ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Saturday 2 April 2016

ಸಾಮಾಜಿಕ ಜಾಲತಾಣಗಳಲಿ ಸಾಹಿತ್ಯ ಕೃಷಿ

ಸಾಮಾಜಿಕ ಜಾಲತಾಣಗಳಲಿ ಸಾಹಿತ್ಯ ಕೃಷಿ
........................................
ಕಾವ್ಯ ವಿಷಯ ವಸ್ತುವನ್ನು ಹೆಚ್ಚು ಸಂಕೀರ್ಣವಾಗಿ, ಸೂಚ್ಯವಾಗಿ.ನುಡಿಗಟ್ಟುಗಳಲಿ ಅಡಗಿಸಿ ಒಗಟಾಗಿಸಿ ಕಾವ್ಯದ ಕುಸುರಿ ಕೆಲಸ  ನಡೆಯಬೇಕು ಎಂದು ಹೇಳುವ ಹಾಗು ಅಂತಹುದು ಮಾತ್ರ ಶ್ರೇಷ್ಠ  ಕಾವ್ಯ ಎನ್ನುವ ಸಾಹಿತ್ಯ ಪಂಡಿತರು ಇಂದಿನ ಯುವ ಜನಾಂಗದ ಕಾಲ, ಅಭಿರುಚಿ, ಭಾಷೆಯ ಆಳ ಅರಿವು , ಅನಿವಾರ್ಯತೆಯನ್ನೂ  ಗಮನಿಸಿ ಪ್ರಸ್ತುತ ಕಾವ್ಯರಚನೆಯ ಮಾರ್ಗದಲ್ಲಿ ಆಗಬೇಕಾದ ಬದಲಾವಣೆ ಪ್ರಕ್ರಿಯೆ ಪಲ್ಲಟಗಳ ಬಗ್ಗೆಯೂ ಚಿಂತನೆ ನಡೆಸಬೇಕಿದೆ.ಸೂಕ್ತ ಮಾರ್ಗೋಪಾಯ ಕಂಡುಕೊಂಡು ಯುವಕರನ್ನು ಸಾಹಿತ್ಯ ಕೃಷಿಗೆ ಸೆಳೆಯಬೇಕಿದೆ. ಸಮೂಹೋಪಾದಿಯಲಿ ಸಾಗಬೇಕಿದೆ .ಆಗ ಸಾಹಿತ್ಯ ಕೃತಿಗಳು  ಗೆದ್ದಲಿನಿಂದ , ದೂಳಿನಿಂದ ರಕ್ಷಣೆ ಪಡೆಯುತ್ತವೆ.
       ಹಲವಾರು ಭಾಷೆ ಕಲಿವ
( ಇಂಗ್ಲಿಷ್ ಅಂತೂ ಅನಿವಾರ್ಯ) ಅಗತ್ಯ ಇರುವ ಇಂದು ಯಾವ ಭಾಷೆಯನ್ನೂ ಆಳವಾಗಿ ಅಧ್ಯಯನ ಮಾಡುವ ಗೊಡವೆಗೆ ಹೋಗದವರೆ ಹೆಚ್ಚಿನವರಿದ್ದು ಡಿಕ್ಷನರಿ ತೆಗೆದು ಅರ್ಥ ಹುಡುಕಿ ಕಾವ್ಯ ಆಸ್ವಾದಿಸುವ ಕವಿಮನಸುಗಳು ಕಡಿಮೆಯಾಗುತಿದ್ದು ಮನರಂಜನೆಗೆ.. ಸಮಯಕಳೆಯಲು ಹಲವು ಮಾಧ್ಯಮಗಳು,  ಕ್ರೀಡೆಗಳು ಬರಸೆಳೆದು ಕರೆವ ಆಕರ್ಷಕತೆ , ಪ್ರಭಾವ ಬೀರುತ್ತಿರುವ ದಿನಗಳಲ್ಲಿ  ಅತಿ ಸಂಕೀರ್ಣ ಸೂಚ್ಚ ಸಾಹಿತ್ಯ ರಚನೆ ಕೆಲವೇ ಪಂಡಿತೋತ್ತಮರಿಂದ ಪಂಡಿತೋತ್ತಮರಿಗಾಗಿ ಎನಿಸಿಬಿಟ್ಟಿದೆ.
ಹಾಗಾಗಿ  ಸರಳ ಲಾಲಿತ್ಯದ  ,ಜನಬಳಕೆಯ  ಸರಳ ನುಡಿಗಟ್ಟುಗಳ, ಇಂದು ಹೆಚ್ಚು ಬಳಕೆಯಲ್ಲಿರುವ  ಪದಗಳ ಬಳಕೆ ಒಳಗೊಂಡ ಸಾಹಿತ್ಯ ಕೃತಿಗಳನ್ನು ಹೆಚ್ಚು ಪ್ರೋತ್ಸಾಹಿಸಬೇಕಿದೆ. ಸಾಹಿತ್ಯ ಕೃತಿಗಳ ಹೆಚ್ಚಿನ ಬಳಕೆ ಬದಲಾವಣೆಗೆ
ಸಾಹಿತ್ಯ ಕ್ಷೇತ್ರ ತೆರೆದುಕೂಳುವ ದಿನಗಳನ್ನು ಹಿರಿಯರು ಸ್ವಾಗತಿಸಬೀಕಿದೆ.
ಅಂತರ್ಜಾಲ ತಾಣದ ಸಾಹಿತ್ಯ ಕೃಷಿಯನ್ನು ಲಘುವಾಗಿ ಪರಿಗಣಿಸದೆ ಹೊಸ ವಿಸ್ತರಣೆ, ಸಾಧ್ಯತೆ ಬಗ್ಗೆ  ಮಾರ್ಗದರ್ಶನ ,ಮಾರ್ಗೋಪಾಯ ನೀಡಬೇಕಿದೆ.
ನಿಮ್ಮವ  - ರವಿರಾಜ್ ಸಾಗರ್.
9980952630

No comments:

Post a Comment