ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Saturday, 24 October 2015

ಹೃದಯದ ವಿಧ್ಯೆ


ಮೂಕ ಭಾಷೆಯ ಬಾವ
ಎದೆಯ ಕಲಕುವುದಾದರೂ
ಎಲ್ಲಾ ಬಾವಕೆ ಕಾರಣಗಳನು
ಅರಿವುದು  ಹೇಗೆ.....?
    ಮಗುವಿನ ನಗುವಿನ ಜೊತೆ
ನಾವು ನಗುವೆವಾದರೂ
ಅಳುವಿನ ಜೊತೆ ಅಳುವವರು ಯಾರು. .?
ಅಳುವಿಗೆ ಕಾರಣ ಹುಡುಕುವುದು ಹೇಗೆ. .?
ಮಗುವಿನ ಮಲ್ಲಿಗೆಯ ಮುದ್ದು ಮುಖ
ಮನಸನು ಅರಳಿಸುವುದಾದರೂ
ಅದು ಯಾವಾಗ ಬೇಕಾದರೂ
ಅಳುತ್ತಾ ನಮ್ಮನು ಬಾಡಿಸಿ
ಅವನ ಸುತ್ತಲೂ ಕಾವಲಿರುವಂತೆ ಮಾಡುವ ಕಿಲಾಡಿತನಕೆ ಸೋಲಲೇ ಬೇಕಲ್ಲ...!
ಮಗುವಿನ ಅಳುವಿನ ಭಾಷೆಯ
ಓದುವ  ಹೃದಯದ ವಿಧ್ಯೆ ಕಲಿವುದು ಹೇಗೆ.?

No comments:

Post a Comment

ಮಕ್ಕಳ ಮನೆ ಮನೆಗೆ marks rigister app

📱 'ಮಾರ್ಕ್ಸ್ ರಿಜಿಸ್ಟರ್' (Marks Register) ಆ್ಯಪ್ !!   ಶಿಕ್ಷಕರ ಶ್ರಮಕ್ಕೆ ತಂತ್ರಜ್ಞಾನದ ಆಸರೆ! ಶಿಕ್ಷಕರ ಕೆಲಸ ಇಂದು ಮುಂಚಿನಂತಿಲ್ಲ. ಬದಲಾಗುತ್ತಿರುವ...