ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Sunday 25 June 2017

ಕೆಲವರಿಗೆ ಸಮಾಜ ಸುಧಾರಕರು, ಚಿಂತಕರೇಕೆ ಶತ್ರುಗಳಾಗುತ್ತಾರೆ....?

ಕೆಲವರಿಗೆ ಸಮಾಜ ಸುಧಾರಕರೇಕೆ ಶತ್ರುಗಳಾಗುವರು....?
ಜಗತ್ತಿನ ಯಾವ ಚಿಂತಂಕರು  ಧಾರ್ಮಿಕ ಮೂಲಭೂತವಾದವನ್ನು ಪ್ರೋತ್ಸಾಹಿಸಲಿಲ್ಲ..ಯಾವ ಧರ್ಮಿಯನು ಈ ಭೂಮಿಯನ್ನು ಗುತ್ತಿಗೆ ಪಡೆದಿಲ್ಲ. ಯಾವ ಧರ್ಮ ಗುರುವು ತಾನು ಬೋದಿಸಿದ್ದೆ ಅತಿ ಶ್ರೇಷ್ಠ ಎಂದು ಯಾರ ಮೇಲೂ ಹೇರಲಿಲ್ಲ. ಅವರೆಲ್ಲ ಬೋದಿಸಿದ್ದು ಮಾನವತಾವಾದ, ಸಮತಾವಾದ, ವಿಶ್ವಮಾನವತೆ. ಸ್ವಾತಂತ್ರ್ಯ, ಸಹೋದರತೆ, ಸಮಾನತೆ, ದಯೆ, ಪ್ರೀತಿಯ ಪ್ರತಿಪಾದಕರಾಗಿದ್ದರು. ಎಲ್ಲ ಬುದ್ದಿಜೀವಿಗಳು ಚಿಂತಂಕರು,ಸಮಾಜ ಸೇವಕರು ಸಾಹಿತಿಗಳು ,ಕಲಾವಿದರು ಶಿಕ್ಷಕರು  ಜಗತ್ತಿನಾದ್ಯಂತ ಇದನ್ನೇ ಜಗತ್ತಿಗೆ ಸಾರಿದರು. ಆದರೂ ಜಗತ್ತಿನೆಲ್ಲೆಡೆ ಇರುವ ಧಾರ್ಮಿಕತೆಯ ಅಪೀಮು ಕುಡಿದ ಈ ಮೂಲಭೂತವಾದಿಗಳು ಧರ್ಮದ ಹೆಸರಿನಲ್ಲಿ  ಒಡೆದು ಆಳುವ ಪಾಳೆಗಾರಿಕೆಯನ್ನು ಜಗತ್ತಿನ ಎಲ್ಲ ರಾಷ್ಟ್ರಗಳಲ್ಲೂ  ಕಸುಬು ಮಾಡಿಕೊಂಡಿದ್ದಾರೆ
ಇಲ್ಲಿ ಪ್ರಮುಖ ವಿಷ್ಯ ಏನೆಂದರೆ ಈ ತರ ಧರ್ಮದ ಹೆಸರಲ್ಲಿ ಕಸುಬು ಮಾಡಿಕೊಂಡವರೆಲ್ಲ  ಆಯಾ ದೇಶದ ಪ್ರಬಲ ಮೇಲ್ವರ್ಗಗಳು. ಪ್ರತಿ ದೇಶದಲ್ಲಿ ಇರುವ ಇಂಥ ಮನಸ್ಥಿತಿಯ 10 % ಜನ ಜಗತ್ತನ್ನು ಧರ್ಮದ ಹೆಸರಲ್ಲಿ  ಹಿಡಿದಿಟ್ಟು ಒಡೆದು ಆಳುವ ದೂರಾಲೋಚನೆ ಜೊತೆಗೆ ಕಾಲಕಾಲಕ್ಕೆ ಬೇಕಾದ ತಂತ್ರ ಕುತಂತ್ರ ಮೂಲಕ ದುರಂತ ಇತಿಹಾಸ ಸನ್ನೀವೇಶ ಸೃಷ್ಟಿಗೆ ಕಾರಣರಾಗಿದ್ದಾರೆ.  
     ಅವರಿಗೆ ಸದಾ  ಸಾಮಾನ್ಯರ ಮೇಲೆ ಅಭಿಪ್ರಾಯ ಹೇರುವ, ಧರ್ಮ ಭಯ ಬಿತ್ತುವ ಶಾಸ್ತ್ರ ,ಕಾನೂನು  ಮಾಡುವ ಕೆಲಸವನ್ನು  ಜನಸಾಮಾನ್ಯರ ಅರಿವಿಗೆ ಭಾರದಂತೆ ವ್ಯವಸ್ಥಿತವಾಗಿ ಮಾಡುವ ಚಾಲಾಕಿ ಶಾಹಿಗಳು.ಈ ಭೂ ಜಗತ್ತಿನ ಎಲ್ಲ ದೇಶಗಳು ಇಂಥವರ ಹಿಡಿತದಲ್ಲೇ ಇವೆ. ಹಾಗಾಗಿಯೇ ಧರ್ಮ ಜಾತಿ ದೇಶ ಗೋಡೆಗಳಾಚೆ ವಿಶ್ವ ಮಾನವತೆಯ ವಿಶಾಲ ಮನಸ್ಸಿನ ಮನುಕುಲ ಬೆಳೆಸಲಾಗುತ್ತಿಲ್ಲ.ಇಂತ ಮನಸ್ಥಿತಿಯವರಿಗೆ ಕಾರ್ಲ್ ಮಾರ್ಕ್ಸ್, ಲೋಹಿಯಾ,ಬುದ್ಧ, ಬಸವ, ಗಾಂಧಿ ಅಂಬೇಡ್ಕರ್ ,ಕುವೆಂಪು, ಟಾಗುರ್ ಮುಂತಾದ ಚಿಂತಂಕರೆಲ್ಲ ಶತ್ರು ಗಳಂತೆ ಕಾಣುತ್ತಾರೆ. ಇಂದಿನ ಯುವ ಸಾಕ್ಷರರಿಗೂ ಈ ಐತಿಹಾಸಿಕ ಸತ್ಯ, ತಾತ್ವಿಕ ದರ್ಶನ ಆಗದೆ ಪ್ರಚೋದಿತರಾಗಿ  ಮೇಲು ಸ್ತರದ ಸಾಮಾಜಿಕ ಸರಪಳಿಯ ಉದ್ಯಮಾದಿಪತಿಗಳು, ಗುಡಿ, ಚರ್ಚು ಮಸೀದಿಗಳ ಪಾಳೆಗಾರರು,ರಾಜಕಾರಣಿಗಳ ಕುಟಿಲ ತಂತ್ರಗಳಿಗೆ ಬಲಿಯಾಗುತ್ತಿದ್ದಾರೆ. ಹಾಗೂ ಅಂತವರೊಂದಿಗೆ ಗುರುತಿಸಿಕೊಳ್ಳುವ ಹಂಬಲವುಳ್ಳವರ ಸಂಖ್ಯೆಯೂ ಜಗದ ಎಲ್ಲೆಡೆ ಇದ್ದಾರೆ. ಹಾಗಾಗಿ ಬದಲಾವಣೆಯೇ ಜಗದ ನಿಯಮ ಆಗಿದ್ದರು ಅದು ಜಗತ್ತಿನ ಕೇವಲ 10 % ಜನ ಮೇಲು ಸ್ತರದ  ಸಾಮಾಜಿಕ ಸರಪಳಿಯ ನಿರ್ದಾರದಂತೆಯೇ ನಡೆಯುತ್ತಿದೆ. ಈ ಅಮೆರಿಕಾವಂತೂ ಹಠಕ್ಕೆ ಬಿದ್ದು ಜಗತ್ತನ್ನು ನಿಯಂತ್ರಿಸಲು ಹವಣಿಸುತ್ತಿದೆ. ಇವರ ಮನಸ್ಥಿತಿಯ ಅಚ್ಚು ಜಗದ ಎಲ್ಲ ದೇಶಗಳಲ್ಲೂ ಇದ್ದಾರೆ. ಹಾಗಾಗಿ ಯಾವ ದೇಶದ  ಯಾವುದೇ  ಧರ್ಮದ ಮೂಲಭೂತ ವಾದಿಗಳು ಕಡಿಮೆ ಏನಿಲ್ಲ. ಈ ಬೆಳವಣಿಗೆ ಜೀವಂತ ಇರೋವರೆಗೂ ವಿಶ್ವ ಮಾನವೀಯತೆ ಸಾದ್ಯವಿಲ್ಲ. ದೇಶಗಳ ನಡುವೆ ಗಡಿ ತಂಟೆ, ಭಯೋತ್ಪಾದನೆ ಉಗ್ರವಾದ ಎಲ್ಲ ಇದ್ದೆ ಇರುತ್ತದೆ. ಜಗತ್ತು ಎಷ್ಟೇ ಮುಂದುವರಿದರು ಆತಂಕ ತಪ್ಪದು.
ಎಲ್ಲಕು ಒಂದೇ ಪರಿಹಾರ ಭೂ ಜಗತ್ತೇ ಒಂದು ದೇಶ ಆಗಬೇಕು. ಎಲ್ಲ ಗಡಿ ನಿಷೇಧ ಆಗಬೇಕು. ಕೇವಲ ಜೀವಿಗಳು ಬದುಕುವ ಜೀವಮಂಡಲ ಈ ವಸುಂದರೆ ಆಗಬೇಕು. ಎಲ್ಲ ಹೇಳಿದಷ್ಟು ಸುಲಭ ಅಲ್ಲ. ಕನಸು ಅಲ್ಲ. ಎಲ್ಲದಕ್ಕೂ ಎಲ್ಲರ ಸಹಕಾರವೂ ಸಿಗದು. ಹಾಗಾಗಿ ಪರಿಹಾರ ಸಿಗದು. ಆದರೂ ಈ ಬಗ್ಗೆ ಯುವ ಮನಸುಗಳು ಹೆಚ್ಚು ಯೋಚಿಸಿ ಜಾಗತಿಕ ವಿಶಾಲ ಮಾನವ ಸರಪಳಿ ,ಮಾನಾವೀಯ ಮನುಕುಲ ಬೆಳೆಸಲು ಶ್ರಮಿಸಬೇಕು.
ಇದು ರವಿರಾಜ ಮಾರ್ಗದಲ್ಲಿ ಕಂಡ ಅಂತರಾವಲೋಕನ. ಬದಲಾವಣೆಗೆ ನೀವೇ ಮೊದಲಿಗರಾಗುವ ಅವಕಾಶ.
ರವಿರಾಜ್ ಸಾಗರ್.

Wednesday 17 May 2017

K a s .ಪಾಸು ಮಾಡುವವರಿಗಾಗಿ


ಪತ್ರಿಕೆ -1

ಭಾಗ 1: ಕನ್ನಡ ಭಾಷಾ ಚರಿತ್ರೆ

ಈ ಭಾಗಕ್ಕೆ ಸಂಗಮೇಶ ಸವದತ್ತಿಮಠ,ಧಾರವಾಡಕರ ಮತ್ತು ಸಾ.ಶಿ.ಮರುಳಯ್ಯ ಅವರು ಬರೆದಿರುವ ಕನ್ನಡ ಭಾಷಾ ಅಧ್ಯಯನದ ಪುಸ್ತಕಗಳು ನೆರವಾಗುತ್ತವೆ.
ಸಾ.ಶಿ.ಮರುಳಯ್ಯ ಅವರ class notes ಸಿಕ್ಕರೆ ಓದಬಹುದು.

ಅಲ್ಲದೆ ಕ ಕನ್ನಡ ಸಾಹಿತ್ಯ ಐಚ್ಛಿಕ ವಿಷಯದ ಕುರಿತು ಮಾಲಿ ಮದ್ದಣ್ಣ, ಸಿ.ಬಿ.ಹೊನ್ನಯ್ಯ,ಚಿ.ಸಿ.ನಿಂಗಣ್ಣ ಅವರ ಪುಸ್ತಕಗಳಲ್ಲಿ ಈ ಭಾಗದ ಅಧ್ಯಾಯಗಳಿವೆ.

ಪತ್ರಿಕೆ-1 ರ ಒಟ್ಟು 250 ಅಂಕಗಳಲ್ಲಿ 50-60 ಅಂಕಗಳಿಗ ಈ ಭಾಗದಿಂದ ಪ್ರಶ್ನೆಗಳನ್ನು
ಕೇಳಬಹುದು.

ಭಾಗ-I 

ಕನ್ನಡ ಭಾಷೆಯ ಚರಿತ್ರೆ.

— ಭಾಷೆ ಎಂದರೇನು? ಭಾಷೆಯ ಸಮಾನ್ಯ ಲಕ್ಷಣಗಳು,
— ಭಾಷೆಯ ವ್ಯಾಕರಣ, ದ್ರಾವಿಡ ಭಾಷೆಗಳ ತೌಲನಿಕ ಮತ್ತು ವೈದೃಶ್ಯ  ಲಕ್ಷಣಗಳು, 
— ಕನ್ನಡ ಅಕ್ಷರಮಾಲೆ, 
— ಕನ್ನಡ ವ್ಯಾಕರಣದ ಕೆಲುವು ಪ್ರಧಾನ ಲಕ್ಷಣಗಳು:
— ಲಿಂಗ, ವಚನ, ವಿಭಕ್ತಿ, ಕ್ರಿಯಾಪದ,  ಧಾತೃ ಮತ್ತು ಸರ್ವನಾಮ.
— ಕನ್ನಡ ಭಾಷೆಯ ಕಾಲಗಣನಾ ಹಂತಗಳು.
— ಕನ್ನಡ ಭಾಷೆಯ ಮೇಲೆ ಇತರ ಭಾಷೆಗಳ ಪ್ರಭಾವ.
— ಕನ್ನಡ ಭಾಷೆಗಳಲ್ಲಿರುವ ಉಪಭಾಷೆಗಳು. - ಕನ್ನಡ ಭಾಷಾ ಬೆಳವಣಿಗೆಯ ವಿವಿಧ ಪ್ರಾದೇಶಿಕ ಮತ್ತು ಸಾಮಾಜಿಕ  ಅಂಶಗಳು.
— ಭಾಷಾ ಸ್ವೀಕರಣ ಮತ್ತು ಸ್ವರ ಭೇಧ - ಕನ್ನಡ ಭಾಷೆ ಮತ್ತು ಅದರ ಒಳಭೇಧಗಳು.
— ಕನ್ನಡ ಸಾಹಿತ್ಯಿಕ ಮತ್ತು ಆಡುಮಾತಿನ ಶೈಲಿ.

ಭಾಗ-II 
A. ಕನ್ನಡ ಸಾಹಿತ್ಯ ಚರಿತ್ರೆ

* ಪ್ರಾಚೀನ ಕನ್ನಡ ಸಾಹಿತ್ಯ 
— ಪ್ರಾಚೀನ ಕನ್ನಡ ಸಾಹಿತ್ಯದ ಉದಯ, ಅದರ ಪ್ರವ್ರತ್ತಿ, ಪ್ರಭಾವ, ಬೆಳವಣಿಗೆಗಳು

* ಸಾಮಾಜಿಕ, ಧಾರ್ಮಿಕ ಮತ್ತು ರಾಜಕೀಯ ಹಿನ್ನೆಲೆಯಲ್ಲಿ 10, 12, 16, 17, 19 ಮತ್ತು 20ನೇಯ  ಶತಮಾನದ ಸಾಹಿತ್ಯದ ಅಧ್ಯಯನ  ಹಾಗೂ ಕೆಳಗೆ ಪಟ್ಟಿ ಮಾಡಲಾಗಿರುವ ಕವಿಗಳಿಗೆ ಸಂಭಂಧಿಸಿದ ಸಾಹಿತ್ಯ ರೂಪಗಳ ಹಿನ್ನೆಲೆಯಲ್ಲಿ ಅವುಗಳ ಮೂಲ, ಬೆಳವಣಿಗೆ ಮತ್ತು ಸಾಧನಗಳೊಂದಿಗೆ ವಿಮರ್ಷಾತ್ಮಕವಾಗಿ  ಅಧ್ಯಯನ  ಮಾಡುವುದು.

* ಚಂಪೂ ಸಾಹಿತ್ಯ : ಪಂಪ, ಜನ್ನ, ನಾಗಚಂದ್ರ. 
* ವಚನ ನಾಹಿತ್ಯ : ಬಸವಣ್ಣ, ಅಕ್ಕ ಮಹಾದೇವಿ .
* ಮಧ್ಯಕಾಲಿನ ಕನ್ನಡ ಸಾಹಿತ್ಯ- ಅದರ ಪ್ರವ್ರತ್ತಿ, ಪ್ರಭಾವ, 
 * ಮಧ್ಯಕಾಲಿನ ಕಾವ್ಯ : 
— ಹರಿಹರ,  ರಾಘವಾಂಕ,  ಕುಮಾರವ್ಯಾಸ. 
* ದಾಸ ಸಾಹಿತ್ಯ:
— ಪುರಂದರ ದಾಸ ಮತ್ತು ಕನಕದಾಸ 
* ಸಾಂಗತ್ಯ: 
— ರತ್ನಾಕರವರ್ಣಿ. 

C. ಆಧುನಿಕ ಕನ್ನಡ ಸಾಹಿತ್ಯ : 
— ಪ್ರಭಾವ , ಪ್ರವೃತ್ತಿಗಳು.
— ನವೋದಯ,  ಪ್ರಗತಿಶೀಲ,  ನವ್ಯ, ದಲಿತ ಮತ್ತು ಬಂಡಾಯ ಸಾಹಿತ್ಯ. 

ಭಾಗ - III 
A. ಕಾವ್ಯ ಮತ್ತು ಸಾಹಿತ್ಯಿಕ ವಿಮರ್ಶೆಗಳು
- ಕಾವ್ಯ ಮೀಮಾಂಸೆ ಮತ್ತು ವಿಮರ್ಶೆಯ ಔಪಚಾರಿಕ ಭೇದಗಳು,
- ಕಾವ್ಯದ ವ್ಯಾಖ್ಯೆಗಳು ಮತ್ತು ಗುರಿಗಳು.
- ಹಲವಾರು ಕಾವ್ಯ ಪಂಥಗಳ ಪ್ರತಿಪಾದನೆಯ ನಿರೂಪಣೆ.
- ಅಲಂಕಾರ,  ರೀತಿ,  ರಸ, ವಕ್ರೋಕ್ತಿ,  ಧ್ವನಿ ಮತ್ತು ಔಚಿತ್ಯ,  
- ರಸ ಸೂತ್ರದ ಅರ್ಥವಿವರಣೆ.
- ಕನ್ನಡ ಸಾಹಿತ್ಯಿಕ ವಿಮರ್ಶೆಯ ಇತ್ತೀಚಿನ ರೂಪಗಳು,  ಪ್ರವೃತ್ತಿಗಳು, ಔಪಚಾರಿಕ,  ಐತಿಹಾಸಿಕ,  ಮಾರ್ಕ್ಸವಾದಿ,  ಮಹಿಳಾಪರ, ಪೂರ್ವ ವಸಾಹತುಶಾಹಿ ವಿಮರ್ಶೆಗಳು.

B. ಕರ್ನಾಟಕ ಸಾಂಸ್ಕೃತಿಕ ಚರಿತ್ರೆ

ಭಾರತೀಯ ಹಿನ್ನೆಲೆಯಲ್ಲಿ ಕರ್ನಾಟಕ ಸಂಸ್ಕೃತಿ,

- ಕರ್ನಾಟಕ ಸಂಸ್ಕೃತಿಯ ಪುರಾತನತೆ.

ಕರ್ನಾಟಕ ರಾಜಮನೆತನಗಳ ವಿಸ್ತೃತ ಅಧ್ಯಯನ

 - ಬಾದಾಮಿಯ ಚಾಲುಕ್ಯರು ಮತ್ತು ಕಲ್ಯಾಣದ ಚಾಲುಕ್ಯರು ,
- ರಾಷ್ಟ್ರಕೂಟರು, 
- ಹೊಯ್ಸಳರು,  
- ವಿಜಯ ನಗರದ ದೊರೆಗಳು ಮತ್ತು ಅವರ ಸಾಹಿತ್ಯಿಕ ಸ್ಥಿತಿಗತಿಗಳು.  

ಕರ್ನಾಟಕದ ಪ್ರಮುಖ ಧರ್ಮಗಳು ಮತ್ತು ಅವುಗಳ ಸಾಂಸ್ಕೃತಿಕ ಕೊಡುಗೆಗಳು.

ಧಾರ್ಮಿಕ ಚಳುವಳಿಗಳು, ಸಾಮಾಜಿಕ ಸ್ಥಿತಿಗತಿಗಳು.

ಕರ್ನಾಟಕದ ಕಲೆ ಮತ್ತು ವಾಸ್ತುಶಿಲ್ಪ : 
- ಸಾಹಿತ್ಯಿಕ ಸಂಧರ್ಭದಂತೆ  ಶಿಲ್ಪಕಲೆ , ವಾಸ್ತುಶಿಲ್ಪ,  ಚಿತ್ರಕಲೆ, ಸಂಗೀತ,  ನೃತ್ಯ. 

ಕರ್ನಾಟಕ ಸ್ವಾತಂತ್ರ ಚಳುವಳಿ . ಕರ್ನಾಟಕದ ಏಕೀಕರಣ - ಕನ್ನಡ ಸಾಹಿತ್ಯದ ಮೇಲೆ ಅದರ ಪ್ರಭಾವ. 

ಪತ್ರಿಕೆ-II

Section-A. 
A. ಹಳೆಗನ್ನಡ ಸಾಹಿತ್ಯ 

1. ಪಂಪನ ವಿಕ್ರಮಾರ್ಜುನ ವಿಜಯ  (cantos 12 & 13), ( ಪ್ರಕಾಶಕರು ಮೈಸೂರು ವಿಶ್ವವಿದ್ಯಾಲಯ )

2. ವಡ್ಡಾರಾಧನೆ  ( ಸುಕುಮಾರ ಸ್ವಾಮಿಯ ಕಥೆ,  ವಿದ್ದ್ಯುಚ್ಛೋರನ ಕಥೆ)

B. ಮಧ್ಯಕಾಲಿನ ಕನ್ನಡದ ಸಾಹಿತ್ಯ :
1. ವಚನ ಕಮ್ಮಟ, 
Ed: ಕೆ. ಮರುಳ ಸಿದ್ದಪ್ಪ ,  ಕೆ. ಆರ್.  ನಾಗರಾಜ್.
(ಪ್ರಕಾಶಕರು: ಬೆಂಗಳೂರು ವಿಶ್ವವಿದ್ಯಾಲಯ )

2. ಜನಪ್ರೀಯ ಕನಕ ಸಂಪುಟ, 
Ed. ಡಾ| ಜವರೇಗೌಡ ( ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ,  ಬೆಂಗಳೂರು )

3. ನಂಬಿಯಣ್ಣನ ರಗಳೆ, 
Ed., ಟಿ.ಎನ್.  ಶ್ರೀಕಂಠಯ್ಯ (ಟ.ವೆಂ. ಸ್ಮಾರಕ ಗ್ರಂಥ ಮಳಿಗೆ,  ಮೈಸೂರು )

4. ಕುಮಾರವ್ಯಾಸ ಭಾರತ  : ಕರ್ಣ ಪರ್ವ  (ಮೈಸೂರು ವಿಶ್ವವಿದ್ಯಾಲಯ)

5. ಭರತೇಶ ವೈಭವ ಸಂಗ್ರಹ 
Ed. ತ. ಸು. ಶಮಾ ರಾವ್
(ಮೈಸೂರು ವಿಶ್ವವಿದ್ಯಾಲಯ )

Section-B
A. ಆಧುನಿಕ ಕನ್ನಡ ಸಾಹಿತ್ಯ. 

1. ಕಾವ್ಯ : 
ಹೊಸಗನ್ನಡ ಕವಿತೆ
 Ed :ಜಿ.ಎಚ್.  ನಾಯಕ್ 
(ಕನ್ನಡ ಸಾಹಿತ್ಯ ಪರಿಷತ್ತು , ಬೆಂಗಳೂರು )

2. ಕಾದಂಬರಿ : 
ಬೆಟ್ಟದ ಜೀವ-ಶಿವರಾಂ ಕಾರಂತ. 
ಮಾಧವಿ -ಅರುಪಮಾ ನಿರಂಜನ.  
ಒಡಲಾಳ -ದೇವನೂರ ಮಹಾದೇವ. 

3. ಚಿಕ್ಕ ಕಥೆ: 

ಕನ್ನಡದ ಸಣ್ಣ ಕಥೆಗಳು, 
Ed :ಜಿ.ಎಚ್.  ನಾಯಕ್ 
(ಕನ್ನಡ ಸಾಹಿತ್ಯ ಪರಿಷತ್ತು , ನವ ದೆಹಲಿ)

4. ನಾಟಕ : 
ಶೂದ್ರ ತಪಸ್ವಿ - ಕುವೆಂಪು.
ತುಘಲಕ್ - ಗಿರೀಶ್ ಕಾರ್ನಾಡ್. 

5. ವಿಚಾರ ಸಾಹಿತ್ಯ : 
ದೇವರು - ಎ.ಎನ್.  ಮೂರ್ತಿರಾವ್
( ಪ್ರಕಾಶಕರು: ಡಾ| ವಿ.ಕೆ. ಮೂರ್ತಿ,  ಮೈಸೂರು)

B. ಜಾನಪದ ಸಾಹಿತ್ಯ :
1. ಜನಪದ ಸ್ವರೂಪ - ಡಾ| ಎಚ್.ಎಮ್.  ನಾಯಕ (ಟ.ವೆಂ. ಸ್ಮಾರಕ ಗ್ರಂಥ ಮಳಿಗೆ , ಮೈಸೂರು )

2. ಜಾನಪದ ಗೀತಾಂಜಲಿ -
 Ed. ಡಾ| ಜವರೇಗೌಡ. ( ಪ್ರಕಾಶಕರು: ಸಾಹಿತ್ಯ ಅಕಾಡೆಮಿ, ನವ ದೆಹಲಿ)

3. ಕನ್ನಡದ ಜನಪದ ಕಥೆಗಳು -
Ed. ಜಿ.ಎಸ್. ಪರಮಶಿವಯ್ಯ.
(ಮೈಸೂರು ವಿಶ್ವವಿದ್ಯಾಲಯ )

4. ಬೀದಿ ಮಕ್ಕಳು ಬೆಳೆದೂ 
Ed. ಕಳೆಗೌಡ ನಾಗವರ.
(ಪ್ರಕಾಶಕರು: ಬೆಂಗಳೂರು ವಿಶ್ವವಿದ್ಯಾಲಯ )

5. ಸಾವಿರದ ಒಗಟುಗಳು -
Ed : ಎಸ್.ಜಿ. ಇಮ್ರಾಪುರ. 

Tuesday 16 May 2017

ಭಕ್ತಿ ಬಜಾರು

ಭಕ್ತಿ ಬಜಾರು

ಯಾರೋ ಹೆಣೆದ ಬಲೆಯಲ್ಲಿ _ _ಬಿದ್ದಿರುವೆ
ಬಿಡಿಸಲು ಬಂದಿರೇನು...?
ಕತ್ತಲೂರ ಪರಂಪರೆಯ ಆಲದ _ಮರಕ್ಕೆ

ಭಯಭಕ್ತಿಯಿಂದ ಜೋತುಬಿದ್ದಿರುವೆ
ಹೊಟ್ಟೆಪಾಡಿಗೆ ಹೊಸಹಾದಿ ತುಳಿಯಲು
ಸ್ಪಂದಿಸುತ್ತಿಲ್ಲ ಜನ ಮನ
ವಿಜ್ಞಾನ ಸೂರ್ಯನೂರಿಗೆ _ ಕರೆದುಕೊಂಡು ಹೋಗುವಿರೇನು...?

ಪೈಸೆ ಹಾಕಿ ಪಲಾಯನ ಮಾಡಬೇಡಿ
ನಾನು ನಿಮ್ಮ ಮನುಕುಲದವನೆ.

ಭಕ್ತಿ ಬಜಾರಿನ ಸತ್ಯ ಗೊತ್ತೇನು....?
ಲೋಕದ ಚೋರ ಬಜಾರಿನಲ್ಲಿ
ದೇವ ದೇವತೆಗಳನೂ ಪಾಲುದಾರರಾಗಿರಿಸಿಹರಿಲ್ಲಿ

ಹೊಟ್ಟೆಪಾಡಿನ ಪಾತ್ರದಾರಿಗಳೇ ಎಲ್ಲ.

ಬೆಳಕಿನೊಡನೆ ರಾಜಿಯಾದ ಭಕ್ತಿ
ಭಕ್ತರನ್ನು ಕತ್ತಲೆ ಸುತ್ತಿಕೊಂಡರು ಸುಮ್ಮನಾಗಿದೆ

ಭಕ್ತಿ ಬಜಾರಿನ ಭವ ಬಂಧನದಿಂದ ಮುಕ್ತಿ ನೀಡುವಿರೇನು....?

ರವಿರಾಜ್ ಸಾಗರ್
9980952630

ತಾಯಿ ಶಾರದೆ

ತಾಯಿ ಶಾರದೆ ಲೋಕ ಪೂಜಿತೆ ಜ್ಞಾನದಾತೆ ನಮೋಸ್ತುತೆ
ಪ್ರೇಮದಿಂದಲಿ ಸಲಹು ಮಾತೆ ನೀಡು ಸನ್ಮತಿ ಸೌಖ್ಯದಾತೆ

ಅಂಧಕಾರವ ಓಡಿಸು ಜ್ಞಾನ ಜ್ಯೋತಿಯ ಬೆಳಗಿಸು
ಹೃದಯ ಮಂದಿರದಲ್ಲಿ ನೆಲೆಸು ಚಿಂತೆಯಾ ಅಳಿಸು
ಶಾಂತಿಯಾ ಉಳಿಸು
ಶಾಂತಿಯಾ ಉಳಿಸು

ತಾಯಿ ಶಾರದೆ ಲೋಕ ಪೂಜಿತೆ ಜ್ಞಾನದಾತೆ ನಮೋಸ್ತುತೆ...

ನಿನ್ನ ಮಡಿಲಿನ ಮಕ್ಕಳಮ್ಮ ನಿನ್ನ ನಂಬಿದ ಕಂದರಮ್ಮ
ನಿನ್ನ ಕರುಣೆಯ ಬೆಳಕಲೆಮ್ಮ ಬಾಳನೂ ಬೆಳಗಮ್ಮ
ನಮ್ಮ ಕೋರಿಕೆ ಆಲಿಸಮ್ಮ
ನಮ್ಮ ಕೋರಿಕೆ ಆಲಿಸಮ್ಮ

ತಾಯಿ ಶಾರದೆ ಲೋಕ ಪೂಜಿತೆ ಜ್ಞಾನದಾತೆ ನಮೋಸ್ತುತೆ...

ಒಳ್ಳೆ ಮಾತುಗಳಾಡಿಸು ಒಳ್ಳೆ ಕೆಲಸವ ಮಾಡಿಸು
ಒಳ್ಳೆ ದಾರಿಯಲೆಮ್ಮ ನಡೆಸು ವಿದ್ಯೆಯಾ ಕಲಿಸು
ಆಸೆ ಪೂರೈಸೂ
ಆಸೆ ಪೂರೈಸೂ

ತಾಯಿ ಶಾರದೆ ಲೋಕ ಪೂಜಿತೆ ಜ್ಞಾನದಾತೆ ನಮೋಸ್ತುತೆ...

ನನಗೆ ಅತ್ಯಂತ ಪ್ರಿಯವಾದ ಹಾಡು ಇದು....

Saturday 13 May 2017

ವಿದ್ಯಾರ್ಥಿ ವೇತನ ಈಗ ಬಲು ಸುಲಭಯವಾಗಿ ಪಡೆಯಿರಿ

*ಆತ್ಮೀಯ  ಸ್ನೇಹಿತರೆ ನನ್ನದೊಂದು ಕೋರಿಕೆ ನಿಮಗೆ ಪರಿಚಯವಿರುವ ಬಡ ವಿದ್ಯಾರ್ಥಿಗಳಿಗೆ ಈ  ಕೆಳಗಿನ ವಿದ್ಯಾರ್ಥಿ ವೇತನಗಳ ಬಗ್ಗೆ ದಯವಿಟ್ಟು ಮಾಹಿತಿ ನೀಡಿ.. ಯಾಕೆಂದರೆ  ಮುಂದಿನ ತಿಂಗಳಲ್ಲಿ ಎಲ್ಲಾ ವಿದ್ಯಾರ್ಥಿ ವೇತನಗಳ ಅರ್ಜಿಗಳನ್ನು ಕರೆಯಲಾಗುತ್ತದೆ*

1) ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವೇತನ -
www.karepass.cgg.gov.in

೨) ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವೇತನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ   ವಿದ್ಯಾರ್ಥಿಗಳಿಗೆ 
www.sw.kar.nic.in

೩) ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವೇತನ -www.gokdom.kar.nic.in

೪) ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಮಂತ್ರಾಲಯದ ವಿದ್ಯಾರ್ಥಿ ವೇತನ (Ministry of Human Resource Development)  ಪ್ರತಿ ವರ್ಷವು ಡಿಗ್ರಿ ಪ್ರವೇಶ ಪಡೆಯುವ  ಎಲ್ಲಾ ಜಾತಿಯಾ ಬಡ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿ ವೇತನ - 
www.kar.nic.in/pue

೫) ನಮ್ಮ ರಾಜ್ಯದ ಹೆಮ್ಮೆಯ ಐ.ಟಿ ಕಂಪನಿ ಇನಪೋಸ್ಸಿಸ್ ನೀಡುವ ವಿದ್ಯಾರ್ಥಿ ವೇತನ - www.vidyaposhak.org

೬)ಕಿತ್ತೂರು ರಾಣಿ ಚೆನ್ನಮ್ಮ ವಿದ್ಯಾರ್ಥಿ ವೇತನ - 
www.kar.nic.in/pue/

೭) ದೀರುಬಾಯಿ ಅಂಬಾನಿ ವಿದ್ಯಾರ್ಥಿ ವೇತನ ಅಂಗವಿಕಲ ವಿದ್ಯಾರ್ಥಿಗಳಿಗೆ - 
www.kar.nic.in/pue

೮) ಅಂಬೇಡ್ಕರ್ ನ್ಯಾಶನಲ್ ಮೆರಿಟ್ ಅರ್ವಾಡ್ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ - 
www.kar.nic.in/pue

೯) ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ವತಿಯಿಂದ ಮೂಲ ವಿಜ್ಞಾನ ವಿಷಯದಲ್ಲಿ ಉನ್ನತ ಶಿಕ್ಷಣ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ (Inspire Scholarship) - 
www. kar.nic.in/pue

೧೦) ಮೆರಿಟ್ ಸ್ಕಾಲರಶಿಪ್ - ದ್ವಿತೀಯ ಪದವಿ ಪೂರ್ವ ಪರೀಕ್ಷೆಯಲ್ಲಿ ಶೇ.೮೦ ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ ಬಡ ವಿದ್ಯಾರ್ಥಿಗಳಿಗೆ ವೃತ್ತಿ ಶಿಕ್ಷಣ(ಇಂಜಿನಿಯರಿಂಗ್, ವೈದ್ಯಕೀಯ, ಕೃಷಿ) ಶುಲ್ಕವನ್ನು ಸರ್ಕಾರ ನೀಡುತ್ತದೆ – 
www. kar.nic.in/pue

೧೧) ನಮ್ಮ ರಾಜ್ಯದ ಹೆಮ್ಮೆಯ ಇನ್ನೊಂದು ಐ.ಟಿ ಕಂಪನಿ  ವೀಪ್ರೊ ಅವರ  ಅಜೀಮ್ ಪ್ರೇಮಜೀ ಫೌಂಡೇಷನ್ -www.azimpremjifoundation.org

12. *ವಿದ್ಯಸಿರಿ* *ಮತ್ತು ಶುಲ್ಕ* *ವಿನಾಯಿತಿ*
http://backwardclasses.kar.nic.in/BCWD/Website/backwardclassesMain.html 

    http://backwardclasses.kar.nic.in/BCWD/Website/Educational_Scholarships.html

    Information ::

   http://www.scholarshipx.in/2015/10/karnataka-scholarship-onlline-last-date.html

13. *ಸರ್ಕಾರದ* *ಧನಸಹಾಯಗಳ* *ವೆಬ್ ವಿಳಾಸ*

http://karepass.cgg.gov.in/ 

14. *ಜಿಂದಾಲ್ scholarship*

 http://www.sitaramjindalfoundation.org/scholarships.php 

15. *B.L ಹೇಮವತಿ ಧನಸಹಾಯ*

 http://www.blhtrust.org/schpro.html 

16. *ಕೇಂದ್ರ ಸರ್ಕಾರದ ಧನಸಹಾಯಗಳು*

Central Govt Scholarship

     http://mhrd.gov.in/ 

17.  *Indian Oil Scholarship*

     https://www.iocl.com/AboutUs/AcademicScholarships.

Tuesday 9 May 2017

ರಿಯಲ್ ಕನಸು

ರೀಯಲ್ ಕನಸು ಆರಾಮಾಗಿ ರೈಲಲ್ಲಿ ಕುಂತಿದ್ದೆ... ಟಿಕೆಟ್ ತಗೊಳ್ಳಿ ಅಂದ ಒಬ್ಬ. ಏನ್ರಿ ಇದು...? ಟಿಕೆಟ್ ತಗೊಂಡೆ ಹತ್ತಿರೋದು... ಮತ್ತ್ಯಾವ ಟಿಕೆಟ್ ಅಂದೆ. ಪ್ರಯಾಣ ಮಾಡೋಕೆ ತಗೊಂಡಿದೀರಿ... ಆರಾಮಾಗಿ ಪ್ರಯಾಣ ಮಾಡಬೇಕು ಅಂದ್ರೆ ನಮ್ಮ್ ಟಿಕೆಟ್ ತಗೊಂಡು ಸಹಕರಿಸಿ ಇಲ್ಲಾಂದ್ರೆ ರೈಲ್ ಎಲ್ಲಿ ನಿಲ್ಲುತ್ತೋ ಗೊತ್ತಿಲ್ಲ... ಅಲ್ಲ ರಿ...ತಾಲೂಕ್ ಆಫೀಸ್ .ಕೃಷಿ ಆಫೀಸ್ ಕಂದಾಯ ಇಲಾಖೆ ಎಲ್ಲ ಇಲಾಖೆ ಕ್ಲರ್ಕ್ ಇಂದಾ ಅಧಿಕಾರಿಗೂ ಒಂದಿಷ್ಟು ಕೊಟ್ಟು ಬರ್ತಿರಿ..ಶಾಲೆಲಿ ಕೇಳಿದಷ್ಟು ಪೀಜು ಕೊಡ್ತೀರಿ...ಅಸ್ಪತ್ರೆಲು ಕೇಳಿದಷ್ಟು ಕೊಡ್ತೀರಿ... ನಮ್ ರೈಲಲ್ಲಿ ಸುಖಾವಾಗಿ ಪ್ರಯಾಣ ಮಾಡೋ ನೀವು ಏನು ಕೊಡದೆ ಹೋಗ್ತೀರಿ ಅದಕೆ ರೈಲು ಹಳಿ ತಪ್ಪುತ್ತಾವೆ.. ಎಚ್ಚರ .. ತೆಗಿರಿ ಚಿಲ್ಲರೆ ...!! ಒಮ್ಮೆಲೇ ಶಾಕಾಗಿ ಕಣ್ ಬಿಟ್ಟೆ. .!! ನಂಬರ್ ಒನ್ ಬ್ರಷ್ಟಾಚಾರದ ರಾಜ್ಯದಲ್ಲಿ ಸದ್ಯ ಬಸ್ನಲ್ಲಿ ಪ್ರಾಯಣ ಮಾಡ್ತಾ ಇದ್ದೆ... ಹಾಡು ಹಗಲೇ ಈ ಕನಸು ಯಾಕೆ ಬಿತ್ತೋ ಗೊತ್ತಿಲ್ಲ.. ಮುಂದೆ ಹೀಗೂ ಭ್ರಷ್ಟ ಚಾರ ಹಬ್ಬಬಹುದೇ ಅಂತಾ ನೆನೆದು ಕಿಟಕಿ ಇಣುಕಿದೆ... ಭ್ರಷ್ಟಾಚಾರ ಮುಕ್ತ ಭಾರತ ನಿರ್ಮಾಣ ಹೋರಾಟದಲ್ಲು ದೊಡ್ಡ ದೊಡ್ಡ ರಾಜಕಾರಣಿಗಳಿದ್ದರು .ಜೊತೆಗೆ ಅವರಿಗೆ ಕಿಕ್ ಬ್ಯಾಕ್ ನೀಡೋ ಗುತ್ತಿಗೆದಾರರು ಇದ್ದರು..!!

Sunday 16 April 2017

ಮಹಾಭಾರತದಲ್ಲಿ ಕೊನೆವರೆಗೂ ಬದುಕುಳಿದವರು ಯಾರು...

ಮಹಾಭಾರತದ ಸಾರ ದರ್ಶನ

ಪಂಚ ಪಾಂಡವರಲ್ಲಿ ಅಪರೂಪದ ಶಾಸ್ತ್ರಜ್ಞಾನಿಯಾಗಿದ್ದ ಸಹದೇವ ....
ನಕುಲನಾದರೋ ಅಪ್ರತಿಮ ರೂಪವಂತ. .
ಮೂರುಲೋಕದಲ್ಲಿ ಇದಿರಿಲ್ಲದ ಪರಾಕ್ರಮಿಯಾಗಿದ್ದ ಅರ್ಜುನ ..
ಸಹಸ್ರ ಸಹಸ್ರ ಗಂಡಾನೆಗಳ ಭೀಮ ನ ಭುಜ ಬಲಕ್ಕೆ ಸಾಟಿ ಯಾರು..?
ಆದರೆ ಇವರೆಲ್ಲರಿಗಿಂತ ಹಿರಿಯನಾದ
ಧರ್ಮರಾಜ ನಲ್ಲಿ ಇವು ಯಾವ ಗುಣಗಳೂ ಇರಲಿಲ್ಲ..!
ಆತ ಭೀಮನಂತೆ ಬಲವಂತನಲ್ಲ, ಅರ್ಜುನನಂತೆ ಪರಾಕ್ರಮಿಯಲ್ಲ, ನಕುಲ-ಸಹದೇವರ ರೂಪವಾಗಲಿ, ಪಾಂಡಿತ್ಯವಾಗಲಿ ಆತನಲ್ಲಿ ಇರಲಿಲ್ಲ..
ಧರ್ಮರಾಜನಲ್ಲಿ ದ್ದ ಏಕೈಕ
ಸಂಪತ್ತೆಂದರೆ “ ಧರ್ಮ “..!
ಹುಟ್ಟು ಹೆಸರು
ಯುಧಿಷ್ಠಿರ ನಾಗಿದ್ದರೂ ಧರ್ಮವು ಸಂಪೂರ್ಣವಾಗಿ ಆತನಲ್ಲಿ ನೆಲಸಿದ್ದುದರಿಂದ ಧರ್ಮರಾಜನೆಂದೇ ಆತ ಪ್ರಖ್ಯಾತನಾದ.
“ ಶರಣರ ಮಹಿಮೆಯನ್ನು ಮರಣ ಕಾಲದಲ್ಲಿ ಕಾಣಬೇಕು ” ಇದು ಗಾದೆ ಮಾತು.
ಧರ್ಮರಾಜನೇನೆಂದು ಅರ್ಥಮಾಡಿಕೊಳ್ಳಬೇಕಾದರೆ ಪಾಂಡವರ ಜೀವನದ ಕೊನೆಗೆ ನಾವು ಬರಬೇಕು..
ಭಗವಾನ್ ಶ್ರೀಕೃಷ್ಣನಿಗೆ ಪಾಂಡವರೆಂದರೆ ಪಂಚಪ್ರಾಣ. ಪಾಂಡವರಿಗಾದರೋ – ಶ್ರೀಕೃಷ್ಣ ಆತ್ಮವೇ ಆಗಿದ್ದ.
ಹೀಗಾಗಿ ಶ್ರೀಕೃಷ್ಣ ಪರಂಧಾಮದ ನಂತರ ಪಾಂಡವರಿಗೆ ಆತನಿಲ್ಲದ ಭೂಮಿ ಶೂನ್ಯವೆನಿಸಿತು.. ಬದುಕು ಸಪ್ಪೆ ಎನಿಸಿತು..!
ಮನಸ್ಸು ಮಹಾಪ್ರಸ್ಥಾನ ಕ್ಕೆ ಅಣಿಯಾಯಿತು..!
ಮಹಾಪ್ರಸ್ಥಾನವೆಂದರೆ ಹಿಂದಿರುಗಿ ಬಾರದ ಪ್ರಯಾಣ.
ಬದುಕು ಸಾಕೆನಿಸಿದಾಗ ಮನಸ್ಸನ್ನು ಪರತತ್ವದಲ್ಲಿ ಲೀನಗೊಳಿಸಿ, ಅನ್ನನೀರುಗಳನ್ನೂ ಪರಿತ್ಯಜಿಸಿ ಶರೀರ ಬೀಳುವವರೆಗೆ ನಡೆಯುತ್ತಲೇ ಭೂಮಂಡಲ ಪರ್ಯಟನೆ ಮಾಡುವ ಒಂದು ಮಹಾವ್ರತ..!!
ರಾಜವಸ್ತ್ರಗಳನ್ನು ತೊರೆದು, ನಾರುಮಡಿಯುಟ್ಟು ಮಹಾಪ್ರಸ್ಥಾನಕ್ಕೆ ಹೊರಟುನಿಂತ ಪಾಂಡವರನ್ನು ಕಂಡು ಹಸ್ತಿನಾವತಿಯೇ ಗೋಳಿಟ್ಟಿತು..
ವನವಾಸದ ನೆನಪು ಮತ್ತಷ್ಟು ದಾರುಣವಾಗಿ ಮರುಕಳಿಸಿತು..
ಪೌರರೆಷ್ಟೇ ಪ್ರಯತ್ನಿಸಿದರೂ ಮುಕ್ತಿಗೆ ಮುಖಮಾಡಿ ನಿಂತಿದ್ದ ಪಾಂಡವರನ್ನು ಹಿಂದಿರುಗಿಸಲು ಸಾಧ್ಯವಾಗಲೇ ಇಲ್ಲ.!
ವನವಾಸಕ್ಕೆ ಹೊರಟುನಿಂತಾಗ ಇದ್ದಂತೆ ಪಾಂಡವರಲ್ಲಿ ಕಿಂಚಿತ್ತಾದರೂ ದುಃಖವಿರಲಿಲ್ಲ.
ಮರಣ ವು ಅವರಿಗೆ ಮಹೋತ್ಸವವೇ ಆಗಿತ್ತು.!
ಮುಂದೆ ಮುಂದೆ ಧರ್ಮರಾಜ, ಮತ್ತೆ ಭೀಮ, ಅರ್ಜುನ, ನಕುಲ-ಸಹದೇವರು, ಕೊನೆಯಲ್ಲಿ ದ್ರೌಪದಿ – ಹೀಗೆ ಸಾಗುತ್ತಿದ್ದ ಪಾಂಡವರನ್ನು ನಾಯಿಯೊಂದು ಹಿಂಬಾಲಿಸಿತು.
ಭೂಮಿಯನ್ನೆಲ್ಲಾ ಸುತ್ತಿ ಕೊನೆಯಲ್ಲಿ ಪಾಂಡವರು ಹಿಮಾಲಯದ ಶಿಖರಗಳನ್ನು ದಾಟಿ ಸಾಗುತ್ತಿದ್ದಾಗ ಮೊದಲಿಗೆ ದ್ರೌಪದಿಯು ಪ್ರಾಣಗಳನ್ನು ತೊರೆದು ಬಿದ್ದು ಬಿಟ್ಟಳು.
ಒಡನೆಯೇ ಭೀಮ ಧರ್ಮರಾಜನನ್ನು ಪ್ರಶ್ನಿಸುತ್ತಾನೆ:” ಅಣ್ಣಾ, ದ್ರೌಪದಿಯೇಕೆ ಯೋಗಭ್ರಷ್ಟಳಾಗಿ ಬಿದ್ದು ಬಿಟ್ಟಳು…!? ”
ಧರ್ಮರಾಜ ಉತ್ತರಿಸಿದ, “ ಐವರನ್ನು ಸಮಾನರಾಗಿ ಪ್ರೀತಿಸಬೇಕಾಗಿದ್ದ ಆಕೆ ಗುಪ್ತವಾಗಿ ಅರ್ಜುನನನ್ನು ಅಧಿಕವಾಗಿ ಪ್ರೀತಿಸುತ್ತಿದ್ದಳು.ಈ ತಾರತಮ್ಯವೇ ಅವಳ ಪತನಕ್ಕೆ ಕಾರಣವಾಯಿತು ”
ಮುಂದೆ ಸಾಗುತ್ತಿದ್ದಂತೆಯೇ
ಸಹದೇವ ಧರೆಗುರುಳಿದಾಗ..
ಭೀಮ ಪುನಃ ಅಣ್ಣನನ್ನು ಪ್ರಶ್ನಿಸಿದ, “ ಅಣ್ಣ, ಸಹದೇವನಿಗೇಕೆ ಹೀಗಾಯಿತು? ”
ಧರ್ಮರಾಜ ಉತ್ತರಿಸಿದ: “ ತನ್ನ ಶಾಸ್ತ್ರಜ್ಞಾನದ ಬಗ್ಗೆ ಸಹದೇವನಿಗೆ ಗುಪ್ತ ಗರ್ವವಿದ್ದಿತು. ಅದುವೇ ಆತನ ಪತನಕ್ಕೆ ಕಾರಣವಾಯಿತು.”
ಮತ್ತೆ ಕುಸಿದವನು ನಕುಲ , ಅಣ್ಣನಲ್ಲಿ ಭೀಮ ನಕುಲನ ಪತನಕ್ಕೆ ಕಾರಣವನ್ನು ಪ್ರಶ್ನಿಸಿದ..
“ ತನ್ನ ಅನನ್ಯ ಸಾಧಾರಣವಾದ ರೂಪದ ಕುರಿತಾದ ಗಾಢ ಗರ್ವವೇ ನಕುಲನ ಪತನಕ್ಕೆ ಕಾರಣ” ವಾಯಿತೆಂದು ಧರ್ಮರಾಜ ಉತ್ತರಿಸಿದ.
ಮತ್ತೆ ಮೃತ್ಯುವಿನ ಸರದಿ
ಅರ್ಜುನ ದಾಯಿತು.
ಕಂಗೆಡುವ ಮನದ ಕಣ್ಣೀರನ್ನು ನುಂಗುತ್ತ ಭೀಮ ದೊಡ್ಡಣ್ಣನನ್ನು ಕೇಳಿದನು:” ಗೀತೋಪದೇಶಕ್ಕೆ ಪಾತ್ರನಾದ ಅರ್ಜುನನ ಸ್ಥಿತಿ ಹೀಗೇಕಾಯಿತು? ”
ಧರ್ಮರಾಜ ಹೀಗೆ ಉತ್ತರಿಸಿದ: “ತನ್ನ ಪರಾಕ್ರಮದ ಬಗೆಗೆ ಅರ್ಜುನನಿಗೆ ಅತಿಶಯವಾದ ಅಹಂಕಾರವಿದ್ದಿತು..
ಅಹಂಕಾರದ ಆವೇಗದಲ್ಲಿ ಲೋಕದ ಎಲ್ಲಾ ವೀರರನ್ನು ಒಂದೇ ದಿನದಲ್ಲಿ ಮಣಿಸಿಬಿಡುವೆನೆಂದು ಆತ ಹೇಳಿಕೊಂಡಿದ್ದ.!
ಆದರೆ ಹಾಗೆ ಮಾಡಲು ಸಾಧ್ಯವಾಗದಿದ್ದುರಿಂದ ಸುಳ್ಳಾಡಿದಂತಾಯಿತು..
ಗರ್ವ ಮತ್ತು ಮಿಥ್ಯಾ ವಚನಗಳು ಅರ್ಜುನನ ಪತನಕ್ಕೆ ಕಾರಣವಾದುವು”
ಮಹಾಪ್ರಸ್ಥಾನ ಮುಂದುವರೆಯಿತು..
ಕೊಂಚ ದೂರ ಹೋಗುವಷ್ಟರಲ್ಲಿ ಸ್ವಯಂ ಭೀಮ ನೇ ಬಿದ್ದುಬಿಟ್ಟ.
ಆದರೆ ಪ್ರಾಣ ಕಳೆದುಕೊಳ್ಳುವುದಕ್ಕೆ ಮುನ್ನ, ಪ್ರಜ್ಞೆಕಳೆದುಕೊಳ್ಳದೆ, ಧೃತಿಗೆಡದೆ ಅಣ್ಣನನ್ನು ಪ್ರಶ್ನಿಸಿದ, “ ಅಣ್ಣಾ, ನಿನ್ನ ಪ್ರಿಯ ಸೋದರನಾದ ನನಗೆ ಹೀಗೇಕಾಗುತ್ತಿದೆ? ”
ಪ್ರಾಣೋತ್ಕ್ರಮಣದ ಸ್ಥಿತಿಯಲ್ಲಿಯೂ ತನ್ನ ದೋಷಗಳನ್ನು ತಿಳಿಯಬಯಸಿದ ಭೀಮನ ಜ್ಞಾನದಾಹವನ್ನು, ಧೃತಿಯನ್ನು ಯಾರೂ ಮೆಚ್ಚಬೇಕು..!!
ಜೀವಜ್ಯೋತಿ ಆರಿ ಹೋಗುವ ಕೊನೆಯ ಕ್ಷಣಗಳಲ್ಲಿ ತನ್ನ ವ್ಯಕ್ತಿತ್ವದ ಕೊರತೆಗಳನ್ನು ತಿಳಿಹೇಳುವ ಅಣ್ಣನ ತಿಳಿಮಾತುಗಳು ತಮ್ಮನ ಕಿವಿಗಳಿಗೆ ಬಿದ್ದವು.
“ ಬಾಹುಬಲದ ಗರ್ವ ನಿನ್ನ ಪತನದ ಪ್ರಬಲ ಕಾರಣ..
ಅದಕ್ಕಿಂತ ಮುಖ್ಯ ಕಾರಣ – ನೀನು ಅಗತ್ಯಕ್ಕಿಂತ ಹೆಚ್ಚು ಆಹಾರವನ್ನು ಸೇವಿಸುತ್ತಿದ್ದುದು.
ನಮ್ಮ ಶರೀರ ಧಾರಣೆಗೆ ಎಷ್ಟು ಅಗತ್ಯವಿದೆಯೋ ಅಷ್ಟು ಆಹಾರದ ಮೇಲೆ ಮಾತ್ರವೇ ನಮಗೆ ಅಧಿಕಾರವಿದೆ..
ಜಗತ್ತಿನಲ್ಲಿ ಹಸಿವೆಯಿಂದ ಬಳಲುವ -ಸಾಯುವ ಜೀವಗಳೆಷ್ಟೋ!!
ನಾವೇ ಸಂಪಾದಿಸಿದ್ದಾದರೂ ನಾಲಿಗೆ ಚಪಲಕ್ಕಾಗಿ ಅಗತ್ಯವಿಲ್ಲದೇ ಆಹಾರ ಸೇವಿಸುವುದು ಆ ಜೀವಗಳಿಗೆ ಮಾಡಿದ ಅನ್ಯಾಯ. ಅನ್ನದೇವತೆಗೆ ಮಾಡಿದ ಅಪಚಾರವದು. ”
ಧೀರ ಧರ್ಮಜ ಅಸಹಾಯ ಶೂರನಾಗಿ ಮುಕ್ತಿಯ ಹಾದಿಯಲ್ಲಿ ಮುನ್ನಡೆದ. ಭೂಮಂಡಲಕ್ಕೆ ಚಕ್ರವರ್ತಿ ಎನಿಸಿದ್ದ ಜನನಾಥ ಧರ್ಮಜನ ಜೊತೆ ಉಳಿದಿದ್ದು ಕೊನೆಗೊಂದು ನಾಯಿ ಮಾತ್ರ.
ಬುದ್ಧಿ-ಭಾಷೆಗಳನ್ನು ಮೀರಿದ ಮಹಾ ಯಾತ್ರೆಯನ್ನು ಕೈಗೊಂಡಿದ್ದ ಆ ಮಹಾನುಭಾವನಿಗೆ ಕೆಲಹೊತ್ತಿನಲ್ಲಿಯೇ ದೇವರಾಜನ ದಿವ್ಯ ರಥದ ಘೋಷ ಕೇಳಿಸಿತು.
ಕಲ್ಮಷದ ಕಪ್ಪು ಚುಕ್ಕೆಗಳೇ ಇಲ್ಲದ ಧವಳ ಜೀವನವನ್ನು ಗೌರವಿಸಲು – ಧರೆಯ ದೊರೆಯನ್ನು ದಿವಿಗೆ ಸ್ವಾಗತಿಸಲು ಸ್ವಯಂ ಸ್ವರ್ಗದ ದೊರೆಯೇ ಆಗಮಿಸಿದ.
ದಿವಿ-ಭುವಿಯ ರಾಜರ ಆ ಭವ್ಯ ಸಮಾಗಮದಲ್ಲಿ ದೇವೇಂದ್ರ ಧರ್ಮರಾಜನಿಗೆ ಶರೀರ ಸಹಿತವಾಗಿ ಸ್ವರ್ಗಕ್ಕೆ ಬರಲು ಆಮಂತ್ರಣವಿತ್ತ.
“ ತನ್ನ ಬದುಕನ್ನು ಸ್ವರ್ಗಮಾಡಿದ ತಮ್ಮಂದಿರು ಮತ್ತು ಮಡದಿಯ ಒಡನಾಟ ಸ್ವರ್ಗದಲ್ಲಿಯೂ ಬೇಕೆಂ “ದ ಧರ್ಮರಾಜ.
“ ಶರೀರ ಸಹಿತವಾಗಿ ಸ್ವರ್ಗವೇರುವ ಅಪೂರ್ವ ಸುಯೋಗವು ನಿನ್ನದಾದರೆ, ನಿನ್ನ ತಮ್ಮಂದಿರು ಮತ್ತು ಮಡದಿ ಶರೀರವನ್ನು ತೊರೆದು ಆಗಲೇ ಸ್ವರ್ಗದೆಡೆಗೆ ಪ್ರಯಾಣ ಬೆಳೆಸಿದ್ದಾರೆ ” ಎಂಬುದು ಇಂದ್ರನ ಉತ್ತರವಾಗಿತ್ತು.
ಧರ್ಮರಾಜನ ಮುಂದಿನ ಮನವಿ ಮನಸ್ಸು ಮುಟ್ಟುವಂತಹುದು.
“ ಆಶ್ರಿತರನ್ನು ಕೈ ಬಿಡುವುದು ಸಜ್ಜನರ ಧರ್ಮವಲ್ಲ.
ಸೈನ್ಯ ಕೋಶಗಳು, ಅಮಾತ್ಯ ಪ್ರಜೆಗಳು, ಕೊನೆಗೆ ನನ್ನ ಜೀವದ ಒಡನಾಡಿಗಳೇ ಆಗಿದ್ದ ಸಹೋದರರು, ಮಡದಿಯೂ ಸೇರಿದಂತೆ ಸರ್ವಸ್ವವೂ ನನ್ನಿಂದ ದೂರವಾದರೂ ಜೊತೆಬಿಡದ ಈ ನಾಯಿಯನ್ನು ಬಿಡಲಾರೆ.
ನೀನು ನನ್ನ ವಿಷಯದಲ್ಲಿ ಪ್ರಸನ್ನನಾಗಿರುವುದೇ ನಿಜವಾದರೆ ಸ್ವರ್ಗದಲ್ಲಿ ನನ್ನೊಡನೆ ಈ ನಾಯಿಗೂ ಸ್ಥಾನವನ್ನು ಕಲ್ಪಿಸು. ”
ಚಕಿತನಾದ ಇಂದ್ರ ಹೇಳಿದ, “ ಸ್ವರ್ಗದಲ್ಲಿ ನಾಯಿಗಳಿಗೆ ಅವಕಾಶವಿಲ್ಲ “. (Dogs are not allowed..!)
“ ಹಾಗಿದ್ದರೆ ನನಗೆ ಯಾವ ಸ್ವರ್ಗವೂ ಬೇಡ, ನಾಯಿಯೊಡನೆ ನಾನೂ ಇಲ್ಲಿಯೇ ಇರುತ್ತೇನೆ ” ಧರ್ಮರಾಜನ ಈ ಮಾತುಗಳು ಇಂದ್ರನನ್ನು ದಂಗುಬಡಿಸಿತು.!
ಧರ್ಮ ಬೇಡ..ಆದರೆ ಧರ್ಮದ ಫಲ ಬೇಕು ಎನ್ನುವ ಹುಲುಮಾನವರೆಲ್ಲಿ..?
ಜೀವನಪರ್ಯಂತ ಆಚರಿಸಿದ ಧರ್ಮದ ಫಲವಾಗಿ ಸಾಕ್ಷಾತ್ ಸ್ವರ್ಗವೇ ಹಸ್ತಗತವಾಗುತ್ತಿರುವಾಗಲೇ ಆಶ್ರಿತ-ಪರಿಪಾಲನೆಯೆಂಬ ಧರ್ಮಕ್ಕಾಗಿ ಅದನ್ನು ತ್ಯಜಿಸಲು ಸಿದ್ಧನಾದ ಯುಧಿಷ್ಠಿರನೆಲ್ಲಿ….?
ಧರ್ಮದ ಪರಿಪೂರ್ಣ ಸಾಕ್ಷಾತ್ಕಾರ ಇಂತಹ ಅಮೃತಗಳಿಗೆಯಲ್ಲಲ್ಲದೆ ಇನ್ಯಾವಾಗ ಆಗಲು ಸಾಧ್ಯ?
ಸ್ವರ್ಗಕ್ಕೆ ಬೆನ್ನು ಹಾಕಿ ನಾಯಿ ಇದ್ದ ಕಡೆ ಮುಖಮಾಡಿ ನಿಂತ ಧರ್ಮರಾಜ ನಿಗೆ ಮಹಾದಾಶ್ಚರ್ಯವೇ ಕಾದಿತ್ತು..!!
ನಾಯಿ ಮಾಯವಾಗಿತ್ತು..!!
ಆಸ್ಥಾನ ದಲ್ಲಿ ಧರ್ಮ ನಿಂತಿತ್ತು..!!
ಯಾವ ಧರ್ಮಕ್ಕಾಗಿ ರಾಜ್ಯ ಕೋಶಗಳನ್ನೂ ಕಳೆದು ಕೊಂಡನೋ ,
ಯಾವ ಧರ್ಮಕ್ಕಾಗಿ ತುಂಬಿದ ರಾಜ ಸಭೆಯಲ್ಲಿ ಧರ್ಮಪತ್ನಿಯ ವಸ್ತ್ರಾಪಹರಣ ವನ್ನು ಎದುರಿಸಿದನೋ ,
ಯಾವ ಧರ್ಮಕ್ಕಾಗಿ ಕಾಡಾಡಿಯಾಗಿ ಕ್ಲೇಶಗಳನ್ನು ಅನುಭವಿಸಿದನೋ,
ಯಾವ ಧರ್ಮಕ್ಕಾಗಿ ಸಂಗ್ರಾಮ ಯಜ್ಞದೀಕ್ಷಿತನಾಗಿ ಬಂಧು ಮಿತ್ರರು,ಮುದ್ದು ಮಕ್ಕಳು,
ಯುದ್ಧ ಯಜ್ಞದಲ್ಲಿ ಹತರಾಗಿ-ಹುತರಾಗಿ ಹೋಗುವುದನ್ನು ಕಣ್ಣಾರೆ ಕಂಡನೋ ,
ಯಾವ ಧರ್ಮದ ಪೂರ್ಣಸಾಧನೆಗಾಗಿ ಸರ್ವತ್ಯಾಗದ ಮಹಾಪ್ರಸ್ಥಾನವನ್ನು ಕೈ ಗೊ೦ಡನೋ, ಆ ಧರ್ಮ ಭುವಿಯ ಬದುಕಿನ ಕೊನೆ ಕ್ಷಣಗಳಲ್ಲಿ, ಎಲ್ಲವನ್ನು ಕಳೆದು ಕೊಂಡ ಅಕಿಂಚನ ಸ್ಥಿತಿಯಲ್ಲಿ ಕಣ್ಣೆದುರು ಮೈದಳೆದು ನಿಂತಿತ್ತು..ಧರ್ಮರಾಜನಿಗೆ ತನ್ನಿರವೇ ಮರೆಯಿತು..!!
ನಾಯಿ ನಾಯಿಯಾಗಿರಲಿಲ್ಲ, ಧರ್ಮರಾಜನ ತಂದೆ ಯಮಧರ್ಮರಾಜನಾಗಿದ್ದ..! ಧರ್ಮಸ್ವರೂಪಿಯೇ ಅವನಲ್ಲವೇ?
ಬದುಕೆ೦ಬುದು ಮರಣದೆಡೆಗಿನ ನಿರಂತರ ಪಯಣ..
ಬದುಕೆ೦ಬುದು ಮರಣದ ಸಿದ್ಧತೆ ಮಾತ್ರ..!!
ಕೊನೆಗೊಮ್ಮೆ ಎಲ್ಲವನ್ನೂ ಬಿಡಲೆಂದೇ ಎಲ್ಲವನ್ನೂ ಕೂಡಿಕೊಳ್ಳುವುದೇ ಬದುಕು..
ಬದುಕಿನ ಪ್ರತಿಯೊಂದು ಕ್ಷಣವೂ ಒಂದಿಲ್ಲೊಂದು ಸಂಪಾದನೆಯಾಗುತ್ತಲೇ ಇರುತ್ತದೆ..
ಸಂಬಂಧಗಳು….ಸಂಪತ್ತುಗಳು…….ಏನಿಲ್ಲವೆಂದರೆ ಅನುಭವವಾದರೂ……ಕೂಡಿಕೊಳ್ಳುತ್ತಲೇ ಇರುತ್ತದೆ..
“ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ ..”
ಬದುಕಿನ ಕೋಟಿ ಕೋಟಿ ಕ್ಷಣಗಳ ಗಳಿಕೆ ಇಲ್ಲವಾಗಿಬಿಡುವ ಒಂದು ಕ್ಷಣಕ್ಕೆ “ಸಾವು” ಎಂದು ಹೆಸರು..
ಆಸರೆ – ರಕ್ಷಣೆಗಳ ಸುಳಿವೂ ಇಲ್ಲದಾಗಿಬಿಡುವ ಆ ಕ್ಷಣದಲ್ಲಿ ನಮ್ಮನ್ನು ಸಂತೈಸುವ ಸಖನಾರು.?
ಬಲವೇ ..?
ಪರಾಕ್ರಮವೇ ..?
ರೂಪವೇ..?
ವಿದ್ಯೆಯೇ..?
ಮರಣದ ಮಾತು ಹಾಗಿರಲಿ..
ಬದುಕಿನ ಕೊನೆಯವರೆಗೆ ಕೂಡ ಇವುಗಳು ಬರಲಾರವು..
ಕಾಲ ಕಳೆದಂತೆ ಬಲ ಕುಂದುತ್ತದೆ ..
ಪರಾಕ್ರಮ ಮಸುಕಾಗುತ್ತದೆ..
ರೂಪ ಮಾಸುತ್ತದೆ..
ವಿದ್ಯೆ ಮರೆಯುತ್ತದೆ ..
ದ್ರೌಪದಿ ನಕುಲರ ರೂಪವೇನಾಯಿತು ?
ಸಹದೇವನ ವಿದ್ಯೆ ಎಲ್ಲಿಹೋಯಿತು ?
ಭೀಮಾರ್ಜುನರ ಬಲ ಪರಾಕ್ರಮಗಳು ಯಾವ ಪ್ರಯೋಜನಕ್ಕೆ ಬಂದವು?
ಧರ್ಮರಾಜನೆಂದೂ ಕೈಬಿಡದ ಧರ್ಮವೊಂದೇ ತಾನೆ ನಾಯಿಯಾಗಿ ಅವನನ್ನು ಕಾಯುತ್ತಿದ್ದುದು..!!
ಧರ್ಮದೊಡನಿದ್ದರೆ ಮಾತ್ರ ಬಲ ವಿದ್ಯೆ ರೂಪಗಳಿಗೊಂದು ಅರ್ಥ ..
ಹಾಗಿಲ್ಲದಿದ್ದರೆ ಇವುಗಳು ಪತನ ಸೋಪಾನಗಳೇ ಸರಿ ..
ಧರ್ಮಶೀಲನಿಗೆ ಬದುಕಿನ ಕೊನೆ ಧರ್ಮರೂಪದಲ್ಲಿಯೇ ಬಂದರೆ ಉಳಿದವರಿಗೆ ಅದು ಮೃತ್ಯುರೂಪ …

*"*" ಭೋಜರಾಜನ ಜೀವನಸಂದೇಶವನ್ನು ಗಮನಿಸಿ:
ವಾತಾಭ್ರವಿಭ್ರಮಮಿದಂ ವಸುಧಾಧಿಪತ್ಯಂ |
ಆಪಾತಮಾತ್ರ ಮಧುರೋ ವಿಷಯೋಪಭೋಗಃ||
ಪ್ರಾಣಸ್ತೃಣಾಗ್ರ ಜಲಬಿಂದುಸಮೋ ನರಾಣಾಂ |
ಧರ್ಮಸ್ಸಖಾ ಪರಮಹೋ ಪರಲೋಕ ಯಾನೇ ||

(ಗಾಳಿಗೆ ಸಿಕ್ಕಿದ ಮೋಡವೆಷ್ಟು ಸ್ಥಿರವೋ, ರಾಜ್ಯಾಧಿಕಾರವೂ ಕೂಡ ಅಷ್ಟೇ ಸ್ಥಿರವಾದುದು ..
ಭೌತಿಕ ಸುಖಗಳು ಮೇಲ್ನೋಟಕ್ಕೆ ಮಾತ್ರ ಸುಖಕರ ..
ಬೆಳಗಿನ ಹೊತ್ತು ಹುಲ್ಲಿನ ತುದಿಯಲ್ಲಿ ಕುಳಿತ ಮಂಜಿನ ಬಿಂದುವಿನಹಾಗೆ ನಮ್ಮ ಪ್ರಾಣ ..
ಪರಲೋಕ ಪ್ರಯಾಣದ ಪರಮಸಖನೆಂದರೆ ಧರ್ಮವೊಂದೇ ಅಲ್ಲವೇ..?)

*** ಧರ್ಮ ವಿರುವಲ್ಲಿ ಸಾವಿಲ್ಲ ,ನೋವಿಲ್ಲ..
ಧರ್ಮಶೀಲನಾದವನು ಸ್ವರ್ಗಕ್ಕಾಗಿ ಹುಡುಕಬೇಕಾಗಿಲ್ಲ ..
ಅವನಿರುವಲ್ಲಿ ಸ್ವರ್ಗವೇ ಧರೆಗಿಳಿಯುವುದು ..!!
... ಸಂಗ್ರಹ..