ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Sunday, 4 October 2015

ಮುಮುಗಿಯದ ಯುಗಳ ಗೀತೆ

ಮುಗಿಯದ ಯುಗಳ ಗೀತೆ
""""""""""""""""""""
ಮುಗಿಲಿಗೂ ಧರಣಿಗೂ ಕದನ;
ಗುಡು ಗುಡು ಗುಡುಗಿತು
ಮಿರಿ ಮಿರಿ ಮಿಂಚಿತು
ಪಾಪ  ಧರಣಿ ಹೆದರಿ ನಡುಗಿತು....!
        ವೀಕು ಹೃದಯದ ಮುಗಿಲು...
          ಧರಣಿಗೆ ನೋವು ಕೊಟ್ಟೆನೆಂದು ಮರುಗಿ
          ಅತ್ತೂ ಅತ್ತೂ ಕಣ್ಣೀರ ಧಾರೆ ಸುರಿಸಿತು.
ಧರಣಿ  ತಂಪಾಯಿತು
ಎಲ್ಲ ಮರೆತು ಹಸಿರುಟ್ಟು ನಲಿಯಿತು.
ತಂಗಾಳಿಯ ಜೊತೆ ತೇಲಿ
  ಮುಗಿಲ ಜೊತೆ ಯುಗಳ ಗೀತೆ ಹಾಡಿತು.
          ಅಂದಿನಿಂದ ಇಂದಿನವರೆಗೂ
           ಹಾಡುತ್ತಲೇ ಇವೆ...!
           ಆಗೀಗ ಮುನಿದು ಮತ್ತೆ ಮತ್ತೆ ....!
          ಎಲ್ಲ ಜೋಡಿಗಳಂತೆಯೇ ತೇಟು..!

No comments:

Post a Comment

ಮಕ್ಕಳ ಮನೆ ಮನೆಗೆ marks rigister app

📱 'ಮಾರ್ಕ್ಸ್ ರಿಜಿಸ್ಟರ್' (Marks Register) ಆ್ಯಪ್ !!   ಶಿಕ್ಷಕರ ಶ್ರಮಕ್ಕೆ ತಂತ್ರಜ್ಞಾನದ ಆಸರೆ! ಶಿಕ್ಷಕರ ಕೆಲಸ ಇಂದು ಮುಂಚಿನಂತಿಲ್ಲ. ಬದಲಾಗುತ್ತಿರುವ...