ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Tuesday 2 October 2018

ವಿಶ್ವ ಕನ್ನಡ ಸಮ್ಮೇಳನ ಬಗ್ಗೆ ಒಂದಿಷ್ಟು ತಿಳಿಯಿರಿ

ವಿಶ್ವ ಕನ್ನಡ ಸಮ್ಮೇಳನವು ಜಗತ್ತಿನಾದ್ಯಂತ ಹರಡಿರುವ ಕನ್ನಡಿಗರನ್ನು ಒಗ್ಗೂಡಿಸಿ ಕನ್ನಡ ನಾಡು-ನುಡಿಗೆ ಸಂಬಂಧಿಸಿದ ವಿಷಯಗಳನ್ನು ಕುರಿತು ನಡೆಸುವ ಸಮ್ಮೇಳನ. ಈವರೆಗೆ ವಿಶ್ವ ಕನ್ನಡ ಸಮ್ಮೇಳನವು ಎರಡು ಬಾರಿ ನಡೆದಿದೆ. ಇನ್ನು ಮುಂದೆ ಐದು ವರ್ಷಗಳಿಗೊಮ್ಮೆ ನಡೆಸುವ ಯೋಜನೆಯನ್ನು ಎರಡನೆಯ ಸಮ್ಮೇಳನದಲ್ಲಿ ಘೋಷಿಸಲಾಗಿದೆ.

ಮೊದಲನೆಯ ವಿಶ್ವ ಕನ್ನಡ ಸಮ್ಮೇಳನ

ಮೊದಲನೆಯ ವಿಶ್ವ ಕನ್ನಡ ಸಮ್ಮೇಳನವು ೧೯೮೫ರಲ್ಲಿಮೈಸೂರಿನಲ್ಲಿ ನಡೆಯಿತು. ಸಾಹಿತಿ ಶಿವರಾಮ ಕಾರಂತರಅಧ್ಯಕ್ಷತೆಯಲ್ಲಿ ರಾಷ್ಟ್ರಕವಿ ಕುವೆಂಪುರವರು ಈ ಸಮ್ಮೇಳನವನ್ನು ಉದ್ಘಾಟಿಸಿದರು.

ಎರಡನೆಯ ವಿಶ್ವ ಕನ್ನಡ ಸಮ್ಮೇಳನ

ಎರಡನೆಯ ವಿಶ್ವ ಕನ್ನಡ ಸಮ್ಮೇಳನವು ೨೦೧೧ರಮಾರ್ಚ್ ೧೧, ೧೨, ೧೩ರಂದು ಬೆಳಗಾವಿಯಲ್ಲಿನಡೆಯಿತು. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರಅಧ್ಯಕ್ಷತೆಯಲ್ಲಿ ಇನ್ಫೋಸಿಸ್ ಸಂಸ್ಥೆಯ ಸ್ಥಾಪಕ ಎನ್ ಆರ್ ನಾರಾಯಣಮೂರ್ತಿಯವರು ಈ ಸಮ್ಮೇಳನವನ್ನು ಉದ್ಘಾಟಿಸಿದರು. ವಿಶೇಷ ಅತಿಥಿಯಾಗಿ ಶ್ರೀಮತಿ ಐಶ್ವರ್ಯಾ ರೈ ಬಚ್ಚನ್ ಭಾಗವಹಿಸಿದ್ದರು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ನಾಡೋಜ ದೇ ಜವರೇಗೌಡರು ವಹಿಸಿದ್ದರು. ಈ ಸಮ್ಮೇಳನಕ್ಕಾಗಿ ಸಾವಿರಾರು ಜನ ದೇಶ ವಿದೇಶಗಳಿಂದ ಆಗಮಿಸಿದ್ದರು.

Monday 1 October 2018

ಗಾಂಧೀಜಿಯವರ 15 ಸ್ಮಾರಕಗಳು ಎಲ್ಲೆಲ್ಲಿವೆ ಗೊತ್ತೇ...

ಗಾಂಧೀಜಿಯವರ ಚಿತಾಭಸ್ಮದಿಂದ ಸ್ಥಾಪಿತವಾದ ಗಾಂಧೀ ಸ್ಮಾರಕಗಳು ದೇಶದ 15 ಕಡೆಗಳಲ್ಲಿವೆ. ವಿಶೇಷವೆಂದರೆ ಅವುಗಳಲ್ಲಿ 12 ಕರ್ನಾಟಕದಲ್ಲಿಯೇ ಇವೆ. ಇನ್ನೂ ವಿಶೇಷವೆಂದರೆ 10 ಸ್ಮಾರಕಗಳು ಉತ್ತರ ಕರ್ನಾಟಕ ಭಾಗದಲ್ಲಿವೆ.

•ಹುಬ್ಬಳ್ಳಿಯ ಅಯೋಧ್ಯಾನಗರ,
•ಹುಬ್ಬಳ್ಳಿಯ ಮಹಿಳಾ ವಿದ್ಯಾಪೀಠ,
•ಧಾರವಾಡದ ಆಝಾದ್ ಉಪವನ,
•ಬೆಳಗಾವಿಯ ಮುಗಟಖಾನ ಹುಬ್ಬಳ್ಳಿ,
•ರಾಮದುರ್ಗ ತಾಲೂಕಿನ ಸುರೇಬಾನ,
•ಬಳ್ಳಾರಿಯ ಕೌಲಪೇಟ, ಕೂಡ್ಲಗಿ,
•ಹಾಸನದ ಅರಸಿಕೇರಿ,
•ಗದಗನ ಬೆಟಗೇರಿ,
•ಹಾವೇರಿಯ ಸಂಗೂರ, ಕರ್ಜಗಿ
ಹಾಗೂ ಮಡಿಕೇರಿ
ಸೇರಿದಂತೆ 12 ಸ್ಥಳಗಳಲ್ಲಿಯೇ ಚಿತಾಭಸ್ಮ ಸ್ಮಾರಕವಿರುವುದು ವಿಶೇಷ. ಅದರಲ್ಲಿಯೂ ಗಾಂಧೀಜಿಯವರಿಗೆ ಪ್ರಿಯವಾದ ದಲಿತಕೇರಿಯಲ್ಲಿ ಸ್ಥಾಪಿತವಾದ ಗಾಂಧಿ ಸ್ಮಾರಕ ಎಂಬ ಹೆಗ್ಗಳಿಕೆ ಹುಬ್ಬಳ್ಳಿ ಅಯೋಧ್ಯಾನಗರ ಸ್ಮಾರಕಕ್ಕಿದೆ. ( ಮಾಹಿತಿ: ಪ್ರಕಾಶ .ಎಸ್. ಶೇಟ್ ) ಗಾಂಧಿ ಜೀವಂತಿಕೆಯ ತಾಣಗಳೆನಿಕೊಂಡಿರುವ ಈ ಸ್ಮಾರಕಗಳು, ಇತಿಹಾಸ ಸೇರುವ ಹಂತದಲ್ಲಿವೆ.

*ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು*

Saturday 22 September 2018

ಮಹಾಕವಿಯ ಮಕ್ಕಳ ನಾಟಕ

ಮಕ್ಕಳ ನಾಟಕಗಳೆಂದರೆ ಅವರ ಸಮಸ್ಯೆ , ನೋವು, ಕಲಿಕೆ, ಸಮಾಜದ ವಾಸ್ತವ ಸಮಸ್ಯೆಗಳ ಉದ್ದುದ್ದ ಸಂಬಾಷಣೆ, ಹಿಂದಿನ ಯಾವುದೋ ವ್ಯಕ್ತಿ  ಚರಿತ್ರೆ ಅಭಿನಯ , ಇನ್ನಿತರೆ ಅಂಶಗಳತ್ತಲೇ ವಾಲುತ್ತಿರುವ ನಾಟಕಕಾರರಿಗಿಂತ ಕೊಂಚ ವಿಭಿನ್ನವಾಗಿ ಯೋಚಿಸಿ ಕುವೆಂಪು ಅವರು ಬರೆದ ವಿಶಿಷ್ಟ ಗೀತ ನಾಟಕ ಈ ಮೋಡಣ್ಣನ ತಮ್ಮ. ಬಹಳಷ್ಟು ವಿಷಯ , ವಸ್ತು ಸಂಭಾಷಣೆ ,ಭಾಷೆಯ ಬಳಕೆ ಮಕ್ಕಳ ಆಸಕ್ತಿ ಮತ್ತಿತರ ಅಂಶ ದತ್ತ ಗಮನವಿಟ್ಟು ಬರೆದ ವಿಶೇಷ ಪ್ರಯೋಗದ ನಾಟಕ ವಾಗಿ ಇದು ಗಮನ ಸೆಳೆಯಿತು. ಮಹಾಕಾವ್ಯ ಬರೆದರೂ ಮಕ್ಕಳ ಕಾವ್ಯ, ನಾಟಕಕ್ಕೂ ಕುವೆಂಪು ಅವರು ಅಂದೆ ತೊಡಗಿಕೊಂಡು ವಿಶಿಷ್ಟ ನಾಟಕ ಕವಿತೆ ಬರೆದು   ಮಕ್ಕಳ ಸಾಹಿತ್ಯ ವಿಸ್ತಾರಗೊಳಿಸಿದ್ದಾರೆ.ಕೆಲವರಿಂದ ಮಕ್ಕಳ ಸಾಹಿತ್ಯ ಚರ್ಚೆ  ನಿರ್ಲಕ್ಷೆ ಗೋಳಗಾದದ್ದೂ ಮಾತ್ರ ಗಂಭೀರ ವಿಷಯ.

Thursday 20 September 2018

ಕಾಗುಣಿತಗಳಿಲ್ಲದ ಪದ್ಯ

ಕಾಗುಣಿತಾಕ್ಷರಗಳೇ ಇಲ್ಲದ ಪದ್ಯ!

ಘನರಸಶಯನತನಯ ಮದಮಥನ ಧವಳಘನ
ಘನವರದ ಶತದಳನಯನ ನಯನಪದಕಮಳ
ವನದಗಮನಧವ ಶತದಳವರತಪನದ ದಹನ ನಯನಪರತರ ಗದಧರ
ಸನಕನತ ಸಮದಶಯನ ಶಮನಶಮನ ಭವರ
ಮನಭಯ ಶಮನ ಗರಳಧರ ಗರಳಧರ ಪರಗ
ಮನತನಯ ಶಶಧರಧರ ಧರವರಭವನ ಕನದನಘ ಭವಹರಪರಮವ

(ಅರ್ಥ- ಸಮುದ್ರಶಯನನಾದ ವಿಷ್ಣುವಿನ ಮಗ ಮನ್ಮಥನ ಗರ್ವಭಂಗ ಮಾಡಿದವ, ಬೆಳ್ಳಗಿನ ಮೈಯವ, ಶ್ರೇಷ್ಠ ವರಗಳನ್ನು ನೀಡುವವ, ವಿಷ್ಣುವಿನ ಕಣ್ಣಿನಿಂದ ಅರ್ಚಿಸಲ್ಪಟ್ಟ ಪಾದಪದ್ಮವುಳ್ಳವ, ಚಂದ್ರ ಸೂರ್ಯ ಮತ್ತು ಅಗ್ನಿಗಳನ್ನೇ ಕಣ್ಣಾಗಿ ಉಳ್ಳವ, ಶ್ರೇಷ್ಠ, ರೋಗನಿವಾರಕ, ಸನಕನಿಂದ ನಮಸ್ಕೃತನಾದವ, ಯಮನನ್ನು ನಿಗ್ರಹಿಸಿದವ, ಜನ್ಮ ಹಿಂಗಿಸಿದವ, ಭಯ ಹೋಗಲಾಡಿಸಿದವ, ವಿಷಕಂಠ, ಚಂದ್ರಶೇಖರ, ಕೈಲಾಸವಾಸಿ, ಪಾಪರಹಿತ, ಭವನೆಂದೂ ಹರನೆಂದೂ ಕೀರ್ತಿತ ಈಶ್ವರ). 

ಪದ್ಮಣಾಂಕ ಎಂಬ ಕವಿಯ ಪದ್ಮರಾಜಪುರಾಣದಲ್ಲಿನ ಪದ್ಯ

Friday 14 September 2018

bhumi butti chittara- raviraj sagar/ಭೂಮಿ ಬುಟ್ಟಿ ಚಿತ್ತಾರ ಹಾಗು ಹಸೆಗೋಡೆ ಚ...



ನಮ್ಮ ಜನಪದರ ಹಸೆಗೋಡೆ ಹಾಗು ಭೂಮಿ ಬುಟ್ಟಿ ಚಿತ್ತಾರ ಕಲೆ ಪರಿಚಯ - ನಮ್ಮೂರ ಜಾನಪದ ಅನುಸಂಧಾನದಲ್ಲಿ ..

ಈ ಲಿಂಕ್ ಕ್ಲಿಕ್ ಮಾಡಿ ..ಸಬ್ ಸ್ಕ್ರೈಬ್ / subscraibe ಬಟನ್ ಒತ್ತಿ ಹೆಚ್ಚು ಜಾನಪದ ವಿಡಿಯೋಗಳಿಗಾಗಿ ಬೆಂಬಲಿಸಿ

Saturday 1 September 2018

ಕಾರಣ ನೀನೇನಾ ..

ಕಾರಣ ನೀನೇನಾ....

ಪ್ರೀತಿಯ ಬೆಳಕು ಚೆಲ್ಲಿ
ವಿರಹದ ನೆರಳೂ   ಹಿಂಬಾಲಿಸುವಂತೆ ಮಾಡಿದವಳು .....,?
ಸಾಗರದ ದಂಡೆಯಲ್ಲಿ ಜೊತೆ ಜೊತೆಗೆ ಹೆಜ್ಜೆ ಹಾಕಿ....
ಅವುಗಳನ್ನು ಅಳಿಸಿಬಿಡುವಂತೆ 
ಅಲೆಗಳನು ಚೂ ಬಿಟ್ಟಿದ್ದು...?
ಒಲವ ಬಳ್ಳಿಯಲಿ
ಹೂ ಬಿಟ್ಟು  ಅರಳುವವರೆಗೂ ನೀರುಣಿಸಿ
ಸಂಜೆವೇಳೆಗೆ ಬಾಡುವ ಶಾಪ ಕೊಟ್ಟಿದ್ದು...?
ಸ್ವರ್ಗದಲೇ ಮದುವೆ ನಿಶ್ಚಯ ಆಗಿರುವುದೆಂದು
ಬದನೆ ಶಾಸ್ತ್ರ ಅದ್ಯಾರಿಂದಲೋ ಹೇಳಿಸಿ
ಒಲವ ವಿಶ್ವಾಸದಲ್ಲಿ ತೇಲಿಸಿ
ಶ್ವಾಶವೆ ನಿಲ್ಲುವಂತೆ ಎದೆಗೆ ಬಂಡೆಕಲ್ಲು ತಳ್ಳಿದ್ದು...
ವಿಧಿ ಹಡೆದು ,ಹೆಣೆದು ಕಳಿಸಿದ ಬಲೆಯ
ನೀ ನನಗೆ ಬೀಸಲು ಕಾರಣವಿದೆಯ ಹೇಳಿಬಿಡು...

ಎಲ್ಲೋ ತೇಲಿ ಹೊರಟ ಮೋಡ ನೀನು..
ಹೆಪ್ಪುಗಟ್ಟಿ  ಒಲವು ಉಕ್ಕಿಸಿ
ಒಲವ ವರ್ಷಧಾರೆ ಹರಿಸಿ
ಬಯಲು ಸೀಮೆಯ ಬಿಸಿಲಲಿ
ಒಂಟಿ ಮಾಡಲು ಕಾರಣವೆನಿತ್ತು...?
ಮತ್ತೆ ಮತ್ತೆ ಕೇಳಲಾರೆ ಕಾರಣ

ಬದುಕೀಗ  ಅಲ್ಪಾವರಣ...                ರವಿರಾಜ್ ಸಾಗರ್💕🌹🌹

Thursday 16 August 2018

ಉಪ್ಪಿನ ಗೊಂಬೆ

ಉಪ್ಪಿನ ಗೊಂಬೆ ಸದಾ ಮಕ್ಕಳಿಗೆಂದೇ ಬರೆಯುವ ಚಂದ್ರಕಾಂತ ಕರದಳ್ಳಿಯವರು ಬರೆದ ಮಕ್ಕಳ ಕಿರು ಕಾದಂಬರಿ 'ಉಪ್ಪಿನ ಗೊಂಬೆಯನ್ನು ಮೊನ್ನೆ ಮಕ್ಕಳ ಸಾಹಿತ್ಯ ಸಂವಾದ ಕಾರ್ಯಕ್ರಮದಲ್ಲಿ ಪ್ರೀತಿಯಿಂದ ನೀಡಿದರು. ಜೊತೆಗೆ ಗಾಡಿ ಬಂತು ಗಾಡಿ, ಚಂದಮಾಮ ಒಬ್ಬನೇ ಇದ್ದೀಯ , ಬಯಲು ಸೀಮೆಯಿಂದ ಕರಾವಳಿಗೆ ಸಹ ನೀಡಿದ್ದರು ಅವುಗಳಲ್ಲಿ ನನ್ನನ್ನು ಗಮನ ಸೆಳೆದದ್ದು ಉಪ್ಪಿನಗೊಂಬೆ .ಮಕ್ಕಳು ಒದಲೇಬೇಕಾದ ಕೃತಿ. ಉಪ್ಪನ್ನು ತಾಯಾರಿಸುವ ಮಡಿಯಲ್ಲಿ ತಾನಾಗಿ ರೂಪು ತಳೆದ ಉಪ್ಪಿನ ಗೊಂಬೆ ಊರು ತಿರುಗಲು ಆರಂಭಿಸುತ್ತದೆ. ಅದು ಪ್ರವಾಸ ಹೊತಾಡುತ್ತ ಚೆನ್ನ ಪಟ್ಟಣ ತಲುಪಿ ಅಲ್ಲಿನ ಮುದ್ದಾದ ಮರದ ಗೊಂಬೆಗಳೊಂದಿಗೆ ಸ್ನೇಹ ಬೆಳೆಸಿಕೊಂಡು ತನ್ನ ಊರಾದ ಸಮುದ್ರದತ್ತ ಅವರನ್ನು ಕರೆದುಕೊಂಡು ಬರುತ್ತದೆ. ಅವುಗಳಿಗೆ ತಾವು ಹುಟ್ಟಿದ ಕಾಡನ್ನು ತೋರಿಸುತ್ತದೆ.. ಹೀಗೆ ಸಾಗುತ್ತ ಇದು ಒಂದು ಪ್ರವಾಸ ಕ್ತನವಾಗುತ್ತ ಬೆಳೆಯುವ ಮಕ್ಕಳ ಕಾದಂಬರಿಯಾಗಿ ಸಾಗಿ ನಿಮ್ಮನ್ನು ಓದಿಸಿಕೊಂಡು ಹೋಗುತ್ತದೆ. ಮಕ್ಕಳಿಗಂತೂ ತುಂಬಾ ಆಪ್ತವಾಗುವತ್ತಾ ಸಾಗುತ್ತದೆ. ಆ ಉಪ್ಪಿನ ಗೊಂಬೆ ಕೊನೆಗೆ ಸಾಗುತ್ತಾ ಶಿವಶರಣರ ನಾಡು ಉಳವಿಗೂ ಬಂದು ಜೋಯಿಡಾ ಕಾಡು ಸುತ್ತಿ ವಾಸ ಮಾಡುತ್ತಾ ಆಮೇಲೆ ಸಮುದ್ರಕ್ಕೆ ಸಾಗಿ ತನ್ನ ತಾಯಿಯನ್ನು ಮರದ ಗೊಂಬೆಗಳಿಗೆ ಪರಿಚಯಿಸುವ ಕತೆಯು ಇಲ್ಲಿ ಸಾಗುತ್ತದೆ. ಉಪ್ಪಿನ ಗೊಂಬೆ ಎನ್ನುವ ಕಲ್ಪನೆಯೇ ಮಕ್ಕಳಿಗೆ ಕುತೂಹಲ ಕೆರಳಿಸುತ್ತದೆ .ಇನ್ನು ಅದರ ಕತೆ ಮತ್ತೂ ಮುಂದೆ ಸಾಗಿ ಕೃತಿ ಓಂದೆ ಗುಕ್ಕಿಗೆ ಓದಿಸಿಕೊಂಡು ಹೋಗದೆ ಬಿಡದು. ಮಕ್ಕಳಿಗಾಗಿ ಸರಳ ಭಾಷಾ ಬಳಕೆ, ಸರಳ ಸಂಬಾಷಣೆ ಮನೋರಂಜನೆಗೆ ಬೇಕಾದದ್ದೆಲ್ಲ ಈ ಕೃತಿಯಲ್ಲಿದೆ . ನೀವು ನಿಮ್ಮ ಮಕ್ಕಳ ಹತ್ತಿರ ಇಂತಹ ಕೃತಿ ಇಡಿ , ನೀವೂ ಜೊತೆಗೂಡಿ ಓದಿ. ನಿಮ್ಮ ಮಕ್ಕಳು ಟಿ ವಿಯನ್ನು ದೂರ ಇಡುತ್ತಾರೆ. ರವಿರಾಜ್. ಸಾಗರ್. .