ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Tuesday, 22 September 2020

ಶಾಲಾ ಮಕ್ಕಳಿಂದ ಜಾನಪದ ಕ್ಷೇತ್ರಕಾರ್ಯ, ವಿಶೇಷ ಜಾನಪದ ಪ್ರಯೋಗ.ವೈಚಾರಿಕ ಜಾನಪದಗಳ ಮರುಸೃಷ್ಟಿ, ಹಾಗೂ ಜಾನಪದ ಪಠ್ಯಂತರ್ಗತ ಪ್ರಯೋಗದ ಶಾಲೆ ಮಲ್ಕಾಪುರ

ನಮ್ಮ ಶಾಲಾ ಮಕ್ಕಳ ನೇತೃತ್ವದ
ನಮ್ಮೂರ ಜನಪದ ಬಳಗ
 ತಂಡದ ಜಾನಪದ
 ಪಠ್ಯಂತರ್ಗತ ಪ್ರಯೋಗಗಳ ಹಲವು ವಿಡಿಯೋ ವೀಕ್ಷಿಸಿ. ಡೊಳ್ಳಿನ ಪದ , ಬೀಸೋ ಪದ,ಸೋಬಾನೆ ಪದ ಸಂಪ್ರದಾಯದ ಪದಗಳು , ಜಾನಪದಗಳನ್ನು ಮರು ಸೃಷ್ಟಿಸಿದ  ಪಠ್ಯ ರೂಪಾಂತರ ಜಾನಪದ ಇಲ್ಲಿವೆ. ಕೆಳಗಿನ ಲಿಂಕ್ ಗಳನ್ನು ಕ್ಲಿಕ್ ಮಾಡಿ.

ನಮ್ಮ ಶಾಲಾ ಮಕ್ಕಳ ಜಾನಪದ ಪಠ್ಯಂತರ್ಗತ ಪ್ರಯೋಗ ಕುರಿತು ಸಾಕ್ಷ್ಯಚಿತ್ರ 

https://youtu.be/SbF7FvBQgBY

ಶಾಲೆ ಬಿಟ್ಟ ಮಕ್ಕಳನ್ನು ಕರೆತರುವ ಜಾನಪದ ಹಾಡು

https://youtu.be/n8BHS01cS40

ಬಂಗಾರದ ಬಳಿಯವ್ವ
 https://youtu.be/UcaBJhXfS2w

ಉಡಿ ತುಂಬುವ ಹಾಡು
https://youtu.be/YgLUqVyqhJQ

ಬೀಸೋ ಪದ
https://youtu.be/m3oBQ10rChw

ಡೊಳ್ಳಿನ ಪದ

https://youtu.be/XCZisnshPGI

ಸಾಂಪ್ರದಾಯಿಕ ಪದ

https://youtu.be/imEjgSoAzpg

ಸೋಬಾನೆ ಪದ
https://youtu.be/TJIoagCfsbY

ಮೈಲಾರ್ ಮಾದೇವನ ಕುರಿತು ಒಂದು ಜನಪದ

https://youtu.be/pUDFTTdl3bo

ಸಾಂಪ್ರದಾಯಿಕ ಪದ

https://youtu.be/qB1iRypmOlE

ಅಕ್ಕಿಯನ್ನು ಅಳಸಿಕೊಂಡು

https://youtu.be/7TdmJ96CS_M

ಗುರುವೇ ನಮ್ಮ ಯ್

https://youtu.be/XCZisnshPGI
ಅಕ್ಕಿ ತಂದಾರಾ ಜಗ್ಗಿ

https://youtu.be/33epaEahlVA

ಬಂಗಾರದ ಬಳಯವ್ವ

https://youtu.be/UcaBJhXfS2w

ಒಂದು ಅಂಬುದು ಏನ ಜಾಣ

https://youtu.be/ttVGtOTqTYM

ಯಾರ್ ಏನಂದಾರೆ ಎಲ್ಲಮ್ಮನ ಮಾರಿ ಯಾಕೆ ಬಾಡ್ಯಾವೆ

https://youtu.be/UcaBJhXfS2w


ಮೇ 10 . ಆಕಾಶವಾಣಿ ರಾಯಚೂರಿನಲ್ಲಿ ಪ್ರಸಾರವಾದ
ನಮ್ಮ ಶಾಲಾ ಮಕ್ಕಳ ನಾಟಕ

https://youtu.be/wKXUbyCgH1c

ನಿಮ್ಮ ಪ್ಲಾಸ್ಟಿಕ್ ಕಸ ನಿಮ್ಮದು ಅಭಿಯಾನದ ಕುರಿತು ಸಾಕ್ಷ್ಯಚಿತ್ರ

https://youtu.be/j38ms2vlg78

12 ವರ್ಷಗಳಿಂದ ನಿರಂತರವಾಗಿ ಪ್ರಕಟವಾಗುತ್ತಿರುವ ಶಾಲಾ ಮಕ್ಕಳ ನೇತೃತ್ವದ ಮಕ್ಕಳ ಮಂದಾರ ಪತ್ರಿಕೆಯ ಫಲಶ್ರುತಿ ಕುರಿತು ಸಾಕ್ಷ್ಯಚಿತ್ರ 

https://youtu.be/1PvX-rs6RPQ

ಇನ್ನೂ ಹೆಚ್ಚಿನ ಜಾನಪದ ಕಥೆಗಳು ಜಾನಪದ ಕ್ರೀಡೆಗಳು, ಜಾನಪದ ಹಾಡುಗಳು , ಶೈಕ್ಷಣಿಕ ಪಾಠಗಳು,ಯುಟ್ಯೂಬ್ ಚಾನೆಲ್ ನಲ್ಲಿ ವೀಕ್ಷಿಸಿ. ಚಾನೆಲ್ ಸಬ್ಸ್ಕ್ರೈಬ್ ಆಗಿ ಪ್ರೋತ್ಸಾಹಿಸಿ.

ನಿಮ್ಮ ರವಿಚಂದ್ರ /ರವಿರಾಜ ಸಾಗರ್
 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 
 ಮಲ್ಕಾಪುರ ಮಾನ್ವಿ ತಾಲೂಕು 
 ರಾಯಚೂರು
9980952630



ನಮ್ಮ ಚಟುವಟಿಕೆಗಳನ್ನು ಬೆಂಬಲಿಸಲು ನಿಮ್ಮ ಮಿತ್ರ ಬಳಗಕ್ಕೆ ಶೇರ್ ಮಾಡಿ

ಅಜಿಮ್ ಪ್ರೇಮ್ ಜಿ ಶಾಲೆ ಯಾದಗಿರಿ ಶಾಲಾ ಮಕ್ಕಳ ಬರಹಗಳ ಸಂಕಲನ

ಈ ಲಿಂಕ್ ಕ್ಲಿಕ್ ಮಾಡಿ ಮಕ್ಕಳ ಬರಹ ಓದಿ

 ಸೃಜನಶೀಲತೆ ಅವರ ಕಲ್ಪನಾ ಶೀಲತೆಯ ವಿಶಿಷ್ಟ ಉದಾಹರಣೆಗಳನ್ನು ಈ ಮೇಲಿನ ಸಂಕಲನದಲ್ಲಿ ಗಮನಿಸಬಹುದು. ಅಜಿಮ್ ಪ್ರೇಮ್ಜಿ ಶಾಲೆ ಯಾದಗಿರಿ ಅಲ್ಲಿನ ಕ್ರಿಯಾಶೀಲ ಶಿಕ್ಷಕರಾದ ಕಲಂದರ್ ಅವರ ಮಾರ್ಗದರ್ಶನದ ಮೂಲಕ ಮಕ್ಕಳು ಬರೆದ ಸೃಜನಶೀಲ ಬರಹಗಳ ಸುಂದರ ಸಂಕಲನ ಇದಾಗಿದೆ.

Sunday, 20 September 2020

ಮೂರನೇ ತರಗತಿಯಲ್ಲಿ ರಾಷ್ಟ್ರ ಮಟ್ಟದ ಸಾಧನೆ ಮಾಡಿದ ಮಹಾಲಕ್ಷ್ಮಿ ಕುರಿತು ಸಾಕ್ಷ್ಯಚಿತ್ರ ವೀಕ್ಷಿಸಿ

ಈ ಮೇಲಿನ ಲಿಂಕ್ ಕ್ಲಿಕ್ ಮಾಡಿ.

 *ಸರ್ಕಾರಿ ಶಾಲೆಯ ಗ್ರಾಮೀಣ ಪ್ರತಿಭೆ ಮಹಾಲಕ್ಷ್ಮಿ*ಕುರಿತು ಸಾಕ್ಷಚಿತ್ರ. 

ಮಕ್ಕಳ ಸಾಹಿತ್ಯ ಪರಿಷತ್ತು ಶಿವಮೊಗ್ಗ

ಮಕ್ಕಳ ಮಂದಾರ ಪತ್ರಿಕಾ ಬಳಗದ ಪ್ರಸ್ತುತಿ ಯೊಂದಿಗೆ

ಬಾಲ ಸಾಧಕಿ ಮಹಾಲಕ್ಷ್ಮಿಯ ಸಾಕ್ಷಚಿತ್ರ ನಿರ್ಮಾಣ

ವೀಕ್ಷಿಸಿ ಪ್ರೋತ್ಸಾಹಿಸಿ.


ಏಳನೇ ವಯಸ್ಸಿಗೆ ರಾಜ್ಯ, ರಾಷ್ಟ್ರ ಮಟ್ಟದ ಸಾಧನೆ ಮಾಡಿದ ಪುಟ್ಟ ಬಾಲಕಿಯ ಸಾಧನೆಯ ಪಯಣ ನೋಡಿ.
ತೆಲುಗು ಮತ್ತು ಕನ್ನಡ ಚಾನೆಲ್ ಗಳಲ್ಲಿ ಡ್ಯಾನ್ಸ್ ಶೋಗಳಲ್ಲಿ  ಜನ ಮನ ಗೆದ್ದು ವಿನ್ನರ್ ಆದ  ಮಲೆನಾಡಿನ ಮಹಾಲಕ್ಷ್ಮಿ ಕುರಿತಾದ ಸಾಕ್ಷಚಿತ್ರ ಬಿಡುಗಡೆ ಆಗಿದೆ ವೀಕ್ಷಿಸಿ. ನಿಮ್ಮ ಮಕ್ಕಳಿಗೆ ತಪ್ಪದೆ ತೋರಿಸಿ. ಪ್ರೋತ್ಸಾಹಿಸಿ. ಶೇರ್ ಮಾಡಿ.

ನಿಮ್ಮ 
ರವಿರಾಜ್ ಸಾಗರ್
,9980952630

Saturday, 19 September 2020

ನಲಿ ಕಲಿ ಗಣಿತ ತರಗತಿಗಳ ಕಲಿಕಾಂಶಗಳು

ನಲಿಕಲಿ ಒಂದರಿಂದ ಮೂರನೇ ತರಗತಿಯವರೆಗೆ ಮಕ್ಕಳು ಗಣಿತದಲ್ಲಿ ಏನೆಲ್ಲ ಕಲಿಯುತ್ತಾರೆ ನೋಡಿ.
 *ನಲಿಕಲಿಯಲ್ಲಿ ಅಳವಡಿಸಿರುವ ಗಣಿತದ ಪರಿಕಲ್ಪನೆಗಳು*

*1ನೇ ತರಗತಿ*

1. ಸಂಖ್ಯೆಗಳು 0-19
ಹಂತ-1 1 ರಿಂದ 5 
ಹಂತ-2 6 ರಿಂದ 9
ಹಂತ-3 0 ಯ ಕಲ್ಪನೆ
ಹಂತ-4 ಸ್ಥಾನ ಬೆಲೆ
ಹಂತ-5 11 ರಿಂದ 19

2. ಹೆಚ್ಚು-ಕಡಿಮೆ-ಸಮ

3. ಹಿಂದೆ-ಮುಂದೆ-ಮಧ್ಯೆ

4. ಏರಿಕೆ-ಇಳಿಕೆ

5. ದಶಕ ರಹಿತ ಸಂಕಲನ

6. ದಶಕ ರಹಿತ ವ್ಯವಕಲನ

7. ದಶಕ ರಹಿತ ಮಿಶ್ರಕ್ರಿಯೆ

8. ಅನೌಪಚಾರಿಕ ಅಳತೆಗಳು

9. ಆಕಾರಗಳು

10.ಹಣ

11.ಸಮಯ

12.‘0’ ರಿಂದ 99ರವರೆಗೆ ಎಣಿಕೆ ಬರವಣಿಗೆ

13.ದತ್ತಾಂಶಗಳ ಸಂಗ್ರಹಣೆ.

*2ನೇ ತರಗತಿ*

1. ಸಂಖ್ಯೆಗಳು 0 ಯಿಂದ 99
ಹಂತ-1 20 ರಿಂದ 50
ಹಂತ-2 51 ರಿಂದ 99

2. ಹೆಚ್ಚು - ಕಡಿಮೆ - ಸಮ

3. ಹಿಂದೆ - ಮುಂದೆ - ಮಧ್ಯೆ

4. ಕನಿಷ್ಠ - ಗರಿಷ್ಠ

5. ಸರಿ -ಬೆಸ

6. ಏರಿಕೆ- ಇಳಿಕೆ

7. ಕ್ರಮವಾಚಕಗಳು

8. ಸಂಕಲನ -ದಶಕ ರಹಿತ ಹಾಗೂ 
ದಶಕ ಸಹಿತ

9. ವ್ಯವಕಲನ-ದಶಕ ರಹಿತ ಹಾಗೂ ದಶಕ ಸಹಿತ

10.ಮಿಶ್ರಕ್ರಿಯೆ -ದಶಕ ರಹಿತ ಹಾಗೂ 
ದಶಕ ಸಹಿತ

11.ಗುಣಾಕಾರ

12.ಭಾಗಾಕಾರ

13.ಅನೌಪಚಾರಿಕ ಅಳತೆಗಳು

14.ಆಕಾರಗಳು

15.ಹಣ

16.ಸಮಯ

17.ದತ್ತಾಂಶಗಳ ಸಂಗ್ರಹಣೆ & ವಿಶ್ಲೇಷಣೆ 

*3ನೇ ತರಗತಿ*

1. ಸಂಖ್ಯೆಗಳು 0 ಯಿಂದ 999
ಹಂತ-1 0 ರಿಂದ 500
ಹಂತ-2 501 ರಿಂದ 999

2. ಹೆಚ್ಚು - ಕಡಿಮೆ - ಸಮ

3. ಹಿಂದೆ - ಮುಂದೆ - ಮಧ್ಯೆ

4. ಏರಿಕೆ -ಇಳಿಕೆ

5. ಸಂಕಲನ ದಶಕ ಸಹಿತ ಹಾಗೂ ದಶಕ ಸಹಿತ

6. ವ್ಯವಕಲನ -ದಶಕ ರಹಿತ ಹಾಗೂ ದಶಕ ಸಹಿತ

7. ಮಿಶ್ರಕ್ರಿಯೆ - ದಶಕ ರಹಿತ ಹಾಗೂ ದಶಕ ಸಹಿತ 

8. ಗುಣಾಕಾರ 

9. ಭಾಗಾಕಾರ

10.ಭಿನ್ನರಾಶಿಗಳು

11.ಸರಿ -ಬೆಸ

12.ಔಪಚಾರಿಕ ಅಳತೆಮಾನಗಳು

13.ಹಣ

14.ಸಮಯ

15.ರೇಖಾಕೃತಿಗಳು & ಘನಾಕೃತಿಗಳು

16.ಸುತ್ತಳತೆ & ವಿಸ್ತೀರ್ಣ

17.ದತ್ತಾಂಶಗಳ ಸಂಗ್ರಹಣೆ,ವಿಶ್ಲೇಷಣೆ ಮತ್ತು 
ಸ್ಥಂಭಲೇಖ

18.ಸಮಮಿತಿ ವಿನ್ಯಾಸಗಳು ಮತ್ತು

Tuesday, 15 September 2020

ಕೆ.com. ಕನ್ನಡದ ಎಲ್ಲ ವಿವಿಧ ಉದ್ದೇಶಿತ ಮಾಹಿತಿ ವೆಬ್ ಗಳು ಒಂದೆಡಿ ನಿಮಗಾಗಿ

*ಬಂದಿದೆ ಕನ್ನಡಿಗರ ವೆಬ್‌ಸೈಟ್ ಕನ್ನಡದಲ್ಲಿ*
www.ಕ.com

ನೋಡಿ ಕೋವಿಡ್-19 ಮಾಹಿತಿ ಕನ್ನಡದಲ್ಲಿ
ಕ.com/ಕೋವಿಡ್-19/

ನೋಡಿ ಎಲ್ಲಾ ಕನ್ನಡ ಚಲನಚಿತ್ರಗಳು
ಕ.com/ಚಲನಚಿತ್ರ/

ನೋಡಿ ಕನ್ನಡ ಲೈವ್ ಟಿವಿ ಚಾನಲ್‌ಗಳು
ಕ.com/ಟಿವಿ-ಚ್ಯಾನೆಲ್/

ಓದಿ ಕನ್ನಡ ನ್ಯೂಸ್ ಪೇಪರ್‌ಗಳು
ಕ.com/ಇ-ಪತ್ರಿಕೆ/

ಕೇಳಿ ಕನ್ನಡ ರೇಡಿಯೊ ಚಾನಲ್‌ಗಳು
ಕ.com/ರೇಡಿಯೊ/

ಮತ್ತು ಇನ್ನು ಹಲವಾರು ಸೇವೆಗಳಿಗಾಗಿ
ಕ.com ವೆಬ್‌ಸೈಟ್ ಅನ್ನು ಬ್ರೌಸ್ ಮಾಡಿ

ಈ ಮಾಹಿತಿಯನ್ನು ಫಾರ್ವರ್ಡ್ ಮಾಡಿ, ಎಲ್ಲಾ ಕನ್ನಡಿಗರ ಜೊತೆ ಹಂಚಿಕೊಳ್ಳಿ, ಧನ್ಯವಾದಗಳು.

Friday, 11 September 2020

ಮಕ್ಕಳ ಕೋಪ ಶಮನ ಮಾಡಲು ಸರಳ ಮಾರ್ಗಗಳು

ದಿವ್ಯಾಂಕಣ     

                 
 ಪುಟ್ಟ ಮಕ್ಕಳ  ಹಠ ಕೆಲವೊಮ್ಮೆ ಪೋಷಕರಿಗೆ ಕಿರಿಕಿರಿ ಉಂಟಾಗುತ್ತದೆ. ಈ ಸಂದರ್ಭದಲ್ಲಿ ಅವರಿಗೆ ಅತೀ ಬೇಸರ ಹಾಗೂ ಮನಸ್ಸಿಗೆ ತುಂಬಾ ನೋವು ಉಂಟಾಗುತ್ತದೆ. ಆದಾಗಿಯೂ ಈ ಸಮಸ್ಯೆಯನ್ನು ಯೋಗ್ಯ ರೀತಿಯಲ್ಲಿ ನಿರ್ವಹಿಸುವುದರ ಮೂಲಕ ನೀವು ಓರ್ವ ನುರಿತ ಪೋಷಕರು ಎಂಬುದನ್ನು ಸಾಬೀತು ಪಡಿಸಲೂ ಸಹ ಇಂತಹ ಸನ್ನಿವೇಶವು ಪೂರಕವಾಗಿರುತ್ತದೆ. ಇತ್ತೀಚೆಗೆ ಕೈಗೊಳ್ಳಲಾದ ಸಮೀಕ್ಷೆಯೊಂದರ ವರದಿಯ ಪ್ರಕಾರ, ಮಕ್ಕಳ ಕುರಿತಾದ ಪೋಷಕರ ಈ ಮೇಲಿನ ಸಮಸ್ಯೆಯ  ವಿಚಾರದಲ್ಲಿ ಯಶಸ್ಸಿನ ದರವು ಸಾಕಷ್ಟು ಕಡಿಮೆ ಇದೆ. ವಾಸ್ತವವಾಗಿ, ಅರ್ಧಕ್ಕಿಂತಲೂ ಹೆಚ್ಚಿನ ಸಂಖ್ಯೆಯ ಪೋಷಕರು ಈ ಸಮಸ್ಯೆಯನ್ನು ಎದುರುಗೊಂಡಾಗ ಮಕ್ಕಳತ್ತ ಕಿರುಚುವುದು, ವಿಪರೀತವಾಗಿ ಮಕ್ಕಳಿಗೆ ಬೈಯ್ಯುವುದು, ಮತ್ತು ಮಕ್ಕಳನ್ನು ಹೆದರಿಸುವುದು ಹಾಗೂ ತಮ್ಮ ಬೇಸರವನ್ನು ಹೊರಹಾಕಲು ಬಾಗಿಲುಗಳನ್ನು  ಮುಚ್ಚುವುದು ಇವೇ ಮೊದಲಾದ ಕ್ರಿಯೆಗಳಲ್ಲಿ ತೊಡಗಿದ್ದುದನ್ನು ಒಪ್ಪಿಕೊಳ್ಳುತ್ತಾರೆ.ದೈಹಿಕ ಮತ್ತು ಹಿಂಸಾತ್ಮಕ್ಕ ಕ್ರಿಯೆಗಳೂ ಸಹ ಸಾಮಾನ್ಯ. ಮನೋರೋಗಗಳ ಕುರಿತಾದ ನಿಯತಕಾಲಿಕೆಯೊಂದರಲ್ಲಿ ಪ್ರಕಟಗೊಂಡ ಅಂಕಣವೊಂದು, ಸುಮಾರು ಶೇ. 85% ರಷ್ಟು ಹದಿಹರೆಯದ ಮಕ್ಕಳು ತಮ್ಮ ತಪ್ಪು ವರ್ತನೆಗಾಗಿ ಪೋಷಕರಿಂದ ಶಿಕ್ಷೆಗೆ ಒಳಗಾದ ಅಥವಾ ಹೊಡೆಯಲ್ಪಟ್ಟ ಬಗ್ಗೆ ವಿವರಿಸಲ್ಪಟ್ಟಿದೆ. ಹದಿಹರೆಯದ ಮಕ್ಕಳ ಅತೀ ಸಿಡುಕು, ಕೋಪ, ಮತ್ತು ಚಿಕ್ಕ ಮಕ್ಕಳ ಹಠಮಾರಿತನಗಳನ್ನು ನಿಭಾಯಿಸುವುದರ ಕುರಿತ  ಮಾರ್ಗದರ್ಶಿಯ ಬಗ್ಗೆ ಈ ಕೆಳಗೆ ನೀಡಲಾಗಿದೆ.                         
                    ೧)ಶಾಂತಚಿತ್ತರಾಗಿರುವುದು ಮತ್ತು ಮಕ್ಕಳ ನೈಜ ಸಮಸ್ಯೆಗೆ ಕಿವಿಯಾಗುವುದು. 

ಹೆಚ್ಚಿನ ಪೋಷಕರು ಮಕ್ಕಳ ವರ್ತನೆಯ ಕುರಿತು  ಬೇಗನೇ ತಾಳ್ಮೆಯನ್ನು ಕಳೆದುಕೊಳ್ಳುತ್ತಾರೆ ಆದ್ದರಿಂದ, ಅವರು ಮಕ್ಕಳ ಕುರಿತು ಬಹು ಬೇಗ ಕೋಪಗೊಳ್ಳುತ್ತಾರೆ.   ಕೆಲವೊಮ್ಮೆಯಂತೂ ಮಕ್ಕಳು ದೈಹಿಕ ಹಿಂಸೆಯ ಕುರಿತೂ ಸಹ ಪೋಷಕರನ್ನು ಭಯಗೊಳಿಸುತ್ತಾರೆ. ಆದರೆ, ಈ ಎಲ್ಲಾ ಸಂದರ್ಭಗಳಲ್ಲಿಯೂ ಪೋಷಕರ ಕೋಪಭರಿತ ಪ್ರತಿಕ್ರಿಯೆಯು ಉರಿಯುವ ಬೆಂಕಿಗೆ ತುಪ್ಪ ಸುರಿದoತಾಗುತ್ತದೆ ಮತ್ತು ನೆಮ್ಮದಿ ಎಂಬುದು ಮರೀಚಿಕೆಯಾಗುತ್ತದೆ. ಇದಕ್ಕೆ ಬದಲಾಗಿ, ಪೋಷಕರು ಇಂತಹ ಸನ್ನಿವೇಶಗಳಲ್ಲಿ ಶಾಂತಚಿತ್ತತೆಯನ್ನು ಕಾಪಾಡಿಕೊಳ್ಳುವಂತೆ ತಜ್ಞರು ಶಿಪಾರಸು ಮಾಡುತ್ತಾರೆ. ಏಕೆಂದರೆ, ಮಕ್ಕಳಂತೆಯೇ ಪೋಷಕರೂ ಕೂಡ ಇಂತಹ ಸಂದರ್ಭದಲ್ಲಿ ಕೋಪೋದ್ರಿಕ್ತರಾಗಿ ವರ್ತಿಸತೊಡಗಿದರೆ, ಅದು ಅನವಶ್ಯಕವಾಗಿ ಪರಿಸ್ಥಿತಿಯೂ ದು:ಖಾಂತವಾಗಬಹುದು. ಇಷ್ಟಕ್ಕೂ, ತಾಳ್ಮೆ ಹಾಗೂ ಸಮಾಧಾನದಿಂದ ಕೂಡಿದ ಪೋಷಕರ ವರ್ತನೆಯು ಮಕ್ಕಳ ಪಾಲಿಗೆ "ಬಿರುಗಾಳಿಯ ನಡುವೆ ಸಿಕ್ಕ ಸ್ವರ್ಗ" ದಂತೆ ಅಪ್ಯಾಯಮಾನವಾಗಬಹುದು. ಬಹುತೇಕ ತಜ್ಞರ ಅಭಿಮತದ ಪ್ರಕಾರ ಮಕ್ಕಳ ಅಂತಹ ವರ್ತನೆಯನ್ನು ಸಂಪೂರ್ಣವಾಗಿ ಹೊರಹರಿಯಲು ಅವಕಾಶ ಕಲ್ಪಿಸಿಕೊಡಬೇಕು. ಹೀಗೆ ಮಾಡುವುದರಿಂದ ಮಗುವಿನ ನೈಜ ಸಮಸ್ಯೆಯನ್ನು ಅರಿತಂತಾಗುತ್ತದೆ ಹಾಗೂ ತನ್ಮೂಲಕ ಮಗುವೂ ಸಹ ನಿರ್ಲಕ್ಷ್ಯಕ್ಕೆ ಒಳಗಾದ ಅಥವಾ ಮನಸ್ಸಿಗೆ ಅಘಾತವಾದ ಭಾವನೆಗೆ ಈಡಾಗುವುದಿಲ್ಲ.        

  ೨.ಯಾವುದೇ ಕಾರಣಕ್ಕೂ ಸಹ ಮಕ್ಕಳ ಮೇಲೆ ದೈಹಿಕ ಹಲ್ಲೆಯನ್ನು ಮಾಡಬೇಡಿ.                    ಮಗುವಿಗೆ ಕೋಪಬಂದಾಗ ಮಗುವು ಪೀಠೋಪಕರಣವನ್ನೋ ಅಥವಾ ಕೆಲವೊಮ್ಮೆ ತನ್ನ ಸಹೋದರನ್ನೋ ಅಥವಾ ಇನ್ನೂ ಕೆಲವೊಮ್ಮೆ ತನ್ನ ಹೆತ್ತವರನ್ನೇ ಹೊಡೆಯಲು ಮುಂದಾದಾಗ, ಆ ಮಗುವಿನ ವರ್ತನೆಯೂ ಸಹಿಸಲು ಅಸಾಧ್ಯ ಅನಿಸುತ್ತದೆ   ಇಂತಹ ಸನ್ನಿವೇಶದಲ್ಲಿ ಹೆತ್ತವರು, ದೈಹಿಕವಾಗಿ ಶಿಕ್ಷಿಸಿದರೇ  ಮಗುವಿನೊಂದಿಗೆ ವ್ಯವಹರಿಸುವುದು ಅವರಿಗೆ ಕಷ್ಟವಾಗುತ್ತದೆ. ಮಗುವಿನ ಮನಸ್ಸಿನಲ್ಲಿ ಅದಾಗಲೇ ದ್ವೇಷವು ಮನೆಮಾಡಿರುತ್ತದೆ ಹಾಗೂ ಅದರ ಪರಿಣಾಮವಾಗಿ ಮಗುವನ್ನು ಶಾಂತ ಮನಸ್ಥಿತಿಗೆ ತರುವುದು ಮತ್ತಷ್ಟೂ ಜಟಿಲವಾಗುತ್ತದೆ. ಪೋಷಕರ ವತಿಯಿಂದ ದೈಹಿಕ ಪ್ರತಿಕ್ರಿಯೆಯು ಮಕ್ಕಳ ವರ್ತನೆಯನ್ನು ಮತ್ತಷ್ಟು ಉತ್ತೇಜಿಸುತ್ತದೆ ಮತ್ತು ಇದು ನಿಜಕ್ಕೂ ಹೆತ್ತವರಿಗೆ ಅನಪೇಕ್ಷಣೀಯವಾಗಿರುತ್ತದೆ. ಹೆತ್ತವರ ಕಡೆಯಿಂದ ಇಂತಹ ವರ್ತನೆಯು ಖಂಡಿತವಾಗಿಯೂ ಒಳ್ಳೆಯದಲ್ಲ ಯಾಕೆಂದರೆ, ಇದು ಪರಿಸ್ಥಿಯನ್ನು ತಿಳಿಗೊಳಿಸುವುದರ ಬದಲಾಗಿ ತೊಂದರೆಯನ್ನು ಉಂಟುಮಾಡುತ್ತದೆ.  
           3.ಸಿಟ್ಟಿನ ಸಂದರ್ಭದಲ್ಲಿ ಸರಿಯಾದ ವರ್ತನೆಯ ಕುರಿತು ತಿಳಿಹೇಳುವುದು:                    
 ಒಮ್ಮೆ ಪರಿಸ್ಥಿತಿ ತಿಳಿಯಾದ ನಂತರ  ಈ ಹಿಂದೆ ಸಂಭವಿಸಿದ ಕಹಿ ಸನ್ನಿವೇಶದ ಕುರಿತು ಮಕ್ಕಳಲ್ಲಿ ಪ್ರಸ್ತಾಪಿಸುವುದು ಅತೀ ಅಗತ್ಯ. ಇದು ಯಾವ ರೀತಿಯಾಗಿರಬೇಕೆಂದರೆ ಆ ಮಗುವಿಗೆ ತನ್ನ ತಂದೆ ತಾಯಿಯು ಪರಿಸ್ಥಿಯನ್ನು ಅರ್ಥಮಾಡಿಕೊಂಡಿದ್ದಾರೆ ಎಂಬುದು ಅರಿವಾಗುವoತಿರಬೇಕು. ಕೋಪವನ್ನುoಟು ಮಾಡುವ ಸಂದರ್ಭದಲ್ಲಿ  ಸರಿಯಾದ ರೀತಿಯಲ್ಲಿ ವರ್ತಿಸಲು ಇರುವ ಇತರ ಅನೇಕ ಮಾರ್ಗೋಪಾಯಗಳ ಬಗ್ಗೆ ಮಕ್ಕಳಿಗೆ ಅರಿವಾಗುವಂತೆ ತಿಳಿ ಹೇಳುವುದು ಒಂದು ಅತ್ಯುತ್ತಮ ಆರಂಭ. ಮೊದಲು, ನಿಜವಾಗಿಯಾದರೂ ನಡೆದದ್ದೇನು ಎಂಬುದರ ಬಗ್ಗೆ ಮಕ್ಕಳಿಂದ ವಿವರಣೆಯನ್ನು ಪಡೆಯಬೇಕು. ಆದರೆ, ಹೆಚ್ಚಿನ ಹೆತ್ತವರು ಇದರ ಗೋಜಿಗೇ ಹೋಗುವುದಿಲ್ಲ. ಕಾರಣ, ಅವರು ಅವರದ್ದೇ ಅದ ನಿರಾಶೆ, ಹತಾಶೆಗಳಿಂದ ಬಳಲುತ್ತಿರುತ್ತಾರೆ ಮತ್ತು ಸ್ವಭಾವತಃ ಕೋಪಿಷ್ಟರಾಗಿರುತ್ತಾರೆ. ಇದಾದ ನಂತರ, ಕೋಪದ ಸನ್ನಿವೇಶಗಳಲ್ಲಿ ಹೇಗೆ ಬೇರೆ ಬೇರೆ ಉತ್ತಮ ಮಾರ್ಗೊಪಾಯಗಳಿಂದ ಪರಿಸ್ಥಿತಿಯನ್ನು ನಿಭಾಯಿಸಬಹುದು ಎಂಬುದನ್ನು ಮಕ್ಕಳಿಂದಲೇ ಕೇಳಿ ಉತ್ತರ ಪಡೆಯಿರಿ. ಚಿಕ್ಕ ಮಕ್ಕಳಿಗಂತೂ ಇವೆಲ್ಲವನ್ನೂ ಸ್ವತಃ ಹೆತ್ತವರೇ ಸರಳವಾಗಿ ಅವರಿಗೆ ಮನದಟ್ಟಾಗುವಂತೆ ತಿಳಿಸಿಹೇಳಬೇಕಾಗುತ್ತದೆ.     ಕೋಪದ ಮತ್ತು ಬೇಸರದ ಸಂದರ್ಭಗಳಲ್ಲಿ ವ್ಯವಹರಿಸಬೇಕಾದ ಸ್ವೀಕಾರಾರ್ಹ ಮಾರ್ಗಗಳ ಕುರಿತು ಮಕ್ಕಳೊಂದಿಗೆ ಚರ್ಚಿಸಿರಿ.              

   4.ಕೋಪವನ್ನು ಕಡಿಮೆ ಮಾಡಲು ದೈಹಿಕ ಚಟುವಟಿಕೆಗಳು:   ಕೋಪವನ್ನು ಹಾನಿಕಾರಕವಲ್ಲದ ರೀತಿಯಲ್ಲಿ ಹೊರಹಾಕಬಹುದು.ಇದಕ್ಕೆ ಸಂಬಂಧಿಸಿದಂತೆ ಒಂದು ಸರಳವಾದ ಆಟವು ಈ ರೀತಿ ಇದೆ. ಇದಕ್ಕೆ ಬೇಕಾಗಿರುವುದು ಬಯಲಲ್ಲಿ ಒಂದು ಗೋಡೆ ಮತ್ತು ಕೆಲವು ಒದ್ದೆ ಬಟ್ಟೆಗಳು. ಮಕ್ಕಳು, ಅವರಿಗೆ ಬೇಸರವನ್ನುಂಟು ಮಾಡುವ ಅಥವಾ ಅವರನ್ನು ಕೆರಳಿಸುವ ಸನ್ನಿವೇಶಗಳು ಮತ್ತು ಜನರ ಕುರಿತಾಗಿ ಈ ಗೋಡೆಯ ಮೇಲೆ ಅವರು ಬರೆಯಬೇಕು. ನಂತರ ಅವರು ಒದ್ದೆ ಬಟ್ಟೆಗಳನ್ನು ತಮ್ಮ ಬರವಣಿಗೆಗಳ ಮೇಲೆ ಎಸೆಯಲು ಅವಕಾಶ ಒದಗಿಸಬೇಕು. ಇದೊಂದು ಹಾನಿಕಾರಕವಲ್ಲದ ಕ್ರಿಯೆಯಾಗಿದ್ದು, ಕೋಪವನ್ನು ಮನಸ್ಸಿನಿಂದ ಹೊರಹಾಕಲು ಒಂದು ಸರಳ ಮಾರ್ಗೋಪಾಯ. ಇಂತಹ ಒಂದು ಕ್ರೀಡೆಯನ್ನು ಮಕ್ಕಳಿಗೆ ತಿಳಿಸುವುದರ ಮೂಲಕ ಪೋಷಕರು ಮಕ್ಕಳಿಗೆ ಕೋಪದೊಂದಿಗೆ ವ್ಯವಹರಿಸುವ ಪರಿಣಾಮಕಾರಿ ಮಾರ್ಗಗಳ ಇರುವಿಕೆಯ ಬಗ್ಗೆ ತಿಳಿಸಿದಂತಾಗುವುದು. 
5.ಕೋಪದೊಂದಿಗೆ ನೀವು ಹೇಗೆ ವ್ಯವಹರಿಸುತ್ತೀರಿ ಎಂಬುದನ್ನು ಸ್ವತಃ ನೀವೇ ಅವರಿಗೆ ತೋರಿಸಿಕೊಡಿ: ಮಕ್ಕಳು ಇತರರ ವರ್ತನೆಯನ್ನು ಅನುಸರಿಸುವುದರಲ್ಲಿ ಬಹಳ ನಿಸ್ಸೀಮರು. ಈ ಕಾರಣಕ್ಕಾಗಿಯೇ, ಪೋಷಕರು ತಾವು ಕೋಪದೊಂದಿಗೆ ಸ್ವತಹ ಹೇಗೆ ವರ್ತಿಸುತ್ತಾರೆ ಎಂಬುದನ್ನು ತೋರಿಸಿಕೊಡಬೇಕಾಗುತ್ತದೆ. ನಿಮಗಿರುವ ಬೇಸರ ಮತ್ತು ನಿಮಗೆ ಕೋಪ ತರಿಸುವ ಸನ್ನಿವೇಶಗಳ ಬಗ್ಗೆ ಮಾತನಾಡಿರಿ ಹಾಗೂ ಅಂತಹ ಸಂದರ್ಭಗಳಲ್ಲಿ ನೀವು ಹೇಗೆ ವರ್ತಿಸುವಿರಿ ಎಂಬುದನ್ನು ತೋರಿಸಿ ಕೊಡಿ. ಹಾ ನೆನಪಿರಲಿ, ಈ ಸಂದರ್ಭದಲ್ಲಿ ನೀವು ತಾಳ್ಮೆ ಕಳೆದುಕೊಳ್ಳಬಾರದು ಅಥವಾ ಕುರ್ಚಿ ಮೇಜುಗಳನ್ನು ಎತ್ತಿ ಎಸೆಯಬಾರದು. ಹಾಗೆಯೇ ನೀವು ತಿಳಿಹೇಳಿದ್ದು ಸಮoಜಸವಾದುದಾಗಿದ್ದರೆ ಅದನ್ನು ಅನುಮೋದಿಸಲು ನಿಮ್ಮ ಮಗುವನ್ನು ಪ್ರೋತ್ಸಾಹಿಸಿರಿ. ಅಂತೆಯೇ, ನಿಮಗೂ ಕೂಡ ಸ್ವಲ್ಪ ಮಾನಸಿಕ ನೆಮ್ಮದಿಯ ಅವಶ್ಯಕತೆಯಿದೆ ಎಂಬುದನ್ನು ಅವರಿಗೆ ತೋರಿಸಲು ಹೆದರಬೇಡಿ. ಕೆಲವು ಹೆತ್ತವರು ಕಾರಿನಂತಹ ತಮ್ಮ ಖಾಸಗಿ ವಾಹನದಲ್ಲಿ ತಮ್ಮ ಸಿಟ್ಟೆಲ್ಲವನ್ನೂ ಹೊರಹಾಕಿದರೆ, ಮತ್ತೆ ಕೆಲವರು ತಲೆದಿಂಬಿಗೆ ಬಾರಿಸುತ್ತಲೋ ತಮ್ಮ ಕೋಪವನ್ನು ಹೊರಗೆಡವುತ್ತಾರೆ, ಅದೂ ಕೂಡ ಖಾಸಗಿಯಾಗಿ. ನಿಜಕ್ಕೂ ಅತ್ಯಂತ ಕಠಿಣತಮ ಸವಾಲು ಯಾವುದೆಂದರೆ ಪೋಷಕರು ತಮ್ಮ ತಾಳ್ಮೆಯ ಕಟ್ಟೆಯೊಡೆದು, ಮಕ್ಕಳ ಮೇಲೆ ಸಿಕ್ಕಾಪಟ್ಟೆ ಸಿಟ್ಟಿಗೇಳುವ ಸಂದರ್ಭ. ಇದು ನಿಜಕ್ಕೂ ಹೆತ್ತವರ ಪಾಲಿಗೆ ಅಗ್ನಿಪರೀಕ್ಷೆ. ಆದರೆ, ಈ ಮೇಲೆ ಸೂಚಿಸಿದ ಪಂಚ ಸೂತ್ರಗಳನ್ನು ಅನುಸರಿಸುವುದರ ಮೂಲಕ ಪೋಷಕರು ಸ್ವತಹ ತಮ್ಮ ಕೋಪವನ್ನು ಹಾಗೂ ತಮ್ಮ ಮಕ್ಕಳ ಕೋಪವನ್ನೂ ಸಹ ಪರಿಣಾಮಕಾರಿಯಾಗಿ ನಿಭಾಯಿಸಬಲ್ಲರು.

ಡಾ.ದಿವ್ಯಾ ವಿನಯ್

Monday, 7 September 2020

ವೈದ್ಯಲೋಕದ ಬೆರಗು ಬವಣೆಗಳ ಆರ್ಥನಾದಲಯದ ಆತ್ಮ ಚರಿತ್ರೆ ಉಸಿರೇ ಗಾಳಿಯಾದಾಗ

ವೈದ್ಯಲೋಕದ ಬೆರಗು ಬವಣೆಗಳ ಆರ್ಥನಾದಲಯದ  ಆತ್ಮಚರಿತ್ರೆ 'ಉಸಿರೇ ಗಾಳಿಯಾದಾಗ".

ಟಿ ಎಸ್ ಎಲಿಯಟ್ ರವರ ಅಮರತ್ವದ ಪಿಸುಮಾತು ಸ್ಮರಿಸುತ್ತಲೇ  ತನಗೆ ಶ್ವಾಸಕೋಶದಲ್ಲಿ ಸಣ್ಣ ಸಣ್ಣ ಕ್ಯಾನ್ಸರ್ ಗಡ್ಡೆಗಳು ತುಂಬಿಕೊಂಡಿರುವುದು ಸಿಟಿ ಸ್ಕ್ಯಾನ್ ಪ್ರತಿಬಿಂಬದಿಂದ ದೃಢಪಟ್ಟಿರುವ ವಿಚಾರದ ಬಗ್ಗೆ ನೇರವಾಗಿ ವರ್ತಮಾನದಲ್ಲಿ ವಿವರಿಸುತ್ತಲೇ ತನ್ನ  ಆತ್ಮಚರಿತ್ರೆ ಆರಂಭಿಸಿರುವ ಭಾರತೀಯ ಮೂಲದ ಅಮೇರಿಕದ  ನರರೋಗ ತಙ್ಞ ಡಾಕ್ಟರ್ ಪೌಲ್ ಕಲಾನಿಧಿ ಅವರ "when breath becomes air" ಕೃತಿಯ ಪ್ರತಿ ಪುಟದ ಸಾಲಿನಲ್ಲೂ  ಬದುಕು ಮತ್ತು ಸಾವು ಎಂಬ ವಾಸ್ತವದ ಎದುರೇ ತನ್ನ  ಜೀವನದ ಕುರಿತು ಮಹತ್ವಾಕಾಂಕ್ಷೆಗಳೊಂದಿಗೆ ವೈದ್ಯಕೀಯ  ಹುಡುಕಾಟವಿದೆ, ಪ್ರಶ್ನೆಗಳಿವೆ, ಹತಾಶೆಗ

ಳಿವೆ .ಬದುಕಿನ ಬಗ್ಗೆ ಹಲವು ಮಹಾತ್ವಕಾಂಕ್ಷೆ ಹೊತ್ತ ನನಗೆ ಇಷ್ಟು ಬೇಗ ಸಾವೇಕೆ ಎನ್ನುವ ಆರ್ಥನಾದವಿದೆ. ಸಾವಿನ ಬಳಿ ಹೋಗುವ ವಯಸ್ಸಲ್ಲದ ವಯಸ್ಸಲ್ಲಿ  ಒಬ್ಬ ವೈದ್ಯನಾಗಿ ರೋಗಿಯಾಗಿ ಮಲಗಿ ಸಾವು ಸನಿಹದಲ್ಲೇ ಇರುವುದು ಖಾತ್ರಿಯಾದಾಗ ಹೆಂಡತಿ ,ಮಕ್ಕಳು , ತನ್ನ ಬದುಕಿನ ಮಹತ್ವಾಕಾಂಕ್ಷಿಗಳು ಕಣ್ಣ ಸುತ್ತ ಸುಳಿದಾಡಿದ ಹಲವು ಸಂಗತಿಗಳನ್ನು ಇಲ್ಲಿ  ಮುಚ್ಚುಮರೆಯಿಲ್ಲದೆ ಸಹಜ ಸರಳ ನಿರೂಪಣೆ ಶೈಲಿಯಲ್ಲಿಯೆ ಹಂಚಿಕೊಂಡಿದ್ದಾರೆ.

ವೈದ್ಯನಾಗಿ ಸಾಕಷ್ಟು ಸಾವುಗಳನ್ನು ಕಣ್ಣಾರೆ ಕಂಡಿದ್ದು, ಹಲವರನ್ನು ಸಾವಿನಿಂದ ಬದುಕಿಸಿದ್ದ ಪೌಲ್ ತಾನೇ ಸಾವಿನ ಮನೆಗೆ ಶರಣಾಗಿ ಮಲಗಿರುವಾಗಿನ  ಬರಹಗಳ ಪದ ಮಾಲೆಯಾಗಿ ಸಮರ್ಪಿಸಿರುವ ಈ ಕೃತಿಯ ಪ್ರತಿ ಪುಟದಲ್ಲೂ ಆರ್ಥನಾದಲಯ ಓದುಗನ ಭಾವಕೋಶ ತಟ್ಟಿ  ಎದೆ ನಡುಗಿಸುತ್ತದೆ, ಗಂಟಲು ಒಣಗಿಸುತ್ತದೆ, ಕಲ್ಲು ಹೃದಯದ ವನ ಕಣ್ಣನ್ನು ಸಹ ಒದ್ದೆಯಾಗಿಸುತ್ತದೆ. ಜೊತೆಗೆ ವೈದ್ಯಕೀಯ ಲೋಕದ  ಹಲವು ಮಜಲುಗಳ ಅರಿವನ್ನು, ಶಸ್ತ್ರಚಿಕಿತ್ಸೆಗಳ ಜ್ಞಾನವನ್ನು ಸಹ ನೀಡುವ ಈ ಕೃತಿ ವೈದ್ಯಲೋಕಕ್ಕೆ ಪ್ರವೇಶಿಸುವ ವಿದ್ಯಾರ್ಥಿಗಳಿಗೆ ಮಾರ್ಗದರ್ಶಿ ಕೃತಿಯಾಗಿಯೂ ನಿಲ್ಲಬಲ್ಲದು. ವೈದ್ಯರಿಗೆ ಇರಬೇಕಾದ ಸೇವಾ ಸಮರ್ಪಣಾ ಮನೋಭಾವ, ದೈಹಿಕ ಮಾನಸಿಕ ಸೂಕ್ಷ್ಮತೆ, ಮಾನವೀಯತೆಯ ಹಲವು ಸಂಗತಿಗಳನ್ನು ತನ್ನದೇ ಬದುಕಿನ ಘಟನಾವಳಿಗಳ ಮೂಲಕ ತಿಳಿಸಿದ್ದಾರೆ.

ಪ್ರತಿ ಪುಟದತ್ತ ನೆಟ್ಟ ದೃಷ್ಟಿ  ನೆಟ್ಟಂತೆಯೆ  ಇರುವಂತೆ ಮಾಡಿ, ಮೆದುಳು ಭಾವಕೋಶಕ್ಕೆ ಪ್ರತಿ ಸಾಲು ಸಾಲು ಸನ್ನಿವೇಶವನ್ನೂ ಚಿತ್ರಿಸಿ ರವಾನಿಸಿ ಅವರ ಯಾತನೆ, ಅನುಭವ ಚಿತ್ರಣವನ್ನು  ಕಣ್ಣಮುಂದೆಯೇ ನೋಡುತ್ತಿರುವಷ್ಟರಮಟ್ಟಿಗೆ  ನನ್ನನ್ನು  ಎಳೆದುಕೊಂಡು  ಹೋಗಿ  ನನ್ನೊಳಗೆ ಓದುವ ಭಾವತೀವ್ರತೆ ಹೆಚ್ಚಿಸಿ ಉಸಿರು ಬಿಗಿಯಾಗಿಸಿ ಕೆಲವೇ ಪುಟ ಓದುತ್ತಲೇ  ಅವರನ್ನೇ ಆವಾಹಿಸಿಕೊಂಡಂತೆ ಭಾಸವಾಗಿ ವಾಸ್ತವಕ್ಕೆ ಎಚ್ಚೆತ್ತಾಗ  ಮನನೊಂದು ಓದುವುದನ್ನೇ ನಿಲ್ಲಿಸಿಬಿಟ್ಟಿದ್ದೆ. ಆದರಿಂದ ಹೊರಬರಲು ಬಹಳ ಕಷ್ಟಪಡಬೇಕಾಯಿತು.
ಆದರೂ ಪುಸ್ತಕವನ್ನು ಓದಿ ಮುಗಿಸಲೇಬೇಕೆಂಬ ಹಠದಿಂದ ಧೈರ್ಯ ಮಾಡಿ ಎರಡು ದಿನ ಬಿಟ್ಟು ಮತ್ತೆ ಓದಿ ಪೂರ್ಣಗೊಳಿಸಬೇಕಾಯಿತು.

ಸಾವು ಸನಿಹ ಬಂದಮೇಲೆಯೂ ಸಾಹಿತ್ಯದ ವಿದ್ಯಾರ್ಥಿಯಾದ ತಾನು ಏನೂ ಬರೆಯಲಾಗಲಿಲ್ಲವಾಲ್ಲ ಎಂದು ಕೊರಗುತ್ತ ತಾನು ಒಂದು ಪುಸ್ತಕ ಬರೆಯಬೇಕೆಂದು  ಡಾ.ಪೌಲ್ ಅಂತಿಮವಾಗಿ ತನ್ನದೇ ದುರಂತ ಕಥೆಯನ್ನು  ಬರೆಯುತ್ತಾ ಸಾಗಿದ್ದಾರೆ. ಇದನ್ನು ಒಂದು ಆತ್ಮಚರಿತ್ರೆ ಎಂದು ಸಾಮಾನ್ಯವಾಗಿ ಗ್ರಹಿಸಿದರೆ ಸಾಲದು. ಅವರ ಉದ್ದೇಶ ತನ್ನ ಆತ್ಮಚರಿತ್ರೆ  ಎನ್ನುವ ಸಾಮಾನ್ಯ ದೃಷ್ಟಿಕೋನದಿಂದ ಬರೆಯುವುದು ಆಗಿದ್ದರೆ  ಅವರು ಆರಂಭದಲ್ಲಿಯೇ ತನಗೆ ಕ್ಯಾನ್ಸರ್ ಇರುವ ವಿಷಯದೊಂದಿಗೆ ಬರಹ ಆರಂಭಿಸುತ್ತಿರಲಿಲ್ಲ. ತನ್ನ ಬದುಕಿನ ಸಿಹಿ ಸಂಗತಿಗಳನ್ನು ಹೆಚ್ಚಾಗಿ ಹಂಚಿಕೊಳ್ಳುತ್ತಾ ನೋವನ್ನು ಮರೆಯುತ್ತಾ ಬರೆಯಬಹುದಿತ್ತು. ಆದರೆ ಅವರಲ್ಲಿ ತನ್ನ ನೋವಿನ ಸಂಗತಿಗಳನ್ನೇ ಕೆದಕಿ ಕೆದಕಿ ಬರೆದಿದ್ದಾರೆ.ಓದುಗರ ಭಾವಕೋಶ ತಲುಪಿ ಹಿಡಿದಿಟ್ಟುಕೊಂಡು ಪ್ರತಿ ಪುಟವನ್ನು ಓದುವಂತೆ ಮಾಡುವ ಅವರ ಬರವಣಿಗೆಯ ತಂತ್ರ ಮತ್ತು ನಿರೂಪಣೆಯ ದೃಷ್ಟಿಯಿಂದ  ಸಾಹಿತ್ಯಕವಾಗಿ ಸಹ ವಿಶಿಷ್ಟ ಕ್ರಮ ಅನುಸರಿಸಿದ್ದಾರೆ.

ಮಾನವನ ದೇಹ ರಚನೆ,ನರರೋಗ , ವೈದ್ಯಕೀಯ ಲೋಕದ ತವಕ ತಲ್ಲಣಗಳು, ವೈದ್ಯಕೀಯ ಪರೀಕ್ಷೆಯ ಸವಾಲುಗಳು, ವೈದ್ಯರ ವೈಯಕ್ತಿಕ ಬದುಕು ಬವಣೆಗಳು , ವೈದ್ಯಕೀಯ ಲೋಕದ ಪ್ರಯೋಗಗಳ ಅಚ್ಚರಿಗಳು ಹೀಗೆ ಹಲವಾರು ವೈಚಾರಿಕ ಸಂಗತಿಗಳನ್ನು, ತನ್ನ ಬದುಕಿನ ಪುಟಗಳು ಸಹ ಆಗಿದ್ದ ವಿಚಾರಗಳೊಂದಿಗೆ ತಿಳಿಸುತ್ತಾ ಸಾಗುವ ಈ ಕೃತಿಯ ನಿರೂಪಣೆಯನ್ನು ಒಂದು ವಿಶಿಷ್ಟ ರೋಚಕ ಕಾದಂಬರಿಯಲ್ಲಿ ಬಂದು ಹೋಗುವ ತಿರುವುಗಳಷ್ಟೇ ವಿಶಿಷ್ಟ ಶೈಲಿಯಲ್ಲಿ ಹೆಣೆದಿದ್ದಾರೆ.

ಹಲವಾರು ಮಹಾನ್ ನಾಯಕರ ಆತ್ಮಚರಿತ್ರೆಗಳನ್ನು ಓದಿದ ನಮಗೆ ಕೊಡುವ ಅನುಭವಕ್ಕೂ ಒಬ್ಬ ವೈದ್ಯ  ಚಿಕ್ಕ ವಯಸ್ಸಿನಲ್ಲಿಯೆ ತನ್ನದೇ ದುರಂತ ದಿನಗಳನ್ನು ಆಸ್ಪತ್ರೆಯಲ್ಲಿ ಕಳೆಯುತ್ತ
ಬದುಕಿನ ಹಲವು ಮಜಲುಗಳನ್ನು, ಆತ್ಮ- ಆಧ್ಯಾತ್ಮವನ್ನು, ದೇಹರಚನೆ ,ಜೀವ - ಜೀವನ ಕ್ರಮ , ಉಸಿರಿನ ಕುರಿತು ತನ್ನದೆ ವೈಚಾರಿಕ ವೈದ್ಯಕೀಯ ಅನುಭವದ ನೆಲೆಯಲ್ಲಿ ವಿವರಿಸುತ್ತಾ ತನ್ನ ಘಟನೆಗಳೊಂದಿಗೆ ಓದುಗರಿಗೆ ಮುಖಾಮುಖಿಯಾಗಿ ನಿಂತು ವೈದ್ಯಕೀಯ ಅರಿವಿನ ಜೊತೆಗೆ ಭಾವಕೋಶಕ್ಕೆ ಈ ಕೃತಿ ಮೂಲಕ ಲಗ್ಗೆ ಹಾಕುವಲ್ಲಿ ಯಶಸ್ವಿಯಾಗುವುದು ಈ ಕೃತಿಯ ಹೆಚ್ಚುಗಾರಿಕೆ.

ಈವರೆಗಿನ ಹೆಸರಾಂತ ಆತ್ಮಚರಿತ್ರೆಗಳು  ಸಾಮಾಜಿಕ, ರಾಜಕೀಯ ಮಾದರಿ ಜೀವನ ವಿಧಾನ , ಹೋರಾಟದ ಘಟನಾವಳಿಗಳನ್ನು  ಸ್ವತಃ ಅವರೇ ವಿವರಿಸುವ ಕ್ರಮಗಳಾಗಿ ಕಂಡರೆ  ಈ ಕೃತಿ ಸಾವಿನ ಅಂಚಿನಲ್ಲಿರುವ ವ್ಯಕ್ತಿಯೊಬ್ಬನ ಅರ್ಥ ಧ್ವನಿಯಾಗಿಯೂ, ವೈದ್ಯಕೀಯ ಲೋಕದ ಹಲವು ಮಜಲುಗಳ ಪರಿಚಯ ಕೃತಿಯಾಗಿಯೂ ಗ್ರಹಿಸಬಹುದಲ್ಲದೆ ಇಲ್ಲಿ ದಂಪತಿಗಳಿಬ್ಬರು ಸಹ ಕೃತಿಕಾರರಾಗಿರುವುದು ವಿಶಿಷ್ಟ. ಪೌಲ್ ಅವರು ಸಾಕಷ್ಟು ಬರೆದು ನಿಲ್ಲಿಸಿದ್ದ ಅವರದೇ ಬದುಕಿನ ಅಂತಿಮ ದಿನಗಳ ಘಟನಾವಳಿಗಳನ್ನು ಅವರ ಮರಣದ ನಂತರ  ವಿಚ್ಛೇದನ ಬಯಸಿದ್ದ ಅವರ ಹೆಂಡತಿ ಡಾ.ಲೂಸೀ ಸಾವಿನ ಅಂಚಿನಲ್ಲಿರುವ ಗಂಡನನ್ನು  ಮಗನ ಕಾರಣದಿಂದಾಗಿ ಮತ್ತೆ ಜೊತೆಯಾಗಿ ಪ್ರೀತಿಯಿಂದ ನೋಡಿಕೊಳ್ಳುತ್ತಾ ಮರಣಾನಂತರ ಆಕೃತಿಯನ್ನು ಪೂರ್ಣಗೊಳಿಸಿ  ನಮ್ಮ ಕೈಗೆ when breath becomes air  ಎಂಬ ವಿಶಿಷ್ಟ ಕೃತಿಯನ್ನು ಇಟ್ಟು ಸಾಹಿತ್ಯಲೋಕದಲ್ಲಿ ಹೊಸ ಸಂಚಲನ ಹುಟ್ಟುಹಾಕಿದ್ದಾರೆ. ಜಗತ್ತಿನ ಹಲವಾರು ಭಾಷೆಗಳಿಗೆ ಅನುವಾದವಾದ ಈ ಕೃತಿ ಕನ್ನಡದಲ್ಲಿ ನಮಗೆ ಓದಲು  ಹಗಲಿರುಳು ಶ್ರಮಿಸಿದ ಡಾ.ಡಿ.ಸಿ ನಂಜುಂಡ ಅವರು "ಉಸಿರೇ ಗಾಳಿಯಾದಾಗ " ಎನ್ನುವ ಶೀರ್ಷಿಕೆ ಯೊಂದಿಗೆ ಸಶಕ್ತವಾಗಿ ಅನುವಾದಿಸಿದ್ದಾರೆ.ಇಂತಹ ವಿಶಿಷ್ಟ ವೈದ್ಯಕೀಯ ವ್ಯಕ್ತಿ ಚರಿತ್ರೆಯನ್ನು ನಾನು ಈವರೆಗೆ  ಓದಿರಲಿಲ್ಲ. ಕನ್ನಡದಲ್ಲಿ ಇದೇ ಮೊದಲ ಕೃತಿ ಇರಬಹುದು ಅನಿಸುತ್ತದೆ.

ವೈದ್ಯಕೀಯ ಕ್ಷೇತ್ರದಲ್ಲಿ , ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಮಹತ್ವವನ್ನು ಸಾಧಿಸುವ ಮಹತ್ವಾಕಾಂಕ್ಷೆ ಹೊತ್ತಿದ್ದ ಪೌಲ್ ಇಷ್ಟು ಬೇಗ ಸಾವಿನ ಅಂಚಿನಲ್ಲಿ ದಿನಗಣನೆ ಎಣಿಸುತ್ತಿರುವುದರ ಬಗ್ಗೆ ತಿಳಿದ ವಿಚ್ಛೇದನ ಬಯಸಿದ್ದ ಡಾ.ಲೂಸೀಗೆ  ಇಂತಹ ಸಂದಿಗ್ಧ ಕಾಲದಲ್ಲಿ ಅವನ ಜೊತೆಗೆ ಇರಬೇಕೆಂದು ಬಯಸಿ ಬಂದಮೇಲೆ ಮಕ್ಕಳನ್ನು ಪಡೆಯುವ ಆಸೆಪಟ್ಟ ಪೌಲ್   ತಂದೆಯಾಗಿ ತನ್ನ ಸಂಗತಿಗಳನ್ನು ಆಸೆಗಳನ್ನು ಜವಾಬ್ದಾರಿಗಳನ್ನು ವಿವರಿಸುವಾಗ ಕಣ್ಣೀರು ತರಿಸುತ್ತದೆ. ಸಾವಿನ ಅಂಚಿಗೆ ತಲುಪಿರುವ ವ್ಯಕ್ತಿಯ ಹತಾಶೆಯ ಸಂಗತಿಗಳನ್ನು ಓದುತ್ತಲೇ ಎದೆ ಭಾರವಾಗುತ್ತದೆ. ಮಗು ಹುಟ್ಟುವ ಮುನ್ನವೇ ಸಂಭ್ರಮಿಸಿದ ಪೌಲ್ ತನಗೆ ಮಗಳೇ ಹುಟ್ಟುವುದೇ ಎಂದು ಖಾತ್ರಿಮಾಡಿಕೊಂಡು ಎಲಿಜಬೆತ್ ಕ್ಯಾಂಡಿ ಎಂದು ನಾಮಕರಣವನ್ನೂ ಒಂದು ತಿಂಗಳು ಮೊದಲೇ ಮಾಡಿಬಿಡುತ್ತಾನೆ.  ಮಗಳು ಹುಟ್ಟುವುದು ಖಾತ್ರಿ ಆದ ಮೇಲೆ ಜೀವನದ ಪ್ರತಿ ಕ್ಷಣವನ್ನು ಸಂಭ್ರಮಿಸಲು ಆರಂಭಿಸುತ್ತಾನೆ. ಮಗಳು ಜನಿಸುವ ದಿನ ಹೆಂಡತಿಯ ಜೊತೆಗೆ ಇದ್ದು ಪ್ರತಿ ಸಂಗತಿಯನ್ನು ವೀಕ್ಷಿಸುತ್ತಾ ಜೊತೆ ಇರುತ್ತಾನೆ. ಪೌಲ್ ಒಬ್ಬ ಭಾವಜೀವಿಯಾಗಿ ಓದುಗನನ್ನು ಆವರಿಸುತ್ತಾನೆ. ಮಗಳಿಗೆ  ತನ್ನನ್ನು ನೆನಪಿಟ್ಟುಕೊಳ್ಳುವಷ್ಟು ನೆನಪಿನ ಶಕ್ತಿ ಬರುವವರೆಗೆ ಆದರೂ ತಾನು ಬದುಕಿರಬೇಕು ಎಂದು ಬಯಸುತ್ತಾನೆ. ಆದರೆ ಸಾವು ಸನಿಹದಲ್ಲಿದೆ ಎಂದು ಅನಿಸುತ್ತದೆ. "ಶಬ್ದಗಳು ಬಹಳ ವರ್ಷಗಳ ಕಾಲ ಬದುಕುತ್ತವೆ. ಆದರೆ ನಾನಲ್ಲ.. ಎನ್ನುವಲ್ಲಿಗೆ ಪೌಲ್ ಆತ್ಮಚರಿತ್ರೆ ಮುಗಿಯುತ್ತದೆ.

ಶ್ರೇಷ್ಠ ಕೃತಿಕಾರರ ಕೃತಿ ಎಂಬ ಕಾರಣಕ್ಕೆ, ಅಥವಾ ಹಲವು ಪ್ರಶಸ್ತಿ ಪಡೆದ ಕೃತಿ ಎಂಬ ಕಾರಣಕ್ಕೆ ಕೆಲವು ಪುಸ್ತಕಗಳನ್ನು ಓದಿರುತ್ತೇವೆ. ಅವು ಅಷ್ಟೇ ವೇಗವಾಗಿ ನಮ್ಮಿಂದ ಮರೆತು ಹೋಗಿರುತ್ತವೆ. ಆದರೆ ಈ ಕೃತಿ ಒಮ್ಮೆ ಓದಿದಮೇಲೆ ಮರೆಯುವ ಸಾಧ್ಯತೆಯೇ ಇಲ್ಲ. ಪ್ರತಿ ಪುಟಕ್ಕೂ ನಿಮ್ಮ ಭಾವಕೋಶದ ಆಳಕ್ಕೆ ಇಳಿದು ಹಾಗೆ ಕೂತುಬಿಡುವ ಗುಣವಿದೆ.

ಪೌಲ್ ಅವರ ನಿಧನದ ನಂತರವೂ ಅವರು ಬರೆದಿಟ್ಟ ಬರವಣಿಗೆಯನ್ನು ಅವನ ಹೆಂಡತಿ ಡಾಕ್ಟರ್ ಲೂಸಿ ಕಲಾನಿಧಿ ಅವರು ಮುಂದುವರಿಸಿ  ಬರೆದು ಈ ಕೃತಿಯನ್ನು ಪ್ರಕಟಿಸಿದ್ದು  ಸಾಹಿತ್ಯಲೋಕದ ಮತ್ತೊಂದು ವಿಶೇಷ ಪರಂಪರೆ. ಕ್ಯಾಡಿ ಹುಟ್ಟಿದ ನಂತರದ ದಿನಗಳಲ್ಲಿ ಪೌಲ್ ಅವರು ಬರೆಯುವುದನ್ನು ನಿಲ್ಲಿಸಿದಂತೆ ತೋರುತ್ತದೆ. ಹಾಗಾಗಿ ಕ್ಯಾಡಿಯೊಂದಿಗೆ ಕಳೆದ ಕೆಲವೇ ತಿಂಗಳುಗಳ ಸಂಗತಿಗಳನ್ನು  ಅವನ  ಹೆಂಡತಿ ಶ್ರೀಮತಿ ಲೂಸಿ ಅವರು ಬರೆದಿದ್ದಾರೆ. ಲೂಸಿಯವರು ಓದುಗರ ಭಾವಕೋಶಗಳಲ್ಲಿ ಮತ್ತಷ್ಟು ಭಾವಸ್ಪರ್ಶೀ ಮಾತುಗಳನ್ನು ಹಂಚಿಕೊಳ್ಳುತ್ತಾ  ಕ್ಯಾನ್ಸರ್ ತೀವ್ರವಾಗಿ ಸಾವಿನೂರಿಗೆ  ಕರೆದುಕೊಂಡು ಹೋದ  ಸಂಗತಿಯನ್ನು ಮನಸ್ಸು ಭಾರಮಾಡಿಕೊಂಡೇ ಎದೆಭಾರವಾಗುವಂತೆ ನಿರೂಪಿಸಿದ್ದಾರೆ.

ಇಂತಹ ವಿಶಿಷ್ಟ ಕೃತಿ ಪ್ರತಿಷ್ಠಿತ ಪುಲಿಟ್ಜರ್ ಪ್ರಶಸ್ತಿಗೆ ಮತ್ತು ವೆಲ್ಕಮ್ ಬುಕ್ ಪ್ರೈಸ್ ಎರಡಕ್ಕೂ ನಾಮನಿರ್ದೇಶನಗೊಂಡದ್ದು ಈ ಕೃತಿಯ ಹೆಚ್ಚುಗಾರಿಕೆ.
ಕನ್ನಡಕ್ಕೆ  ಡಾ ಡಿ.ಸಿ ನಂಜುಂಡ ಅವರು ಕನ್ನಡದ್ದೇ ಕೃತಿ ಎನಿಸುವಷ್ಟು ಶಕ್ತವಾಗಿ ಅನುವಾದಿಸಿದ್ದಾರೆ. ಭಾವನೆಗಳು ಭಾಷಾತೀತ. ಪೌಲ್ ಅವರು ಇಂಗ್ಲಿಷ್ನಲ್ಲಿ ತಮ್ಮ ಭಾವನೆಗಳನ್ನು ಆತ್ಮಚರಿತ್ರೆ ರೂಪದಲ್ಲಿ ಪ್ರಕಟಿಸಿದರು ಸಹ ಕನ್ನಡದಲ್ಲಿ ಅದನ್ನು ಅಷ್ಟೇ ಅಚ್ಚುಕಟ್ಟಾಗಿ ಮೂಲ ಭಾವಕ್ಕೆ , ಭಾವನೆಗಳ ಓಟಕ್ಕೆ ಧಕ್ಕೆ, ಆಗದಂತೆ ಪೌಲ್ ಅವರ ಮನದ ಭಾಷೆಯಂತೆಯೆ ಭಾಸವಾಗುವಂತೆ ಮನತಟ್ಟುವ ಪದಪುಂಜಗಳನ್ನು ಬಳಸಿ ಅನುವಾದಿಸುವಲ್ಲಿ ಯಶಸ್ವಿಯಾಗಿದ್ದಾರೆ.  ಅನುವಾದಿತ ಈ ಕೃತಿಯನ್ನು ಪ್ರಕಟಿಸಿದ್ದು ದೀಕ್ಷಾ ಪ್ರಕಾಶನ ಮೈಸೂರು. ಬೆಲೆ 200.
ಪುಸ್ತಕಕ್ಕಾಗಿ ಈ ಕೃತಿಯ ಅನುವಾದಕರಾದ
ಡಾ.ಡಿ.ಸಿ ನಂಜುಂಡ ಅವರನ್ನು ಸಹ ಸಂಪರ್ಕಿಸಬಹುದು.

ರವಿರಾಜ್ ಸಾಗರ್ .ಮಂಡಗಳಲೆ
ಹವ್ಯಾಸಿ ಬರಹಗಾರರು
9980952630.