ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Monday 18 January 2016

ಗಾಂಧೀಜಿಯ ಗಾಂದಿತ್ವದಿಂದ ಲಾಭ ಪಡೆದವರಾರು

ಶಾಲಾ ಪಠ್ಯದಲ್ಲಿ ಮಾತ್ರ ಗಾಂಧಿ ಅವರ ಬಗ್ಗೆ ಓದಿ ಮೆಚ್ಚಿ  ಕೊಂಡಿದ್ದ ನಾನು ಆವರ " ಆತ್ಮಕತೆ ,"ನನ್ನ ಸತ್ಯಾನ್ವೇಷಣೆ"  ಗೋರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಅನುವಾದಿತ ಕೃತಿ ಓದಿ ಮತ್ತಷ್ಟು  ಮೆಚ್ಚುಗೆ ಆಯಿತು.  ಆ ನಂತರವೂ ಮತ್ತೆ ಮತ್ತೆ ಅವರ ಹಲವು ಪುಸ್ತಕಗಳಗನು ಓದಿದಾಗ ಅವರ ಗಾಂದಿತ್ವದೊಳಗಿದ್ದ ವೈರುದ್ಯಗಳು, ಅವರ ತತ್ವ  ಚಿಂತನೆಗಳ ವಿರೋಧಿಗಳ ದೊಡ್ಡ ಬಣ ಬರೆದ ಕೆಲವು ಪುಸ್ತಕ ಬೇರೇಯೇ ವಿಚಾರ ಬಿತ್ತಿ ಕೆಣಕಿದವು.ನಾನು ಗಾಂಧಿ ಬಗ್ಗೆ ಅವೆಲ್ಲ ಓದಿಯೂ ಗಾಂಧಿ ಅಬಿಮಾನಿಯಾಗಿಯೇ ಉಳಿದಿರುವೆ ಆದರೂ ಕೆಲವು  ಪ್ರಶ್ನೆಗಳು ಕಾಡುತ್ತಿದೆ  ?
       ಗಾಂದಿತ್ವದಿಂದ ದೇಶಕ್ಕೆ ಲಾಭ  ಆಗಿಲ್ಲವೇ...?
ವಿಶ್ವ ಶಾಂತಿದೂತ ಎನಿಸಿದ ಅವರಿಂದ ಜಗತ್ತಿನ ಹಲವರು ಕಲಿತದ್ದು ಬಹಳ ಇದೆ. ಹಾಗಾದರೆ  ಗಾಂದಿತ್ವದಿಂದ ಲಾಭ ಪಡೆದವರು ಯಾರು. .? ಬಲಪಂಥೀಯರೋ..ಎಡಪಂಥೀಯರೋ... ? ನೇಹರೂ ಅವರೊ..?
ದೀನ ದಲಿತರಿಗಾಗಿ ಎಲ್ಲಾ ತೊರೆದು ಹರಿಹರಿಜನ ಕೇರಿ ಕೇರಿಗಳಲಿ ದುಡಿದರಲ್ಲಾ ಅವರು ಅದನ್ನು ಮರೆಯಲಾದೀತೇ..?
ಅವರು ಅಂಬೇಡ್ಕರ್ ಅವರ ತತ್ವ ಚಿಂತನೆಗಳ ಕೆಲವನ್ನು ವಿರೋಧಿಸಿದ ಮಾತ್ರಕ್ಕೆ ಅವರು ದಲಿತರ ಹಿತಾಸಕ್ತಿಗೆ ದುಡಿದದ್ದನು ಕಡೆಗಣಿಲಾದೀತೇ...? ಎಡಪಂಥೀಯರೋ ..ಬಲಪಂಥೀಯರೋ  ಮನ ಬಂದಂತೆ ಕೆಲ ಪುಸ್ತಕ ಬಿಡುಗಡೆ ಮಾಡಿ  ಅವರ ಒಟ್ಟಾರೆ ಸೇವೆಯನ್ನು ಬೇರೆ ಬೇರೆ ರೀತಿಯಲ್ಲಿ ನೋಡಿರುವುದು ಗಮನಿಸಬೇಕು.
    ಗಾಂಧಿ ರಾಮರಾಜ್ಯ  ಕನಸಿನೋಂದಿಗೇ ಹಿಂದು ಧರ್ಮದ ಹಲವು ಅಂಶಗಳನ್ನು ಒಳಗೊಂಡಂತೆ  ಉತ್ತಮ ಅಭಿಪ್ರಾಯ ಹೊಂದಿದ್ದರು ಎನ್ನುವುದು ಹಲವು ಸಾಸಾಕ್ಷಿ ಇವೆ. ಆದರೆ  ಅಲ್ಪಸಂಖ್ಯಾತರಿಗಾಗಿಯೂ  ದುಡಿದವರು. ಒಟ್ಟಾರೆ ಮಾನವತಾವಾದಿ ಆಗಿ ಬಹಳ ಶ್ರಮಿಸಿದ್ದಾರೆ.
ಇತಿಹಾಸ ಕೆದಕಿದರೆ ಅವರ ಕೆಲವು ನಿರ್ಣಯ. ಅಭಿಪ್ರಾಯ ಗಳ  ಹಿಂದೆ ಯಾರದೋ ಛಾಯೆ ಇದೆ ಎನಿಸುತ್ತದೆ. ಆದರೆ ಅವರ ಒಟ್ಟು ಸೇವೆ ,ಜಗತ್ತಿಗೇ ಮಾದರಿ ಎನ್ನಬಹುದು.

Sunday 17 January 2016

ವಿರಹ ಕ ( ವಿ ) ತೆ.

ವಿರಹ  ಕ (ವಿ)ತೆ
ಅವಳಿಗಾಗಿ ಕವಿತೆಯಲ್ಲಿ ಅವಿತೆ
ಪದಗಳ ಹೂರಾಶಿಯಲಿ ಬೆರೆತೆ
ಪ್ರಾಸಗಳೂರ ಜಾತ್ರೆಯಲ್ಲಿ ಅಲೆದೆ
ತ್ರಾಸಾದರೂ ನುಡಿಗಟ್ಟುಗಳ ಬೆಟ್ಟದಲ್ಲಿ
ಅಲಂಕಾರ,  ಉಪಮೆಗಳ ಶೋದಿಸಿದೆ.
ಶೃತಿ, ಲಯ,ಛಂದಸ್ಸಿಗಾಗಿ  ಜಪಿಸಿದೆ;
ಕೊನೆಗೂ ಅವಳೆದುರು
ಕವಿತೆಯ ವಾಚಿಸಲು 
ಗುಂಡಿಗೆ ಗಟ್ಟಿ ಮಾಡಿ
ನಾಲಗೆಗೂ ದೈರ್ಯ ಹೇಳಿದೆ;
    ಆದರೂ ಮತ್ತೆ  ಹೇಳದೆ ಅವಿತೆ...!
     ಅವಳೆದುರು  ಬೆವರಿದೆ;
    ನನ್ನೊಲವ ಕವಿತೆ,
    ಕತೆಯಲ್ಲಿ ಮುಗಿಸಿದೆ...!
ಇಂಗಿ  ಹೋದ ಕಣ್ಣೀರ ಕಣ್ಣಿಗೆ ಕಂಡದ್ದು.!
ಅವಳ ಕೈಲಿದ್ದ ಮದುವೆಯ ಕರೆಯೋಲೆ .
ಆದರೂ ಎದೆಯೊಡೆಯದೇ ಜೀವ ಉಳಿದದ್ದು
ಕವಿತೆಯ ತಂಗಿ 'ಕವನ' ಇರುವಳಲ್ಲಾ
ಎನ್ನುವ  ಆಶಾಬಾವ..!
ರವಿರಾಜ್ ಸಾಗರ್.

Saturday 9 January 2016

ಶ್ ..!!
ನಾನು ಕತ್ತಲೆಗೆ ಹೆದರಿ ಓಡುವವನಲ್ಲ ..
ಜಗತ್ತೆಲ್ಲಾ  ಮಲಗಲೆಂದು
ನಾನು  ಕತ್ತಲೆಗೆ ಅವಕಾಶ ನೀಡಿ
ಓಡುತ್ತೇನೆ ಅಷ್ಟೇ ,,,
ಇಲ್ಲದಿದ್ದರೆ ನಾನು ಕತ್ತಲೆಗೆ ಹೆದರಿ ಓಡುವವನಲ್ಲ
ನಾನು ಸ್ವಯಂಬು,,
ನಾನೇ  ನಿಮ್ಮೂರ ರವಿ.
ಬಾಡದ ಗಗನ ಕುಸುಮ.

ಕೇಳು ಗೆಳತೀ. ..

ಕೇಳು ಗೆಳತೀ.... .
"""""""""""
ನಿನ್ನ ಹೊಟ್ಟೆಕಿಚ್ಚು ಹೆಚ್ಚಾಗುವಷ್ಟು ಗೆಳೆತಿಯರು ಇದಾರೆ...
ಪೇಸ್ಬೂಕ್ಕ್ ಕ್ಯಾಂಪಾಸಿನಲಿ
ನಾನು ಒಂಟಿಯಲ್ಲ......
ಆದರೂ ನಿನಗೊಬ್ಬಳಿಗಾಗಿಯೇ ಕಾದಿರುವೆ
ಈ ಭುವಿಯಲಿ ಜೀವಂತ.
ನನ್ನೊಲವು ಕಡಿಮೆಯಾಗಿಲ್ಲ..!
          ಕಡಲ ದಡದಲಿ ಬೆರಳು ಗೀಚಿದ ಓಲೆಯ
          ಕಡಲ ಅಲೆಯೂ ಅಪ್ಪಳಿಸಿ ಅಳಿಸದೆ
          ಶುಭಕೊರಿ ಹೋಯಿತು.
         ಉರಿವ ಸೂರ್ಯ ಕಡಲಿಂದಲೇ
         ಹೊಂಬಣ್ಣದ ಆರತಿ ಮಾಡಿ ಕಾದಿಹ
         ನನ್ನ ರತಿಯ ನೋಡಲು
         ನೀನೇಕೆ ಬರದೆ ಒಂಟಿಮಾಡಿದೆ..?
ಕೇಳು ಗೆಳತೀ. ..
ನಾನೀಗ ಒಂಟಿಯಲ್ಲ....! .

Friday 8 January 2016

ಮಮತೆಯ ಸುಧೆಯ ಸಾಗರ ಮಾತೆ

ಮಮತೆಯ  ಸುಧೆಯ ಸಾಗರ ಮಾತೆ.
""""""""""""""":""""""""""""
ತಿಂಗಳಿಗೊಮ್ಮೆ ತಲುಪುವ ಪತ್ರಕೆ
ಕಾಯುತ್ತಿದ್ದ ಅಮ್ಮ
ಈಗ ದಿನ ಸಂಜೆ ನನ್ನ ಪೋನಿಗಾಗಿ
ಸಂಬ್ರಮದಿ ಕಾಯುತ್ತಾಳೆ ಎಂದು ಗೊತ್ತಾಗಿದೆ.
         ಮನೆಯ ಪೋನು ರಿಂಗಣಿಸಿದಾಗಲೆಲ್ಲಾ
         ಅದು ನನ್ನದೇ ಆಗಿರುತ್ತದೆಂದು
ಸಂಭ್ರಮದಿ ಹಂಬಲಿಸುವ ಅವಳ ಕರುಳ ವೀಣೆಯ ಧನಿ ನನ್ನ  ಎದೆತಾಗಿ ದೂರದೂರಿನ
ಮಾಯಾ  ನಗರದ ಬದುಕು ಸಾಕೆನಿಸಿದೆ. . !
      ಹುಟ್ಟಿದ ಹಳ್ಳಿ ಬಿಡಲೊಪ್ಪದ
ಅಮ್ಮನ ಊರಪ್ರೇಮದ ಆನಂದದ ಗುಟ್ಟು
ನನಗೀಗ ಅರಿವಾಗುತಿದೆ...!
    ಆದರೂ ನಗರ ಮೋಹ ಚಕ್ರವೂಹದಲ್ಲಿ
ಸೋಲೊಪ್ಪಿ ಹೈವೇಲಿ  ಸಂತಸ ಹುಡುಕುತಿಹೆ....!
  ಕೆಲವೇ ವರುಷ  ಶಾಲೆ  ಮೆಟ್ಟಿಲು ಹತ್ತಿದ್ದ   ಅಮ್ಮಳೀಗ ಪೇಸ್ಬೂಕ್ಕಲಿ ನನ್ನ ಕಾರ್ಯಕ್ರಮದ ಪೋಟೋ ನೋಡಿ  ಲೈಕಿಸಿ ಹಿಗ್ಗುತಿಹಳಂತೆ. !
ಬರೀ ಬಯಕೆಗಳ ಬಿಸಿಗೆ ಆಗೀಗ ಬತ್ತುವ
ನದಿಯಂತ ರೂಪಸಿ ಹೆಂಡತಿ ಪ್ರೀತಿ ಸನಿಹದಲ್ಲಿದ್ದರೂ
ಬತ್ತದ ಸಾಗರ ಅಮ್ಮನ ಪ್ರೀತಿಗೆ
ಯಾವ ರೂಪಕವು  ಪೂರ್ಣವಾಗುತ್ತಿಲ್ಲ.
ಮಮತೆಯ ಸುಧೆಯ ಸಾಗರ ಮಾತೆ ಆಕೆ.
- ರವಿರಾಜ್ ಸಾಗರ್
( ನನ್ನ ಬಾವ ಜೀವಿ.  ಸಂಕಲನದಿಂದ ನಿಮಗಾಗಿ)

Wednesday 6 January 2016

ನೂರು ಪ್ರಶ್ನೆಗೆ ನೂರು ಉತ್ತರ

300) ಕರ್ನಾಟಕದ ಪ್ರಥಮ ವಚನಗಾರ್ತಿ ಯಾರು?
- ಅಕ್ಕಮಹಾದೇವಿ

301) ಕರ್ನಾಟಕದ ಪ್ರಥಮ ಪತ್ರಕರ್ತೆ / ಪ್ರಕಾಶಕಿ ಯಾರು?
- ನಂಜನಗೂಡು ತಿರುಮಲಾಂಬಾ

302) ನಾಟಕ ರಂಗದ ಮೇಲೆ ಏರಿದ ಕನ್ನಡದ ಮೊದಲ ಸ್ತ್ರೀ ಯಾರು?
- ಗಂಗೂಬಾಯಿ ಗುಳೇದಗುಡ್ಡ

303) ಕರ್ನಾಟಕದ ಪ್ರಥಮ ಮಹಿಳಾ ಮಂತ್ರಿ ಯಾರು?
- ಗ್ರೇಸ್ ಠಕ್ಕರ್

304) ಅಖಿಲ ಭಾರತದ ಕನ್ನಡ ಸಾಹಿತ್ಯ ಸಮ್ಮೇಳನದ ಮೊದಲ ಮಹಿಳಾ ಅಧ್ಯಕ್ಷರು ಯಾರು?
- ಜಯದೇವಿ ತಾಯಿ ಲಿಗಾಡೆ

305) ಸೋವಿಯತ್ ಲ್ಯಾಂಡ್ ಪ್ರಶಸ್ತಿ ಪಡೆದ ಮೊದಲ ಕನ್ನಡಿತಿ ಯಾರು?
- ಅನುಪಮಾ ನಿರಂಜನ

306) ಕನ್ನಡದ ಪ್ರಥಮ ನವೋದಯ ಕವಯಿತ್ರಿ ಯಾರು?
- ಬೆಳಗೆರೆ ಜಾನಕಮ್ಮ

   ★'''''★'''''★

★ ಪತ್ರಿಕಾ ಲೋಕದ ಪ್ರಥಮರು ★

307) ಕರ್ನಾಟಕದ ಪ್ರಥಮ ಪತ್ರಿಕೆ ಯಾವುದು?
- ಮಂಗಳೂರು ಸಮಾಚಾರ (೧೮೪೮)

308) ಕರ್ನಾಟಕದ ಪ್ರಥಮ ದಿನಪತ್ರಿಕೆ ಯಾವುದು?
- ಸೂರ್ಯೋದಯ ಪ್ರಕಾಶಿಕ (೧೮೭೦)

309) ಕರ್ನಾಟಕದ ಪ್ರಥಮ ಕನ್ನಡ e-ಪತ್ರಿಕೆ ಯಾವುದು?
- ವಿಶ್ವಕನ್ನಡ

310) ಕರ್ನಾಟಕದ ಪ್ರಥಮ ವಾರ ಪತ್ರಿಕೆ ಯಾವುದು?
- ಸುಬುದ್ಧಿ ಪ್ರಕಾಶ (೧೮೫೦)

311) ಕರ್ನಾಟಕದ ಪ್ರಥಮ ವಿಜ್ಞಾನ ಪತ್ರಿಕೆ ಯಾವುದು?
- ವಿಜ್ಞಾನ

312) ಕರ್ನಾಟಕದ ಪ್ರಥಮ ವಿಡಿಯೋ ಪತ್ರಿಕೆ ಯಾವುದು?
- ಬೆಳ್ಳಿಚುಕ್ಕಿ

313) ಕರ್ನಾಟಕದ ಪ್ರಥಮ ಮಕ್ಕಳ ಪತ್ರಿಕೆ ಯಾವುದು?
- ಮಕ್ಕಳ ಪುಸ್ತಕ

314) ಕರ್ನಾಟಕದ ಪ್ರಥಮ ಮಹಿಳಾ ಪತ್ರಿಕೆ ಯಾವುದು?
- ಕರ್ನಾಟಕ ನಂದಿನಿ (೧೯೧೩)

315) ಕರ್ನಾಟಕದ ಪ್ರಥಮ ಸಾಹಿತ್ಯಿಕ ವೈಜ್ಞಾನಿಕ ಪತ್ರಿಕೆ ಯಾವುದು?
- ಕರ್ನಾಟಕ ಜ್ಞಾನ ಮಂಜರಿ (೧೮೭೮)

316) ಕರ್ನಾಟಕದ ಪ್ರಥಮ ಶಿಕ್ಷಣ ಪತ್ರಿಕೆ ಯಾವುದು?
- ಕನ್ನಡ ಜ್ಞಾನ ಬೋಧಿನಿ (೧೮೬೨)

317) ಕರ್ನಾಟಕದ ಪ್ರಥಮ ಜಿಲ್ಲಾ ಪತ್ರಿಕೆ ಯಾವುದು?
- ಜ್ಞಾನೋದಯ (ಶಿವಮೊಗ್ಗ)

318) ಕನ್ನಡದಲ್ಲಿ ಪ್ರಾರಂಭವಾದ ಮೊದಲ ಕಾಮಶಾಸ್ತ್ರ ಪತ್ರಿಕೆ ಯಾವುದು?
- ಪ್ರೇಮ

319) ಕರ್ನಾಟಕದ ಮೊಟ್ಟಮೊದಲ ಕಾನೂನು ಪತ್ರಿಕೆ ಯಾವುದು?
- ನ್ಯಾಯ ಸಂಗ್ರಹ

320) ಕರ್ನಾಟಕದ ಮೊಟ್ಟಮೊದಲ ಚಲನಚಿತ್ರ ಪತ್ರಿಕೆ ಯಾವುದು?
- ಸಿನಿಮಾ

321) ಕನ್ನಡದಲ್ಲಿ ಆರಂಭಗೊಂಡ ಮೊದಲ ಹಾಸ್ಯ ಪತ್ರಿಕೆ ಯಾವುದು?
- ವಿಕಟ ಪ್ರತಾಪ

322) ಅತಿ ಹೆಚ್ಚು ರಾಷ್ಟ್ರೀಯ ಪ್ರಶಸ್ತಿ ಪಡೆದಿರುವ ಕನ್ನಡದ ಮೊದಲ ಪತ್ರಿಕೆ ಯಾವುದು?
- ಉದಯವಾಣಿ

 

   ★'''''★'''''★

★ ಕರ್ನಾಟಕದ ಸಾಹಿತ್ಯ ಲೋಕ  ಪ್ರಥಮರು ★

323) ಕನ್ನಡದ ಮೊದಲ ಕೃತಿ ಯಾವುದು?
- ಕವಿರಾಜಮಾರ್ಗ

324) ಕನ್ನಡದಲ್ಲಿ ರಚನೆಗೊಂಡ ಮೊದಲ ಕಾವ್ಯ ಯಾವುದು?
- ಆದಿಪುರಾಣ

325) ಕನ್ನಡದ ಮೊದಲ ಗದ್ಯ ಕೃತಿ ಯಾವುದು?
- ವಡ್ಡಾರಾಧನೆ

326) ಕನ್ನಡದಲ್ಲಿ ರಚನೆಗೊಂಡ ಮೊದಲ ನಾಟಕ ಯಾವುದು?
- ಮಿತ್ರಾವಿಂದಾ ಗೋವಿಂದಾ

327) ಕನ್ನಡದ ಮೊದಲ ಗೀತ ನಾಟಕ ಯಾವುದು?
- ಮುಕ್ತದ್ವಾರ

328) ಕನ್ನಡದ ಮೊದಲ ಜ್ಯೋತಿಷ್ಯ ಗ್ರಂಥ ಯಾವುದು?
- ಜಾತಕ ತಿಲಕ ( ಶ್ರೀಧರಾಚಾರ್ಯ )

329) ಕನ್ನಡದ ಮೊದಲ ಸ್ವತಂತ್ರ ಪೌರಾಣಿಕ ನಾಟಕ ಯಾವುದು?
- ಪೃಥು ವಿಜಯ

330) ಕನ್ನಡದಲ್ಲಿ ರಚನೆಗೊಂಡ ಮೊದಲ ಗಾದೆಗಳ ಸಂಕಲನ ಯಾವುದು?
- ಕನ್ನಡ ಗಾದೆಗಳು

331) ಕನ್ನಡದಲ್ಲಿ ರಚನೆಗೊಂಡ ಮೊದಲ ಒಗಟುಗಳ ಸಂಗ್ರಹ ಯಾವುದು?
- ಮಕ್ಕಳ ಒಡಪುಗಳು

332) ಕನ್ನಡದಲ್ಲಿ ರಚನೆಗೊಂಡ ಮೊದಲ ಪ್ರಬಂಧ ಸಂಕಲನ ಯಾವುದು?
- ಲೋಕರಹಸ್ಯ

333) ಕನ್ನಡದ ಮೊದಲ ಛಂದಶಾಸ್ತ್ರ ಗ್ರಂಥ ಯಾವುದು?
- ಛಂದೋಂಬುಧಿ

334) ಕನ್ನಡದ ಮೊದಲ ವೈದ್ಯ ಗ್ರಂಥ ಯಾವುದು?
- ಗೋವೈದ್ಯ ( ಕೀರ್ತಿವರ್ಮ )

335) ಕನ್ನಡದ ಮೊದಲ ವಿಷಯ ವಿಶ್ವಕೋಶ ಯಾವುದು?
- ವಿವೇಕ ಚಿಂತಾಮಣಿ

336) ಕನ್ನಡದ ಮೊದಲ ವಿಶ್ವಕೋಶ ಯಾವುದು?
- ಲೋಕೋಪಕಾರ

337) ಕನ್ನಡದಲ್ಲಿ ರಚನೆಗೊಂಡ ಮೊದಲ ಮಕ್ಕಳ ವಿಶ್ವಕೋಶ ಯಾವುದು?
- ಬಾಲ ಪ್ರಪಂಚ

338) ಕನ್ನಡದ ಮೊದಲ ನವ್ಯತೆಯನ್ನೊಳಗೊಂಡ ಕಾದಂಬರಿ ಯಾವುದು?
- ವಿಶ್ವಾಮಿತ್ರನ ಸೃಷ್ಟಿ (ಶ್ರೀರಂಗ)

339) ಕನ್ನಡದಲ್ಲಿ ರಚನೆಗೊಂಡ ಮೊದಲ ಮನೋವೈಜ್ಞಾನಿಕ ಕಾದಂಬರಿ ಯಾವುದು?
- ಅಂತರಂಗ ( ದೇವುಡು )

340) ಕನ್ನಡದ ಮೊದಲ ವ್ಯಾಕರಣ ಗ್ರಂಥ ಯಾವುದು?
- ಶಬ್ದಮಣಿ ದರ್ಪಣ

341) ಕನ್ನಡದ ಮೊದಲ ಲಾಕ್ಷಣಿಕ ಗ್ರಂಥ ಯಾವುದು?
- ಕವಿರಾಜ ಮಾರ್ಗ

342) ಮೊಟ್ಟಮೊದಲು ಬೈಬಲ್ ನ್ನು ಕನ್ನಡೀಕರಣಗೊಳಿಸಿದವರು ಯಾರು?
- ಜಾನ್ ಹ್ಯಾಂಡ್ಸ್

343) ಕನ್ನಡದ ಮೊದಲ ಐತಿಹಾಸಿಕ ನಾಟಕಕಾರ ಯಾರು?
- ಸಂಸ

344) ಕನ್ನಡದಲ್ಲಿ ರಚನೆಗೊಂಡ ಮೊದಲ ಪ್ರವಾಸ ಕಥನ ಯಾವುದು?
- ದಕ್ಷಿಣ ಭಾರತ ಯಾತ್ರೆ

345) ಕನ್ನಡದಲ್ಲಿ ರಚನೆಗೊಂಡ ಮೊದಲ ಪತ್ತೇದಾರಿ ಕಾದಂಬರಿ ಯಾವುದು?
- ಚೋರಗ್ರಹಣ ತಂತ್ರ

346) ಕನ್ನಡದ ಮೊದಲ ಆಯುರ್ವೇದ ಗ್ರಂಥ ಯಾವುದು?
- ಕರ್ಣಾಟಕ ಕಲ್ಯಾಣಕಾರಕ

347) ಕನ್ನಡದ ಮೊದಲ ಸ್ವತಂತ್ರ ಸಾಮಾಜಿಕ ಕಾದಂಬರಿ ಯಾವುದು?
- ಇಂದಿರಾಬಾಯಿ

348) ಕನ್ನಡದಲ್ಲಿ ರಚನೆಗೊಂಡ ಮೊದಲ ಐತಿಹಾಸಿಕ ಕಾದಂಬರಿ ಯಾವುದು?
- ಮುದ್ರಾಮಂಜೂಷ

349) ಕನ್ನಡದಲ್ಲಿ ರಚನೆಗೊಂಡ ಮೊದಲ ಜೀವನಚರಿತ್ರೆ ಯಾವುದು?
- ಕುಣಿಗಲ್ ರಾಮಾಶಾಸ್ತ್ರಿಗಳ ಜೀವನ ಚರಿತ್ರೆ

350) ಕನ್ನಡದ ಮೊದಲ ಅಭಿನಂದನಾ ಗ್ರಂಥ ಯಾವುದು?
- ಸಂಭಾವನೆ ( ಬಿ.ಎಂ.ಶ್ರೀ.ಯವರಿಗೆ )

351) ಕನ್ನಡದಲ್ಲಿ ರಚನೆಗೊಂಡ ಮೊದಲ ಇಂಗ್ಲೀಷ್ - ಕನ್ನಡ ನಿಘಂಟುಕಾರ ಯಾರು?
- ವಿಲಿಯಮ್ ರೀವ್ಸ್

352) ಕನ್ನಡದ ಮೊದಲ ತಾಂತ್ರಿಕ ಪದಕೋಶ ಯಾವುದು?
- ಔದ್ಯಮಿಕ ನಿಘಂಟು

353) ಕನ್ನಡದ ಮೊದಲ ಕಾವ್ಯ ನಿಘಂಟು ಯಾವುದು?
- ರನ್ನಕಂದ

354) ಕನ್ನಡದ ಮೊದಲ ಗದ್ಯ ನಿಘಂಟು ಯಾವುದು?
- ಕರ್ಣಾಟಕ ಶಬ್ದಸಾರ

355) ಕನ್ನಡದಲ್ಲಿ ರಚನೆಗೊಂಡ ಮೊದಲ ವೈದ್ಯಕೀಯ ನಿಘಂಟು ಯಾವುದು?
- ವೈದ್ಯ ಪದಕೋಶ

   ★'''''★'''''★

★ ಬಣ್ಣದ ಲೋಕದ ಪ್ರಥಮರು ★

356) ರಾಷ್ಟ್ರ ಪ್ರಶಸ್ತಿ ಪಡೆದ ಕನ್ನಡದ ಮೊದಲ ಚಿತ್ರ ಯಾವುದು?
- ಬೇಡರ ಕಣ್ಣಪ್ಪ

357) ಕನ್ನಡದ ಮೊದಲ ಐತಿಹಾಸಿಕ ಚಿತ್ರ ಯಾವುದು?
- ರಣಧೀರ ಕಂಠೀರವ

358) ಕನ್ನಡದ ಮೊದಲ ಮೂಕಿ ಚಿತ್ರ ಯಾವುದು?
- ಮೃಚ್ಛಕಟಿಕ

359) ಕನ್ನಡದ ಮೊದಲ ವರ್ಣ ಚಲನಚಿತ್ರ ಯಾವುದು?
- ಅಮರಶಿಲ್ಪಿ ಜಕಣಾಚಾರಿ

360) ಕರ್ನಾಟಕದ ಮೊಟ್ಟಮೊದಲ ಚಿತ್ರಮಂದಿರ ಯಾವುದು?
- ಪ್ಯಾರಾಮೌಂಟ್ ( ೧೯೦೫ )

361) ಕನ್ನಡದ ಮೊದಲ ಕಾದಂಬರಿ ಆಧಾರಿತ ಚಲನಚಿತ್ರ ಯಾವುದು?
- ಕರುಣೆಯೇ ಕುಟುಂಬದ ಕಣ್ಣು

362) ಕನ್ನಡದ ಮೊದಲ ರಿಯಾಯಿತಿ (ಸಬ್ಸಿಡಿ ) ಪಡೆದ ಚಿತ್ರ ಯಾವುದು?
- ನಕ್ಕರೆ ಅದೇ ಸ್ವರ್ಗ

363) ಕನ್ನಡದ ಮೊದಲ ಸಾಮಾಜಿಕ ಚಲನಚಿತ್ರ ಯಾವುದು?
- ಸಂಸಾರ ನೌಕೆ (೧೯೩೬)

364) ಚಲನಚಿತ್ರ ಹಿನ್ನೆಲೆ ಗಾಯನಕ್ಕೆ ರಾಷ್ಟ್ರ ಪ್ರಶಸ್ತಿ ಕನ್ನಡದ ಮೊದಲಿಗರು ಯಾರು?
- ಶಿವಮೊಗ್ಗ ಸುಬ್ಬಣ್ಣ

365) ಚಿತ್ರ ಸಂಗೀತಕ್ಕೆ ೨ ಬಾರಿ ರಾಷ್ಟ್ರ ಪ್ರಶಸ್ತಿ ಕನ್ನಡದ ಮೊದಲಿಗರು ಯಾರು?
- ಬಿ.ವಿ.ಕಾರಂತ್

366) ಕನ್ನಡದ ಮೊದಲ ಭಾವಗೀತೆ ಧ್ವನಿಸುರುಳಿ ಯಾವುದು?
- ನಿತ್ಯೋತ್ಸವ

367) ಕರ್ನಾಟಕದ ಮೊಟ್ಟಮೊದಲ ವೃತ್ತಿನಾಟಕ ಕಂಪೆನಿ ಯಾವುದು?
- ಶ್ರೀ ವೀರನಾರಾಯಣ ಪ್ರಾಸಾದಿತ ಕೃತಪುರ ನಾಟಕ ಮಂಡಳಿ

368) ಕರ್ನಾಟಕದ ಮೊಟ್ಟಮೊದಲ ಬೀದಿ ನಾಟಕ ಪ್ರಯೋಗ ಯಾವುದು?
-  ಕಟ್ಟು

369) ಕನ್ನಡದ ಮೊಟ್ಟಮೊದಲ ಹವ್ಯಾಸಿ ನಾಟಕ ತಂಡ ಯಾವುದು?
- ಭಾರತ ಕಲೋತ್ತೇಜಕ ಸಂಗೀತ ಸಮಾಜ

370) ಕನ್ನಡದ ಮೊಟ್ಟಮೊದಲ ರೇಡಿಯೋ ನಾಟಕ ಯಾವುದು?
- ನೀರಗಂಟಿ ಮಾರ ( ವಿ.ಕೆ.ಶ್ರೀನಿವಾಸನ್ )

371) ಕರ್ನಾಟಕದಲ್ಲಿ ಪ್ರದರ್ಶನಗೊಂಡ ಮೊದಲ ಅಸಂಗತ ನಾಟಕ ಯಾವುದು?
- ಬೊಕ್ಕತಲೆಯ ನರ್ತಕಿ ( ಸುಮತೀಂದ್ರ ನಾಡಿಗ್ )

   ★'''''★'''''★

★ನಾಡಿನ ಮೊದಲುಗಳು ★

372) ಕರ್ನಾಟಕದ ಮೊಟ್ಟಮೊದಲ ರಾಜವಂಶ ಯಾವುದು?
- ಕದಂಬ

373) ಕರ್ನಾಟಕದಲ್ಲಿ ಕಟ್ಟಲಾದ ಮೊಟ್ಟಮೊದಲ ಕೆರೆ ಯಾವುದು?
- ಚಂದ್ರವಳ್ಳಿ

374) ಕರ್ನಾಟಕದಲ್ಲಿ ನಿರ್ಮಿಸಲಾದ ಮೊದಲ ಶಿಲ್ಪ ಯಾವುದು?
- ನಾಗಶಿಲ್ಪ

375) ಕರ್ನಾಟಕದ ಮೊಟ್ಟಮೊದಲ ಶಾಸನ ಯಾವುದು?
- ಹಲ್ಮಿಡಿ

376) ಕರ್ನಾಟಕದಲ್ಲಿ ನಿರ್ಮಿಸಲಾದ ಮೊಟ್ಟಮೊದಲ ಕೋಟೆ ಯಾವುದು?
- ಬಾದಾಮಿ ಕೋಟೆ

377) ಕರ್ನಾಟಕದಲ್ಲಿ ನಿರ್ಮಿಸಲಾದ ಮೊಟ್ಟಮೊದಲ ಜೈನ ದೇವಾಲಯ ಯಾವುದು?
- ಪ್ರಣವೇಶ್ವರ ದೇವಾಲಯ, ತಾಳಗುಂದ

378) ಕರ್ನಾಟಕದಲ್ಲಿ ಕಟ್ಟಲಾದ ಮೊಟ್ಟಮೊದಲ ಬೌದ್ಧ ವಿಹಾರ ಯಾವುದು?
- ಬನವಾಸಿ

379) ಕರ್ನಾಟಕದ ಅತಿ ಪ್ರಾಚೀನ ಕಲ್ಲಿನ ನಿರ್ಮಿತ ಕಟ್ಟಡ ಯಾವುದು?
- ಹಲಸಿಯ ಜೈನ ಬಸದಿ

380) ಕರ್ನಾಟಕದ ಮೊಟ್ಟಮೊದಲ ವಿಶ್ವವಿದ್ಯಾಲಯ ಯಾವುದು?
- ಮೈಸೂರು ವಿ.ವಿ.

381) ಕರ್ನಾಟಕದ ಮೊಟ್ಟಮೊದಲ ಕಾಲೇಜು ಯಾವುದು?
- ಸೆಂಟ್ರಲ್ ಕಾಲೇಜು, ಬೆಂಗಳೂರು.

382) ಕರ್ನಾಟಕದ ಮೊಟ್ಟಮೊದಲ ವೈದ್ಯಕೀಯ ಕಾಲೇಜು ಯಾವುದು?
- ಮೈಸೂರು.

383) ಕರ್ನಾಟಕದ ಮೊಟ್ಟಮೊದಲ ಪಾಲಿಟೆಕ್ನಿಕ್ ಕಾಲೇಜು ಯಾವುದು?
- ಶ್ರೀ ಜಯಚಾಮರಾಜೇಂದ್ರ ಪಾಲಿಟೆ.

   ★'''''★'''''★

★ ಖಂಡವಾರು ಅತಿ ದೊಡ್ಡ  ನದಿಗಳು ★

384) ಏಷ್ಯಾ ಖಂಡದ ಅತಿ ದೊಡ್ಡ  ನದಿ ಯಾವುದು?
-ಯಾಂಗ್ ಶಿಕಿಯಾಂಗ.

385) ಆಫ್ರಿಕಾ ಖಂಡದ ಅತಿ ದೊಡ್ಡ  ನದಿ ಯಾವುದು?
-ನೈಲ್.

386) ಉತ್ತರ ಅಮೇರಿಕಾ ಖಂಡದ ಅತಿ ದೊಡ್ಡ  ನದಿ ಯಾವುದು?
-ಮಿಸಿಸಿಪ್ಪಿ.

387) ದಕ್ಷಿಣ ಅಮೇರಿಕಾ ಖಂಡದ ಅತಿ ದೊಡ್ಡ  ನದಿ ಯಾವುದು?
-ಅಮೆಜಾನ್.

388) ಯುರೋಪ ಖಂಡದ ಅತಿ ದೊಡ್ಡ  ನದಿ ಯಾವುದು?
-ಓಲ್ಗಾ.

389) ಆಸ್ಟ್ರೇಲಿಯಾ ಖಂಡದ ಅತಿ ದೊಡ್ಡ  ನದಿ ಯಾವುದು?
-ಮುರ್ರೆ.

★ ಭಾರತದ ಮೊದಲ ಮಹಿಳೆಯರು:

390) ಭಾರತದ ರಾಷ್ಟ್ರೀಯ ಕಾಂಗ್ರೆಸನ  ಪ್ರಥಮ ಮಹಿಳಾ ಅಧ್ಯಕ್ಷೆ ಯಾರು?
-ಸರೋಜಿನಿ ನಾಯ್ಡು

391) ಯು.ಎಸ್.ಜನರಲ್ ಅಸೆಂಬ್ಲಿಯ ಅಧ್ಯಕ್ಷರಾದ ಪ್ರಥಮ ಮಹಿಳೆ
-ವಿಜಯಲಕ್ಷ್ಮಿ ಪಂಡಿತ್ .

392) ಇಂಡಿಯನ್ ಏರ್ ಲೈನ್ಸ್ ನ ಪ್ರಥಮ ವಿಮಾನಚಾಲಕಿ ಯಾರು?
-ದರ್ಬಾ ಬ್ಯಾನರ್ಜಿ.

393) ಇಂಗ್ಲಿಷ್ ಕಾಲುಮೆಯನ್ನು ಈಜಿಕೊಂಡು ದಾಟಿದ ಪ್ರಥಮ ಮಹಿಳೆ ಯಾರು?
-ಆರತಿಸಹ.

394) ದಕ್ಷಿಣ ಭಾರತದಿಂದ ವೈದ್ಯಕೀಯ ಪದವಿ ಪಡೆದ ಪ್ರಥಮ ಮಹಿಳೆ ಯಾರು?
-ಡಾ|| ಮುತ್ತುಲಕ್ಷ್ಮಿ ರೆಡ್ಡಿ.

395) ಉಚ್ಚ ನ್ಯಾಯಾಲಯಕ್ಕೆ ನ್ಯಾಯಾಧೀಶರಾಗಿ ಆಯ್ಕೆಯಾದ ಪ್ರಥಮ ಮಹಿಳೆ ಯಾರು?
-ಲೈಲಾ ಸೇಠ್.

396) ಎವರೆಸ್ಟ್ ಶಿಖರವನ್ನು ಏರಿದ ಪ್ರಥಮ ಭಾರತೀಯ ಮಹಿಳೆ ಯಾರು?
-ಬಚೇಂದ್ರಿ ಪಾಲ್.

397) ಸೇನಾಪದಕ ಪಡೆದ ಮೊದಲ ಮಹಿಳೆ ಯಾರು?
-ಬಿನ್ ಲಾದೇವಿ.

398) ವಿಶ್ವಸುಂದರಿಯಾಗಿ ಆಯ್ಕೆಯಾದ ಪ್ರಥಮ ಭಾರತೀಯ ಸುಂದರಿ ಯಾರು?
-ರೀಟಾ ಫೆರಿಯಾ.

399) ಭಾರತದ ಮೊದಲ ಮಹಿಳಾ ಇಂಜಿನಿಯರ್ ಯಾರು?
ಪಿ.ಕೆ. ಥ್ರೇಸಿಯಾ.

400) ಭಾರತದ ಪ್ರಥಮ ಮಹಿಳಾ ಗಗನಯಾತ್ರಿ ಯಾರು?
-ಕಲ್ಪನಾ ಚಾವ್ಲಾ.

Sunday 27 December 2015

ಗ್ರಹಣದಂದು ಕಂಡ ಕನಸು

ಗ್ರಹಣದಂದು ಕಂಡ ಕನಸು
,,,,,,,,,,,,,,,,,,,,,,,,,,,,,,,,
ಊರ ಜಾತ್ರೆಯ
ಸದ್ದು ಗದ್ದಲದಲ್ಲೂ
ಅವಳ  ಗೆಜ್ಜೆಯ ಧನಿಯ
ಕಿವಿ ಗುರುತಿಸಿದೊಡನೆಯೇ
  ತಡಮಾಡದೆ ಕಣ್ಣುಗಳು
ಅವಳ ತುಂಬಿಕೊಳಲು
ಕಾತರದಿ ಹುಡುಕಿದವು.
            ಅವಳ ಧನಿ ಎದೆಗೆ ತಾಗಿ
            ಮಲ್ಲಿಗೆಯ ಘಮಲು
            ನಾಸಿಕವ ತಲುಪಿ
             ಕಳೆದು ಹೋದ ನನ್ನ
              ಜಾತ್ರೆಯಲೇ  ಜೊತೆಯಾದಂತೆ
          ಕನಸೊಂದು ಬಿತ್ತು ..!
          ಸೂರ್ಯನಿಗೆ ಗ್ರಹಣ ಹಿಡಿದ
ಮಟ್ಮಟ್ಟ ಮಧ್ಯಾಹ್ನದಲ್ಲಿ. ..!
ಆಮೇಲೆ ನನಗೂ ಗ್ರಹಣ ಹಿಡಿಯಿತು. .!
ಒಲವ ಜಾತ್ರೆ ಏಂದೊ...?
ಚಂದ್ರ ಗ್ರಹಣ ಹಿಡಿದಂದಾದರೂ
ಎಲ್ಲಾ ನನಸಾಗಿ ಬಿಡಲಿ.!
ಎನ್ನುವ ಆಶಾವಾದ
ಇನ್ನೂ ಇದೆ ಎದೆಯಲಿ ಹಾಗೇ. ..!

,