ಉಪ್ಪಿನ ಗೊಂಬೆ
ಸದಾ ಮಕ್ಕಳಿಗೆಂದೇ ಬರೆಯುವ ಚಂದ್ರಕಾಂತ ಕರದಳ್ಳಿಯವರು ಬರೆದ ಮಕ್ಕಳ ಕಿರು ಕಾದಂಬರಿ 'ಉಪ್ಪಿನ ಗೊಂಬೆಯನ್ನು ಮೊನ್ನೆ ಮಕ್ಕಳ ಸಾಹಿತ್ಯ ಸಂವಾದ ಕಾರ್ಯಕ್ರಮದಲ್ಲಿ ಪ್ರೀತಿಯಿಂದ ನೀಡಿದರು. ಜೊತೆಗೆ ಗಾಡಿ ಬಂತು ಗಾಡಿ, ಚಂದಮಾಮ ಒಬ್ಬನೇ ಇದ್ದೀಯ , ಬಯಲು ಸೀಮೆಯಿಂದ ಕರಾವಳಿಗೆ ಸಹ ನೀಡಿದ್ದರು ಅವುಗಳಲ್ಲಿ ನನ್ನನ್ನು ಗಮನ ಸೆಳೆದದ್ದು ಉಪ್ಪಿನಗೊಂಬೆ .ಮಕ್ಕಳು ಒದಲೇಬೇಕಾದ ಕೃತಿ.
ಉಪ್ಪನ್ನು ತಾಯಾರಿಸುವ ಮಡಿಯಲ್ಲಿ ತಾನಾಗಿ ರೂಪು ತಳೆದ ಉಪ್ಪಿನ ಗೊಂಬೆ ಊರು ತಿರುಗಲು ಆರಂಭಿಸುತ್ತದೆ. ಅದು ಪ್ರವಾಸ ಹೊತಾಡುತ್ತ ಚೆನ್ನ ಪಟ್ಟಣ ತಲುಪಿ ಅಲ್ಲಿನ ಮುದ್ದಾದ ಮರದ ಗೊಂಬೆಗಳೊಂದಿಗೆ ಸ್ನೇಹ ಬೆಳೆಸಿಕೊಂಡು ತನ್ನ ಊರಾದ ಸಮುದ್ರದತ್ತ ಅವರನ್ನು ಕರೆದುಕೊಂಡು ಬರುತ್ತದೆ. ಅವುಗಳಿಗೆ ತಾವು ಹುಟ್ಟಿದ ಕಾಡನ್ನು ತೋರಿಸುತ್ತದೆ.. ಹೀಗೆ ಸಾಗುತ್ತ ಇದು ಒಂದು ಪ್ರವಾಸ ಕ್ತನವಾಗುತ್ತ ಬೆಳೆಯುವ ಮಕ್ಕಳ ಕಾದಂಬರಿಯಾಗಿ ಸಾಗಿ ನಿಮ್ಮನ್ನು ಓದಿಸಿಕೊಂಡು ಹೋಗುತ್ತದೆ. ಮಕ್ಕಳಿಗಂತೂ ತುಂಬಾ ಆಪ್ತವಾಗುವತ್ತಾ ಸಾಗುತ್ತದೆ.
ಆ ಉಪ್ಪಿನ ಗೊಂಬೆ ಕೊನೆಗೆ ಸಾಗುತ್ತಾ ಶಿವಶರಣರ ನಾಡು ಉಳವಿಗೂ ಬಂದು ಜೋಯಿಡಾ ಕಾಡು ಸುತ್ತಿ ವಾಸ ಮಾಡುತ್ತಾ ಆಮೇಲೆ ಸಮುದ್ರಕ್ಕೆ ಸಾಗಿ ತನ್ನ ತಾಯಿಯನ್ನು ಮರದ ಗೊಂಬೆಗಳಿಗೆ ಪರಿಚಯಿಸುವ ಕತೆಯು ಇಲ್ಲಿ ಸಾಗುತ್ತದೆ. ಉಪ್ಪಿನ ಗೊಂಬೆ ಎನ್ನುವ ಕಲ್ಪನೆಯೇ ಮಕ್ಕಳಿಗೆ ಕುತೂಹಲ ಕೆರಳಿಸುತ್ತದೆ .ಇನ್ನು ಅದರ ಕತೆ ಮತ್ತೂ ಮುಂದೆ ಸಾಗಿ ಕೃತಿ ಓಂದೆ ಗುಕ್ಕಿಗೆ ಓದಿಸಿಕೊಂಡು ಹೋಗದೆ ಬಿಡದು.
ಮಕ್ಕಳಿಗಾಗಿ ಸರಳ ಭಾಷಾ ಬಳಕೆ, ಸರಳ ಸಂಬಾಷಣೆ ಮನೋರಂಜನೆಗೆ ಬೇಕಾದದ್ದೆಲ್ಲ ಈ ಕೃತಿಯಲ್ಲಿದೆ .
ನೀವು ನಿಮ್ಮ ಮಕ್ಕಳ ಹತ್ತಿರ ಇಂತಹ ಕೃತಿ ಇಡಿ , ನೀವೂ ಜೊತೆಗೂಡಿ ಓದಿ. ನಿಮ್ಮ ಮಕ್ಕಳು ಟಿ ವಿಯನ್ನು ದೂರ ಇಡುತ್ತಾರೆ.
ರವಿರಾಜ್. ಸಾಗರ್.
.
ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ
- Home
- ಸಂಪಾದಕೀಯ
- ಮಕ್ಕಳು ಬರೆದ ಕತೆ /ಕವನಗಳು
- ನಮ್ಮೂರ ಸುದ್ದಿಗಳು
- ಮಕ್ಕಳ ಬರಹಗಳು
- ಬಾಲ ಸಾಧಕರು
- ಮಕ್ಕಳು ಬಿಡಿಸಿದ ಚಿತ್ರಗಳು
- ನಮ್ಮೂರ ಜಾನಪದ
- ಜ್ಞಾನ - ವಿಜ್ಞಾನ
- ಸಾಮಾನ್ಯ ಜ್ಞಾನ
- ನಮ್ಮ ಪತ್ರಿಕಾ ಅಭಿಯಾನಗಳು
- ಓದುಗರ ಓಲೆ
- ಅತಿಥಿ ಸಾಹಿತಿಗಳ ಅಂಕಣ
- ಮಕ್ಕಳ ಪುಸ್ತಕಗಳ ಪರಿಚಯ-ಆನ್ ಲೈನ್ ಬುಕ್ ಹೌಸ್
- ಶೈಕ್ಷಣಿಕ ಲೇಖನಗಳು
- ಶೈಕ್ಷಣಿಕ ಚಟುವಟಿಕೆಗಳು
- ಲಾಂಗ್ವೇಜ್ ಕಾರ್ನರ್
- 1ರಿಂದ -puc ತರಗತಿ ಈ ಶಾಲೆ
- ನನ್ನ ಶೈಕ್ಷಣಿಕ ವೀಡಿಯೋಗಳು
- ಸಾರ್ವಜನಿಕ ಶಿಕ್ಷಣ ಇಲಾಖೆ
- ಹಿಂದಿನ ಸಂಚಿಕೆಗಳು ಮತ್ತು ಪತ್ರಿಕೆ ಕುರಿತು ಮಾಧ್ಯಮ ವರದಿ ...
- ನಮ್ಮ ಕುರಿತು ಫೋಟೋ ಗ್ಯಾಲರಿ
- ಅಂಕಣ ಬರಹ- ಕನಸುಗಳೂರ ಶ್ರಮಿಕ
- ಆನ್ಲೈನ್ ಪುಸ್ತಕ ಮಳಿಗೆಗಳು
- ಪಿಡಿಎಫ್ ಪುಸ್ತಕಗಳು.
- Ravichandra
- ಆನ್ಲೈನ್ ಪಾಠಗಳು - ದೀಕ್ಷಾ ಪೊರ್ಟಲ್
- ಇನ್ನೋವೇಟಿವ್ ಎಜ್ಯುಕೇಶನ್
Thursday, 16 August 2018
Subscribe to:
Post Comments (Atom)
ಮಕ್ಕಳ ಮನೆ ಮನೆಗೆ marks rigister app
📱 'ಮಾರ್ಕ್ಸ್ ರಿಜಿಸ್ಟರ್' (Marks Register) ಆ್ಯಪ್ !! ಶಿಕ್ಷಕರ ಶ್ರಮಕ್ಕೆ ತಂತ್ರಜ್ಞಾನದ ಆಸರೆ! ಶಿಕ್ಷಕರ ಕೆಲಸ ಇಂದು ಮುಂಚಿನಂತಿಲ್ಲ. ಬದಲಾಗುತ್ತಿರುವ...
-
ಚಿಕ್ಕಂದಿನಲ್ಲಿ ನಮಗೆ ಬರುತ್ತಿದ್ದ, ನಾವೆಲ್ಲಾ ಹಾಡುತ್ತಿದ್ದ ಮರೆಯಲಾಗದ ಪದ್ಯಗಳು.. ಇವುಗಳಲ್ಲಿ ನಿಮಗೆಷ್ಟು ಗೊತ್ತು.. ತಿಳಿಸಿ..* ❤️❤️❤️...
-
ಜಾಗತೀಕರಣ ನುಂಗಿದ ಹಳ್ಳಿಯ "ತಿಥಿ" .......................................... ಈಗಾಗಲೇ 15 ರಾಷ್ಟ್ರೀಯ. .. ವಿವಿಧ ಅಂತರಾಷ್ಟೀಯ ಪ್ರಶಸ್ತಿ ಪಡೆದ...
-
ಕನ್ನಡ ವ್ಯಾಕರಣ @EDUCATIONGKNEWS. •ಕನ್ನಡ ವರ್ಣಮಾಲೆ •ಸಂಧಿ ಪ್ರಕರಣ •ನಾಮ ಪದ ಪ್ರಕರಣ •ಲಿಂಗಳು •ವಚನಗಳು •ವಿಭಕ್ತಿ ಪ್ರತ್ಯಯಗಳು •ಕ್ರಿಯಾಪದ ಪ್ರಕರಣ •ಕ...
No comments:
Post a Comment