ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Monday 31 March 2014

ಏನೆಂದು ಹೆಸರಿಡಲಿ ......

1. ನಿಮಗೊಂದು ಸುಳ್ಳು ಹೇಳಬೇಕು ....
ಆದರೇನು ಮಾಡಲಿ ,,,,,
ನನಗೆ ಸುಳ್ಳು ಹೇಳೋಕು ಬರೋದಿಲ್ಲ ..!
ಅಂತಾ ಸತ್ಯ ಹರಿಶ್ಚಂದ್ರ ನಿಲಯದಲ್ಲಿ ತುಗುಹಾಕಲಾದ ಮನೆಯಲ್ಲಿ 
ಬರೀ ಲಾಯರುಗಳಿದ್ದಾರೆ ...
ಅಲ್ಲಿ ನಿಮ್ಮ ಯಾವುದೇ ಕೇಸು ಗೆಲ್ಲುತ್ತೆ ಅಂತಾ ಹೇಳೋಕೆ ಒಬ್ಬ ಮರಿ ಲಾಯರೂ ಸಿಗುತಾರೆ .


2. ಸೂರ್ಯನ ಉರಿ ತಾಳಲಾರದೆ ಧರಣಿ ಕಂಗೆಟ್ಟಿರುವಾಗ
ಹಸಿರುಟ್ಟ ಬೇವಿನ ಮರ ಹೂ ಚೆಲ್ಲಿ ನಗುತಿದೆ 
ಜನಗಳೆಲ್ಲ ಬೇವಿನೊಂದಿಗೆ ಬೆಲ್ಲ ಸವಿದು 
ಮಜನೋಡುತ್ತಿದಾರೆ....
ಮೈ ಬೆವರು ಇಳಿಯುತ್ತಿದೆಯಾದರೂ 
ಧರಣಿಗೆ ಹಡೆ ಮಾಡುತ್ತಿದ್ದಾರೆ ,,..
''ಯುಗಾದಿ ಉರಿ ...!
ಉಗ್ರ ಉರಿ ..
ಮಳೆರಾಯನಿಗೆ ಬೇಗ ಪತ್ರ ಬರಿ '' ಅಂತಾ..


೩.ಶಬ್ದಾಡಂಬರದ ಉಪಮ,ರೂಪಕ ,ನುಡಿಗಟ್ಟುಗಳ 
ಜಟಿಲತೆಯ ಕುಟಿಲಾರ್ತಗಳ ಕಾವ್ಯ
ಜನಗಳ ಮನ ತಟ್ಟೀತೆ ಬೇಗ ,,?
ಜನಪದ ,ವಚನಗಳ ನಾಡಿಯ ನಾಡಿಗೆ
ಜನನಾಡಿ ತಲುಪುವ ಕಾವ್ಯ ಮಳೆ ಸುರಿಯ ಬೇಕಿದೆ ಈಗ !
ನಿವ್ಸ್ ಚಾನಲುಗಳ ರಾಜಕೀಯ ಸುದ್ದಿ ಕೊರೆತ
ಲಾಂಗು ಮಚ್ಚುಗಳ ಸಿನಿಮಾ ಹೊಡೆತ
ಸಾಕಾಗಿದೆ ಜನಮನಕೆ
ಶಾಂತ ಮನಸುಗಗಳ ಪ್ರಶಾಂತ ಹೃದಯ ತಲುಪಬಲ್ಲ
ಜನಮನದ ಧನಿಯಾಗಿ 
ಕಾವ್ಯ ಬೆಳೆಯಲಿ
ಹೊಟ್ಟೆಯ ಹಸಿವನ್ನು ಕ್ಷಣದಲಿ ನೀಗಿಸುವ ಗಂಜಿ ಅನ್ನದಂತೆ !
ಜನಮನ ತುಂಬಲಿ !
 

ಓಡಿ ಬಂದವಳು ....!
/////////////////

ಅದ್ಯಾವ ಮಳೆಯಲಿ ಹುಟ್ಟಿದಳೋ..?
ಅವಳ ಹುಟ್ಟಿನ ಮೂಲ ಹುಡುಕಬಾರದೆಂಬ ಷರತ್ತು ಬೇರೆ ಹಿರಿಯರದು !
ಮನಸು ಕೆಡಿಸಿದ ಕನಸುಗಳು 
ಬಯಕೆಯ ದಾರಿ ಎಲ್ಲಿಂದೆಲ್ಲಿಗೋ ..
ಸಾಗರನ ಆಲಿಂಗನಕೆ ಹಾತೊರೆದಾಕೆ
ನಮ್ಮೂರಿಗೆ ಓಡಿ ಬಂದಿದ್ದಾಳೆ !
ಆರಿದ್ರಾ ,ಪುಷ್ಯ ಮಳೆ ಮಿಂದು
ಹಸಿರನು ಬಾಚಿ ,ನಮ್ಮೂರನೆ ಮುಳುಗಿಸಿ ಅಳಿಸಿ
ಆತಂಕ ಬಿತ್ತುವ ಘಾಟಿ
ಇದ್ದದ್ದೇ ಅವಳದು ,,,
ವರುಷಕೊಮ್ಮೆ ಯಾದರೂ ಮುಳುಗಿಸುವ ಚಾತಿ
ಬೀಸುವಳು ಯಾರದೋ ತಪ್ಪಿಗೆ ಯಾರಿಗೂ ಚಾಟಿ .
ಯಾರ ಯಾರದೋ ನೆರವು ಪಡೆದು
ಓಡಿ ಹೊರಟಿದ್ದಾಳೆ ಬಂಗಾಳಕೆ..
ಸಾಗರನ ಗುಣವರಿಯದ ಮುಗುದೆ
ವರದಾ ಮೂಲ ತೊರೆದು
ಓಡಿ ಹೊರಟ ವರದೆ .
 —

No comments:

Post a Comment