ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Tuesday 1 March 2016

ನಾನು ಮತ್ತು ಅವಳು

ನಾನು ಮತ್ತು ಅವಳು ಉನ್ಮತ್ತ ನಾನು.. ಉದಾರಿ ನೀನು ಅಸಲು ನೀಡಲಾರೆ ನೀ ಕೊಟ್ಟ ಚುಂಬನದ ಸಾಲಕೆ. ಹರಾಜಿನಲ್ಲಿ ನನ್ನ ದೋಚಿಕೋ. ಕನಸುಗಾರ ನಾನು... ಪಂಚರಂಗಿ ನೀನು.. ಲೋಕಕಂಜಿ ಬಿಡಲಾರೆ ಹೆದರಬೇಡ ಜನರ ನಿಯಮಕೆ ಮುಲಾಜೆ ಬೇಡ ನನ್ನ ನಂಬಿಕೊ. ಮಹಾ ಮೌನಿ ನಾನು ಹೂ ಮಳೆ ನೀನು. ಸುರಿದು ಬಿಡು ಸುಮ್ಮನೆ ಮುಳುಗಿ ಹೋದರು... ತೇಲಾಡುವೆ ಒಲವಲಿ. - ರವಿರಾಜ್ ಸಾಗರ್ ( ನನ್ನ" ಬಾವಜೀವಿ" ಬಾವಗೀತೆಗಳ ಸಂಕಲನದ ಒಂದು ಗೀತೆಯ ಸಾಲು ನಿಮ್ಮ ವಿಮರ್ಶೆಗಾಗಿ .)

1 comment:

  1. ಭಾವುಕ ಸಾಲುಗಳು. ಚಂದ ಇವೆ

    ReplyDelete