರಿಯರು ಸ್ವಾಗತಿಸಬೀಕಿದೆ.
ಅಂತರ್ಜಾಲ ತಾಣದ ಸಾಹಿತ್ಯ ಕೃಷಿಯನ್ನು ಲಘುವಾಗಿ ಪರಿಗಣಿಸದೆ ಹೊಸ ವಿಸ್ತರಣೆ, ಸಾಧ್ಯತೆ ಬಗ್ಗೆ  ಮಾರ್ಗದರ್ಶನ ,ಮಾರ್ಗೋಪಾಯ ನೀಡಬೇಕಿದೆ.
ನಿಮ್ಮವ  - ರವಿರಾಜ್ ಸಾಗರ್.
9980952630

Thursday 31 March 2016

ಹಣ, ಹೆಂಡ ಕೊಡಿ ಎಂದು ಬೇಡಿದವರಾರು..?

ಯಾವ ಬಡವನೂ ಹಣ ಕೊಡಿ. ಹೆಂಡ ಕೊಡಿ ಎಂದು ಯಾವ ರಾಜಕಾರಣಿಗಳ ಮನೆಗೂ ಹೋಗಲಿಲ್ಲ . ರಾಜಕೀಯ ಪಕ್ಷಗಳ ಮುಖಂಡರ ಸ್ಪರ್ಧಾ ವ್ಯವಸ್ಥೆ  ಗೆಲ್ಲುಲು ಜನಸಾಮಾನ್ಯರ ಅಸಹಾಯಕತೆ,ಹಸಿವು,   ಅವಿವೇಕತೆ ಬಳಸಿಕೊಂಡು  ಇಡೀ  ಜನಸಾಮಾನ್ಯರ ಸಮೂಹವನ್ನು  ತಮ್ಮ  ವೃತ್ತದೊಳಗೆ ಸಿಲುಕಿಸಿದರು . ( ಅಂದಿನವ ರಾಜಪ್ರಭುತ್ವದ ಕಾಲ  ಇನ್ನೂ ಶೋಚನೀಯ ಹಂತದಲ್ಲಿತ್ತು)
. ಪ್ರಜಾಪ್ರಬುತ್ವ  ಬಂದಮೇಲೆ ಜನಸಾಮಾನ್ಯರ ಉದ್ದಾರದ  ಹೆಸರಲ್ಲಿ  ಯಾವುದೇ ಆರ್ಥಿಕ ಮೂಲಗಳಿರದ   ಬಡತನದ... ಅಶಿಕ್ಷಿತ ಶ್ರೀ ಸಾಮಾನ್ಯರತ್ತ  ಕೈ ಚಾಚಿ ತಾವು ಮೇಲೇ ನಿಂತು ಭೂ ಸಂಪತ್ತನ್ನು ತಮ್ಮಲ್ಲಿ  ಉಳಿಸಿಕೊಂಡರು. ಕೆಲವರು ಭಾಷಣ  ಬಿಗಿದರು. ಬರಹಗಾರರು... ದೊಡ್ಡ ದೊಡ್ಡ ಪುಸ್ತಕ ಬರೆದರು. ಕೆಲವರುಬಡ ಬಡವರ ಸೇವೆ ಮಾಡಿ ಗುಡಿಯೋಳಗೆ ದೇವರಾಗಿ ಬಂಧಿ ಆದರು.  ಕೆಲವೇ ಶ್ರಮಿಕರು ಬುದ್ಧಿ ಬಲದಿಂದ ಮೇಲೆ ಬಂದರು.. ತುಂಡು ಭೂಮಿಯಿಲ್ಲದೇ ದುಡಿವ ಕಠಿಣ ಶ್ರಮಿಕ  ಜಾತಿಗಳು ಎಷ್ಟು ದುಡಿದರೂ ಅಷ್ಟೇ ಅನ್ನುವ ವ್ಯವಸ್ಥೆ ಹೆಣೆಯಲಾಯಿತು. ಅಸಹಾಯಕ ಸ್ಥಿತಿಯ ಅವರು    ಶತ ಶತಮಾನಗಳಿಂದ ಹಾಗೇ ಉಳಿವಂತ ಆರ್ಥಿಕ ಸ್ಥಿತಿ ಹೇರಲಾಗಿದೆ.  ಈ ಭೂಮಿ..ಇಲ್ಲಿಯ ಬಹುತೇಕ ಸಂಪತ್ತು  ಮೇಲ್ವರ್ಗದವರ ಹಿಡಿತದಲ್ಲೇ ಉಳಿದಿದೆ. ಭೂಮಿಯ ಮೇಲೆ ಖಾಸಗಿ ಒಡೆತನದ ಪರಿಕಲ್ಪನೆಯೇ ಈ ಅಸಮತೋಲನಕೆ ಕಾರಣ. ನೈಸರ್ಗಿಕ ವಿರೋಧ ಪ್ರಕ್ರಿಯೆ ಅದು. ಆಸ್ತಿ , ಭೂಮಿ ಮೇಲೆ ನಿರಂತರವಾಗಿ ತಲೆಮಾರಿನಿಂದ ತಲೆಮಾರಿಗೆ ಖಾಸಗಿ ಒಡೆತನದ ಹಕ್ಕು ನೀಡುವ ಪ್ರಕ್ರಿಯೆ ನಿಂತಂದು ಜಗತ್ತಿನ ಬಹುತೇಕ  ಸಮಸ್ಯೆಗೆ ಪರಿಹಾರ ಸಿಗಲಿದೆ.  ಯಾರೂ ಅತಿಯಾಗಿ ಆಸ್ತಿ ಕೊಡಿಡುವ ಕೆಲಸ ಮಾಡರು. ಆಗ ಭ್ರಷ್ಟಾಚಾರ,  ಆಸ್ತಿ ಕೂಡಿಡುವ ಪೈಪೋಟಿ ಕಡಿಮೆಯಾಗಿ ಸಾಮಾನ್ಯರಿಗೂ ಒಂದಿಷ್ಟು ಭೂಮಿ, ಆರ್ಥಿಕ ಮೂಲಗಳ ಸುಲಭ ಲಭ್ಯತೆ.. ಎಲ್ಲರಂತೆ ಬದುಕುವ ವ್ಯವಸ್ಥೆಗೆ ದಾಪುಗಾಲಿಡುವರು. ಸರ್ಕಾರದ ಭಾಗ್ಯಗಳ ಮೇಲೆ ನಿರೀಕ್ಷೆ ಕಡಿಮೆಯಾಗಿ ಆರ್ಥಿಕವಾಗಿ  ಅಸಮತೋಲನವಲ್ಲದ  ಸಹಬಾಳ್ವೆಯ ಸಮಾಜ ತಂತಾನೆ ಬೆಳೆಯುತ್ತದೆ ಎನ್ನುವುದು ನನ್ನ ಅಭಿಮತ. - ರವಿರಾಜ್ ಸಾಗರ್.

Tuesday 29 March 2016

ರವಿರಾಜ ಮಾರ್ಗದ ಮೈಲಿಗಲ್ಲುಗಳು...

ಅವಸರದ ಪ್ರಯಾಣ
ಅಪಘಾತಕೆ ಕಾರಣವಾದೀತು...
ಅವಸರದಿ ಗೀಚಿ
ಪತ್ರಿಕೆಗೆ ಕಳಿಸಿದರೆ
ಕಸದ ಬುಟ್ಟಿಗೆ ಸೇರೀತು...
ಎಚ್ಚರವೆಂದ ರವಿರಾಜ ಮಾರ್ಗ.

ಜಗದ ವ್ಯವಸ್ಥೆಯಲಿ ಈಜುವಾಗ
ಭ್ರಷ್ಟಾಚಾರದ ಕೆಸರು ಪಾದಕಂಟದೇ ಬಿಡದು.

ನಿನ್ನ ನಾಲಗೆ ಸುಮ್ಮನಿದ್ದರೂ
ಜಗದ ಜನರ ನಾಲಗೆ ನಿನ್ನ ಬಿಡದು.

ಒಳ್ಳೆಯ ಮರ ಕಂಡರೆ ಎಲ್ಲರಿಗೂ ಇಷ್ಟ. ..
ನೆರಳಲಿ ಕೂತು....
ಕಾಂಡವನ್ನೇ ಕಡಿದೊಯ್ದು
ಬಿಸಿಲೆಂದು ಪೇಚಾಡುವರು.

Wednesday 23 March 2016

ಹಿಂಗೂ ಬರೀಬಹುದಾ...

ಕಚ್ಚಿದ ಇರುವೆಯ ಕಚ್ಚಲಾರೆ...
ಚುಚ್ಚಿದ ಮುಳ್ಳನು ಚುಚ್ಚಲಾರೆ..
ಸ್ವಲ್ಪ ಒಳ್ಳೆ ಹುಡುಗ ನಾನು.
ದಯೆಯೇ ಧರ್ಮ ಅಲ್ಲವೇನು..?
      -ರವಿರಾಜ ಮಾರ್ಗ.
ರವಿರಾಜ್ ಸಾಗರ್,