ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Saturday, 12 December 2015

ಅವಳ ಬಯಕೆ

ಅವಳ ಬಯಕೆ.
...................
ಮುನಿದ ಪಾಕಿಸ್ತಾನವನ್ನು
ಮರಳಿ ಭಾರತದ ಮಹಾಮನೆಗೆ
ಕರೆತಂದು ...
ಶಾಂತಿ ಸಹಬಾಳ್ವೆಯ ದಿನಗಳ
ಕಾಣಬೇಕೆನಿಸಿದೆಯಂತೆ ಅವಳಿಗೆ
ಹೇಗೆ ಯತ್ನಿಸಲಿ.?
       ಹರಿದು ಓಡುತಿರುವ
ಕಪ್ಪು ಮೋಡಗಳ ತಡೆದು
ಕಾಮನ ಬಿಲ್ಲಿಗೆ
ತೋರಣ ಕಟ್ಟಿ
ರವಿಯ ರಮಿಸಿ
ಕೊಂಚ ಬಿಸಿಲು
ಕೊಂಚ ಹೂಮಳೆಯಲಿ
ಅವಳು ಕುಣಿಯಬೇಕಂತೆ
ಹೇಗೆ ಈಡೇರಿಸಲಿ...?
    ಇನ್ನೂ ಏನೇನೋ ಇವೆ...
      ಅವೆಲ್ಲ ಹೇಳಲು ಹೋದರೆ
ಕವನ ಕಾದಂಬರಿ ಆದೀತು. .!
ಅನಂತ ಅವಳ ಬಯಕೆ.

No comments:

Post a Comment

ಮಕ್ಕಳ ಮನೆ ಮನೆಗೆ marks rigister app

📱 'ಮಾರ್ಕ್ಸ್ ರಿಜಿಸ್ಟರ್' (Marks Register) ಆ್ಯಪ್ !!   ಶಿಕ್ಷಕರ ಶ್ರಮಕ್ಕೆ ತಂತ್ರಜ್ಞಾನದ ಆಸರೆ! ಶಿಕ್ಷಕರ ಕೆಲಸ ಇಂದು ಮುಂಚಿನಂತಿಲ್ಲ. ಬದಲಾಗುತ್ತಿರುವ...