ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Friday, 13 May 2016

ಕೇಳೇ ಸಖೀ

ಕೇಳೇ ಸಖೀ... ಕನಸುಗಳೂರಿನ ಪರಿಶ್ರಮಿ ನಾನು ಮನಸಿದ್ದರೆ ಸಹಬಾಳ್ವೆಗೆ ಜೊತೆಯಾಗು ನೀನೂ ಮಿತಿಯಿಲ್ಲದ ಆಸೆಗಳ ಬೆನ್ನೇರೆನು ನಾನೂ ಸರಳ ಬದುಕಲ್ಲೇ ಸಂತೋಷ ಇಲ್ಲವೇನು..? ಕೊಂಡಷ್ಟೂ ಮುಗಿಯದ ಮಾರುಕಟ್ಟೆ ಒಡಲು ಕೊನೆಗಾಣದ ಅಸೆಗಳ ಮುಗಿಲು ಯಾಕೊ ಏನೂ ಈಗೀಗ ದಿಗಿಲು ಶಾಂತವಾಗುತಿಲ್ಲ ಮನದ ಕಡಲು. ಕತ್ತಲಲಿ ಕರಿಮಣಿಯ ಕಟ್ಟಿದವ ನಾನಲ್ಲ ಕತ್ತುಒಡ್ಡಿದ ಮೇಲೆಯೇ ಕಿರುಬೆರಳು ಹಿಡಿದೆನಲ್ಲೇ.. ಕಾಯಾ ವಾಚಾ ಮನಸಾ ನೀನೆ ನನ್ನ ನಲ್ಲೇ ಸಮಯ ಕೆಟ್ಟರೂನು ಇರುವೆ ನಿನ್ನಲ್ಲೇ ಬದುಕಿನ ಫರೀಕ್ಷೆಗಳಲಿ ಪಾಸಾಗು ಬಾ ನಲ್ಲೇ ಹಗಲಿಗಂಜಿದ ಚುಕ್ಕಿಗಳು ನಲಿದಿವೆ ಕತ್ತಲಾ ಬಾನಲ್ಲೇ ಒಲವೇ ಜೀವನ ಸಾಕ್ಷಾತ್ಕಾರ ಸ್ವಲ್ಪ ಇರಲಿ ಲೆಕ್ಕಾಚಾರ. ಒಲವಿಗೂ ತಪ್ಪೊಲ್ಲ ಗ್ರಹಚಾರ ನಾವೇ ಅರಿಯಬೇಕು ವಿಚಾರ-ಆಚಾರ ನಾಳೆ ಅನ್ನೊದು ಅಗೋಚರ ಆದರೂ ಕಟ್ಟೋಣ ಕನಸುಗಳ ಗೋಪುರ ಅಲ್ಲಿ ರಾಜಾ ರಾಣಿ ಪಟ್ಟ ನಮಗೆ ನಿರಂತರ ಸಹನೆಯಿಂದಲೇ ಸಹಬಾಳ್ವೆಯ ಸಂಸಾರ. ಕೊನೇ ಮಾತು ಕೇಳೇ ಸಖೀ ನಿನ್ನಿಂದಲೇ ನಾನು ಪರಮಸುಖೀ. ( " ಅವಳ ಡೈರಿಯ ಗೆದ್ದಲು ನೆಕ್ಕಿದ ಸಾಲುಗಳು".. ಕವನ ಸಂಕಲನ ದಿಂದ )

No comments:

Post a Comment

ಮಕ್ಕಳ ಮನೆ ಮನೆಗೆ marks rigister app

📱 'ಮಾರ್ಕ್ಸ್ ರಿಜಿಸ್ಟರ್' (Marks Register) ಆ್ಯಪ್ !!   ಶಿಕ್ಷಕರ ಶ್ರಮಕ್ಕೆ ತಂತ್ರಜ್ಞಾನದ ಆಸರೆ! ಶಿಕ್ಷಕರ ಕೆಲಸ ಇಂದು ಮುಂಚಿನಂತಿಲ್ಲ. ಬದಲಾಗುತ್ತಿರುವ...