ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Saturday, 26 December 2015

ಕಂದ ತಂದ ಸೌಭಾಗ್ಯ

ಕಂದ ತಂದ ಸೌಭಾಗ್ಯ

ಹೊಸಿಲೊಳಗೆ ನೀನಿರಲು
ಹೊತ್ತು ಹೋದದ್ದೇ ತಿಳಿಯೋಲ್ಲ ಕಂದಾ...
ಹೊತ್ತುಕೊಂಡು  ಮುದ್ದಾಡುತಿರಲು
ಬೆನ್ನಟ್ಟಿಬರುವ  ನೂರು ಚಿಂತೆ ಸುಳಿಯವು ಕಂದಾ.
     ಈಗೀಗ ಆ ಸೂರ್ಯ ಬೇಗ ಬೇಗನೆ ಬಂದು
ಕಿಟಕಿಯಲಿ ಇಣುಕಿ ಕದ್ದು ನೋಡುವನು
ದೃಷ್ಟಿ ಆದಿತು ಕಂದ ದಿಟ್ಟಿಸಿ ನೋಡಲೇಬೇಡ.
ದೃಷ್ಟಿ ಬೊಟ್ಟಿಡುವೆ ಅಳಿಸಿಕೊಳ್ಳಬೇಡ ಕಂದಯ್ಯಾ..
    ನೀ ಹೊಸಿಲು ತುಳಿದ ಮೇಲೇ
    ಮನೆತುಂಬಾ ನಗುಸಿರಿ
   ಸುಖ ಶಾಂತಿ ಐಸಿರಿಯೆಲ್ಲಾ ನಿನ್ನಿಂದಲೇ ಕಂದಾ. 
ನೀನಮ್ಮ ಬಾಳಿನ ಸೌಭಾಗ್ಯ ಕಂದಾ.

No comments:

Post a Comment

ಮಕ್ಕಳ ಮನೆ ಮನೆಗೆ marks rigister app

📱 'ಮಾರ್ಕ್ಸ್ ರಿಜಿಸ್ಟರ್' (Marks Register) ಆ್ಯಪ್ !!   ಶಿಕ್ಷಕರ ಶ್ರಮಕ್ಕೆ ತಂತ್ರಜ್ಞಾನದ ಆಸರೆ! ಶಿಕ್ಷಕರ ಕೆಲಸ ಇಂದು ಮುಂಚಿನಂತಿಲ್ಲ. ಬದಲಾಗುತ್ತಿರುವ...