ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Thursday 13 March 2014

ಆರು- ಹನಿಗವನಗಳು ( ಸಮಯ ಓಡುವವರಿಗಾಗಿ )









೧.ಮಾನವ ಧರ್ಮ ,,,,,!
..........................
ಎಲ್ಲ ಜೀವಿಗಳಿಗೂ ಮುಖವಿದೆ ,
ಮನುಷನಿಗೆ ಮುಖವಾಡವೂ ಇದೆ !
ಎಲ್ಲರೂ ತಪ್ಪು ಮಾಡುತಾರೆ 
ಕೆಲವರು ಎಲ್ಲ ಕಾಲದಲ್ಲೂ ತಪ್ಪು ಮಾಡುತ್ತಾರೆ
'ನಾನೂ 'ತಪ್ಪು ಮಾಡುತ್ತೇನೆ
ತಪ್ಪು 'ನಾನು' ಮಾತ್ರವೇ.. ಮಾಡುವುದಿಲ್ಲ .
ಯಾರು ಕೆಟ್ಟವರಲ್ಲ
ಎಲ್ಲರೂ ಒಳ್ಳೆಯವರಲ್ಲ
ನಮಗೆಲ್ಲ ತಪ್ಪುಗಳ ಅನುಭವವೂ ಜೀವನ ಕಲಿಸುತ್ತದೆ,
ತಪ್ಪು ಮಾಡಿಯೇ ಅನುಭವ ಪಡೆಯಬೇಕಿಲ್ಲ
ಬಿದ್ದು ಹೋಗುವ ಜೀವ
ಬಿದ್ದು ಹೋಗಲಿರುವ ಒಂದಷ್ಟು ಜೀವಕ್ಕೆ
ಒಳ್ಳೆಯದು ಮಾಡಬೇಕಷ್ಟೆ .
ಅದುವೇ ಮಾನವ ಧರ್ಮ .



೨.ಸೌರಮಂಡಲದ ರಾಣಿ .
---------------------
ಸುಮ್ಮನಿರದ ವಸುಂಧರೆ 
ಸುಮ್ಮನಿರುವ ರವಿಗೆ ಆಕರ್ಶಿತಳಾಗಿ 
ಸುಮ್ಮನೆ ನಿಂತಲ್ಲೇ ನಿಂತು ಉರಿಯುವ ಸೂರ್ಯ ನನ್ನು ತಾನೇ ಸುತ್ತಿ ಸುತ್ತಿ ,,,
ಸುಂದರ ಹಗಲು ರಾತ್ರಿಗಳನು ಪಡೆದು 
ಸುಯೋಗದಲ್ಲಿ ಮೂರೂ ಕಾಲಗಳಿಗೆ ಒಡ್ಡಿಕೊಂಡು
ಸುಜಲಧಾರೆಯಲ್ಲಿ ಸಸ್ಯ ಶಾಮಲೆಯಾಗಿ ಹಸಿರು ಸೀರೆ ಹೊದ್ದು 
ಸುಜನರಾಗಲೆಂದು ಮಾನವನಿಗೆ ಜಾಗನೀಡಿ 
ಸಂಕ್ರಾಂತಿಗೆ ಹಂಬಲಿಸಿಹ ಧರಣಿಯೇ ಸೌರಮಂಡಲದ ರಾಣಿ .

೩.ಚಾಟಿ ಚಂದ್ರ 
..............
ಆಗೀಗ ಕಂಡ ಕಂಡ ದೇವರನ್ನೆಲ್ಲ ಸುತ್ತುವುದೇಕೆ ?
ಐದು ವರ್ಷ ಕೊಮ್ಮೆ ಪ್ರಜೆಗಳ ಊರು -ಸೂರು ಸುತ್ತಿ 
ಓಟಿಗಾಗಿ ನೋಟು ನೀಡಿ ,,
ಬಾಯಿತುಂಬ ಬರವಸೆಗಳ ಸ್ತೋತ್ರ ಜಪಿಸಿ 
ಸರ್ಕಾರದ 'ಖಾಜಾನೆ ಲೂಟಿ ಭಾಗ್ಯ ' ನಿಮ್ಮದಾಗುವುದೆಂದ ಚಾಟಿ ಚಂದ್ರ .

೪.ಇಲ್ಲಿ ಕಾಣಿರಿ ....
.........
ಪೇಸ್ ಬುಕ್ ಬಂದ ಮೇಲೆ
ಬುಕ್ ಪೇಸ್ ಮರೆತವರು
ಕ್ಲಾಸಿಗೆ ಬಂಕ್ ಹಾಕಿ
ಸೈಬರ್ ಸೆಂಟರ್ ನಲ್ಲಿ ಹಾಜರಿಯಾದವರು
ಕಾಲೇಜ್ ಕ್ಯಾಂಪಸ್ ಮರೆತು 
ಪೇಸ್ ಬುಕ್ ಕ್ಯಂಪಾಸ್ ಸುತ್ತಾಡುತ್ತಿರುವವ್ರು
ಇಲ್ಲಿ ಕಾಣಿರಿ ,ಇಲ್ಲಿ ಕಾಣಿರಿ ...

೫..ಅವಳು ..
...................
ಕನ್ನಡಿಗೂ ಹಗಲು ಕನಸು ಬಿತ್ತು
ಅವಳ ಮುಗುಳು ನಗೆ ಕಂಡು
ದುಂಬಿಗೂ ತಲೆ ತಿರುಗಿತು 
ಅವಳ ತುಟಿ ಜೇನುಂಡು
ತಂತಾನೇ ಮೊಬೈಲೇ ಐಲಾಯಿತು
ಅವಳ ಮದುರ ಧನಿ ಕೇಳಿ
ಅವಳ ಗೆಜ್ಜೆದನಿಗೆ
ಧರಣಿ ಹೆಜ್ಜೆಹಾಕಿದಳು
ಆ ರವಿ ದಿನಾ ದರೆಯಲಿ ಹುಲ್ಲು ,ಹೂ ಹಾಸಿದ 

೬.ಕಾವಲು ಪಾಳಿ ,,,
...............
ರವಿ -ಚಂದ್ರರಿಬ್ಬರಿಗೂ ಒಂದೇ ಕೆಲಸ 
ಕಾವಲು ಕಾಯೋದು .( ಡಿ ,ಗ್ರೂಪ್ ,ಪಾಪ ,,) 
ಉರಿಮುಖದ ಒಬ್ಬ ಹಗಲಲ್ಲಿ ,,
ಹಾಲುಗೆನ್ನೆಯ ನಸು ನಗೆಯ ಚೆಲುವನಿಗೆ ರಾತ್ರಿ ಪಾಳಿ ! 
ಅರನ್ನು ನೇಮಕಾತಿ ಮಾಡಿಕೊಂಡವರು 'ಸೃಷ್ಟಿ '
ಕಾಯುತ್ತಿರೋದು ...
ಕೋಟಿ ಜೇವ ಹೊತ್ತು ನಿಂತ ನಿಮ್ಮ ತಾಯಿ ವಸುಂಧರೆಯನ್ನು,,

No comments:

Post a Comment