ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Saturday 30 April 2016

ಗುಬ್ಬಿಯ ಮನವಿ

ಗುಬ್ಬಿಯ ಮನವಿ

ಬಾಯಿ ಆರಿದೆ
ದೇಹ ದಣಿದಿದೆ
ಸಾವೇ  ಬಂದು ಕೇಕೆ ಹಾಕುತಿದೆ
ನೋವೇ ಗೂಡಲಿ  ಟಿಕಾಣಿ ಹೂಡಿದೆ..
ಗುಟುಕು ನೀರು ಕೊಡಿ ತಾಯಿ..
ಮರಿ ಗುಬ್ಬಿಗಳೆಲ್ಲಾ ಗೂಡಲೇ ಬೆಂದಿವೆ ತಾಯೀ...
ನರಮಾನವ ಹೇಗೋ ಬದುಕುಳಿಯುವನು
ಧರೆಯೆಲ್ಲಾ ಉರಿದರು ಬುದ್ಧಿ ಕಲಿಯನು
ವಿಲಾಸಿ ಬದುಕಿಗೆ ದಾಸನಾಗಿ
ವಿನಾಶದೂರಿಗೆ ಹೊರಟಿಹನು..
ವಿಶ್ವಾಪುರದ ನೆಮ್ಮದಿ ಕದಡಿ
ವನ್ಯಜೀವಿಗಳ  ಸಂಕುಲವ ಸಂಕಟಕ್ಕೆ ದೂಡಿ
ಧರೆಯೆಲ್ಲಾ  ಶಕೆಯಲಿ ಬೆವರಿ ಬಸವಳಿದಿಹುದು
ಎಚ್ಚರವಾಗದೇನು ನಾಗರೀಕ ನರನೇ.?
ಧರೆ ಉಳಿಯದಿರೆ ನಿನ್ನ ಯಂತ್ರ ತಂತ್ರ
ಉಳಿಸವು ನಿನ್ನ ಜೀವನ ಸೂತ್ರ
ಜಪಿಸು ಬೇಗ ಹಸಿರು ಮಂತ್ರ
ಮತ್ತೆ ಧರೆಯೆಲ್ಲೆಡೆ ಬರಲಿ ನಿತ್ಯ ಚೈತ್ರ-ವರ್ಷ.
ರವಿರಾಜ್ ಸಾಗರ್.

No comments:

Post a Comment