ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Tuesday 6 September 2016

ಕನ್ನಡ ಬಿರುದಾಂಕಿತರು

ಕನ್ನಡದ ಬಿರುದಾಂಕಿತರು ♣
ಅ. ಸಂಖ್ಯೆ ಬಿರುದು ಬಿರುದಾಂಕಿತರು
1 ದಾನ ಚಿಂತಾಮಣಿ ಅತ್ತಿಮಬ್ಬೆ
2 ಕನ್ನಡ ಕುಲಪುರೋಹಿತ ಆಲೂರು ವೆಂಕಟರಾಯ
3 ಕನ್ನಡದ ಶೇಕ್ಸ್ಪಿಯರ್ ಕಂದಗಲ್ ಹನುಮಂತರಾಯ
4 ಕನ್ನಡದ ಕೋಗಿಲೆ ಪಿ.ಕಾಳಿಂಗರಾವ್
5 ಕನ್ನಡದ ವರ್ಡ್ಸ್ವರ್ತ್ ಕುವೆಂಪು
6 ಕಾದಂಬರಿ ಸಾರ್ವಭೌಮ ಅ.ನ.ಕೃಷ್ನರಾಯ
7 ಕರ್ನಾಟಕ ಪ್ರಹಸನ ಪಿತಾಮಹ ಟಿ.ಪಿ.ಕೈಲಾಸಂ
8 ಕರ್ನಾಟಕದ ಕೇಸರಿ ಗಂಗಾಧರರಾವ್ ದೇಶಪಾಂಡೆ
9 ಸಂಗೀತ ಗಂಗಾದೇವಿ ಗಂಗೂಬಾಯಿ ಹಾನಗಲ್
10 ನಾಟಕರತ್ನ ಗುಬ್ಬಿ ವೀರಣ್ಣ
11 ಚುಟುಕು ಬ್ರಹ್ಮ ದಿನಕರ ದೇಸಾಯಿ
12 ಅಭಿನವ ಪಂಪ ನಾಗಚಂದ್ರ
13 ಕರ್ನಾಟಕ ಸಂಗೀತ ಪಿತಾಮಹ ಪುರಂದರ ದಾಸ
14 ಕರ್ನಾಟಕದ ಮಾರ್ಟಿನ್ ಲೂಥರ್ ಬಸವಣ್ಣ
15 ಅಭಿನವ ಕಾಳಿದಾಸ ಬಸವಪ್ಪಶಾಸ್ತ್ರಿ
16 ಕನ್ನಡದ ಆಸ್ತಿ ಮಾಸ್ತಿ ವೆಂಕಟೇಶ ಅಯ್ಯಂಗಾರ್
17 ಕನ್ನಡದ ದಾಸಯ್ಯ ಶಾಂತಕವಿ
18 ಕಾದಂಬರಿ ಪಿತಾಮಹ ಗಳಗನಾಥ
19 ತ್ರಿಪದಿ ಚಕ್ರವರ್ತಿ ಸರ್ವಜ್ಞ
20 ಸಂತಕವಿ ಪು.ತಿ.ನ.
21 ಷಟ್ಪದಿ ಬ್ರಹ್ಮ ರಾಘವಾಂಕ
22 ಸಾವಿರ ಹಾಡುಗಳ ಸರದಾರ ಬಾಳಪ್ಪ ಹುಕ್ಕೇರಿ
23 ಕನ್ನಡದ ನಾಡೋಜ ಮುಳಿಯ ತಿಮ್ಮಪ್ಪಯ್ಯ
24 ಸಣ್ಣ ಕತೆಗಳ ಜನಕ ಮಾಸ್ತಿ ವೆಂಕಟೇಶ ಅಯ್ಯಂಗಾರ್
25 ಕರ್ನಾಟಕ ಶಾಸನಗಳ ಪಿತಾಮಹ ಬಿ.ಎಲ್.ರೈಸ್
26 ಹರಿದಾಸ ಪಿತಾಮಹ ಶ್ರೀಪಾದರಾಯ
27 ಅಭಿನವ ಸರ್ವಜ್ಞ ರೆ. ಉತ್ತಂಗಿ ಚೆನ್ನಪ್ಪ
28 ವಚನಶಾಸ್ತ್ರ ಪಿತಾಮಹ ಫ.ಗು.ಹಳಕಟ್ಟಿ
29 ಕವಿಚಕ್ರವರ್ತಿ ರನ್ನ
30 ಆದಿಕವಿ ಪಂಪ
31 ಉಭಯ ಚಕ್ರವರ್ತಿ ಪೊನ್ನ
32 ರಗಳೆಯ ಕವಿ ಹರಿಹರ
33 ಕನ್ನಡದ ಕಣ್ವ ಬಿ.ಎಂ.ಶ್ರೀ
34 ಕನ್ನಡದ ಸೇನಾನಿ ಎ.ಆರ್.ಕೃಷ್ಣಾಶಾಸ್ತ್ರಿ
35 ಕರ್ನಾಟಕದ ಉಕ್ಕಿನ ಮನುಷ್ಯ ಹಳ್ಳಿಕೇರಿ ಗುದ್ಲೆಪ್ಪ
36 ಯಲಹಂಕ ನಾಡಪ್ರಭು ಕೆಂಪೇಗೌಡ
37 ವರಕವಿ ಬೇಂದ್ರೆ
38 ಕುಂದರ ನಾಡಿನ ಕಂದ ಬಸವರಾಜ ಕಟ್ಟೀಮನಿ
39 ಪ್ರೇಮಕವಿ ಕೆ.ಎಸ್.ನರಸಿಂಹಸ್ವಾಮಿ
40 ಚಲಿಸುವ ವಿಶ್ವಕೋಶ ಕೆ.ಶಿವರಾಮಕಾರಂತ
41 ಚಲಿಸುವ ನಿಘಂಟು ಡಿ.ಎಲ್.ನರಸಿಂಹಾಚಾರ್
42 ದಲಿತಕವಿ ಸಿದ್ದಲಿಂಗಯ್ಯ
43 ಅಭಿನವ ಭೋಜರಾಜ ಮುಮ್ಮಡಿ ಕೃಷ್ಣರಾಜ ಒಡೆಯರು
44 ಪ್ರಾಕ್ತನ ವಿಮರ್ಶಕ ವಿಚಕ್ಷಣ ಆರ್.ನರಸಿಂಹಾಚಾರ್
45 ಕನ್ನಡದ ಕಬೀರ ಶಿಶುನಾಳ ಷರೀಪ
46 ಕನ್ನಡದ ಭಾರ್ಗವ ಕೆ.ಶಿವರಾಮಕಾರಂತ
47 ಕರ್ನಾಟಕದ ಗಾಂಧಿ ಹರ್ಡೇಕರ್ ಮಂಜ

Monday 5 September 2016

ನಾವೇಕೆ ಗುರುಗಳಿಗೆ ಋಣಿಯಾಗಿರಬೇಕು

ನಾವೇಕೆ ಗುರುಗಳಿಗೆ ಋಣಿಯಾಗಿರಬೇಕು?
ಇಲ್ಲಿವೆ 17 ಕಾರಣಗಳು ( ಸಂಗ್ರಹ. ವಾಟ್ಸ ಆಪ್)

1. ನಮಗೆ ಗೊತ್ತಿಲ್ಲದಂತೆ ನಮ್ಮೊಳಗೆ ಅಡಗಿದ್ದ ಪ್ರತಿಭೆಯನ್ನ ಹೊರಕ್ಕೆ ತಂದಿರಲ್ಲ, ಅದಕ್ಕೆ

ನಮಗೆ ಚೆನ್ನಾಗಿ ಬರೆಯೋದಕ್ಕೆ, ಲೆಕ್ಕ ಮಾಡಕ್ಕೆ, ಆಡೋದಕ್ಕೆ, ಹಾಡೋದಕ್ಕೆ ಬರುತ್ತೆ ಅಂತ ನಮಗೇ ಗೊತ್ತಿರಲಿಲ್ಲ. ಗೊತ್ತು ಮಾಡಿದ್ದು ನೀವು. ಈಗ ಇವೆಲ್ಲವೂ‌ ನಮಗೆ ಹುಟ್ಟಿದಾಗಲೇ‌ ಬರ್ತಾ ಇತ್ತೇನೋ‌ ಅನ್ನಿಸುತ್ತೆ! ಆದರೆ ಅದರ ಹಿಂದೆ ನೀವಿದ್ದೀರಿ. ಅದಕ್ಕಾಗಿ ತ್ಯಾಂಕ್ಸ್.

2. ಓದು ಮುಂದುವರೆಸು ಅಂತ ಬೆನ್ನು ತಟ್ಟಿದಿರಲ್ಲ, ಅದಕ್ಕೆ

ನಮ್ಮ ದಾರಿ ಯಾವುದು, ಏನು ಓದಬೇಕು, ಯಾವ ಕೋರ್ಸ್ ತೊಗೋಬೇಕು, ಯಾವ ಡಿಗ್ರಿ ನಮಗೆ ಸರಿಹೊಂದುತ್ತೆ... ಇದಾವುದೂ ಸರಿಯಾಗಿ ನಮಗೆ ಗೊತ್ತಿರಲಿಲ್ಲ. ಆದರೆ ನಿಮ್ಮಿಂದ ನಾವೇ ನಮ್ಮ ದಾರಿ ಕಂಡುಕೊಳ್ಳುವಂತಾಯಿತು... ಏಕಂದ್ರೆ ಆಯ್ಕೆ ಮಾಡಿಕೊಳ್ಳುವ ಶಕ್ತಿ ನಮಗಿದೆ ಅಂತ ತೋರಿಸಿಕೊಡ್ತಾ‌ ಇದ್ರಿ. ಅದಕ್ಕಾಗಿ ತ್ಯಾಂಕ್ಸ್.

3. ಮನಸ್ಸಿಟ್ಟು ಓದುವಂತೆ ಮಾಡಿದಿರಲ್ಲ, ಅದಕ್ಕೆ

ಹೋಂವರ್ಕು, ಅಸೈನ್ಮೆಂಟು ಅಂದರೆ ಸಾಕು ನಮಗೆ ಬೇಜಾರು! ಆದರೂ‌ ಮನಸ್ಸಿಟ್ಟು ಮಾಡುವಂತೆ ಪ್ರೇರಣೆ ನೀಡಿದ್ದು ನೀವೇ. ರಾತ್ರಿಯೆಲ್ಲ ಎದ್ದು ಓದುವಂತೆ ಮಾಡ್ತಾ ಇದ್ರಿ. ಆಗ ಬೈಕೊಂಡು ಮಾಡ್ತಾ ಇದ್ವಿ, ಆದ್ರೆ ಒಳ್ಳೆಯ ಫಲಿತಾಂಶ ಬಂದಾಗ ಅದೆಲ್ಲದರ ಬೆಲೆ ನಮಗೇ‌ ಗೊತ್ತಾಗ್ತಾ ಇತ್ತು. ಶುರು ಮಾಡಿದ ಪ್ರಾಜೆಕ್ಟೆಲ್ಲ ಮುಕ್ತಾಯದ ಹಂತಕ್ಕೆ ಕರೆದೊಯ್ಯುವಂತೆ ಮಾಡಿದ್ದು ನೀವೇ. ಮೊದಲ ಬಾರಿಗೆ ಗೆಲುವು ಸಿಗದೆ ಹೋದರೆ ಮತ್ತೊಮ್ಮೆ, ಮಗದೊಮ್ಮೆ ಪ್ರಯತ್ನ ಮಾಡು ಅಂತ ಹೇಳ್ತಿದ್ದಿದ್ದೂ ನೀವೇ. ಅದಕ್ಕಾಗಿ ತ್ಯಾಂಕ್ಸ್.

4. ನಿಮ್ಮ ವೈಯಕ್ತಿಕ ತೊಂದರೆ ಏನೇ ಇರಲಿ, ದಿನಾ‌ ಬಂದು ನಮಗೆ ಪಾಠ ಮಾಡ್ತಾ ಇದ್ರಲ್ಲ, ಅದಕ್ಕೆ

ವೈಯಕ್ತಿಕ ತೊಂದರೆ ಯಾರಿಗಿರೋದಿಲ್ಲ? ನಿಮಗೂ‌ ಅಂತಹ ದಿನಗಳು ಇದ್ದಿರಲೇ ಬೇಕು. ಆದರೂ ನೀವು ನಮಗಾಗಿ ಬಂದು ಪಾಠ ಮಾಡ್ತಾ‌ ಇದ್ರಿ. ನಿಮ್ಮ ತೊಂದರೆಗಳು ನಮಗೆ ಗೊತ್ತೇ ಆಗದಂತೆ ಇರ್ತಾ ಇದ್ರಿ, ನಮ್ಮನ್ನ ಮೇಲೆ ಎತ್ತಿದ್ರಿ. ಅದಕ್ಕಾಗಿ ತ್ಯಾಂಕ್ಸ್.

5. ನಮ್ಮಲ್ಲಿ ನಂಬಿಕೆ ಇಟ್ಟುಕೊಂಡಿದ್ರಲ್ಲ, ಅದಕ್ಕೆ

ನಮ್ಮ ಮೇಲೆ ನಮಗೇ‌ ಕೆಲವೊಮ್ಮೆ ನಂಬಿಕೆ ಇರ್ತಾ ಇರಲಿಲ್ಲ. ಇದು ನಮ್ಮ ಕೈಯಲ್ಲಿ ಸಾಧ್ಯಾನಾ? ನಾನು ಪಾಸಾಗ್ತೀನಾ? ನಾನು ಫರ್ಸ್ಟ್ ಕ್ಲಾಸ್ ಬರ್ತೀನಾ? ನಾನು ರನ್ನಿಂಗ್ ರೇಸಲ್ಲಿ ಗೆಲ್ತೀನಾ? ಈ‌ ಪ್ರಶ್ನೆಗಳಿಂದ ಒಳಗೊಳಗೇ ನರಳುತ್ತಿದ್ದ ನಮಗೆ ನೀವು ನಮ್ಮಲ್ಲಿಟ್ಟಿದ್ದ ನಂಬಿಕೆಯೇ ದಾರಿದೀಪವಾಗಿತ್ತು. ನಿಮಗೆ ನಮ್ಮಲ್ಲಿ ನಮಗಿಂತ ಹೆಚ್ಚಿನ ನಂಬಿಕೆ ಇತ್ತು. ಅದಕ್ಕಾಗಿ ತ್ಯಾಂಕ್ಸ್.

6. "ಸರಿ ನಾ?" ಅಂತ ಕೇಳಿದಾಗ ಅಡ್ಡಗೋಡೆಯ ಮೇಲೆ ದೀಪ ಇಡದೆ ಇರುವುದು ಇದ್ದಂತೆ ಹೇಳುತ್ತಿದ್ದರಲ್ಲ, ಅದಕ್ಕೆ

ನಮ್ಮ ಬೆನ್ನು ತಟ್ಟುತ್ತಿದ್ರಿ, ನಿಜ, ಆದರೆ ಕೆಲಸ ಇನ್ನಷ್ಟು ಚೆನ್ನಾಗಿ ಅಥವ ಸರಿಯಾಗಿ ಆಗಬೇಕಾಗಿದ್ದಾಗ ಅದನ್ನ ನೇರವಾಗಿ ಹೇಳ್ತಾ‌ ಇದ್ರಿ. ಆದರೂ‌ ಮನಸ್ಸಿಗೆ ನೋವಾಗ್ತಾ ಇರಲಿಲ್ಲ. ಅದಕ್ಕೆ ತ್ಯಾಂಕ್ಸ್.

7. ಪುಂಡ ಪೋಕರಿಗಳಂತೆ ಇರ್ತಾ‌ ಇದ್ದ ನಮಗೆ ಶಿಸ್ತು ಕಲಿಸಿದಿರಲ್ಲ, ಅದಕ್ಕೆ

ಹುಡುಗತನದಲ್ಲಿ ಬಹಳ ಆಟ ಆಡ್ತಾ ಇದ್ವಿ. ಕ್ಲಾಸ್ ಬಂಕ್ ಮಾಡೋದು, ಓದದೆ ಆಟ ಆಡೋದು, ಆಟದಲ್ಲೂ‌ ಸೋಮಾರಿತನ ತೋರಿಸೋದು... ಇದೆಲ್ಲ ತುಂಬ ಮಾಡ್ತಾ ಇದ್ವಿ. ಅಂತಹ ನಮಗೆ ನೀವು ಶಿಸ್ತು ಕಲಿಸಿದಿರಲ್ಲ, ಅದಕ್ಕೆ ತ್ಯಾಂಕ್ಸ್.

8. ಕೊಟ್ಟ ಉತ್ತರವನ್ನೇ ಬೇಜಾರಿಲ್ಲದೆ ಎಷ್ಟು ಸಾರಿ ಬೇಕಾದರೂ ಕೊಡ್ತಾ ಇದ್ರಲ್ಲ, ಅದಕ್ಕೆ

ಒಮ್ಮೊಮ್ಮೆ ನೀವು ಹೇಳಿಕೊಡ್ತಾ ಇದ್ದಿದ್ದು ನಮಗೆ ಅರ್ಥ ಆಗ್ತಾ ಇರಲಿಲ್ಲ. ಅಥವಾ ನಮ್ಮ ಗಮನ ಬೇರೆಲ್ಲೋ ಇರ್ತಾ ಇತ್ತು. ಆಗ ಎಷ್ಟು ಸಾರಿ ಬೇಕಾದರೂ‌ ಬೇಜಾರಿಲ್ಲದೆ, ತಾಳ್ಮೆಯಿಂದ, ನಮಗೆ ವಿವರಿಸ್ತಾ ಇದ್ರಿ. ಅದಕ್ಕೆ ತ್ಯಾಂಕ್ಸ್.

9. ಆಗ ಓದಕ್ಕೆ ಬೇಜಾರಾಗ್ತಿದ್ದ ವಿಷಯಗಳ ಬೆಲೆ ಏನು ಅಂತ ವಿವರಿಸ್ತಾ ಇದ್ರಲ್ಲ, ಅದಕ್ಕೆ

ಸಮಾಜ ಪಾಠ (ಸೋಶಿಯಲ್ ಸ್ಟಡೀಸ್) ಅಂದ್ರೆ ವಾಕರಿಕೆ ಬರ್ತಾ ಇತ್ತು ನಮಗೆ. ಒಮ್ಮೊಮ್ಮೆ ಗಣಿತ ತುಂಬಾ ಕಷ್ಟ ಅನ್ನಿಸ್ತಾ ಇತ್ತು. ಆದರೂ‌ ಇವೆಲ್ಲದರ ಬೆಲೆ ಏನು, ಇದನ್ನ ಸುಲಭವಾಗಿ ಕಲಿಯುವುದು ಹೇಗೆ ಅಂತ ಹೇಳ್ಕೊಡ್ತಾ ಇದ್ರಿ. ನೀವು ಆಗ ಹೇಳಿಕೊಟ್ಟಿದ್ದು ಈಗಲೂ‌ ನಮ್ಮ ಜೀವನದಲ್ಲಿ ಬಹಳ ಮುಖ್ಯವಾದ ಪಾತ್ರ ವಹಸಿದೆ. ಅದಕ್ಕೆ ತ್ಯಾಂಕ್ಸ್.

10. ಕಲಿಕೆ ಅಂದರೆ ಬರೀ‌ ಪುಸ್ತಕದ ಬದನೇಕಾಯಿ ಅಲ್ಲ ಅಂತ ಕೈಯಾರೆ ತೋರಿಸಿಕೊಟ್ರಲ್ಲ, ಅದಕ್ಕೆ

ನೀವಾಗೇ ನಮ್ಮನ್ನ ಮ್ಯೂಸಿಯಂಗಳಿಗೆ, ಪ್ರವಾಸಿ ತಾಣಗಳಿಗೆ, ಫ್ಯಾಕ್ಟರಿಗಳಿಗೆ ಕರ್ಕೊಂಡು ಹೋಗ್ತಾ ಇದ್ರಿ. ಅಲ್ಲೂ ಕಲಿಕೆ ನಡೆಯಬಲ್ಲುದು ಅಂತ ತೋರಿಸ್ತಾ ಇದ್ರಿ. ಬರೀ‌ ಪುಸ್ತಕದಿಂದಲೇ ಕಲಿಕೆಯಲ್ಲ ಅಂತ ಚೆನ್ನಾಗಿ ತೋರಿಸಿಕೊಟ್ರಿ. ಅದಕ್ಕೆ ತ್ಯಾಂಕ್ಸ್.

11. ಕಾಲಕಾಲಕ್ಕೆ ನಮ್ಮ ಕಲಿಕೆ ಹೇಗೆ ನಡೀತಾ ಇದೆ ಅಂತ ತೋರಿಸಿಕೊಡ್ತಾ‌ ಇದ್ರಲ್ಲ, ಅದಕ್ಕೆ

ತಿಂಗಳಿಗೊಮ್ಮೆ ಟೆಸ್ಟು, ವರ್ಶಕ್ಕೆ ಮೂರು-ನಾಲ್ಕು ಪರೀಕ್ಷೆ ನಡೀತಾ ಇದ್ರೂ‌, ನಾವು ಅದೇನೇನು ಬರೆದರೂ‌ ಅದನ್ನೆಲ್ಲ `ನನ್ನ ಕಾಯಕ ಇದು' ಅಂತ ಎವಾಲುಯೇಟ್ ಮಾಡ್ತಾ ಇದ್ರಿ, ನಾವು ಕಲಿಕೆಯ ಹಾದಿಯಲ್ಲಿ ಎಲ್ಲಿದ್ದೇವೆ ಅಂತ ತೋರಿಸಿ ಕೊಡ್ತಾ ಇದ್ರಿ. ಅದಿಲ್ಲದೆ ಹೋಗಿದ್ರೆ ನಾವು ಎಂದಿಗೋ ದಾರಿ ತಪ್ಪಿ ಬಿಡ್ತಾ ಇದ್ವಿ. ಅದಕ್ಕೆ ತ್ಯಾಂಕ್ಸ್.

12. ಶಾಲೆ/ಕಾಲೇಜು ವೇಳೆ ಮುಗಿದ ಮೇಲೂ ನಮ್ಮ ಶಿಕ್ಷರಾಗೇ ಇರ್ತಾ ಇದ್ರಲ್ಲ, ಅದಕ್ಕೆ

ನಿಮಗೆ ನಿಜಕ್ಕೂ‌ ದಿನಕ್ಕೆ ಇಷ್ಟು ದಿನ ಮಾತ್ರ ಕೆಲಸ ಅಂತ ಇರ್ತಾ ಇರಲಿಲ್ಲ. ಮನೆಗೆ ಬಂದರೂ ಕೂಡಿಸಿ ಪಾಠ ಹೇಳ್ತಾ ಇದ್ರಿ, ನಮ್ಮ ಪ್ರಶ್ನೆಗಳಿಗೆ ಉತ್ತರ ಕೊಡ್ತಾ ಇದ್ರಿ. ಭಾನುವಾರವೂ ತಲೆ ತಿನ್ತಾ ಇದ್ವಿ, ನೀವು ತಿನ್ನಿಸಿಕೊಳ್ತಾ ಇದ್ರಿ, ನಮ್ಮನ್ನ ಬೆಳೆಸ್ತಾ ಇದ್ರಿ. ಅದಕ್ಕೆ ತ್ಯಾಂಕ್ಸ್.

13. ಕ್ಲಾಸಲ್ಲಿ ಪ್ರತಿಯೊಬ್ಬರ ಕಾಳಜಿಯೂ ನಿಮಗೆ ಇರ್ತಾ ಇತ್ತಲ್ಲ, ಅದಕ್ಕೆ

ಕ್ಲಾಸಲ್ಲಿ ಹಲವರಿಗೆ ನೀವು ಮಾಡ್ತಿದ್ದ ಪಾಠದಲ್ಲಿ ಆಸಕ್ತಿ ಇರ್ತಾ ಇರಲಿಲ್ಲ. ನಿಮಗೆ ನಿಜಕ್ಕೂ‌ ಅವರ ಜೊತೆ ಏಗೋದು ಕಷ್ಟ ಆಗ್ತಾ ಇದ್ದಿರಬೇಕು. ಆದರೂ‌ ಎಲ್ಲರ ಕಾಳಜಿಯೂ‌ ನಿಮಗೆ ಇರ್ತಾ ಇತ್ತು. 13. ಕ್ಲಾಸಲ್ಲಿ ಪ್ರತಿಯೊಬ್ಬರ ಕಾಳಜಿಯೂ ನಿಮಗೆ ಇರ್ತಾ ಇತ್ತಲ್ಲ, ಅದಕ್ಕೆ

ಕ್ಲಾಸಲ್ಲಿ ಹಲವರಿಗೆ ನೀವು ಮಾಡ್ತಿದ್ದ ಪಾಠದಲ್ಲಿ ಆಸಕ್ತಿ ಇರ್ತಾ ಇರಲಿಲ್ಲ. ನಿಮಗೆ ನಿಜಕ್ಕೂ‌ ಅವರ ಜೊತೆ ಏಗೋದು ಕಷ್ಟ ಆಗ್ತಾ ಇದ್ದಿರಬೇಕು. ಆದರೂ‌ ಎಲ್ಲರ ಕಾಳಜಿಯೂ‌ ನಿಮಗೆ ಇರ್ತಾ ಇತ್ತು. ಎಲ್ಲರನ್ನೂ‌ ಬೆಳೆಸಿದ್ರಿ. ಅದಕ್ಕೆ ತ್ಯಾಂಕ್ಸ್.

14. ಶಿಕ್ಷಣ ವ್ಯವಸ್ಥೆಯಲ್ಲಿದ್ದ ಕೆಲವು ಹುಳುಕುಗಳಿಂದ ನಮಗೆ ತೊಂದರೆಯಾಗದಂತೆ ನೋಡಿಕೊಂಡಿರಲ್ಲ, ಅದಕ್ಕೆ

ಪಠ್ಯಪುಸ್ತಕಗಳಲ್ಲಿ ಒಮ್ಮೊಮ್ಮೆ ತಪ್ಪಿರುತ್ತಿತ್ತು. ಪರೀಕ್ಷಾ ವಿಧಾನಗಳಲ್ಲಿ ತಪ್ಪಿರುತ್ತಿತ್ತು. ವಿಷಯಗಳನ್ನೇ ಒಮ್ಮೊಮ್ಮೆ ತಪ್ಪಾಗಿ ಬರೆದಿರ್ತಾ ಇದ್ರು. ಎಲ್ಲ ಸರಿಯಾಗಿದ್ದರೂ‌ ಸಮಾಜಿಕ ಕಾಳಜಿಯೇ‌ ಹೊರಟುಹೋಗುವ ಗಂಡಾಂತರ ಇರ್ತಾ ಇತ್ತು. ಈ‌ ಹುಳುಕುಗಳಿಂದ ನಮ್ಮ ಬೆಳವಣಿಗೆಗೆ ತೊಂದರೆಯಾಗದಂತೆ ನೋಡಿಕೊಳ್ತಾ‌ ಇದ್ರಿ. ಅದಕ್ಕೆ ತ್ಯಾಂಕ್ಸ್.

15. ನಾವು ಗೊತ್ತು ಅಂದುಕೊಂಡಿದ್ದು ನಿಜವಾಗಲೂ ಗೊತ್ತಾ ಅಂತ ಪ್ರಶ್ನಿಸಿಕೊಳ್ಳುವಂತೆ ಮಾಡ್ತಾ ಇದ್ರಲ್ಲ, ಅದಕ್ಕೆ

ಒಮ್ಮೊಮ್ಮೆ ನಾವೇ ಬಹಳ ಬುದ್ಧಿವಂತರು ಅಂದುಕೊಳ್ತಾ ಇದ್ದೆವು. ಎಲ್ಲಾ ಗೊತ್ತು ಅಂದುಕೊಂಡಿರುತ್ತಿದ್ದೆವು. ಆದರೆ ನಿಜಕ್ಕೂ‌ ಗೊತ್ತಾ ಅಂತ ನಾವೇ ಪ್ರಶ್ನಿಸಿಕೊಳ್ಳುವಂತೆ ಮಾಡ್ತಾ ಇದ್ರಿ. ಪ್ರಶ್ನಿಸಿಕೊಂಡಾಗ ನಮ್ಮ ಅರಿವಿನ ಹರವು ಎಷ್ಟಿದೆ ಅಂತ ನಮಗೇ ಅರ್ಥವಾಗ್ತಾ ಇತ್ತು. ಅದಕ್ಕೆ ತ್ಯಾಂಕ್ಸ್.

16. ಕೆಲಸವನ್ನು ಮನಸಾರೆ ಮಾಡೋದು ಕಲಿಸಿದರಲ್ಲ, ಅದಕ್ಕೆ

ನೀವು ಹೇಳಿಕೊಡ್ತಾ ಇದ್ದ ಪಾಠದಲ್ಲಿ ನಿಮಗೆ ಅದೆಷ್ಟು ಪ್ರೀತಿ ಇರ್ತಾ ಇತ್ತು! ಎಷ್ಟು ಮನಸಾರೆ ಮಾಡ್ತಾ ಇದ್ರಿ! ಅದರಿಂದ ನಾವು ಮನಸಾರೆ ಕೆಲಸ ಮಾಡೋದು ಕಲಿತ್ವಿ, ಪ್ರೀತಿಯಿಂದ ಮಾಡೋದು ಕಲಿತ್ವಿ, ಇವೆರಡೂ‌ ಯಾವ ಕೆಲಸದಲ್ಲಿ ನಮಗೆ ಸಿಗುತ್ತೆ ಅಂತ ಹುಡುಕಿಕೊಳ್ಳೋದು ಕಲಿತ್ವಿ. ಅದಕ್ಕೆ ತ್ಯಾಂಕ್ಸ್.

17. ನಮ್ಮ ಜೀವನವನ್ನ ರೂಪಿಸಿದರಲ್ಲ, ಅದಕ್ಕೆ

ನಮ್ಮ ಜೀವನದಲ್ಲಿ ನಿಮ್ಮ ಪ್ರಭಾವ ಎಂದಿಗೂ‌ ಮರೆಯಕ್ಕಾಗಲ್ಲ. ನೀವು ಮಾಡಿದ ಪಾಠ, ಮಾಡುವ ಶೈಲಿ, ಕಲಿಸೇ ತೀರಬೇಕೆಂಬ ನಿಮ್ಮ ಎಡೆಬಿಡದ ಪ್ರಯತ್ನ - ಇವೆಲ್ಲವೂ‌ ನಮ್ಮ ಜೀವನವನ್ನು ರೂಪಿಸಿವೆ. ಆಗ ನಮಗೆ ಗೊತ್ತಾಗ್ತಾ ಇರಲಿಲ್ಲ, ಆದರೆ ಈಗ ಚೆನ್ನಾಗಿ ಗೊತ್ತಾಗುತ್ತದೆ: ನೀವು ನಮ್ಮ ಶಿಕ್ಷಕರಾಗದೆ ಹೋಗಿದ್ದರೆ ನಾವು ಈ ಮಟ್ಟಕ್ಕೆ ಬೆಳೀತಾ‌ ಇರಲಿಲ್ಲ. ಅದಕ್ಕೆ ತ್ಯಾಂಕ್ಸ್.

ನಾವು ನಿಮಗೆ ಎಂದೆಂದಿಗೂ‌ ಋಣಿಯಾಗಿರುತ್ತೇವೆ ಸಾರ್, ಮೇಡಂ...

Sunday 21 August 2016

ಈವರೆಗೆ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ವಿವರ

ಕನ್ನಡ ಸಾಹಿತ್ಯ ಸಮ್ಮೇಳನಗಳು
ಕ್ರಮಸಂಖ್ಯೆ ವರ್ಷ ಸ್ಥಳ
೧ ೧೯೧೫ ಬೆಂಗಳೂರು ಎಚ್.ವಿ.ನಂಜುಂಡಯ್ಯ
೨ ೧೯೧೬ ಬೆಂಗಳೂರು ಎಚ್.ವಿ.ನಂಜುಂಡಯ್ಯ
೩ ೧೯೧೭ ಮೈಸೂರುಎಚ್.ವಿ.ನಂಜುಂಡಯ್ಯ
೪ ೧೯೧೮ ಧಾರವಾಡ ಆರ್.ನರಸಿಂಹಾಚಾರ್
೫ ೧೯೧೯ ಹಾಸನ ಕರ್ಪೂರ ಶ್ರೀನಿವಾಸರಾವ್
೬ ೧೯೨೦ ಹೊಸಪೇಟೆ ರೊದ್ದ ಶ್ರೀನಿವಾಸರಾವ
೭ ೧೯೨೧ ಚಿಕ್ಕಮಗಳೂರು ಕೆ.ಪಿ.ಪುಟ್ಟಣ್ಣ ಶೆಟ್ಟಿ
೮ ೧೯೨೨ ದಾವಣಗೆರೆ ಎಂ.ವೆಂಕಟಕೃಷ್ಣಯ್ಯ
೯ 1೯೨೩ ಬಿಜಾಪುರ ಸಿದ್ಧಾಂತಿ ಶಿವಶಂಕರಶಾಸ್ತ್ರಿ
೧೦ ೧೯೨೪ ಕೋಲಾರ ಹೊಸಕೋಟೆ ಕೃಷ್ಣಶಾಸ್ತ್ರಿ
೧೧ ೧೯೨೫ ಬೆಳಗಾವಿ ಬೆನಗಲ್ ರಾಮರಾವ್
೧೨ ೧೯೨೬ ಬಳ್ಳಾರಿ ಫ.ಗು.ಹಳಕಟ್ಟಿ
೧೩ ೧೯೨೭ ಮಂಗಳೂರು ಆರ್.ತಾತಾಚಾರ್ಯ
೧೪ ೧೯೨೮ ಕಲಬುರ್ಗಿಬಿ ಎಂ ಶ್ರೀ
೧೫ ೧೯೨೯ ಬೆಳಗಾವಿ ಮಾಸ್ತಿ ವೆಂಕಟೇಶಅಯ್ಯಂಗಾರ್
೧೬ ೧೯೩೦ ಮೈಸೂರು ಆಲೂರು ವೆಂಕಟರಾಯರು
೧೭ ೧೯೩೧ ಕಾರವಾರ ಮುಳಿಯ ತಿಮ್ಮಪ್ಪಯ್ಯ
೧೮ ೧೯೩೨ ಮಡಿಕೇರಿಡಿ ವಿ ಜಿ
೧೯ ೧೯೩೩ ಹುಬ್ಬಳ್ಳಿ ವೈ.ನಾಗೇಶ ಶಾಸ್ತ್ರಿ
೨೦ ೧೯೩೪ ರಾಯಚೂರು ಪಂಜೆ ಮಂಗೇಶರಾಯರು
೨೧ ೧೯೩೫ ಮುಂಬಯಿ ಎನ್.ಎಸ್.ಸುಬ್ಬರಾವ್
೨೨ ೧೯೩೭ ಜಮಖಂಡಿ ಬೆಳ್ಳಾವೆವೆಂಕಟನಾರಣಪ್ಪ
೨೩ ೧೯೩೮ ಬಳ್ಳಾರಿ ರಂಗನಾಥ ದಿವಾಕರ
೨೪ ೧೯೩೯ ಬೆಳಗಾವಿ ಮುದವೀಡುಕೃಷ್ಣರಾಯರು
೨೫ ೧೯೪೦ ಧಾರವಾಡ ವೈ.ಚಂದ್ರಶೇಖರ ಶಾಸ್ತ್ರಿ
೨೬ 1೯೪೧ ಹೈದರಾಬಾದ್ ಎ.ಆರ್.ಕೃಷ್ಣಶಾಸ್ತ್ರಿ
೨೭ ೧೯೪೩ ಶಿವಮೊಗ್ಗ ದ.ರಾ.ಬೇಂದ್ರೆ
೨೮ ೧೯೪೪ ರಬಕವಿ ಎಸ್.ಎಸ್.ಬಸವನಾಳ
೨೯ ೧೯೪೫ ಮದರಾಸು ಟಿ ಪಿ ಕೈಲಾಸಂ
೩೦ ೧೯೪೭ ಹರಪನಹಳ್ಳಿ ಸಿ.ಕೆ.ವೆಂಕಟರಾಮಯ್ಯ
೩೧ ೧೯೪೮ ಕಾಸರಗೋಡುತಿ.ತಾ.ಶರ್ಮ
೩೨ ೧೯೪೯ ಕಲಬುರ್ಗಿ ಉತ್ತಂಗಿ ಚನ್ನಪ್ಪ
೩೩ ೧೯೫೦ ಸೊಲ್ಲಾಪುರ ಎಮ್.ಆರ್.ಶ್ರೀನಿವಾಸಮೂರ್ತಿ
೩೪ ೧೯೫೧ ಮುಂಬಯಿ ಗೋವಿಂದ ಪೈ
೩೫ ೧೯೫೨ ಬೇಲೂರು ಎಸ್.ಸಿ.ನಂದೀಮಠ
೩೬ ೧೯೫೪ ಕುಮಟಾ ವಿ.ಸೀತಾರಾಮಯ್ಯ
೩೭ ೧೯೫೫ ಮೈಸೂರು ಶಿವರಾಮ ಕಾರಂತ
೩೮ ೧೯೫೬ ರಾಯಚೂರು ಶ್ರೀರಂಗ
೩೯ ೧೯೫೭ ಧಾರವಾಡ ಕುವೆಂಪು
೪೦ ೧೯೫೮ ಬಳ್ಳಾರಿ ವಿ.ಕೆ.ಗೋಕಾಕ
41 ೧೯೫೯ ಬೀದರ ಡಿ.ಎಲ್.ನರಸಿಂಹಾಚಾರ್
೪೨ ೧೯೬೦ ಮಣಿಪಾಲ ಅ.ನ. ಕೃಷ್ಣರಾಯ೪
೩೧೯೬೧ ಗದಗ ಕೆ.ಜಿ.ಕುಂದಣಗಾರ
೪೪ ೧೯೬೩ ಸಿದ್ದಗಂಗಾ ರಂ.ಶ್ರೀ.ಮುಗಳಿ
೪೫ ೧೯೬೫ಕಾರವಾರಕಡೆಂಗೋಡ್ಲು ಶಂಕರಭಟ್ಟ
೪೬ ೧೯೬೭ ಶ್ರವಣಬೆಳಗೊಳ ಆ.ನೇ.ಉಪಾಧ್ಯೆ
೪೭ ೧೯೭೦ ಬೆಂಗಳೂರು ದೇ.ಜವರೆಗೌಡ
೪೮ ೧೯೭೪ ಮಂಡ್ಯ ಜಯದೇವಿತಾಯಿ ಲಿಗಾಡೆ
೪೯ ೧೯೭೬ ಶಿವಮೊಗ್ಗ ಎಸ್.ವಿ.ರಂಗಣ್ಣ
೫೦ ೧೯೭೮ ದೆಹಲಿ ಜಿ.ಪಿ.ರಾಜರತ್ನಂ
೫೧ ೧೯೭೯ ಧರ್ಮಸ್ಥಳ ಗೋಪಾಲಕೃಷ್ಣ ಅಡಿಗ
೫೨ ೧೯೮೦ ಬೆಳಗಾವಿ ಬಸವರಾಜ ಕಟ್ಟೀಮನಿ
೫೩ ೧೯೮೧ ಚಿಕ್ಕಮಗಳೂರು ಪು.ತಿ.ನರಸಿಂಹಾಚಾರ್
೫೪ ೧೯೮೧ ಮಡಿಕೇರಿ ಶಂ.ಬಾ.ಜೋಶಿ
೫೫ ೧೯೮೨ ಶಿರಸಿ ಗೊರೂರು ರಾಮಸ್ವಾಮಿಐಯಂಗಾರ್
೫೬ ೧೯೮೪ ಕೈವಾರ ಎ.ಎನ್.ಮೂರ್ತಿ ರಾವ್
೫೭ ೧೯೮೫ ಬೀದರ್. ಹಾ.ಮಾ.ನಾಯಕ
೫೮ ೧೯೮೭ ಕಲಬುರ್ಗಿ ಸಿದ್ದಯ್ಯ ಪುರಾಣಿಕ
೫೯ ೧೯೯೦ ಹುಬ್ಬಳ್ಳಿ ಆರ್.ಸಿ.ಹಿರೇಮಠ
೬೦ ೧೯೯೧ ಮೈಸೂರು ಕೆ.ಎಸ್. ನರಸಿಂಹಸ್ವಾಮಿ
೬೧ ೧೯೯೨ ದಾವಣಗೆರೆ ಜಿ.ಎಸ್.ಶಿವರುದ್ರಪ್ಪ
೬೨ ೧೯೯೩ ಕೊಪ್ಪ್ಪಳ ಸಿಂಪಿ ಲಿಂಗಣ್ಣ
೬೩ ೧೯೯೪ ಮಂಡ್ಯ ಚದುರಂಗ
೬೫ ೧೯೯೬ ಹಾಸನ ಚನ್ನವೀರ ಕಣವಿ
೬೬ ೧೯೯೭ ಮಂಗಳೂರು ಕಯ್ಯಾರ ಕಿಞ್ಞಣ್ಣ ರೈ
೬೭ ೧೯೯೯ ಕನಕಪುರ ಎಸ್.ಎಲ್.ಭೈರಪ್ಪ
೬೮ ೨೦೦೦ ಬಾಗಲಕೋಟೆ ಶಾಂತಾದೇವಿ ಮಾಳವಾಡ
೬೯ ೨೦೦೨ ತುಮಕೂರು ಯು.ಆರ್. ಅನಂತಮೂರ್ತಿ
೭೦ ೨೦೦೩ ಮೂಡುಬಿದಿರೆ ಕಮಲಾ ಹಂಪನಾ
೭೨ ೨೦೦೬ ಬೀದರ್ ಶಾಂತರಸ ಹೆಂಬೆರಳು
೭೩ ೨೦೦೭ ಶಿವಮೊಗ್ಗ ನಿಸಾರ್ ಅಹಮ್ಮದ್
೭೪ ೨೦೦೮ ಉಡುಪಿ ಎಲ್. ಎಸ್. ಶೇಷಗಿರಿ ರಾವ್
೭೫ ೨೦೦೯ ಚಿತ್ರದುರ್ಗ ಎಲ್. ಬಸವರಾಜು
೭೬ ೨೦೧೦ ಗದಗ ಗೀತಾ ನಾಗಭೂಷಣ
೭೭ ೨೦೧೧ ಬೆಂಗಳೂರು ಜಿ. ವೆಂಕಟಸುಬ್ಬಯ್ಯ
೭೮ ೨೦೧೨ ಗಂಗಾವತಿ ಸಿ.ಪಿ ಕೃಷ್ಣಕುಮಾರ್
೭೯ ೨೦೧೩ ವಿಜಾಪುರ ಕೋ.ಚನ್ನಬಸಪ್ಪ
೮೦ ೨೦೧೪ ಕೊಡಗು ನಾ ಡಿಸೋಜ
೮೧ ೨೦೧೫ ಶ್ರವಣಬೆಳಗೊಳ ಡಾ. ಸಿದ್ದಲಿಂಗಯ್ಯ

Tuesday 16 August 2016

ನನ್ನ ಟೀಚರ್ ಹೇಗಿರಬೇಕು ಗೊಯತ್ತಾ.

ನನ್ನ ಟೀಚರ್ ಹೇಗಿರಬೇಕು ಗೊತ್ತಾ..?

ಅರಿತೋ ಅರಿಯದೆಯೋ ನಾ ತಪ್ಪು ಮಾಡಿದರೂ ಸ್ನೇಹ ಪ್ರೀತಿಯಿಂದ  ತಿಳಿ ಹೇಳಿ ನನಗರಿತೋ ಅರಿಯದೆಯೋ  ನನ್ನೊಳಗಿರುವ ಒಂದಿಷ್ಟು ಪ್ರತಿಭೆಯನ್ನಾದರೂ ಹೆಕ್ಕಿ  ನನ್ನ ಆಸೆ ಕನಸುಗಳನ್ನು ಆಲಿಸಿ., ಆಸಕ್ತಿಗಳನ್ನೂ ಗಮನಿಸಿ ಹೆಚ್ಚು ಅವಕಾಶ ನೀಡಿ  ಪ್ರೋತ್ಸಾಹಿಸಬೇಕು.
ಅಂದಿನ ಪಾಠ ಅಂದು ಓದಿದರೂ ಸರಿ ಓದದಿದ್ದರೂ ಸರಿ,  ಅಂಕಪಟ್ಟಿ ತುಂಬಾ ಅತಿ ಹೆಚ್ಚು ಅಂಕ ಇದ್ದರೂ,  ಇರದಿದ್ದರೂ ಕಣ್ಣತುಂಬ ಕನಸು ಬಿತ್ತಿ ಬದುಕಿಗಾಗಿ ಸ್ಪಷ್ಟ ಗುರಿ ಬೆನ್ನತ್ತುವ ಕಾಯಕ ಕಲೆ  ಕರಗತಮಾಡಿಕೊಳ್ಳುವಂತೆ ಮಾಡಿದರೆ ಸಾಕು.ನನಗಾಗಿ ನಾನು ಭವಿಷ್ಯದ ಗುರಿ ಆಯ್ಕೆ ಮಾಡಿ ಮುನ್ನಡೆವ ಛಲಬಿತ್ತಿ ಉತ್ತಮ ಹವ್ಯಾಸಗಳನು ಮೈಗೂಡಿಸಿಕೊಳ್ಳುವಂತೆ ಮಾಡುವ  ಸೂಕ್ತ ಮಾರ್ಗದರ್ಶಕನಾಗಿರಬೇಕು. ಪರಿಶ್ರಮದ ದಾರಿಯಲ್ಲಿ  ಗುರಿಮುಟ್ಟುವವರೆಗೆ ಬಲತುಂಬುವ ತಂದೆ ತಾಯಿಯಂತಿರಬೇಕು. ಸಿಟ್ಟು ಸಿಡುಕತನವಿರದ ಶಾಂತ ಸ್ವರೂಪಿಯಾಗಿರಬೇಕು.ಜಾತಿ ,ಧರ್ಮದ ಅಂಧಾಬಿಮಾನದಿಂದ ಬೇಧಬಾವದಿಂದ ನೋಡದ ಮಾನವತಾವಾದಿಯಾಗಿರಬೇಕು.
ನನ್ನೊಳಗಿರುವ ಒಂದಿಷ್ಟು ಸೃಜನಶೀಲತೆಯನ್ನು  ಮುಕ್ತವಾಗಿ ಹೆಚ್ಚಿಸಿಕೊಳಲು  ನಮಗೆ ಸೂಕ್ತ ವೇದಿಕೆ ಕಲ್ಪಿಸುವ  ಆದರ್ಶಗುರುವಾಗಿರಬೇಕು. ಶಿಕ್ಷಕರು ಸ್ವತಹ ತಾವು ಅತ್ಯಂತ ಕ್ರಿಯಾಶೀಲರಾಗಿದ್ದು ಸದಾ ಉತ್ಸಾಹದಿಂದ ಚಟುವಟಿಕೆಯಿಂದ  ದೀಪದಂತೆ ಬೆಳಗುತ್ತಾ.   ನಮ್ಮನ್ನೂ ಜ್ಯೋತಿಯಂತೆ ಬೆಳಗಿಸಲು ಶ್ರಮಿಸುತ್ತಾ ಎಲ್ಲಾ ಮಕ್ಕಳ ಜೊತೆ ಬರೆಯಬೇಕು. ಅಗತ್ಯ ಬಿದ್ದರೆ ಸ್ವಲ್ಪ ಮಟ್ಟಿಗೆ ಮಾತಿನ ಪೆಟ್ಟು ನೀಡಲಿ , ಸ್ವಲ್ಪ ದೈಹಿಕ ದಂಡನೆಯನ್ನೂ ನೀಡಲಿ ಆದರೆ ಹೀಯಾಳಿಸಬಾರದು. ನನ್ನ ತಂದೆ ತಾಯಿಗೆ  ಸದಾ ನನ್ನ ಮೇಲೆ ಋಣಾತ್ಮಕ ಭಾವನೆ ಬರುವಂತೆ ನನ್ನ  ತಪ್ಪುಗಳನೆಲ್ಲಾ ಹೇಳಬಾರದು . ನನ್ನ ತಪ್ಪು ತಿದ್ದಿಕೊಳಲು ಉತ್ತಮ ಮಾರ್ಗದರ್ಶನ ನೀಡಬೇಕು.  ಅಂತಹ  ಸನ್ನಿವೇಶ ಸೃಷ್ಟಿಸಬೇಕು .
ಇಂದು  ನನಗಾಗಲಿ ನನ್ನ ಮಕ್ಕಳಿಗಾಗಲಿ ಅಂತಾ ಗುರುಗಳು ಸಿಕ್ಕಿರೂ ಕಲಿಸುವ ಮತ್ತು ಕಲಿಯುವವನ ನಡುವಿನ ವ್ಯವಸ್ಥೆ ನಮ್ಮಿಚ್ಚೆಯಂತೆ ಎಲ್ಲಾ ಕಲಿವ ಪ್ರಕ್ರಿಯೆ ಸರಾಗವಾಗಿ ನಡೆಯಲು ಪೂರಕವಾಗಿಲ್ಲ ಎನ್ನುವ  ವಿಪರ್ಯಾಸದೊಂದಿಗೆ ನನ್ನ ಅನಿಸಿಕೆಗೆ ಇಷ್ಟಕ್ಕೆ ಪೂರ್ಣ ವಿರಾಮ ಹಾಕುವೆ. #ರವಿರಾಜ್ ಸಾಗರ್.

Saturday 16 July 2016

ಇಲ್ಲದವರು

ಇಲ್ಲದವರು....

ಕಪ್ಪು ಮಣ್ಣಿನ ಜನ ನಾವು
ಕತ್ತಲಲ್ಲೇ ಉಳಿದಿಹೆವು
ಆಳಾಗಿ ದುಡಿದರೂ...
ಅರಸಾಗಲೇ ಇಲ್ಲ. ..
ಕೂನೆಗೂ ಒಂದು ರೂ ಕೆಜೆ ಅಕ್ಕಿ ಗತಿಯಾಯಿತಲ್ಲಾ...
ಕೂಲಿಗಾದರೂ ಉಳಿಯಲೆಂದು
ಉಳಿಸಿಕೊಂಡಿಹರೇನೋ......!!
ನಾ ಬೆಳೆದ ಬೆಳೆಗೆ ಬೆಲೆಯ ಕೊಡದೇ..!
ಊದುತಿಹರು ಉದ್ಯೋಗ ಖಾತ್ರಿ
ಪಂಚಾಯಿತಿಯವರ ಕೈಲಿ ನಗುತಿದೆ ಕತ್ತರಿ..
ಸರ್ಕಾರಗಳ ಹಳಿದರೇನುಂಟು....
ಎಲ್ಲಾ ಉಳ್ಳವರ ಅಟ್ಟಹಾಸ...
ಅಧಿಕಾರ ಬಯಕೆ
ಕಿತ್ತು ತಿನ್ನುತಿಹರು ನೂರು ಜಾತಿ ,ಧರ್ಮಗಳ ಒಡೆದು ಆಳುತಾ...
ಆಳುವವರೆಲ್ಲರೊಂದೆ ಒಂದೇ ದೋಣಿ ಕಳ್ಳರು...
ಆಡಿಕೊಳ್ಬೇಡಿ ...ನಾವು ಇಲ್ಲದವರು.
ಉಳಿದೀತೇ ಜಗ ಇಲ್ಲದವರು ಎಗರಿ ಸಿಡಿದರೇ.?
ಧನಿಯ ನೀಡಿ ನಮ್ಮ ಪರ
ನಾವು ಧನವಿಲ್ಲದವರು..
ಶತಮಾನಗಳ ಧಮನಿತರು
ಧಣಿಗಳಾಗೋ ಕನಸು ಹೊತ್ತ ಶ್ರಮಿಕರು.

#ರವಿರಾಜ್ ಸಾಗರ್.

Wednesday 22 June 2016

ಜಾಗತೀಕರಣ ನುಂಗಿದ ಹಳ್ಳಿಯ "ತಿಥಿ"

ಜಾಗತೀಕರಣ ನುಂಗಿದ ಹಳ್ಳಿಯ "ತಿಥಿ"
..........................................
ಈಗಾಗಲೇ 15 ರಾಷ್ಟ್ರೀಯ. .. ವಿವಿಧ ಅಂತರಾಷ್ಟೀಯ  ಪ್ರಶಸ್ತಿ ಪಡೆದು ಜಗತ್ತಿನೆಲ್ಲೆಡೆ  ಸುದ್ದಿಯಾಗುತ್ತಿರುವ  "ತಿಥಿ"
ಕನ್ನಡ ಸಿನಿಮಾ ರಂಗದ ವಿಶಿಷ್ಟ ಪ್ರಯೋಗ ಎನ್ನುವುದು ದೊಡ್ಡ ಹೆಮ್ಮೆ. .
ಇಂದಿನ ಜಾಗತೀಕರಣದ   ರಿಯಲ್ ಎಸ್ಟೇಟ್ ಉದ್ಯಮ,  ಮೊಬೈಲ್, ಜನರನ್ನು ಮರುಳು ಮಾಡಿರುವ ಪರಿ ಹಾಗೂ ಅಗತ್ಯ ಎನಿಸುವ  ದ್ವಂದ್ವ. . ಅಭಿರುಚಿ ತಪ್ಪಿದ  ಜನಗಳ ಬದುಕು  ಹಳ್ಳಿಗಳ ಬದಲಾವಣೆ ಎಲ್ಲವನ್ನೂ ಸರಳ  ನಿರೂಪಣೆಯ ಸಹಜ ಕತೆಯ  ಆಸಾಮಾನ್ಯ ಎನ್ನುವ ಪ್ರಯೋಗವಾಗಿಯೂ ಈ ಸಿನಿಮಾ ಅತಿ ವಿಶಿಷ್ಟವಾಗಿ ಪ್ರೇಕ್ಷಕರನ್ನು ಹತ್ತಿರ ಕರೆದು ಇದೂ ಒಂದು ಸಿನಿಮಾ ಹಾಗೂ ಅದರಾಚೆಯ ಪ್ರಯತ್ನ ಎನ್ನುವುದು ಮನದಟ್ಟು ಮಾಡಿ ಕಾಡುತ್ತದೆ.
        ಕನ್ನಡ ಸಿನಿಮಾ ನೋಡದೆ ಕೊರಗುತ್ತ ಅನ್ಯ ಭಾಷೆಯ ಸಿನಿಮಾ ಹೊಗಳುವವರು  ಇಂತಹ ವಿಶಿಷ್ಟ ಸಿನಿಮಾ ನೋಡಬೇಕು.  ಅದರ ಜೊತೆಗೆ "ಯು ಟರ್ನ್" ಕರ್ವ, "ಗೋಧಿ ಬಣ್ಣ ಸಾಧಾರಣ ಮೈಕಟ್ಟು"  ತುಂಬಾ ಚೆನ್ನಾಗಿದ್ದು ಕನ್ನಡ ಸಿನಿಮಾ ಉದ್ಯಮ ದತ್ತ ಎಲ್ಲ ನೋಡುವಂತೆ ಮಾಡಿವೆ. ಇನ್ನೂ ಸಂತೆಯಲ್ಲಿ ನಿಂತ ಕಬೀರ.. ರನ್ ಆಂಟನಿ , ತಮ್ಮ ವಿಶಿಷ್ಟತೆ ತೋರಿಸಲು ಸಿದ್ಧ ಆಗಿವೆ. ಇವೆಲ್ಲ ಸ್ವಮೇಕ್ ಆಗಿದ್ದು, ಹೊಸಬರವು ಎನ್ನುವುದು ವಿಶೇಷ. ಹೊಸಬರಿಗೆ ಮುಕ್ತ ಅವಕಾಶ ತೆರೆದಿಟ್ಟು ಡಬ್ಬಿಂಗ್ ಮಾರಿ ತಡೆದು ಚಿತ್ರರಂಗದ ಯಶಸ್ಸಿಗೆ ತೋಡೆ ತಟ್ಟಿನಿಂತ ಹಿರಿಯರು ಮತ್ತು ಶಿವಣ್ಣನ ನಾಯಕತ್ವದ ಪ್ರತಿಫಲ ಕೂಡ ಇಲ್ಲಿದೆ. ಹಲವು ತಂತ್ರಜ್ಞರ ಕನಸಿನ ಶ್ರಮ ಇದೆ. ಆದರೂ ನಮ್ಮ ಕನ್ನಡದ ಕೆಲವರು ಹಿತ್ತಲ ಗಿಡದ ಹೂವನ್ನು ಆಸ್ವಾದಿಸುವ  ಉದಾರತೆಯ ಕೊರತೆ ತೋರಿಸುತಿದ್ದಾರೆ. ಪಕ್ಕದ ತೋಟದ ಬೇಲಿ ಹಾರುವುದನ್ನು ಕಡಿಮೆ ಮಾಡಿ ಕನ್ನಡ ಸಿನಿಮಾ. ಸಾಹಿತ್ಯ, ನಾಟಕ ನೋಡಿ ಪ್ರೋತ್ಸಾಹಿಸೋಣ.
#ರವಿರಾಜ್ ಸಾಗರ್.#

ಜಾಗತೀಕರಣ ನುಂಗಿದ ಹಳ್ಳಿಯ "ತಿಥಿ"

ಜಾಗತೀಕರಣ ನುಂಗಿದ ಹಳ್ಳಿಯ "ತಿಥಿ"
..........................................
ಈಗಾಗಲೇ 15 ರಾಷ್ಟ್ರೀಯ. .. ವಿವಿಧ ಅಂತರಾಷ್ಟೀಯ  ಪ್ರಶಸ್ತಿ ಪಡೆದು ಜಗತ್ತಿನೆಲ್ಲೆಡೆ  ಸುದ್ದಿಯಾಗುತ್ತಿರುವ  "ತಿಥಿ"
ಕನ್ನಡ ಸಿನಿಮಾ ರಂಗದ ವಿಶಿಷ್ಟ ಪ್ರಯೋಗ ಎನ್ನುವುದು ದೊಡ್ಡ ಹೆಮ್ಮೆ. .
ಇಂದಿನ ಜಾಗತೀಕರಣದ   ರಿಯಲ್ ಎಸ್ಟೇಟ್ ಉದ್ಯಮ,  ಮೊಬೈಲ್, ಜನರನ್ನು ಮರುಳು ಮಾಡಿರುವ ಪರಿ ಹಾಗೂ ಅಗತ್ಯ ಎನಿಸುವ  ದ್ವಂದ್ವ. . ಅಭಿರುಚಿ ತಪ್ಪಿದ  ಜನಗಳ ಬದುಕು  ಹಳ್ಳಿಗಳ ಬದಲಾವಣೆ ಎಲ್ಲವನ್ನೂ ಸರಳ  ನಿರೂಪಣೆಯ ಸಹಜ ಕತೆಯ  ಆಸಾಮಾನ್ಯ ಎನ್ನುವ ಪ್ರಯೋಗವಾಗಿಯೂ ಈ ಸಿನಿಮಾ ಅತಿ ವಿಶಿಷ್ಟವಾಗಿ ಪ್ರೇಕ್ಷಕರನ್ನು ಹತ್ತಿರ ಕರೆದು ಇದೂ ಒಂದು ಸಿನಿಮಾ ಹಾಗೂ ಅದರಾಚೆಯ ಪ್ರಯತ್ನ ಎನ್ನುವುದು ಮನದಟ್ಟು ಮಾಡಿ ಕಾಡುತ್ತದೆ.
        ಕನ್ನಡ ಸಿನಿಮಾ ನೋಡದೆ ಕೊರಗುತ್ತ ಅನ್ಯ ಭಾಷೆಯ ಸಿನಿಮಾ ಹೊಗಳುವವರು  ಇಂತಹ ವಿಶಿಷ್ಟ ಸಿನಿಮಾ ನೋಡಬೇಕು.  ಅದರ ಜೊತೆಗೆ "ಯು ಟರ್ನ್" ಕರ್ವ, "ಗೋಧಿ ಬಣ್ಣ ಸಾಧಾರಣ ಮೈಕಟ್ಟು"  ತುಂಬಾ ಚೆನ್ನಾಗಿದ್ದು ಕನ್ನಡ ಸಿನಿಮಾ ಉದ್ಯಮ ದತ್ತ ಎಲ್ಲ ನೋಡುವಂತೆ ಮಾಡಿವೆ. ಇನ್ನೂ ಸಂತೆಯಲ್ಲಿ ನಿಂತ ಕಬೀರ.. ರನ್ ಆಂಟನಿ , ತಮ್ಮ ವಿಶಿಷ್ಟತೆ ತೋರಿಸಲು ಸಿದ್ಧ ಆಗಿವೆ. ಇವೆಲ್ಲ ಸ್ವಮೇಕ್ ಆಗಿದ್ದು, ಹೊಸಬರವು ಎನ್ನುವುದು ವಿಶೇಷ. ಹೊಸಬರಿಗೆ ಮುಕ್ತ ಅವಕಾಶ ತೆರೆದಿಟ್ಟು ಡಬ್ಬಿಂಗ್ ಮಾರಿ ತಡೆದು ಚಿತ್ರರಂಗದ ಯಶಸ್ಸಿಗೆ ತೋಡೆ ತಟ್ಟಿನಿಂತ ಹಿರಿಯರು ಮತ್ತು ಶಿವಣ್ಣನ ನಾಯಕತ್ವದ ಪ್ರತಿಫಲ ಕೂಡ ಇಲ್ಲಿದೆ. ಹಲವು ತಂತ್ರಜ್ಞರ ಕನಸಿನ ಶ್ರಮ ಇದೆ. ಆದರೂ ನಮ್ಮ ಕನ್ನಡದ ಕೆಲವರು ಹಿತ್ತಲ ಗಿಡದ ಹೂವನ್ನು ಆಸ್ವಾದಿಸುವ  ಉದಾರತೆಯ ಕೊರತೆ ತೋರಿಸುತಿದ್ದಾರೆ. ಪಕ್ಕದ ತೋಟದ ಬೇಲಿ ಹಾರುವುದನ್ನು ಕಡಿಮೆ ಮಾಡಿ ಕನ್ನಡ ಸಿನಿಮಾ. ಸಾಹಿತ್ಯ, ನಾಟಕ ನೋಡಿ ಪ್ರೋತ್ಸಾಹಿಸೋಣ.
#ರವಿರಾಜ್ ಸಾಗರ್.#