ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Saturday 1 September 2018

ಕಾರಣ ನೀನೇನಾ ..

ಕಾರಣ ನೀನೇನಾ....

ಪ್ರೀತಿಯ ಬೆಳಕು ಚೆಲ್ಲಿ
ವಿರಹದ ನೆರಳೂ   ಹಿಂಬಾಲಿಸುವಂತೆ ಮಾಡಿದವಳು .....,?
ಸಾಗರದ ದಂಡೆಯಲ್ಲಿ ಜೊತೆ ಜೊತೆಗೆ ಹೆಜ್ಜೆ ಹಾಕಿ....
ಅವುಗಳನ್ನು ಅಳಿಸಿಬಿಡುವಂತೆ 
ಅಲೆಗಳನು ಚೂ ಬಿಟ್ಟಿದ್ದು...?
ಒಲವ ಬಳ್ಳಿಯಲಿ
ಹೂ ಬಿಟ್ಟು  ಅರಳುವವರೆಗೂ ನೀರುಣಿಸಿ
ಸಂಜೆವೇಳೆಗೆ ಬಾಡುವ ಶಾಪ ಕೊಟ್ಟಿದ್ದು...?
ಸ್ವರ್ಗದಲೇ ಮದುವೆ ನಿಶ್ಚಯ ಆಗಿರುವುದೆಂದು
ಬದನೆ ಶಾಸ್ತ್ರ ಅದ್ಯಾರಿಂದಲೋ ಹೇಳಿಸಿ
ಒಲವ ವಿಶ್ವಾಸದಲ್ಲಿ ತೇಲಿಸಿ
ಶ್ವಾಶವೆ ನಿಲ್ಲುವಂತೆ ಎದೆಗೆ ಬಂಡೆಕಲ್ಲು ತಳ್ಳಿದ್ದು...
ವಿಧಿ ಹಡೆದು ,ಹೆಣೆದು ಕಳಿಸಿದ ಬಲೆಯ
ನೀ ನನಗೆ ಬೀಸಲು ಕಾರಣವಿದೆಯ ಹೇಳಿಬಿಡು...

ಎಲ್ಲೋ ತೇಲಿ ಹೊರಟ ಮೋಡ ನೀನು..
ಹೆಪ್ಪುಗಟ್ಟಿ  ಒಲವು ಉಕ್ಕಿಸಿ
ಒಲವ ವರ್ಷಧಾರೆ ಹರಿಸಿ
ಬಯಲು ಸೀಮೆಯ ಬಿಸಿಲಲಿ
ಒಂಟಿ ಮಾಡಲು ಕಾರಣವೆನಿತ್ತು...?
ಮತ್ತೆ ಮತ್ತೆ ಕೇಳಲಾರೆ ಕಾರಣ

ಬದುಕೀಗ  ಅಲ್ಪಾವರಣ...                ರವಿರಾಜ್ ಸಾಗರ್💕🌹🌹

No comments:

Post a Comment