ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Saturday 31 October 2015

ಮುಗಿಲೂರ ಓಣಿಯ ಸ್ವಚ್ಛಗೊಳಿಸುವರಾರು. ?


ಮುಗಿಲಲ್ಲಿ ಆಡಿ ನಲಿಯುತ್ತ
ಮಳೆ ಸುರಿಸುತ್ತಿದ್ದ ಮೋಡಗಳೆಲ್ಲ
ಹೆದರಿ ಓಡಿ ಹೋದವು.
ಏಕೆ ಗೊತ್ತಾ....?
     ಮುಗಿಲೂರ ಓಣಿ ಓಣಿಯಲಿ
     ಕೊಳಕು ಹೊಗೆ, ರಕ್ಕಸ ಶಬ್ಧ ಉಗುಳುವ
    ದಿನವೆಲ್ಲ ಆಕಾಶದಾಗೆ ಓಡಾಡುವ           ರಾಜಕಾರಣಿಗಳ  ವಿಮಾನ,
ರಾಕೆಟ್, ಕ್ಷಿಪಣಿಗಳನು ಕಂಡು ಬೆದರಿ
ಅದೆಲ್ಲಿಗೊ ನೆಮ್ಮದಿ ಹುಡುಕಿಕೊಂಡು
ಅಲೆಯುತಿವೆ.ಪಾಪ...!
ಕೊಳಕು ನರನ ಊರಿಗೆ ಬರಲು ಹಿಂಜರಿಯುತಿವೆ ಅವು.
ಇಲ್ಲಿ ನರನ ಊರಲಿ ನೇಣು ಹಾಕಿಕೊಂಡವರಿಗೆ ಲಕ್ಷ ಕೊಟ್ಟರೇನು.?
ಮಾನವ ಹಕ್ಕುಗಳ ರಕ್ಷಣೆಗೆ
ನೂರು ನಿಯಮ ಮಾಡಿದರೇನು..?
ಸಕಲ ಜೀವರಾಶಿಯ ಸಲಹೋ
ಮೇಘಗಳ  ಕಾಪಾಡದಿರೆ ...
ಕಣ್ಣಲಿ ಕಣ್ಣಿರಿಗೂ
ಕೊರತೆಯಾದೀತು  ಜೋಕೆ. .?
ಸ್ವಚ್ಛ ಭಾರತ..! ಸ್ವಾಸ್ಥ್ಯ ಭಾರತ...!
ಸಾಲದು ,ಮುಗಿಲೂರಲೂ ಸ್ವಚ್ಛತೆ ಬೇಕು.
ಮೇಘಗಗಳು ನಕ್ಕರೆ
ಧರೆಯೆಲ್ಲ ಮಳೆ ನೆನಪಿರಲಿ.

No comments:

Post a Comment