ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Tuesday 20 October 2015

ರೈತ ಪ್ರೇಮಿ

ರೈತ ಪ್ರೇಮಿ.
ಅವನೆದೆಯ ಹೊಲವ ಅಡವಿಟ್ಟು....
ಸಾಲ ಮಾಡಿದ್ದ;
ಅವಳೆದೆಯ ಹೊಲದಲ್ಲಿ
ಒಲವ ತೋಟ ಮಾಡಿ
ಫಸಲು ಪಡೆಯಲು ಕನಸು ಕಂಡಿದ್ದ.!
  ಥಿಯೇಟರ್, ಕ್ಲಬ್ಬುಗುಳ ಮಬ್ಬು ಬೆಳಕಲಿ
ಗೊಬ್ಬರ,ಔಷಧಿ-ಚಾಕ್ಲೇಟ್, ಐಸ್ಕ್ರೀಮ್
ಎಲ್ಲಕೂ ಹಣವಾ ಸುರಿದಿದ್ದ.
ಆದರೂ ಎಂತದೋ ರೋಗ ಬಂತು...!
ಫಸಲಿರಲಿ , ಅಸಲೂ ಇಲ್ಲ. ..
ಮುತ್ತು ಬೆಳೆವ ಆಸೆಯ ನಡುವೆ
ಚಕ್ರ ಬಡ್ಡಿ ಕೊರಳಿಗೆ ಬಂದು
ಆತ್ಮಹತ್ಯೆ ಶರಣಾದ ದೇವಿದಾಸ..,!
ಪತ್ರಿಕೆಗಳ ಮುಖಪುಟದಲ್ಲಿ ಕೊನೆಗೂ ಬಂದ
ರೈತನ ಆತ್ಮ ಹತ್ಯೆ ಎಂದು ಸುದ್ದಿಯಾದ.
    ಯಾರೋ ಕೊಟ್ಟ ಲಕ್ಷದ ಚೆಕ್ಕು
   ಸೂತಕದ  ಮನೆಯೊಳಗೆ  
     ಆಸೆಯ  ಮನಗಳ ಕೆಣಕುತ್ತಿತ್ತು....!
ಒಲವ ಪಸಲು ಕಾಣದ ಹಸಿರು, ಉಸಿರು;
ಮಣ್ಣಿಂದ  ಮಣ್ಣಿಗೇ ಹೊರಟಿತ್ತು.
ಕಲ್ಲು ಹೃದಯ , ಕರುಣೆ ಇಲ್ಲದ ಮುಗಿಲು
ಒಲವ ಫಸಲು ನೀಡದ ವಸುಂಧರೆ..!
ಎಲ್ಲಾ ಸೇರಿ ಶೋಕದ ನಾಟಕ ಮುಗಿಸಿದರು.

No comments:

Post a Comment