ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Friday 8 January 2016

ಮಮತೆಯ ಸುಧೆಯ ಸಾಗರ ಮಾತೆ

ಮಮತೆಯ  ಸುಧೆಯ ಸಾಗರ ಮಾತೆ.
""""""""""""""":""""""""""""
ತಿಂಗಳಿಗೊಮ್ಮೆ ತಲುಪುವ ಪತ್ರಕೆ
ಕಾಯುತ್ತಿದ್ದ ಅಮ್ಮ
ಈಗ ದಿನ ಸಂಜೆ ನನ್ನ ಪೋನಿಗಾಗಿ
ಸಂಬ್ರಮದಿ ಕಾಯುತ್ತಾಳೆ ಎಂದು ಗೊತ್ತಾಗಿದೆ.
         ಮನೆಯ ಪೋನು ರಿಂಗಣಿಸಿದಾಗಲೆಲ್ಲಾ
         ಅದು ನನ್ನದೇ ಆಗಿರುತ್ತದೆಂದು
ಸಂಭ್ರಮದಿ ಹಂಬಲಿಸುವ ಅವಳ ಕರುಳ ವೀಣೆಯ ಧನಿ ನನ್ನ  ಎದೆತಾಗಿ ದೂರದೂರಿನ
ಮಾಯಾ  ನಗರದ ಬದುಕು ಸಾಕೆನಿಸಿದೆ. . !
      ಹುಟ್ಟಿದ ಹಳ್ಳಿ ಬಿಡಲೊಪ್ಪದ
ಅಮ್ಮನ ಊರಪ್ರೇಮದ ಆನಂದದ ಗುಟ್ಟು
ನನಗೀಗ ಅರಿವಾಗುತಿದೆ...!
    ಆದರೂ ನಗರ ಮೋಹ ಚಕ್ರವೂಹದಲ್ಲಿ
ಸೋಲೊಪ್ಪಿ ಹೈವೇಲಿ  ಸಂತಸ ಹುಡುಕುತಿಹೆ....!
  ಕೆಲವೇ ವರುಷ  ಶಾಲೆ  ಮೆಟ್ಟಿಲು ಹತ್ತಿದ್ದ   ಅಮ್ಮಳೀಗ ಪೇಸ್ಬೂಕ್ಕಲಿ ನನ್ನ ಕಾರ್ಯಕ್ರಮದ ಪೋಟೋ ನೋಡಿ  ಲೈಕಿಸಿ ಹಿಗ್ಗುತಿಹಳಂತೆ. !
ಬರೀ ಬಯಕೆಗಳ ಬಿಸಿಗೆ ಆಗೀಗ ಬತ್ತುವ
ನದಿಯಂತ ರೂಪಸಿ ಹೆಂಡತಿ ಪ್ರೀತಿ ಸನಿಹದಲ್ಲಿದ್ದರೂ
ಬತ್ತದ ಸಾಗರ ಅಮ್ಮನ ಪ್ರೀತಿಗೆ
ಯಾವ ರೂಪಕವು  ಪೂರ್ಣವಾಗುತ್ತಿಲ್ಲ.
ಮಮತೆಯ ಸುಧೆಯ ಸಾಗರ ಮಾತೆ ಆಕೆ.
- ರವಿರಾಜ್ ಸಾಗರ್
( ನನ್ನ ಬಾವ ಜೀವಿ.  ಸಂಕಲನದಿಂದ ನಿಮಗಾಗಿ)

No comments:

Post a Comment