ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Sunday 17 January 2016

ವಿರಹ ಕ ( ವಿ ) ತೆ.

ವಿರಹ  ಕ (ವಿ)ತೆ
ಅವಳಿಗಾಗಿ ಕವಿತೆಯಲ್ಲಿ ಅವಿತೆ
ಪದಗಳ ಹೂರಾಶಿಯಲಿ ಬೆರೆತೆ
ಪ್ರಾಸಗಳೂರ ಜಾತ್ರೆಯಲ್ಲಿ ಅಲೆದೆ
ತ್ರಾಸಾದರೂ ನುಡಿಗಟ್ಟುಗಳ ಬೆಟ್ಟದಲ್ಲಿ
ಅಲಂಕಾರ,  ಉಪಮೆಗಳ ಶೋದಿಸಿದೆ.
ಶೃತಿ, ಲಯ,ಛಂದಸ್ಸಿಗಾಗಿ  ಜಪಿಸಿದೆ;
ಕೊನೆಗೂ ಅವಳೆದುರು
ಕವಿತೆಯ ವಾಚಿಸಲು 
ಗುಂಡಿಗೆ ಗಟ್ಟಿ ಮಾಡಿ
ನಾಲಗೆಗೂ ದೈರ್ಯ ಹೇಳಿದೆ;
    ಆದರೂ ಮತ್ತೆ  ಹೇಳದೆ ಅವಿತೆ...!
     ಅವಳೆದುರು  ಬೆವರಿದೆ;
    ನನ್ನೊಲವ ಕವಿತೆ,
    ಕತೆಯಲ್ಲಿ ಮುಗಿಸಿದೆ...!
ಇಂಗಿ  ಹೋದ ಕಣ್ಣೀರ ಕಣ್ಣಿಗೆ ಕಂಡದ್ದು.!
ಅವಳ ಕೈಲಿದ್ದ ಮದುವೆಯ ಕರೆಯೋಲೆ .
ಆದರೂ ಎದೆಯೊಡೆಯದೇ ಜೀವ ಉಳಿದದ್ದು
ಕವಿತೆಯ ತಂಗಿ 'ಕವನ' ಇರುವಳಲ್ಲಾ
ಎನ್ನುವ  ಆಶಾಬಾವ..!
ರವಿರಾಜ್ ಸಾಗರ್.

No comments:

Post a Comment