ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Sunday 25 June 2017

ಕೆಲವರಿಗೆ ಸಮಾಜ ಸುಧಾರಕರು, ಚಿಂತಕರೇಕೆ ಶತ್ರುಗಳಾಗುತ್ತಾರೆ....?

ಕೆಲವರಿಗೆ ಸಮಾಜ ಸುಧಾರಕರೇಕೆ ಶತ್ರುಗಳಾಗುವರು....?
ಜಗತ್ತಿನ ಯಾವ ಚಿಂತಂಕರು  ಧಾರ್ಮಿಕ ಮೂಲಭೂತವಾದವನ್ನು ಪ್ರೋತ್ಸಾಹಿಸಲಿಲ್ಲ..ಯಾವ ಧರ್ಮಿಯನು ಈ ಭೂಮಿಯನ್ನು ಗುತ್ತಿಗೆ ಪಡೆದಿಲ್ಲ. ಯಾವ ಧರ್ಮ ಗುರುವು ತಾನು ಬೋದಿಸಿದ್ದೆ ಅತಿ ಶ್ರೇಷ್ಠ ಎಂದು ಯಾರ ಮೇಲೂ ಹೇರಲಿಲ್ಲ. ಅವರೆಲ್ಲ ಬೋದಿಸಿದ್ದು ಮಾನವತಾವಾದ, ಸಮತಾವಾದ, ವಿಶ್ವಮಾನವತೆ. ಸ್ವಾತಂತ್ರ್ಯ, ಸಹೋದರತೆ, ಸಮಾನತೆ, ದಯೆ, ಪ್ರೀತಿಯ ಪ್ರತಿಪಾದಕರಾಗಿದ್ದರು. ಎಲ್ಲ ಬುದ್ದಿಜೀವಿಗಳು ಚಿಂತಂಕರು,ಸಮಾಜ ಸೇವಕರು ಸಾಹಿತಿಗಳು ,ಕಲಾವಿದರು ಶಿಕ್ಷಕರು  ಜಗತ್ತಿನಾದ್ಯಂತ ಇದನ್ನೇ ಜಗತ್ತಿಗೆ ಸಾರಿದರು. ಆದರೂ ಜಗತ್ತಿನೆಲ್ಲೆಡೆ ಇರುವ ಧಾರ್ಮಿಕತೆಯ ಅಪೀಮು ಕುಡಿದ ಈ ಮೂಲಭೂತವಾದಿಗಳು ಧರ್ಮದ ಹೆಸರಿನಲ್ಲಿ  ಒಡೆದು ಆಳುವ ಪಾಳೆಗಾರಿಕೆಯನ್ನು ಜಗತ್ತಿನ ಎಲ್ಲ ರಾಷ್ಟ್ರಗಳಲ್ಲೂ  ಕಸುಬು ಮಾಡಿಕೊಂಡಿದ್ದಾರೆ
ಇಲ್ಲಿ ಪ್ರಮುಖ ವಿಷ್ಯ ಏನೆಂದರೆ ಈ ತರ ಧರ್ಮದ ಹೆಸರಲ್ಲಿ ಕಸುಬು ಮಾಡಿಕೊಂಡವರೆಲ್ಲ  ಆಯಾ ದೇಶದ ಪ್ರಬಲ ಮೇಲ್ವರ್ಗಗಳು. ಪ್ರತಿ ದೇಶದಲ್ಲಿ ಇರುವ ಇಂಥ ಮನಸ್ಥಿತಿಯ 10 % ಜನ ಜಗತ್ತನ್ನು ಧರ್ಮದ ಹೆಸರಲ್ಲಿ  ಹಿಡಿದಿಟ್ಟು ಒಡೆದು ಆಳುವ ದೂರಾಲೋಚನೆ ಜೊತೆಗೆ ಕಾಲಕಾಲಕ್ಕೆ ಬೇಕಾದ ತಂತ್ರ ಕುತಂತ್ರ ಮೂಲಕ ದುರಂತ ಇತಿಹಾಸ ಸನ್ನೀವೇಶ ಸೃಷ್ಟಿಗೆ ಕಾರಣರಾಗಿದ್ದಾರೆ.  
     ಅವರಿಗೆ ಸದಾ  ಸಾಮಾನ್ಯರ ಮೇಲೆ ಅಭಿಪ್ರಾಯ ಹೇರುವ, ಧರ್ಮ ಭಯ ಬಿತ್ತುವ ಶಾಸ್ತ್ರ ,ಕಾನೂನು  ಮಾಡುವ ಕೆಲಸವನ್ನು  ಜನಸಾಮಾನ್ಯರ ಅರಿವಿಗೆ ಭಾರದಂತೆ ವ್ಯವಸ್ಥಿತವಾಗಿ ಮಾಡುವ ಚಾಲಾಕಿ ಶಾಹಿಗಳು.ಈ ಭೂ ಜಗತ್ತಿನ ಎಲ್ಲ ದೇಶಗಳು ಇಂಥವರ ಹಿಡಿತದಲ್ಲೇ ಇವೆ. ಹಾಗಾಗಿಯೇ ಧರ್ಮ ಜಾತಿ ದೇಶ ಗೋಡೆಗಳಾಚೆ ವಿಶ್ವ ಮಾನವತೆಯ ವಿಶಾಲ ಮನಸ್ಸಿನ ಮನುಕುಲ ಬೆಳೆಸಲಾಗುತ್ತಿಲ್ಲ.ಇಂತ ಮನಸ್ಥಿತಿಯವರಿಗೆ ಕಾರ್ಲ್ ಮಾರ್ಕ್ಸ್, ಲೋಹಿಯಾ,ಬುದ್ಧ, ಬಸವ, ಗಾಂಧಿ ಅಂಬೇಡ್ಕರ್ ,ಕುವೆಂಪು, ಟಾಗುರ್ ಮುಂತಾದ ಚಿಂತಂಕರೆಲ್ಲ ಶತ್ರು ಗಳಂತೆ ಕಾಣುತ್ತಾರೆ. ಇಂದಿನ ಯುವ ಸಾಕ್ಷರರಿಗೂ ಈ ಐತಿಹಾಸಿಕ ಸತ್ಯ, ತಾತ್ವಿಕ ದರ್ಶನ ಆಗದೆ ಪ್ರಚೋದಿತರಾಗಿ  ಮೇಲು ಸ್ತರದ ಸಾಮಾಜಿಕ ಸರಪಳಿಯ ಉದ್ಯಮಾದಿಪತಿಗಳು, ಗುಡಿ, ಚರ್ಚು ಮಸೀದಿಗಳ ಪಾಳೆಗಾರರು,ರಾಜಕಾರಣಿಗಳ ಕುಟಿಲ ತಂತ್ರಗಳಿಗೆ ಬಲಿಯಾಗುತ್ತಿದ್ದಾರೆ. ಹಾಗೂ ಅಂತವರೊಂದಿಗೆ ಗುರುತಿಸಿಕೊಳ್ಳುವ ಹಂಬಲವುಳ್ಳವರ ಸಂಖ್ಯೆಯೂ ಜಗದ ಎಲ್ಲೆಡೆ ಇದ್ದಾರೆ. ಹಾಗಾಗಿ ಬದಲಾವಣೆಯೇ ಜಗದ ನಿಯಮ ಆಗಿದ್ದರು ಅದು ಜಗತ್ತಿನ ಕೇವಲ 10 % ಜನ ಮೇಲು ಸ್ತರದ  ಸಾಮಾಜಿಕ ಸರಪಳಿಯ ನಿರ್ದಾರದಂತೆಯೇ ನಡೆಯುತ್ತಿದೆ. ಈ ಅಮೆರಿಕಾವಂತೂ ಹಠಕ್ಕೆ ಬಿದ್ದು ಜಗತ್ತನ್ನು ನಿಯಂತ್ರಿಸಲು ಹವಣಿಸುತ್ತಿದೆ. ಇವರ ಮನಸ್ಥಿತಿಯ ಅಚ್ಚು ಜಗದ ಎಲ್ಲ ದೇಶಗಳಲ್ಲೂ ಇದ್ದಾರೆ. ಹಾಗಾಗಿ ಯಾವ ದೇಶದ  ಯಾವುದೇ  ಧರ್ಮದ ಮೂಲಭೂತ ವಾದಿಗಳು ಕಡಿಮೆ ಏನಿಲ್ಲ. ಈ ಬೆಳವಣಿಗೆ ಜೀವಂತ ಇರೋವರೆಗೂ ವಿಶ್ವ ಮಾನವೀಯತೆ ಸಾದ್ಯವಿಲ್ಲ. ದೇಶಗಳ ನಡುವೆ ಗಡಿ ತಂಟೆ, ಭಯೋತ್ಪಾದನೆ ಉಗ್ರವಾದ ಎಲ್ಲ ಇದ್ದೆ ಇರುತ್ತದೆ. ಜಗತ್ತು ಎಷ್ಟೇ ಮುಂದುವರಿದರು ಆತಂಕ ತಪ್ಪದು.
ಎಲ್ಲಕು ಒಂದೇ ಪರಿಹಾರ ಭೂ ಜಗತ್ತೇ ಒಂದು ದೇಶ ಆಗಬೇಕು. ಎಲ್ಲ ಗಡಿ ನಿಷೇಧ ಆಗಬೇಕು. ಕೇವಲ ಜೀವಿಗಳು ಬದುಕುವ ಜೀವಮಂಡಲ ಈ ವಸುಂದರೆ ಆಗಬೇಕು. ಎಲ್ಲ ಹೇಳಿದಷ್ಟು ಸುಲಭ ಅಲ್ಲ. ಕನಸು ಅಲ್ಲ. ಎಲ್ಲದಕ್ಕೂ ಎಲ್ಲರ ಸಹಕಾರವೂ ಸಿಗದು. ಹಾಗಾಗಿ ಪರಿಹಾರ ಸಿಗದು. ಆದರೂ ಈ ಬಗ್ಗೆ ಯುವ ಮನಸುಗಳು ಹೆಚ್ಚು ಯೋಚಿಸಿ ಜಾಗತಿಕ ವಿಶಾಲ ಮಾನವ ಸರಪಳಿ ,ಮಾನಾವೀಯ ಮನುಕುಲ ಬೆಳೆಸಲು ಶ್ರಮಿಸಬೇಕು.
ಇದು ರವಿರಾಜ ಮಾರ್ಗದಲ್ಲಿ ಕಂಡ ಅಂತರಾವಲೋಕನ. ಬದಲಾವಣೆಗೆ ನೀವೇ ಮೊದಲಿಗರಾಗುವ ಅವಕಾಶ.
ರವಿರಾಜ್ ಸಾಗರ್.

1 comment:

  1. ಅದ್ಭುತ ಲೇಖನ..ಚಿಂತನಾರ್ಹ

    ReplyDelete

ಸುಳ್ಳೂರ ಶಾಲೆಯಲ್ಲಿ ಪಾಲಕರಿಂದ ಸ್ವಚ್ಛತಾ ಸಪ್ತಾಹ

ಊರಿನ ಗ್ರಾಮಸ್ಥರಿಂದ ಸುಳ್ಳೂರು ಶಾಲೆಯಲ್ಲಿ ಸ್ವಚ್ಛತಾ ಸಪ್ತಾಹ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸುಳ್ಳೂರಿನ ಹಿರಿಯ ವಿದ್ಯಾರ್ಥಿಗಳು , ಪಾಲಕರೆಲ್ಲರೂ ಸೇರ...