ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Monday 31 March 2014

ರವಿರಾಜ ಮಾರ್ಗ (ravirajamaarga): ಬಿಡುವು ಮಾಡಿಕೊಂಡು ಓದಿ ,,,ಕಡಿಮೆ ಸಮಯದಲ್ಲಿ ,!

ರವಿರಾಜ ಮಾರ್ಗ (ravirajamaarga): ಬಿಡುವು ಮಾಡಿಕೊಂಡು ಓದಿ ,,,ಕಡಿಮೆ ಸಮಯದಲ್ಲಿ ,!: ೧./ ಅವಳು                                                 ಅವಳು ಬಿಡಿಸಲಾಗದ ಒಗಟು ಬಿಡಿಸಿದರೂ ಒಗಟು ನಾನು ಒರಟ ಕರಗದ ಕಲ್ಲು ಒಲವ ಮಳೆ ಸುರಿದು ಹಾಗ...

ಏನೆಂದು ಹೆಸರಿಡಲಿ ......

1. ನಿಮಗೊಂದು ಸುಳ್ಳು ಹೇಳಬೇಕು ....
ಆದರೇನು ಮಾಡಲಿ ,,,,,
ನನಗೆ ಸುಳ್ಳು ಹೇಳೋಕು ಬರೋದಿಲ್ಲ ..!
ಅಂತಾ ಸತ್ಯ ಹರಿಶ್ಚಂದ್ರ ನಿಲಯದಲ್ಲಿ ತುಗುಹಾಕಲಾದ ಮನೆಯಲ್ಲಿ 
ಬರೀ ಲಾಯರುಗಳಿದ್ದಾರೆ ...
ಅಲ್ಲಿ ನಿಮ್ಮ ಯಾವುದೇ ಕೇಸು ಗೆಲ್ಲುತ್ತೆ ಅಂತಾ ಹೇಳೋಕೆ ಒಬ್ಬ ಮರಿ ಲಾಯರೂ ಸಿಗುತಾರೆ .


2. ಸೂರ್ಯನ ಉರಿ ತಾಳಲಾರದೆ ಧರಣಿ ಕಂಗೆಟ್ಟಿರುವಾಗ
ಹಸಿರುಟ್ಟ ಬೇವಿನ ಮರ ಹೂ ಚೆಲ್ಲಿ ನಗುತಿದೆ 
ಜನಗಳೆಲ್ಲ ಬೇವಿನೊಂದಿಗೆ ಬೆಲ್ಲ ಸವಿದು 
ಮಜನೋಡುತ್ತಿದಾರೆ....
ಮೈ ಬೆವರು ಇಳಿಯುತ್ತಿದೆಯಾದರೂ 
ಧರಣಿಗೆ ಹಡೆ ಮಾಡುತ್ತಿದ್ದಾರೆ ,,..
''ಯುಗಾದಿ ಉರಿ ...!
ಉಗ್ರ ಉರಿ ..
ಮಳೆರಾಯನಿಗೆ ಬೇಗ ಪತ್ರ ಬರಿ '' ಅಂತಾ..


೩.ಶಬ್ದಾಡಂಬರದ ಉಪಮ,ರೂಪಕ ,ನುಡಿಗಟ್ಟುಗಳ 
ಜಟಿಲತೆಯ ಕುಟಿಲಾರ್ತಗಳ ಕಾವ್ಯ
ಜನಗಳ ಮನ ತಟ್ಟೀತೆ ಬೇಗ ,,?
ಜನಪದ ,ವಚನಗಳ ನಾಡಿಯ ನಾಡಿಗೆ
ಜನನಾಡಿ ತಲುಪುವ ಕಾವ್ಯ ಮಳೆ ಸುರಿಯ ಬೇಕಿದೆ ಈಗ !
ನಿವ್ಸ್ ಚಾನಲುಗಳ ರಾಜಕೀಯ ಸುದ್ದಿ ಕೊರೆತ
ಲಾಂಗು ಮಚ್ಚುಗಳ ಸಿನಿಮಾ ಹೊಡೆತ
ಸಾಕಾಗಿದೆ ಜನಮನಕೆ
ಶಾಂತ ಮನಸುಗಗಳ ಪ್ರಶಾಂತ ಹೃದಯ ತಲುಪಬಲ್ಲ
ಜನಮನದ ಧನಿಯಾಗಿ 
ಕಾವ್ಯ ಬೆಳೆಯಲಿ
ಹೊಟ್ಟೆಯ ಹಸಿವನ್ನು ಕ್ಷಣದಲಿ ನೀಗಿಸುವ ಗಂಜಿ ಅನ್ನದಂತೆ !
ಜನಮನ ತುಂಬಲಿ !
 

ಓಡಿ ಬಂದವಳು ....!
/////////////////

ಅದ್ಯಾವ ಮಳೆಯಲಿ ಹುಟ್ಟಿದಳೋ..?
ಅವಳ ಹುಟ್ಟಿನ ಮೂಲ ಹುಡುಕಬಾರದೆಂಬ ಷರತ್ತು ಬೇರೆ ಹಿರಿಯರದು !
ಮನಸು ಕೆಡಿಸಿದ ಕನಸುಗಳು 
ಬಯಕೆಯ ದಾರಿ ಎಲ್ಲಿಂದೆಲ್ಲಿಗೋ ..
ಸಾಗರನ ಆಲಿಂಗನಕೆ ಹಾತೊರೆದಾಕೆ
ನಮ್ಮೂರಿಗೆ ಓಡಿ ಬಂದಿದ್ದಾಳೆ !
ಆರಿದ್ರಾ ,ಪುಷ್ಯ ಮಳೆ ಮಿಂದು
ಹಸಿರನು ಬಾಚಿ ,ನಮ್ಮೂರನೆ ಮುಳುಗಿಸಿ ಅಳಿಸಿ
ಆತಂಕ ಬಿತ್ತುವ ಘಾಟಿ
ಇದ್ದದ್ದೇ ಅವಳದು ,,,
ವರುಷಕೊಮ್ಮೆ ಯಾದರೂ ಮುಳುಗಿಸುವ ಚಾತಿ
ಬೀಸುವಳು ಯಾರದೋ ತಪ್ಪಿಗೆ ಯಾರಿಗೂ ಚಾಟಿ .
ಯಾರ ಯಾರದೋ ನೆರವು ಪಡೆದು
ಓಡಿ ಹೊರಟಿದ್ದಾಳೆ ಬಂಗಾಳಕೆ..
ಸಾಗರನ ಗುಣವರಿಯದ ಮುಗುದೆ
ವರದಾ ಮೂಲ ತೊರೆದು
ಓಡಿ ಹೊರಟ ವರದೆ .
 —

Sunday 16 March 2014

ಬಿಡುವು ಮಾಡಿಕೊಂಡು ಓದಿ ,,,ಕಡಿಮೆ ಸಮಯದಲ್ಲಿ ,!


೧./ಅವಳು                                                
ಅವಳು ಬಿಡಿಸಲಾಗದ ಒಗಟು
ಬಿಡಿಸಿದರೂ ಒಗಟು
ನಾನು ಒರಟ
ಕರಗದ ಕಲ್ಲು
ಒಲವ ಮಳೆ ಸುರಿದು
ಹಾಗೆ ಸೇರಿತು ಸಾಗರ

ಮನವೀಗ ಹುಡುಕಿದೆ
ಕಡಲ ದಡದಲಿ
ಬೆರೆತುಹೋದ
ಸಿಹಿ ಒಲವ ಮಳೆ

ಪಾದಕಂಟಿದೆ

ಬರಿ ಉಪ್ಪು ನೀರು.
ಕಚ್ಚಿದೆ ವಿರಹ ಕಡಲ ಕರಡಿ
೨.ನಾನು ರಸ್ತೆ
ಅವಳು ವಾಹನ

ಆಗೀಗ ನಿಂತರೂ ಹೊರಟು ಬಿಡುವಳು ಕ್ಷಣದಲಿ

ಹೋದ್ರೆ ಹೋಗಲಿ ಬೇರೆ ವಾಹನ ಬರಲಿ ಎಂದು ಕಾದೆ

ಅವೂ ಕ್ಷಣ ನಿಂತು ಹೊರಟವು ....

೩.ಅವಳು .........
ಕತ್ತಲೆಯಲ್ಲಿ  ಕರೆಯದಿದ್ದರೂ ಬರುವ ಚಂದ್ರನಂತಲ್ಲ....
ಹಗಲಲ್ಲಿ ಬೇಡವೆಂದರೂ ಓದಿ ಹೋಗುವ ಸೂರ್ಯನಂತೆ ..
ಕರೆನ್ಸಿ  ಕಾಲಿಯಾಗುವತನಕ ಮಾತ್ರ
ಕಾಲ್ ಮಾಡಲು ಅವಕಾಶ ನೀಡುವ  ದೊರವಾಣಿ ಕಂಪನಿಗಳಂತೆ !!!

೪.ಪೇಸ್ ಬೂಕ್ ಲೈಕ್ ನೋಡಿ ಹಿರಿ ಹಿರಿ ಹಿಗ್ತಾರೆ ರಾಜಕಾರಾಣಿಗಳು
ನಮ್ಮ ಜನಾ ಸುಮ್ನೆ 'ಹುಚ್ಚು ಕೋತಿ' ಪೊಟ್ಹೊಗು ಲೈಕ್ ಒತ್ತುತ್ತಾರೆ ಗೊತ್ತಿರಲಿ ....
ನಿದನ ವಾರ್ತೆ ಗು ಲೈಕ್ ಒತ್ತುತ್ತಾರೆ
ಗುಂಡಿಗೆ ಬಿದ್ದಾಗಲೂ,,ಎದ್ದಾಗಲು ,,ಲೈಕ್ ಒತುತಲೇ ಇರುತ್ತಾರೆ ........
ಯಾರೋ ಹೇಳಿದಾಗೆಲ್ಲ ಓಟನ್ನು ಹಂಗೆ ಸುಮ್ನೆ ಒತ್ತಿ ಒತ್ತಿ ಅಬ್ಯಾಸ ಆಗಿ ಬಿಟ್ಟಿದೆ ,,,!

೫.ಕಿತ್ತರೂ ಬಾಡದ ಕೂದಲಿನ ಗುಣದ ಕನಸು
ಕತ್ತರಿಸಿದರೂ ಮತ್ತೆ ಚಿಗುರುವ ಉಗುರಿನ ಗುಣದ ಶ್ರಮವಿರಲಿ
ಗೆಲುವಿನ ರಾಜಮಾರ್ಗ ನಿಮ್ಮದಾಗಲಿದೆ .

೬.  ಚಿತ್ರಾನ್ನಾ ಕ್ಕೆ , ಉಪ್ಪಿಟ್ಟಿಗೆ ಯಾರು ಕೂದಲು ಹಾಕೋಲ್ಲ
ಆದರೂ ಒಮ್ಮೂಮ್ಮೆ ಅವು ಪ್ರತ್ಯಕ್ಷ ವಾಗುತ್ತವೆ.

ಎಲ್ಲ ಗೆಳೆಯರೊಡನೆ ಚೆನಾಗಿರಬೇಕು ಎಂದು ಕೊಂಡರು ...
ಅನಿರೀಕ್ಸಿತ ಸಂಗತಿಗಳು ನುಗ್ಗಿ ಬಿಡುತ್ತವೆ .....?
ಬದುಕು ಹಿಂಗೆನೆ ..!
೭.
ಕನಸುಗಾರನಿಗೆ ನಾಳೆಗಳೆಲ್ಲ ಸುಂದರ ..ಸುಂದರ ,,,
ಕನಸು ಹೊತ್ತೇ ಬರುವರು ರವಿ..ಚಂದ್ರ... .


೮,
ಅವಳು .........
ಕತ್ತಲೆಯಲ್ಲಿ ಕರೆಯದಿದ್ದರೂ ಬರುವ ಚಂದ್ರನಂತಲ್ಲ....

ಕರೆದರು ಬರದ ಮೋಡ ,,,,

ಸುರಿದರೆ ಜಡಿ ಮಳೆ,,
...
ಬರ ಪರಿಹಾರ / ನೆರೆ ಪರಿಹಾರ ....

ನಾನೇ ಘೋಸಿಸಿಕೊಳ್ಳಬೇಕು ..



೯.. ಮನಸೆ ಎದ್ದು ಆಸೆ ಬಲೆಯ ಹೊದ್ದು ಕೊಂಡರೆ

ತಪ್ಪಿಸಿಕೊಳ್ಳಲು ಸಾದ್ಯವೇ ..?

ಮೇಯೂ ಬೇಲಿಯ ಹೊಲ ತಡೆದೀತೆ ?

ಲಂಚಾವತಾರದ ಲೋಕವ ಸೃಷ್ಟಿಸಿ ಕೊಂಡ ಪ್ರಜೆಗಳನು

ಲಂಚದಿಂದ ಪಾರುಮಾಡಲಾದೀತೆ ??

೧೦ .   ನಿಮಗೊಂದು ಸುಳ್ಳು ಹೇಳಬೇಕು.
ಆದರೇನು ಮಾಡಲಿ ...
ನನಗೆ ಸುಳ್ಳು ಹೇಳೋಕೆ ಬರೂದಿಲ್ಲ ..!!







Saturday 15 March 2014

ಶ್ರೀ ನಾರಾಯಣ ಗುರು.


ಶ್ರೀ ನಾರಾಯಣ ಗುರುಗಳು ದೇಶ ಕಂಡ ಅದ್ಭುತ ದಾರ್ಶನಿಕ, ಚಿಂತಕ, ಮಾನವತಾವಾದಿ ನಾರಾಯಣಗುರುಗಳು (ಜನನ 18.9.1854, ಮಹಾಸಮಾಧಿ 20.9.1928). `ಧಾರ್ಮಿಕ ಸಿದ್ಧಾಂತಗಳು ವಾದಿಸಲಿಕ್ಕೂ ಅಲ್ಲ, ವಾದಿಸಿ ಜಯಿಸಲಿಕ್ಕೂ ಅಲ್ಲ. ಅದು ಸರ್ವರ ಸಮನ್ವಯ ಜೀವನಕ್ಕೆ ಜೀವಾಳವಾಗಬೇಕು.' 'ಮನುಷ್ಯನನ್ನು ಒಳ್ಳೆಯ ಮನುಷ್ಯನನ್ನಾಗಿ ಮಾಡುವುದೇ ಎಲ್ಲಾ ಧರ್ಮಗಳ ಉದ್ದೇಶಗಳು. ಮತ ಯಾವುದಾದರೇನು, ಮನುಷ್ಯ ಒಳ್ಳೆಯವನಾದರೆ ಸಾಕು..', 'ಒಂದೇ ಜಾತಿ, ಒಂದೇ ಮತ, ಒಬ್ಬನೇ ದೇವರು', `ಜಾತಿಯ ಬಗ್ಗೆ ಕೇಳಬೇಡ, ಹೇಳಬೇಡ, ಚಿಂತಿಸಬೇಡ' ಎಂಬಂಥ ನವಯುಗದ ಸಂದೇಶಗಳನ್ನು ಸಾರಿದ ಐತಿಹಾಸಿಕ ವಿಭೂತಿ ಪುರುಷ ನಾರಾಯಣಗುರು. ಇವರು ಈಳವ ಜಾತಿಗೆ ಸೇರಿದವರೆಂಬುದು ಹೆಮ್ಮೆಯ ಸಂಗತಿ. ದೇವಸ್ಥಾನದ ಹೊಸ್ತಿಲಲ್ಲಿ ನಿಂತು, ಜಾತಿ ಪದ್ಧತಿಯ ನಿರ್ಮೂಲನಕ್ಕೆ ಕರೆಕೊಟ್ಟ ಧೀಮಂತ ದಾರ್ಶನಿಕ ನಾರಾಯಣಗುರು. ಧರ್ಮದ ಹೆಸರಿನಲ್ಲಿ ಅರ್ಥವಿಲ್ಲದ ಆಚರಣೆ, ದೇವರ ಹೆಸರಿನಲ್ಲಿ ಅನವಶ್ಯಕ ಪೂಜಾಕ್ರಮ, ಪ್ರಾಣಿಬಲಿ ಪದ್ಧತಿಯಂಥ ಅಮಾನವೀಯ ಮೂಢನಂಬಿಕೆಗಳನ್ನು ಬೇರುಸಹಿತ ಕಿತ್ತು, ಜನಸಾಮಾನ್ಯರಿಗೂ ಸಾಧ್ಯವಾಗುವ ಸರಳ ಪೂಜಾಕ್ರಮಗಳನ್ನು ಅನುಷ್ಠಾನಕ್ಕೆ ತಂದವರು ಆಚಾರ್ಯ ನಾರಾಯಣಗುರು. ಕೇರಳದಲ್ಲಿ ಅಸ್ಪೃಶ್ಯರೇ ಆಗಿದ್ದ ಈಳವ (ಈಡಿಗ) ಸಮುದಾಯಕ್ಕೆ ದೇವಾಲಯಗಳನ್ನು ನಿರ್ಮಿಸಿಕೊಟ್ಟು ಅವರಿಂದಲೇ ಪೂಜೆ ಮಾಡಿಸಲು ಅಗತ್ಯವಾದ ಸಂಸ್ಥೆಗಳನ್ನು ಹುಟ್ಟುಹಾಕುವ ಮೂಲಕ ನಾರಾಯಣಗುರುಗಳು ಈಳವರಲ್ಲಿ ಮಾತ್ರವಲ್ಲದೆ ನಿರ್ಲಕ್ಷ್ಯಕ್ಕೀಡಾಗಿ ದೇವಾಲಯಗಳಿಂದಲೇ ಬಹಿಷ್ಕೃತರಾಗಿದ್ದ ದಲಿತ ವರ್ಗಕ್ಕೆ ಭರವಸೆಯ ಆಶಾಕಿರಣ ಮೂಡಿಸಿದವರು. ವರ್ಣಾಶ್ರಮ ಪದ್ಧತಿ ಉಂಟು ಮಾಡಿದ್ದ ಮೇಲು ಕೀಳೆಂಬ ತಾರತಮ್ಯದ ವಿರುದ್ಧ ಸಂಘಟನೆಯನ್ನು ಆರಂಭಿಸಿದ್ದ ಗುರುಗಳಿಗೆ ಅದು ನೆಪಮಾತ್ರವಾಗಿತ್ತು. ಅವರ ದೃಷ್ಟಿಯಲ್ಲಿ ವಿಶ್ವವೇ ಒಂದು ಸೃಷ್ಟಿ. ಅದರ ಯಾವುದೇ ಮೂಲೆಯ ಪ್ರತಿಯೊಬ್ಬ ವ್ಯಕ್ತಿ ದೇವರ ಸೃಷ್ಟಿ, ತನಗೆ ಪರಕೀಯರಲ್ಲ ಎಂಬ ವಿಶ್ವಮಾನವ ತತ್ವ ಅವರದಾಗಿತ್ತು. ಸಂಘಟನೆಯಿಂದ ಬಲಯುತರಾಗಿ, ಶಿಕ್ಷಣ ಪಡೆದು ಸ್ವಾವಲಂಬಿಗಳಾಗಿ, ಮೂಢನಂಬಿಕೆಗಳನ್ನು ತೊರೆದು ವಿಚಾರವಂತರಾಗಿ ಎಂಬ ಗುರುವಾಣಿ ದೀನದಲಿತ ವರ್ಗಕ್ಕೆ ಅಗತ್ಯ ಮಾನಸಿಕ ಧೈರ್ಯ ಸ್ಥೈರ್ಯಗಳನ್ನು ನೀಡಬಲ್ಲದಾಗಿದೆ. ನಾರಾಯಣ ಗುರುಗಳ ಸುಧಾರಣಾ ಚಳವಳಿ 1888ರಲ್ಲಿ ಕೇರಳದ ಅರವಿಪುರಂನಲ್ಲಿ ಲಿಂಗ ಪ್ರತಿಷ್ಠಾಪನೆಯ ಮೂಲಕ ದೇವಾಲಯವೊಂದನ್ನು ಸ್ಥಾಪಿಸುವ ಮೂಲಕ ಪ್ರಾರಂಭವಾಯಿತು. ಅದರ ನಂತರದ 48 ವರ್ಷಗಳ ಕಾಲ ಅಲ್ಲಿನ ಶೋಷಿತರ ಕೊರಳದನಿಯಾಗಿ ಮೂಡಿಬಂದ ಈ ಸುಧಾರಣಾ ಚಳುವಳಿ ಕೇರಳದ ಧಾರ್ಮಿಕ ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯ ಕ್ಷೇತ್ರಗಳ ಚಿತ್ರವನ್ನು ಪಲ್ಲಟಗೊಳಿಸಿತು. ಚಳುವಳಿಯ ಮೊದಲ 40ವರ್ಷಗಳಲ್ಲಿ ನಾರಾಯಣ ಗುರುಗಳು ಜತೆಯಲ್ಲಿಯೇ ಇದ್ದುಕೊಂಡು ಮಾರ್ಗದರ್ಶನ ನೀಡಿದರೆ ಅವರ ಸಾವಿನ ನಂತರದ ಎಂಟು ವರ್ಷಗಳ ಹೋರಾಟಕ್ಕೆ ಅವರ ತತ್ವಗಳೇ ಚಳುವಳಿಯ ದಾರಿಗೆ ಬೆಳಕಾಗಿದ್ದವು. ಅಸ್ಪೃಶ್ಯರಿಗೂ ದೇವಸ್ಥಾನ ಪ್ರವೇಶವಕಾಶ ನೀಡುವ `ದೇವಾಲಯ ಪ್ರವೇಶ' ಘೋಷಣೆ ಅಂದಿನ ಸರ್ಕಾರದಿಂದ ಹೊರಬಿದ್ದಾಗ ಆ ದಿನವನ್ನು ನೋಡಲು ನಾರಾಯಣಗುರುಗಳು ಜೀವಂತ ಇರಲಿಲ್ಲ. ನಾರಾಯಣ ಗುರು ಚಳುವಳಿ ಐದು ಹಂತಗಳಲ್ಲಿ ನಡೆಯಿತು. ಮೊದಲನೆಯದು ಡಾ.ಪದ್ಮನಾಭ ಪಲ್ಪು ನೇತೃತ್ವದ ಸಾಮಾಜಿಕ ಜಾಗೃತಿ, ಎರಡನೆಯದು ನಾರಾಯಣ ಗುರು ನೇತೃತ್ವದ ಸಾಮಾಜಿಕ ಸುಧಾರಣೆ, ಮೂರನೆಯದು ಕುಮಾರ ಆಶಾನ್ ನೇತೃತ್ವದ ಸರ್ಕಾರಿ ಶಾಲೆಗಳಲ್ಲಿ ಪ್ರವೇಶಕ್ಕಾಗಿ ಹೋರಾಟ. ನಾಲ್ಕನೆಯದು ಟಿ.ಕೆ.ಮಾಧವನ್ ನೇತೃತ್ವದಲ್ಲಿ ದೇವಾಲಯಗಳ ಪ್ರವೇಶ ಮತ್ತು ಅಸ್ಪೃಶ್ಯತೆಯ ವಿರುದ್ಧ ನಡೆದ ಚಳುವಳಿ ಹಾಗೂ ಕೊನೆಯದು ಸಿ.ಕೇಶವನ್ ನೇತೃತ್ವದಲ್ಲಿ ರಾಜಕೀಯ ಪ್ರಾತಿನಿಧ್ಯಕ್ಕಾಗಿ ನಡೆದ ಹೋರಾಟ. ಇವೆಲ್ಲವೂ ನಾರಾಯಣಗುರುಗಳ ಸಿದ್ಧಾಂತದ ನೆಲೆಗಟ್ಟಿನ ಮೇಲೆಯೇ ನಡೆದವು. ಈ ಚಳುವಳಿಯ ಮಹತ್ವ ಅರಿಯಬೇಕಾದರೆ ಅವರಿಗಿಂತ ಹಿಂದಿನ ಕೇರಳದ ಸ್ಥಿತಿಯನ್ನು ತಿಳಿದುಕೊಳ್ಳಬೇಕು. ದರಿದ್ರರಲ್ಲಿ, ರೋಗಿಗಳಲ್ಲಿ ದೇವರನ್ನು ಕಾಣಬೇಕೆಂದು ಹೇಳಿದ ವಿವೇಕಾನಂದರು ಕೇರಳದ ಸಮಾಜವನ್ನು ನೋಡಿ `ಅದೊಂದು ಹುಚ್ಚರ ಆಸ್ಪತ್ರೆ' ಎಂದು ಹೇಳಿ ಕೈಚೆಲ್ಲಿ ಹೋಗಿದ್ದರು. ಜಾತಿ ವ್ಯವಸ್ಥೆ ಅಂತಹ ಭೀಕರ ಮನೋರೋಗಿಗಳನ್ನು ಅಲ್ಲಿ ಸೃಷ್ಟಿಸಿತ್ತು. ದೇವಸ್ಥಾನ ಪ್ರವೇಶ ದೂರವೇ ಉಳಿಯಿತು. ಕೆಳಜಾತಿ ಜನರು ಸಾರ್ವಜನಿಕ ರಸ್ತೆಗಳಲ್ಲಿ ಮುಕ್ತವಾಗಿ ಓಡಾಡುವಂತಿರಲಿಲ್ಲ. ತಲೆಗೆ ಮುಂಡಾಸು, ಕಾಲಿಗೆ ಚಪ್ಪಲಿ ಹಾಕುವಂತಿರಲಿಲ್ಲ. ಮಹಿಳೆಯರು ಎದೆ ಮುಚ್ಚಿಕೊಳ್ಳುವಂತಿರಲಿಲ್ಲ. ಸರ್ಕಾರಿ ಶಾಲೆಗಳಿಗೂ ಅವರಿಗೂ ಪ್ರವೇಶ ನಿಷಿದ್ಧವಾಗಿತ್ತು. ಸರ್ಕಾರಿ ಉದ್ಯೋಗದ ಅವಕಾಶ ಇರಲಿಲ್ಲ. ಅಸ್ಪೃಶ್ಯತೆಯ ವಿರುದ್ಧದ ಹೋರಾಟದಲ್ಲಿ ದೇವಸ್ಥಾನ ಪ್ರವೇಶ ಚಳುವಳಿಯದು ಪ್ರಮುಖ ಪಾತ್ರವಾದರೆ ನಾರಾಯಣ ಗುರುಗಳು ಅದನ್ನೇ ಕೈಬಿಟ್ಟಿದ್ದರು. (ಈ ದೃಷ್ಟಿಯಿಂದ ಪೆರಿಯಾರ್ಗಿಂತ ಗುರುಗಳು ಭಿನ್ನ). ಅವರು ಸವರ್ಣೀಯರ ಒಡೆತನದ ದೇವಾಲಯ ಪ್ರವೇಶಿಸಲಿಲ್ಲ. ಅದನ್ನು ಬಹಿಷ್ಕರಿಸಿದರು. ಅವರು ದೇವಸ್ಥಾನ ಸ್ಥಾಪಿಸಿದ್ದನ್ನು ನಂಬೂದಿರಿಗಳು ಪ್ರಶ್ನಿಸಿದಾಗ `ಅದು ನಿಮ್ಮ ಶಿವ ಅಲ್ಲ, ಈಳವರ ಶಿವ. ಅದರ ಬಗ್ಗೆ ನಿಮಗೆ ಯಾಕೆ ವಿರೋಧ?' ಎಂದು ಮಾರ್ಮಿಕವಾಗಿ ಪ್ರಶ್ನಿಸಿ ಬಾಯಿ ಮುಚ್ಚಿಸಿದ್ದರು. ಶ್ರೀನಾರಾಯಣ ಗುರು ಧರ್ಮ ಪರಿಪಾಲನಾ ಯೋಗಂ (ಎಸ್.ಎನ್.ಡಿ.ಪಿ) ಸ್ಥಾಪನೆಯ ಮೂಲಕ ನಾರಾಯಣಗುರು ಚಳವಳಿ ಸಂಘರ್ಷದ ಹಾದಿ ಹಿಡಿಯಿತು. ಆಗ ಅವರಿಗೆ ಜತೆಯಾದವರು ಡಾ.ಪದ್ಮನಾಭ ಪಲ್ಪು. ಡಾ.ಪಲ್ಪು ಮತ್ತು ಅವರ ಅಣ್ಣ ವೇಲು. ಇಬ್ಬರೂ ಕೇರಳದ ಜಾತಿ ವ್ಯವಸ್ಥೆಗೆ ಬಲಿಯಾಗಿ ಹುಟ್ಟೂರಿನಲ್ಲಿ ಶಿಕ್ಷಣ ಮತ್ತು ಉದ್ಯೋಗ ಎರಡೂ ಸಿಗದೆ ಊರು ಬಿಟ್ಟವರು. ಈಳವ ಜನಾಂಗದ ಮೊದಲ ಪದವೀಧರ ವೇಲು ಮದ್ರಾಸ್ನಲ್ಲಿಯೇ ಕಲಿತು ಅಲ್ಲಿಯೇ ಸರ್ಕಾರಿ ನೌಕರಿಗೆ ಸೇರಿದರೆ, ಪಲ್ಪು ಮದ್ರಾಸ್ ವೈದ್ಯಕೀಯ ಕಾಲೇಜಿನಲ್ಲಿ ಓದಿ ಮೈಸೂರಿನಲ್ಲಿ ಸರ್ಕಾರಿ ವೈದ್ಯರಾಗಿ ನೇಮಕಗೊಂಡರು. ಈಳವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಆಗುತ್ತಿರುವ ಅನ್ಯಾಯವನ್ನು ತಪ್ಪಿಸಬೇಕೆಂದು ಕೋರುವ ಮೊದಲ ಮನವಿಯನ್ನು ತಿರುವಾಂಕೂರು ಮಹಾರಾಜರಿಗೆ ಅರ್ಪಿಸುವ ಮೂಲಕ ಡಾ.ಪಲ್ಪು ತನ್ನ ಹೋರಾಟ ಪ್ರಾರಂಭಿಸಿದರು. ಬ್ರಿಟಿಷ್ ವೈಸ್ರಾಯ್, ಬ್ರಿಟನ್ ಪಾರ್ಲಿಮೆಂಟ್, ಕಾಂಗ್ರೆಸ್ ಪಕ್ಷ ಹಾಗೂ ಇಂಗ್ಲಿಷ್ ದಿನಪತ್ರಿಕೆಗಳಿಗೆ ಈಳವರ ದುಸ್ಥಿತಿಯನ್ನು ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದರು. ಈ ಕ್ರಮಗಳಿಂದ ನಿರೀಕ್ಷಿತ ಫಲ ಸಿಗದೆ ಹತಾಶರಾಗಿದ್ದ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಕೆಲವು ಕಾಲ ತಂಗಿದ್ದ ಸ್ವಾಮಿ ವಿವೇಕಾನಂದರನ್ನು ಭೇಟಿಯಾದರು. ಕೇರಳದ ಪರಿಸ್ಥಿತಿಯ ಸಂಪೂರ್ಣ ಅರಿವಿದ್ದ ವಿವೇಕಾನಂದರು `ಆಧ್ಯಾತ್ಮಿಕ ನಾಯಕರೊಬ್ಬರ ನೇತೃತ್ವದಲ್ಲಿ ಸಾಮಾಜಿಕ ಚಳವಳಿಯನ್ನು ಹುಟ್ಟುಹಾಕಿದರೆ ಮಾತ್ರ ಕೇರಳದಲ್ಲಿ ಬದಲಾವಣೆ ಸಾಧ್ಯ' ಎಂದು ಸಲಹೆ ನೀಡಿದರು. ಡಾ.ಪಲ್ಪು ಅವರ ಭೇಟಿಯ ನಂತರ ಅಲ್ಲಿಯವರೆಗೆ ದೇವಸ್ಥಾನ ಪ್ರವೇಶ ಚಳುವಳಿಯಲ್ಲಿಯೇ ನಿರತರಾಗಿದ್ದ ನಾರಾಯಣಗುರುಗಳ ಚಳುವಳಿಯ ದಿಕ್ಕು ಬದಲಾಯಿತು. ಮುಂದಿನ ದಿನಗಳಲ್ಲಿ ಇವರಿಬ್ಬರಿಗೆ ಜೊತೆಯಾದವರು ಮಲೆಯಾಳಿ ಭಾಷೆಯ ಹೆಸರಾಂತ ಕವಿ ಕುಮಾರನ್ ಆಶಾನ್. ಅರವಿಪುರಂನಲ್ಲಿ ದೇವಾಲಯ ಸ್ಥಾಪನೆಯ ನಂತರ 1916ರಲ್ಲಿ ಎಸ್.ಎನ್.ಡಿ.ಪಿ ಸ್ಥಾಪನೆಯಾಗುವ ವರೆಗಿನ ಅವಧಿಯಲ್ಲಿ ನಾರಾಯಣ ಗುರುಗಳು ರಾಜ್ಯಾದ್ಯಂತ ಪ್ರವಾಸ ಮಾಡಿ ಸಾಮಾಜಿಕ ಅನಿಷ್ಟಗಳ ವಿರುದ್ಧ ಜನಜಾಗೃತಿ ಮಾಡಿದ್ದರು. ಮೂಢನಂಬಿಕೆ ಮತ್ತು ದುಂದುವೆಚ್ಚದ ಅಂಧ ಸಂಪ್ರದಾಯಗಳನ್ನು ಕಿತ್ತೊಗೆಯಲು ಹೋರಾಟ ನಡೆಸಿದ್ದರು. ವಿವಾಹಗಳನ್ನು ಸರಳಗೊಳಿಸಿದರು. ಸಹಭೋಜನಕ್ಕೆ ಪ್ರೋತ್ಸಾಹ ನೀಡಿದರು. ಹೆಂಡ ಇಳಿಸುವುದಕ್ಕೆ ಪರ್ಯಾಯವಾಗಿ ತೆಂಗಿನ ನಾರಿನ ಉದ್ದಿಮೆಯಲ್ಲಿ ತೊಡಗುವಂತೆ ಪ್ರೇರೇಪಿಸಿದರು. ಇದಕ್ಕಾಗಿ ಕೈಗಾರಿಕಾ ಸಮ್ಮೇಳನಗಳನ್ನು ನಡೆಸಿದರು. (ಇದರಿಂದಾಗಿಯೇ ಕೇರಳ ಈಗ ತೆಂಗಿನನಾರು ಉದ್ದಿಮೆಯಲ್ಲಿ ಏಕಸ್ವಾಮ್ಯ ಹೊಂದಿದೆ). ಭೂತಾರಾಧನೆಗೆ ವಿರುದ್ಧವಾಗಿದ್ದ ಗುರುಗಳು ತಮ್ಮ ಮನೆಯಲ್ಲಿದ್ದ ಭೂತದ ಕಲ್ಲುಗಳನ್ನು ಎಸೆದುಬಿಟ್ಟಿದ್ದರು. ಕೆಳಜಾತಿಯವರ ಮಕ್ಕಳು ಇಂಗ್ಲಿಷ್ ಕಲಿಯಬೇಕೆಂದು ಗುರುಗಳು ಬಯಸಿದ್ದರು. ಈ ರೀತಿ ಲೌಕಿಕ ಬದುಕಿನ ಬೇಕು-ಬೇಡಗಳ ಬಗ್ಗೆಯೂ ಪ್ರಾಯೋಗಿಕವಾಗಿ ಯೋಚನೆ ಮಾಡಿದ ಇನ್ನೊಬ್ಬ ಧಾರ್ಮಿಕ ಸುಧಾರಕನನ್ನು ಕಾಣುವುದು ಅಪರೂಪ. ದೇವಸ್ಥಾನ ಪ್ರವೇಶಕ್ಕಾಗಿ ನಾರಾಯಣ ಗುರುಗಳು ಹೋರಾಟ ನಡೆಸಿರಲಿಲ್ಲ. ಬದಲಿಗೆ ಅವರೇ ದೇವಾಲಯಗಳನ್ನು ಸ್ಥಾಪಿಸಿದರು. ಆದರೆ ಶಾಲೆಗಳ ಸ್ಥಾಪನೆಗೆ ಸರ್ಕಾರದ ಅನುಮತಿ ಬೇಕಿತ್ತು. ಅದಕ್ಕಾಗಿ ಸರ್ಕಾರಿ ಶಾಲೆಗಳ ಪ್ರವೇಶದ ಹಕ್ಕಿನ ಹೋರಾಟಕ್ಕೆ ಅವರು ಚಾಲನೆ ನೀಡಿದರು. ದೇವಸ್ಥಾನ ಪ್ರವೇಶದ ಕಾಲದಲ್ಲಿ ಎದುರಾಗದ ವಿರೋಧ ಶಿಕ್ಷಣದ ಹಕ್ಕಿನ ಚಳುವಳಿಗೆ ಎದುರಾಗಿದ್ದು ಗಮನಾರ್ಹ. ಎಸ್.ಎನ್.ಡಿ.ಪಿ ಚಳವಳಿಯಲ್ಲಿ ಈ ಕಾಲ ನಿರ್ಣಾಯಕವಾದದ್ದು. ಕೇರಳದಾದ್ಯಂತ ನಾಯರ್-ಈಳವ ಸಂಘರ್ಷ ನಡೆಯಿತು. ಈಳವ ಮಹಿಳೆಯರ ಮೇಲೆ ದೌರ್ಜನ್ಯವೆಸಗಲಾಯಿತು. ಎಸ್.ಎನ್.ಡಿ.ಪಿಯನ್ನು ಬೆಂಬಲಿಸುವ ಪತ್ರಿಕೆಗಳ ಕಚೇರಿಗಳನ್ನು ಸುಟ್ಟುಹಾಕಲಾಯಿತು. ಚಳುವಳಿಯ ಒತ್ತಡಕ್ಕೆ ಮಣಿದ ತಿರುವಾಂಕೂರು ದಿವಾನರು ಈಳವರಿಗೆ ಅವರದೇ ಶಾಲೆಗಳನ್ನು ಸ್ಥಾಪಿಸಲು ಅನುಮತಿ ನೀಡಿದರು. ಸರ್ಕಾರಿ ಶಾಲೆಗಳಲ್ಲಿ ಎಲ್ಲ ಜಾತಿ ಜನರಿಗೆ ಮುಕ್ತ ಪ್ರವೇಶ ನೀಡುವ ಮಸೂದೆ ಜಾರಿಗೆ ಬಂದಿತು. ನಾರಾಯಣ ಗುರು ಚಳವಳಿಯಲ್ಲಿ ದೇವಸ್ಥಾನ ಸ್ಥಾಪನೆಗಿಂತಲೂ ಮುಖ್ಯವಾದ ಘಟನೆ ಇದು. ಆದರೆ ಸರ್ಕಾರಿ ಸೇವೆ ಸೇರಲು ಸರ್ಕಾರ ಅವಕಾಶ ನೀಡಿದ್ದನ್ನು ನೋಡಲು ನಾರಾಯಣ ಗುರುಗಳು ಬದುಕಿರಲಿಲ್ಲ. 1936ರಲ್ಲಿ ಸರ್ಕಾರ ಲೋಕಸೇವಾ ಆಯೋಗವನ್ನು ಸ್ಥಾಪಿಸಿ ಉನ್ನತ ಹುದ್ದೆಗಳನ್ನು ಹೊರತುಪಡಿಸಿ ಉಳಿದ ಹುದ್ದೆಗಳಲ್ಲಿ ಶೇಕಡಾ 40ರಷ್ಟು ಮೀಸಲಾತಿ ನೀಡಿತು. 1936ರ ಹೊತ್ತಿಗೆ ಎಸ್.ಎನ್.ಡಿ.ಪಿ ಸಂಘಟನಾ ಜಾಲ ವ್ಯಾಪಕವಾಗಿ ಹರಡಿತ್ತು, ಮುಖ್ಯ ಉದ್ದೇಶಗಳೂ ಈಡೇರಿದ್ದವು ರಾಜ್ಯಾದ್ಯಂತ ನೂರಾರು ಶಿಕ್ಷಣ ಸಂಸ್ಥೆಗಳು ಸ್ಥಾಪನೆಯಾಗಿದ್ದವು. ಅದೇ ಹೊತ್ತಿಗೆ ರಾಜಕೀಯ ನಾಯಕರ ಕಣ್ಣು ಸಂಘಟನೆಯ ಮೇಲೆ ಬಿದ್ದಿತು. ಸಂಘಟನೆಯೊಳಗಿದ್ದವರಲ್ಲಿಯೂ ರಾಜಕೀಯ ಆಕಾಂಕ್ಷೆಗಳು ಹುಟ್ಟಿಕೊಂಡಿದ್ದವು. ಚಳುವಳಿ ಒಂದು ಹಂತಕ್ಕೆ ತಲುಪವವರೆಗೆ ಯಾವುದೇ ರೀತಿಯ ಗೊಂದಲ, ಹತಾಶೆ, ನಿರಾಶೆಗಳು ಗುರುಗಳ ನಡೆ-ನುಡಿಗಳಲ್ಲಿ ಇರಲಿಲ್ಲ. ಆದರೆ ಜೀವನದ ಕೊನೆಯ ದಿನಗಳಲ್ಲಿ ಅವರು ಖಿನ್ನರಾಗಿದ್ದರು, ಅಂತರ್ಮುಖಿಯಾಗಿದ್ದರು. ತಮ್ಮ ಅನುಯಾಯಿಗಳಲ್ಲಿ ಹುಟ್ಟಿಕೊಂಡ ರಾಜಕೀಯ ಆಕಾಂಕ್ಷೆ ಮತ್ತು ಆಸ್ತಿಗಳ ಮೇಲೆ ನಿಯಂತ್ರಣಕ್ಕಾಗಿ ನಡೆಸುತ್ತಿದ್ದ ಶೀತಲ ಸಮರ ಅವರ ಗಮನಕ್ಕೆ ಬಂದಿತ್ತು. ಇದೇ ಬೇಸರದಿಂದ ಅವರು ಶ್ರೀಲಂಕಾಕ್ಕೆ ಹೋಗಿದ್ದರು. ಅಲ್ಲಿಯೇ ಶಾಶ್ವತವಾಗಿ ನೆಲೆಸಲು ಬಯಸಿದ್ದರು. ಕೊನೆಗೆ ಅವರ ಅನುಯಾಯಿಗಳ ಒತ್ತಡಕ್ಕೆ ಮಣಿದು ಹಿಂದಿರುಗಿದ ಮೇಲೆ ಸಮಾಧಿಯಾಗುವ ಆಸೆ ತೋಡಿಕೊಂಡಿದ್ದರು. ಅದರ ನಂತರ ಎರಡು ವರ್ಷಗಳಿಗಿಂತ ಹೆಚ್ಚು ಕಾಲ ಅವರು ಬದುಕಲಿಲ್ಲ. ಮೊದಲು ದೇವಸ್ಥಾನ ಪ್ರವೇಶ ಚಳುವಳಿ ನಡೆಸದೆ ದೇವಸ್ಥಾನ ನಿರ್ಮಿಸಲು ಅನುಸರಿಸಿದ ಕಾರ್ಯತಂತ್ರ ಎರಡು ರೀತಿಯಲ್ಲಿ ಅವರಿಗೆ ನೆರವಾಯಿತು. ಸಾವಿರಾರು ವರ್ಷಗಳಿಂದ ತಮ್ಮಿಂದ ದೂರವೇ ಉಳಿದಿದ್ದ ದೇವಸ್ಥಾನಗಳಿಗೆ ಪ್ರವೇಶಿಸಲು ಅಡ್ಡಿಯಾಗುವ ಸಾಂಪ್ರದಾಯಿಕ ಮನಸ್ಸಿನ ಹಿಂಜರಿಕೆ ಹಾಗೂ ಭೀತಿಯಿಂದ ಜನರನ್ನು ಅವರು ಮುಕ್ತಗೊಳಿಸಿದರು. `ದೇವಾಲಯಕ್ಕೆ ಹೋಗುವ ಹಕ್ಕು ನಿಮಗಿಲ್ಲವೆಂದಾದರೆ ದೇವಾಲಯವನ್ನೇ ನಿಮ್ಮಲ್ಲಿಗೆ ತರುತ್ತೇನೆ' ಎಂದು ಹೇಳಿ ಅಸ್ಪೃಶ್ಯರಿಗೆ ಪೂಜೆಯ ಹಕ್ಕನ್ನೂ ನೀಡಿದ್ದು ಕೆಳಜಾತಿಗಳಲ್ಲಿ ಸ್ವಾಭಿಮಾನದ ಜಾಗೃತಿಗೆ ಕಾರಣವಾಯಿತು. ದೇವಸ್ಥಾನ ಪ್ರವೇಶ ಹೋರಾಟಕ್ಕೆ ಎದುರಾಗುವ ಪ್ರತಿಭಟನೆಯನ್ನು ಎದುರಿಸುವ ಸಂಘಟನಾ ಶಕ್ತಿ ಆಗಿನ್ನೂ ಆ ರಾಜ್ಯದ ನಿಮ್ನವರ್ಗದ ಜನರಲ್ಲಿ ಬೆಳೆದಿಲ್ಲ ಎಂದು ನಾರಾಯಣ ಗುರುಗಳಿಗೆ ತಿಳಿದಿತ್ತು. ಅವರು ಮೊದಲು ದೇವಸ್ಥಾನ ಸ್ಥಾಪಿಸಿದ ಮೂವತ್ತಮೂರು ವರ್ಷಗಳ ನಂತರ ದೇವಾಲಯಗಳ ಮುಂಭಾಗದ ರಸ್ತೆಗಳಲ್ಲಿ ನಡೆಯುವ ಹಕ್ಕಿಗಾಗಿ ನಡೆದ ವೈಕಂ ಸತ್ಯಾಗ್ರಹಕ್ಕೆ ಎದುರಾದ ಪ್ರತಿಭಟನೆಯನ್ನು ನೋಡಿದರೆ ಅದು ಸ್ಪಷ್ಟವಾಗುತ್ತದೆ. ಅವರ ಸಾವಿನ ಎಂಟು ವರ್ಷಗಳ ನಂತರ ಕೇರಳ ಸರ್ಕಾರ ದೇವಾಲಯ ಪ್ರವೇಶ ಘೋಷಣೆ ಹೊರಡಿಸಿದಾಗ ಅಲ್ಲಿನ ಸವರ್ಣೀಯರ ದೇವಾಲಯಗಳಿಗೆ ಭಕ್ತರೇ ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿತ್ತು. ಆಗಲೇ ನಾರಾಯಣ ಗುರುಗಳು ಮಂಗಳೂರು ಮಾತ್ರವಲ್ಲದೆ ಕೇರಳ, ತಮಿಳುನಾಡಿನಲ್ಲಿ ನೂರಾರು ದೇವಾಲಯಗಳನ್ನು ಸ್ಥಾಪಿಸಿದ್ದರು. ಗುರುದೇವ ರವೀಂದ್ರನಾಥ ಟ್ಯಾಗೋರ್, ಮಹಾತ್ಮ ಗಾಂಧಿ ಅವರಿಗೂ ತಮ್ಮ ಪ್ರಖರ ವಿಚಾರಗಳಿಂದ ಪ್ರಭಾವ ಬೀರಿದ್ದ ನಾರಾಯಣಗುರುಗಳು ಕೆಳಜಾತಿಯವರು ವಿದ್ಯೆ ಕಲಿತು ವೈಚಾರಿಕತೆಯನ್ನು, ವೈಜ್ಞಾನಿಕ ದೃಷ್ಟಿಯನ್ನೂ ಬೆಳೆಸಿಕೊಂಡು ಆರ್ಥಿಕವಾಗಿ ಮಾತ್ರವಲ್ಲದೆ ಮಾನಸಿಕವಾಗಿಯೂ ಸ್ವಾವಲಂಬಿಯಾಗ ಬೇಕು ಎಂದು ಬಯಸಿದ್ದರು. ಮನುಕುಲಕ್ಕೆ ಲೇಸನ್ನು ಬಯಸಿದ ನಾರಾಯಣ ಗುರುಗಳಿಗೆ ನೀಡುವ ಗೌರವವೆಂದರೆ ಅವರು ಹೇಳಿದ ಮಾತುಗಳನ್ನು ಅನುಸರಿಸುವುದು. ಅಂತಹ ಸ್ಥೈರ್ಯವನ್ನು ಹಿಂದುಳಿದ ವರ್ಗದ ಜನತೆ ಪ್ರದರ್ಶಿಸಬೇಕು.          ( ಮಾಹಿತಿ ಸಂಗ್ರಹ - ಫೇಸ್ಬುಕ್ , ವಿಕಿಪೀಡಿಯ,)

Thursday 13 March 2014

ಆರು- ಹನಿಗವನಗಳು ( ಸಮಯ ಓಡುವವರಿಗಾಗಿ )









೧.ಮಾನವ ಧರ್ಮ ,,,,,!
..........................
ಎಲ್ಲ ಜೀವಿಗಳಿಗೂ ಮುಖವಿದೆ ,
ಮನುಷನಿಗೆ ಮುಖವಾಡವೂ ಇದೆ !
ಎಲ್ಲರೂ ತಪ್ಪು ಮಾಡುತಾರೆ 
ಕೆಲವರು ಎಲ್ಲ ಕಾಲದಲ್ಲೂ ತಪ್ಪು ಮಾಡುತ್ತಾರೆ
'ನಾನೂ 'ತಪ್ಪು ಮಾಡುತ್ತೇನೆ
ತಪ್ಪು 'ನಾನು' ಮಾತ್ರವೇ.. ಮಾಡುವುದಿಲ್ಲ .
ಯಾರು ಕೆಟ್ಟವರಲ್ಲ
ಎಲ್ಲರೂ ಒಳ್ಳೆಯವರಲ್ಲ
ನಮಗೆಲ್ಲ ತಪ್ಪುಗಳ ಅನುಭವವೂ ಜೀವನ ಕಲಿಸುತ್ತದೆ,
ತಪ್ಪು ಮಾಡಿಯೇ ಅನುಭವ ಪಡೆಯಬೇಕಿಲ್ಲ
ಬಿದ್ದು ಹೋಗುವ ಜೀವ
ಬಿದ್ದು ಹೋಗಲಿರುವ ಒಂದಷ್ಟು ಜೀವಕ್ಕೆ
ಒಳ್ಳೆಯದು ಮಾಡಬೇಕಷ್ಟೆ .
ಅದುವೇ ಮಾನವ ಧರ್ಮ .



೨.ಸೌರಮಂಡಲದ ರಾಣಿ .
---------------------
ಸುಮ್ಮನಿರದ ವಸುಂಧರೆ 
ಸುಮ್ಮನಿರುವ ರವಿಗೆ ಆಕರ್ಶಿತಳಾಗಿ 
ಸುಮ್ಮನೆ ನಿಂತಲ್ಲೇ ನಿಂತು ಉರಿಯುವ ಸೂರ್ಯ ನನ್ನು ತಾನೇ ಸುತ್ತಿ ಸುತ್ತಿ ,,,
ಸುಂದರ ಹಗಲು ರಾತ್ರಿಗಳನು ಪಡೆದು 
ಸುಯೋಗದಲ್ಲಿ ಮೂರೂ ಕಾಲಗಳಿಗೆ ಒಡ್ಡಿಕೊಂಡು
ಸುಜಲಧಾರೆಯಲ್ಲಿ ಸಸ್ಯ ಶಾಮಲೆಯಾಗಿ ಹಸಿರು ಸೀರೆ ಹೊದ್ದು 
ಸುಜನರಾಗಲೆಂದು ಮಾನವನಿಗೆ ಜಾಗನೀಡಿ 
ಸಂಕ್ರಾಂತಿಗೆ ಹಂಬಲಿಸಿಹ ಧರಣಿಯೇ ಸೌರಮಂಡಲದ ರಾಣಿ .

೩.ಚಾಟಿ ಚಂದ್ರ 
..............
ಆಗೀಗ ಕಂಡ ಕಂಡ ದೇವರನ್ನೆಲ್ಲ ಸುತ್ತುವುದೇಕೆ ?
ಐದು ವರ್ಷ ಕೊಮ್ಮೆ ಪ್ರಜೆಗಳ ಊರು -ಸೂರು ಸುತ್ತಿ 
ಓಟಿಗಾಗಿ ನೋಟು ನೀಡಿ ,,
ಬಾಯಿತುಂಬ ಬರವಸೆಗಳ ಸ್ತೋತ್ರ ಜಪಿಸಿ 
ಸರ್ಕಾರದ 'ಖಾಜಾನೆ ಲೂಟಿ ಭಾಗ್ಯ ' ನಿಮ್ಮದಾಗುವುದೆಂದ ಚಾಟಿ ಚಂದ್ರ .

೪.ಇಲ್ಲಿ ಕಾಣಿರಿ ....
.........
ಪೇಸ್ ಬುಕ್ ಬಂದ ಮೇಲೆ
ಬುಕ್ ಪೇಸ್ ಮರೆತವರು
ಕ್ಲಾಸಿಗೆ ಬಂಕ್ ಹಾಕಿ
ಸೈಬರ್ ಸೆಂಟರ್ ನಲ್ಲಿ ಹಾಜರಿಯಾದವರು
ಕಾಲೇಜ್ ಕ್ಯಾಂಪಸ್ ಮರೆತು 
ಪೇಸ್ ಬುಕ್ ಕ್ಯಂಪಾಸ್ ಸುತ್ತಾಡುತ್ತಿರುವವ್ರು
ಇಲ್ಲಿ ಕಾಣಿರಿ ,ಇಲ್ಲಿ ಕಾಣಿರಿ ...

೫..ಅವಳು ..
...................
ಕನ್ನಡಿಗೂ ಹಗಲು ಕನಸು ಬಿತ್ತು
ಅವಳ ಮುಗುಳು ನಗೆ ಕಂಡು
ದುಂಬಿಗೂ ತಲೆ ತಿರುಗಿತು 
ಅವಳ ತುಟಿ ಜೇನುಂಡು
ತಂತಾನೇ ಮೊಬೈಲೇ ಐಲಾಯಿತು
ಅವಳ ಮದುರ ಧನಿ ಕೇಳಿ
ಅವಳ ಗೆಜ್ಜೆದನಿಗೆ
ಧರಣಿ ಹೆಜ್ಜೆಹಾಕಿದಳು
ಆ ರವಿ ದಿನಾ ದರೆಯಲಿ ಹುಲ್ಲು ,ಹೂ ಹಾಸಿದ 

೬.ಕಾವಲು ಪಾಳಿ ,,,
...............
ರವಿ -ಚಂದ್ರರಿಬ್ಬರಿಗೂ ಒಂದೇ ಕೆಲಸ 
ಕಾವಲು ಕಾಯೋದು .( ಡಿ ,ಗ್ರೂಪ್ ,ಪಾಪ ,,) 
ಉರಿಮುಖದ ಒಬ್ಬ ಹಗಲಲ್ಲಿ ,,
ಹಾಲುಗೆನ್ನೆಯ ನಸು ನಗೆಯ ಚೆಲುವನಿಗೆ ರಾತ್ರಿ ಪಾಳಿ ! 
ಅರನ್ನು ನೇಮಕಾತಿ ಮಾಡಿಕೊಂಡವರು 'ಸೃಷ್ಟಿ '
ಕಾಯುತ್ತಿರೋದು ...
ಕೋಟಿ ಜೇವ ಹೊತ್ತು ನಿಂತ ನಿಮ್ಮ ತಾಯಿ ವಸುಂಧರೆಯನ್ನು,,

Wednesday 12 March 2014

"ರವಿರಾಜ ಮಾರ್ಗ "ದಲ್ಲಿನ 'ನವ 'ಸಾಲು (9 ) ಮೈಲಿಗಲ್ಲುಗಳು.

"ರವಿರಾಜ ಮಾರ್ಗ "ದಲ್ಲಿನ  'ಸಾಲು ಮೈಲಿಗಲ್ಲುಗಳು'
            
  1. ತೂತು ಬಿದ್ದ ಆಕಾಶ ಬೇಡವೆಂದರೂ ಮಳೆ ಸುರಿಸುತ್ತೆ.
      ರಾಜಕಾರಣಿಗಳ ಬಾಯಲ್ಲಿ
       ಸುಮ್ಮನೆ ಭರವಸೆ ಸುರಿಯುತ್ತೆ ....
       ಆಮೇಲೆ ಬರಿ ಗುಡುಗು ,,ಮಿಂಚು ,,
,      ಪರಿಹಾರ ಕಾಂಚಾಣ ....! 





 2.   ಏಳಬೇಡಿ , ಎಚ್ಚರವಾದರೂ ಬೇಗ. .
ಆ ರವಿ'ಗೆ ದಿನಾ ಬೇಗ ಎದ್ದರೊ ಬೇಜಾರಾಗದು ಬಿಡಿ. !
ಅವನಿಗೇನು ಗೊತ್ತು. .
ಹೂ ಮಂಚದ ಸುಖ.
ಹೊಂಗನಸಿನ ಹಿತ.
ಅವನಿಗೂ ಕೊಟ್ಟು ಕೂರಿಸಿ ರಜಾ.

 3.  ಕತ್ತಲೆ ನಗುತಿದೆ ಹಗಲು ಅಳುತ್ತಿದೆ.
      ಹಗಲಿನಲಿ ಎದುರಾದರೆ ಮಾತಾಡದವರು
      ರಾತ್ರಿ ಪೇಸಬೂಕನಲೀ ಯಾಕೋ ಮಾತು.
      ಬರಿ ಯಾಂತ್ರಿಕತೆ ಎಂದು. !!
                                                                                                                                                                    
   4.   ಕೊನೆ ಸ್ಟಾಪ್ ತನಕ ಹೋಗೋಣವೆಂದು ಟಿಕೆಟ್ ' ತೆಗೆಸದೆ ಪಯಣಿಸಿದ್ದೆ ...
ಪ್ರೇಮ ಪಯಣಕ್ಕೆ ಒಲವ ( ವೋಲ್ವೋ ) ಬಸ್ಸಿನಲ್ಲಿ !
ಈಗ ಕೊನೇ ಸ್ಟಾಪ್ ಬಂದು ಬಿಡುವ ಮೊದಲೇ
ಕಂಡಕ್ಟರ್ ( ಹುಡುಗಿ ಅಪ್ಪ ) ಇಳಿಸಿಬಿಟ್ಟ .!
ಒಂಟಿಯಾಗಿ ..
ಹೋಗ್ಲಿ ಬಿಡಿ ...
ಹಿಂದೆ ಮತ್ತೊಂದು ಬಸ್ಸು ಬರುತ್ತಿದೆ ..,,

5. ಸೋಲು - ಗೆಲುವು 
ಕಬಡ್ಡಿ ಆಡುತ್ತಿವೆ,,,
ಗೆಲುವು ಗೆದ್ದರೆ ಗೆಲುವಿಗೆ ಗೆಲುವು !
ಸೋಲು ಸೋತರೆ ಸೋಲಿಗೆ ಸೋಲು !
ಎಂತ ತಮಾಸೆ ನೋಡಿ ..
ಆತ್ಮದ ಮುಕ್ತಿಗೆ ದೇಹ ಸಾಯಬೇಕು 
ದೇಹವಿರಬೇಕಾದರೆ ಆತ್ಮ ಅಲ್ಲಿ ಬಂದಿಯಾಗಬೇಕು !   

6. ಭರವಸೆ ಮತ್ತು ಅನುಮಾನದ ಗಾಳಿ
ಉಚ್ವಾಸ ,ನಿಚ್ವಾಸ ಕ್ರಿಯೆಯಲ್ಲಿದೆ
ಡವಗುಡುವ ಎದೆ
ಸುಮ್ಮನಿರದೆ ಸ್ವಲ್ಪ ಜಾಸ್ತಿ ಕೆಲಸ ಮಾಡುತ್ತಿದೆ ...!
 ಮನೋಬಲವೇ ನೂರಾನೆಬಲ
ಮಿತ ಮಾತೇ ಹಿತವಾದ 'ಸೃಷ್ಟಿ'
ತಾಳ್ಮೆಯ ,ಜಾಣ್ಮೆಯ ಶಾಂತ ಮನಸ್ಸೇ ಯಸ್ಸಸ್ಸಿಗೊಯ್ಯುವ ಉನ್ನತ 'ಸ್ತಿತಿ'
ಆತ್ಮ ವಿಶ್ವಾಸ ,ನಂಬಿಕೆಯೇ ಗೆಲುವಿಗೆ' ಲಯ '
                                              
7. ಸ ರಿ ಗ ಮ ಕಲಿತವರೂ ತಲೆದೂಗಿದರು
ಯಾವ ಶಾಲೆ ಕಲಿಯದ ಕೋಗಿಲೆ ಹಾಡಿಗೆ.

8.. ನಮ್ಮನ್ನು ಇಷ್ಟ ಪಟ್ಟವರನ್ನು ನಾವೂ ಇಷ್ಟ ಪಡುವುದೇ ಜಗದ ಜೀವನ .
ನಮ್ಮ ಅಪ್ಡೇಟ್ಸ ಲೈಕ್ ಮಾಡುವವರ ಅಪ್ಡೇಟ್ಸಗಲನೂ ಲೈಕ್ ಮಾಡುವುದು
ಪೇಸ್ ಬುಕ್ ಪಡಸಾಲೇ ಜೀವನ.
 

9. ನಗು,,,ಬರುತ್ತದೆ. ...
"ನ' ನಗು"...!
ನಿಮಗೂ ..!
ಪಾಪ...ಹುಲ್ಲು ಗಳು ಗಾಳಿಯೊ0ದಿಗೆ ಸ್ನೇಹಕಾಗಿ 
ತವ'ಕಿಸಿ"ದಾಗ. ...!


Saturday 8 March 2014

ಮನೆಯೆಂಬ ಪಾಟ ಶಾಲೆಯಲ್ಲಿ ಟಿ.ವಿ ಎಂಬ ಮೂರ್ಖ ಶಿಕ್ಷಕ..ಬೇಕೇ ..?

ಶೀಘ್ರದಲ್ಲಿ ...ನಿಮ್ಮೊಂದಿಗೆ ,,,ನಿಮ್ಮ ಗೆ ಉಪಯುಕ್ತ , ಮಾಹಿತಿ ,,,ಚರ್ಚೆ ,,ಸಂತಸ ,,ಸಾಧನೆ ,,,ಸಂಕಷ್ಟ ,,,ಸಮೃದ್ದ  ವಿಚಾರ ಬರಹ ಬ್ಲಾಗ್ ರವಿರಾಜ ಮಾರ್ಗದಲ್ಲೀ  ನಿರೀಕ್ಷಿಸಿ ,,,ನಮನ್ನು ಬೆಂಬಲಿಸಿ ,ಪಾಲೋ ಮಾಡಿ ...



ಮನೆಯೆಂಬ ಪಾಟ ಶಾಲೆಯಲ್ಲಿ ಟಿ.ವಿ ಎಂಬ ಮೂರ್ಖ ಶಿಕ್ಷಕ..!

ಶಾಲೆಯಲ್ಲಿ  ವರ್ಷಗಟ್ಟಲೆ ಪಾಟಮಾಡಿ ಶಿಕ್ಷಕರು ಕಲಿಸಿದ ನೀತಿ ,ಮೌಲ್ಯಗಳನ್ನು  ನಿಮಿಷಮಾತ್ರದಲ್ಲಿ    ಮುರಿಯುವಂತೆ  ಪ್ರಚೋದಿಸುವ ಟಿವಿಲೋಕದ  ದಾರಾವಾಹಿಗಳು , ಸಿನಿಮಾಗಳು ,ಮಕ್ಕಳು , ಮನೆಮಂದಿಯನ್ನು ಕ್ಷಣದಲಿ  ಸಾಮುಹಿಕವಾಗಿ ತನ್ನ ಆಪೋಶನಕ್ಕೆ  ತೆಗೆದುಕೂಲ್ಲಬಲ್ಲ  ಮಾಯಾವಿ  ಎನ್ನಬಹುದು .ಸೆನ್ಸಾರ್ ಇಲ್ಲದೇ  , ಸಾಮಾಜಿಕ  ಬದ್ದತೆಯೂ ಇಲ್ಲದೆ ,ದುದ್ದುಮಾಡುವ , ತಮ್ಮ ಟಿ ಅರ ಪಿ ಏರಿಸಿಕೂಳ್ಳುವ ಭರದಲ್ಲಿ   ವಿಚಿತ್ರ , ಅನೈತಿಕ  ದೃಶ್ಯ ಹೊತ್ತ , ಆಶ್ಲೀಲ, ಬಲಾತ್ಕಾರದ ಹಸಿ ಹಸಿ ದೃಶ್ಯ ತೋರಿಸಿ ,ಮತ್ತಸ್ತು ಜನರನ್ನು ಕೆರಳಿಸುವಲ್ಲಿ ಕಾರಣ ವಾಗುತ್ತಿರುವುದು ಶೋಚನಿಯವೇ ಸರಿ . 



(ಇಲ್ಲಿ ನನ್ನ ಹಿಂದಿನ ಬ್ಲಾಗ್ನ ಬರಹ ತುಣುಕುಗಳು ಮುಂದೆ ಇದೆ ಬ್ಲಾಗ್ ನಲ್ಲಿ  ರಿಪೋಸ್ಟ್ ಆಗಬಹುದು )



ಟಿವಿ , ಇಂಟರ್ನೆಟ್ ಣ ವ್ಯಾಮೋಹಕ್ಕೆ ಸಿಕ್ಕ  ಮಕ್ಕಳು  ಇಂದು ಹೆಚ್ಚು ಅನೈತಿಕ ಕಾರ್ಯ , ಕಾನೂನು ಉಲ್ಲಂಗನೆ , ಸಾಮಾಜಿಕ ನಿಯಮ ಉಲ್ಲಂಗನೆ , ಸಾಂಸ್ಕೃತಿಕ  ಅಧಪತನ ತಲುಪಿರುವುದು ಸ್ಪಷ್ಟ ." ಕುಂಬಾರನಿಗೆ ವರುಷ ದೊಣ್ಣೆಗೆ  ನಿಮಿಷ' ಎನ್ನುವಂತೆ  ಶಿಕ್ಷಕರು ಶ್ಹಾಲೆಯಲ್ಲಿ ಪತ್ಯ ಪುಸ್ತಕದ ದಾರ್ಮಿಕ ,ನೈತಿಕ , ಸಾಂಸ್ಕೃತಿಕ  ,ರಾಷ್ಟ್ರೀಯ ಮೌಲ್ಯಗಳನ್ನು  ಕಲಿಸಿದ್ದನ್ನು  ಮನೆಯಲಿ ಟಿವಿ ನಿಮಿಷದಲ್ಲಿ ಹಾಳುಮಾಡುತ್ತಿದೆ . ಶೋಚನಿಯ .

 ಕೆಲವು ದಾರವಹಿಗಳಿವೆ  ಅವು ಸದಾ ಅತ್ತೆ ಸೊಸೆ ಜಗಳ , ಅಣ್ಣ ತಮ್ಮಂದಿರು ಆಸ್ತಿಗಾಗಿ ಮಾಡುವ ಕುಟಿಲೂಪಾಯಗಳುನ್ನು , ಶಾಲೆಯಲ್ಲಿನ್ , ಕಾಲೇಜಿನಲ್ಲಿನ  ಮಕ್ಕಳ  ಅಪಹಾಸ್ಯಗಲ್ನ್ನೇ ಕಲ್ಪಿಸಿ ಕಲಿಪಿಸಿ  ವಿಜ್ರಮ್ಬಿಸಿ  ತೋರಿಸುತ್ತವೆ . ದೊಡ್ಡದಾಗಿ ಜೂಮ್ ಮಾಡಿ ಮಾಡಿ  ಯುವ ಮಹಿಳೆಯರ ಅರೆಬೆತ್ತಲೆ ದೇಹವನ್ನು , ಅತ್ಯಾಚಾರವನ್ನು  ಹಸಿ ಹಸಿ ತೂರಿಸಿ  ನೋಡುತ್ತಿರುವವರ ಅಸೆ ,ಕಾಮ ಮತ್ತಷ್ಟು ಕೆರಳುವಂತೆ ಮಾಡುತ್ತವೆ ,ಅತ್ಯಾಚಾರಗಳ ಹಸಿ ದೃಶ್ಯಗಳನ್ನೇ ಪೋಣಿಸಿ ಪೋಣಿಸಿ ತೋರಿಸುತ್ತವೆ , ಇವೆಲ್ಲ ಬೇಕಾ ...?







ಸಮಾಜದ ,ಕುಟುಂಬದ ಸ್ವಾಸ್ತ ತೆಗೆ , ಸಹಬಾಳ್ವೆಗೆ ಕಾರಣವಾಗಬೇಕಿದ್ದ್  ಟಿವಿ , ಇಂಟರ್ನೆಟ್ ,ಸಮಾಜದಲ್ಲಿ ಅನೈತಿಕತೆಗೆ , ಕುಟುಂಬದ ಮನ ಕಲಕುವಿಕೆಗೆ ಕಾರಣವಾಗುತ್ತಿರುವುದರ ವಿರುದ್ದ ಒಂದು ಗಟ್ಟಿ ರಣ ಕಹಳೆ ಓದಬೇಕಿದೆ ಅಲ್ಲವೇ ..?
  
 

ಸುಳ್ಳೂರ ಶಾಲೆಯಲ್ಲಿ ಪಾಲಕರಿಂದ ಸ್ವಚ್ಛತಾ ಸಪ್ತಾಹ

ಊರಿನ ಗ್ರಾಮಸ್ಥರಿಂದ ಸುಳ್ಳೂರು ಶಾಲೆಯಲ್ಲಿ ಸ್ವಚ್ಛತಾ ಸಪ್ತಾಹ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸುಳ್ಳೂರಿನ ಹಿರಿಯ ವಿದ್ಯಾರ್ಥಿಗಳು , ಪಾಲಕರೆಲ್ಲರೂ ಸೇರ...