ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Saturday 17 October 2015

ಪ್ರೇಮ ಪುಷ್ಪ

ಪ್ರೇಮ ಪುಷ್ಪ.
.................
ನೂರು ತರದ ಹೂಗಳೆಲ್ಲಾ
ಹೊಟ್ಟೆ ಕಿಚ್ಚಲಿ ಬಾಡಿಹೋದವಲ್ಲೇ....!
ಕೊಳದಿ ಹೊಳೆವ ತಾವರೆಯೂ
ಕೊರಗಿ ಸೊರಗಿ  ಅಸುನೀಗಿತಲ್ಲೇ...!
      ಮುಗಿಲಿಗೆ ಮನಸೋತ
     ಮಲ್ಲಿಗೆ ಕೂಡ ಷಡ್ಯಂತ್ರ ಮಾಡಿ
ನಿನ್ನ ಮೇಲೆ ಮುಳ್ಳುಗಳ ಚೂ ಬಿಟ್ಟಿತಲ್ಲೇ....     ಆದರೇನು, ಎಲ್ಲಾ ಪ್ರೇಮಿಗಳ ಪ್ರೇಮ  ಪುಷ್ಪ    ಸಾರ್ವಭೌಮ ಸುಂದರಿ ನೀನೇ ನಲ್ಲೇ. !
            ಮೋಹಕ ನಗುವಿನ  
            ಮನಸೆಳೆವ ಕೆಂಗುಲಾಬಿ ಮುಖಿ
             ಸಾಟಿಯಲ್ಲ ಆ ಚಂದ್ರಮುಖಿ....!
ರೂಪಕ ನೀನು ಜಗದ ರೂಪಶ್ರೀಯರಿಗೆ...
ಉಪಮಾನ ನೀನು....!
ಉಭಯಲೋಕದೆಲ್ಲ ಊರ್ವಶಿ ಕುಲದವರಿಗೆ
ನಿನ್ನ ಚೆಲುವು, ನಿನ್ನ ನಗುವು
ನಿನ್ನ ಬಣ್ಣ ನಿನ್ನಕಣ್ಣ
ಹೊಲುವರಾರೀರುವರೇ ಈ ಜೀವ ಜಗದಲಿ?

No comments:

Post a Comment