ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Thursday 20 September 2018

ಕಾಗುಣಿತಗಳಿಲ್ಲದ ಪದ್ಯ

ಕಾಗುಣಿತಾಕ್ಷರಗಳೇ ಇಲ್ಲದ ಪದ್ಯ!

ಘನರಸಶಯನತನಯ ಮದಮಥನ ಧವಳಘನ
ಘನವರದ ಶತದಳನಯನ ನಯನಪದಕಮಳ
ವನದಗಮನಧವ ಶತದಳವರತಪನದ ದಹನ ನಯನಪರತರ ಗದಧರ
ಸನಕನತ ಸಮದಶಯನ ಶಮನಶಮನ ಭವರ
ಮನಭಯ ಶಮನ ಗರಳಧರ ಗರಳಧರ ಪರಗ
ಮನತನಯ ಶಶಧರಧರ ಧರವರಭವನ ಕನದನಘ ಭವಹರಪರಮವ

(ಅರ್ಥ- ಸಮುದ್ರಶಯನನಾದ ವಿಷ್ಣುವಿನ ಮಗ ಮನ್ಮಥನ ಗರ್ವಭಂಗ ಮಾಡಿದವ, ಬೆಳ್ಳಗಿನ ಮೈಯವ, ಶ್ರೇಷ್ಠ ವರಗಳನ್ನು ನೀಡುವವ, ವಿಷ್ಣುವಿನ ಕಣ್ಣಿನಿಂದ ಅರ್ಚಿಸಲ್ಪಟ್ಟ ಪಾದಪದ್ಮವುಳ್ಳವ, ಚಂದ್ರ ಸೂರ್ಯ ಮತ್ತು ಅಗ್ನಿಗಳನ್ನೇ ಕಣ್ಣಾಗಿ ಉಳ್ಳವ, ಶ್ರೇಷ್ಠ, ರೋಗನಿವಾರಕ, ಸನಕನಿಂದ ನಮಸ್ಕೃತನಾದವ, ಯಮನನ್ನು ನಿಗ್ರಹಿಸಿದವ, ಜನ್ಮ ಹಿಂಗಿಸಿದವ, ಭಯ ಹೋಗಲಾಡಿಸಿದವ, ವಿಷಕಂಠ, ಚಂದ್ರಶೇಖರ, ಕೈಲಾಸವಾಸಿ, ಪಾಪರಹಿತ, ಭವನೆಂದೂ ಹರನೆಂದೂ ಕೀರ್ತಿತ ಈಶ್ವರ). 

ಪದ್ಮಣಾಂಕ ಎಂಬ ಕವಿಯ ಪದ್ಮರಾಜಪುರಾಣದಲ್ಲಿನ ಪದ್ಯ

No comments:

Post a Comment