ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Thursday 31 March 2016

ಹಣ, ಹೆಂಡ ಕೊಡಿ ಎಂದು ಬೇಡಿದವರಾರು..?

ಯಾವ ಬಡವನೂ ಹಣ ಕೊಡಿ. ಹೆಂಡ ಕೊಡಿ ಎಂದು ಯಾವ ರಾಜಕಾರಣಿಗಳ ಮನೆಗೂ ಹೋಗಲಿಲ್ಲ . ರಾಜಕೀಯ ಪಕ್ಷಗಳ ಮುಖಂಡರ ಸ್ಪರ್ಧಾ ವ್ಯವಸ್ಥೆ  ಗೆಲ್ಲುಲು ಜನಸಾಮಾನ್ಯರ ಅಸಹಾಯಕತೆ,ಹಸಿವು,   ಅವಿವೇಕತೆ ಬಳಸಿಕೊಂಡು  ಇಡೀ  ಜನಸಾಮಾನ್ಯರ ಸಮೂಹವನ್ನು  ತಮ್ಮ  ವೃತ್ತದೊಳಗೆ ಸಿಲುಕಿಸಿದರು . ( ಅಂದಿನವ ರಾಜಪ್ರಭುತ್ವದ ಕಾಲ  ಇನ್ನೂ ಶೋಚನೀಯ ಹಂತದಲ್ಲಿತ್ತು)
. ಪ್ರಜಾಪ್ರಬುತ್ವ  ಬಂದಮೇಲೆ ಜನಸಾಮಾನ್ಯರ ಉದ್ದಾರದ  ಹೆಸರಲ್ಲಿ  ಯಾವುದೇ ಆರ್ಥಿಕ ಮೂಲಗಳಿರದ   ಬಡತನದ... ಅಶಿಕ್ಷಿತ ಶ್ರೀ ಸಾಮಾನ್ಯರತ್ತ  ಕೈ ಚಾಚಿ ತಾವು ಮೇಲೇ ನಿಂತು ಭೂ ಸಂಪತ್ತನ್ನು ತಮ್ಮಲ್ಲಿ  ಉಳಿಸಿಕೊಂಡರು. ಕೆಲವರು ಭಾಷಣ  ಬಿಗಿದರು. ಬರಹಗಾರರು... ದೊಡ್ಡ ದೊಡ್ಡ ಪುಸ್ತಕ ಬರೆದರು. ಕೆಲವರುಬಡ ಬಡವರ ಸೇವೆ ಮಾಡಿ ಗುಡಿಯೋಳಗೆ ದೇವರಾಗಿ ಬಂಧಿ ಆದರು.  ಕೆಲವೇ ಶ್ರಮಿಕರು ಬುದ್ಧಿ ಬಲದಿಂದ ಮೇಲೆ ಬಂದರು.. ತುಂಡು ಭೂಮಿಯಿಲ್ಲದೇ ದುಡಿವ ಕಠಿಣ ಶ್ರಮಿಕ  ಜಾತಿಗಳು ಎಷ್ಟು ದುಡಿದರೂ ಅಷ್ಟೇ ಅನ್ನುವ ವ್ಯವಸ್ಥೆ ಹೆಣೆಯಲಾಯಿತು. ಅಸಹಾಯಕ ಸ್ಥಿತಿಯ ಅವರು    ಶತ ಶತಮಾನಗಳಿಂದ ಹಾಗೇ ಉಳಿವಂತ ಆರ್ಥಿಕ ಸ್ಥಿತಿ ಹೇರಲಾಗಿದೆ.  ಈ ಭೂಮಿ..ಇಲ್ಲಿಯ ಬಹುತೇಕ ಸಂಪತ್ತು  ಮೇಲ್ವರ್ಗದವರ ಹಿಡಿತದಲ್ಲೇ ಉಳಿದಿದೆ. ಭೂಮಿಯ ಮೇಲೆ ಖಾಸಗಿ ಒಡೆತನದ ಪರಿಕಲ್ಪನೆಯೇ ಈ ಅಸಮತೋಲನಕೆ ಕಾರಣ. ನೈಸರ್ಗಿಕ ವಿರೋಧ ಪ್ರಕ್ರಿಯೆ ಅದು. ಆಸ್ತಿ , ಭೂಮಿ ಮೇಲೆ ನಿರಂತರವಾಗಿ ತಲೆಮಾರಿನಿಂದ ತಲೆಮಾರಿಗೆ ಖಾಸಗಿ ಒಡೆತನದ ಹಕ್ಕು ನೀಡುವ ಪ್ರಕ್ರಿಯೆ ನಿಂತಂದು ಜಗತ್ತಿನ ಬಹುತೇಕ  ಸಮಸ್ಯೆಗೆ ಪರಿಹಾರ ಸಿಗಲಿದೆ.  ಯಾರೂ ಅತಿಯಾಗಿ ಆಸ್ತಿ ಕೊಡಿಡುವ ಕೆಲಸ ಮಾಡರು. ಆಗ ಭ್ರಷ್ಟಾಚಾರ,  ಆಸ್ತಿ ಕೂಡಿಡುವ ಪೈಪೋಟಿ ಕಡಿಮೆಯಾಗಿ ಸಾಮಾನ್ಯರಿಗೂ ಒಂದಿಷ್ಟು ಭೂಮಿ, ಆರ್ಥಿಕ ಮೂಲಗಳ ಸುಲಭ ಲಭ್ಯತೆ.. ಎಲ್ಲರಂತೆ ಬದುಕುವ ವ್ಯವಸ್ಥೆಗೆ ದಾಪುಗಾಲಿಡುವರು. ಸರ್ಕಾರದ ಭಾಗ್ಯಗಳ ಮೇಲೆ ನಿರೀಕ್ಷೆ ಕಡಿಮೆಯಾಗಿ ಆರ್ಥಿಕವಾಗಿ  ಅಸಮತೋಲನವಲ್ಲದ  ಸಹಬಾಳ್ವೆಯ ಸಮಾಜ ತಂತಾನೆ ಬೆಳೆಯುತ್ತದೆ ಎನ್ನುವುದು ನನ್ನ ಅಭಿಮತ. - ರವಿರಾಜ್ ಸಾಗರ್.

No comments:

Post a Comment