ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Tuesday 16 August 2016

ನನ್ನ ಟೀಚರ್ ಹೇಗಿರಬೇಕು ಗೊಯತ್ತಾ.

ನನ್ನ ಟೀಚರ್ ಹೇಗಿರಬೇಕು ಗೊತ್ತಾ..?

ಅರಿತೋ ಅರಿಯದೆಯೋ ನಾ ತಪ್ಪು ಮಾಡಿದರೂ ಸ್ನೇಹ ಪ್ರೀತಿಯಿಂದ  ತಿಳಿ ಹೇಳಿ ನನಗರಿತೋ ಅರಿಯದೆಯೋ  ನನ್ನೊಳಗಿರುವ ಒಂದಿಷ್ಟು ಪ್ರತಿಭೆಯನ್ನಾದರೂ ಹೆಕ್ಕಿ  ನನ್ನ ಆಸೆ ಕನಸುಗಳನ್ನು ಆಲಿಸಿ., ಆಸಕ್ತಿಗಳನ್ನೂ ಗಮನಿಸಿ ಹೆಚ್ಚು ಅವಕಾಶ ನೀಡಿ  ಪ್ರೋತ್ಸಾಹಿಸಬೇಕು.
ಅಂದಿನ ಪಾಠ ಅಂದು ಓದಿದರೂ ಸರಿ ಓದದಿದ್ದರೂ ಸರಿ,  ಅಂಕಪಟ್ಟಿ ತುಂಬಾ ಅತಿ ಹೆಚ್ಚು ಅಂಕ ಇದ್ದರೂ,  ಇರದಿದ್ದರೂ ಕಣ್ಣತುಂಬ ಕನಸು ಬಿತ್ತಿ ಬದುಕಿಗಾಗಿ ಸ್ಪಷ್ಟ ಗುರಿ ಬೆನ್ನತ್ತುವ ಕಾಯಕ ಕಲೆ  ಕರಗತಮಾಡಿಕೊಳ್ಳುವಂತೆ ಮಾಡಿದರೆ ಸಾಕು.ನನಗಾಗಿ ನಾನು ಭವಿಷ್ಯದ ಗುರಿ ಆಯ್ಕೆ ಮಾಡಿ ಮುನ್ನಡೆವ ಛಲಬಿತ್ತಿ ಉತ್ತಮ ಹವ್ಯಾಸಗಳನು ಮೈಗೂಡಿಸಿಕೊಳ್ಳುವಂತೆ ಮಾಡುವ  ಸೂಕ್ತ ಮಾರ್ಗದರ್ಶಕನಾಗಿರಬೇಕು. ಪರಿಶ್ರಮದ ದಾರಿಯಲ್ಲಿ  ಗುರಿಮುಟ್ಟುವವರೆಗೆ ಬಲತುಂಬುವ ತಂದೆ ತಾಯಿಯಂತಿರಬೇಕು. ಸಿಟ್ಟು ಸಿಡುಕತನವಿರದ ಶಾಂತ ಸ್ವರೂಪಿಯಾಗಿರಬೇಕು.ಜಾತಿ ,ಧರ್ಮದ ಅಂಧಾಬಿಮಾನದಿಂದ ಬೇಧಬಾವದಿಂದ ನೋಡದ ಮಾನವತಾವಾದಿಯಾಗಿರಬೇಕು.
ನನ್ನೊಳಗಿರುವ ಒಂದಿಷ್ಟು ಸೃಜನಶೀಲತೆಯನ್ನು  ಮುಕ್ತವಾಗಿ ಹೆಚ್ಚಿಸಿಕೊಳಲು  ನಮಗೆ ಸೂಕ್ತ ವೇದಿಕೆ ಕಲ್ಪಿಸುವ  ಆದರ್ಶಗುರುವಾಗಿರಬೇಕು. ಶಿಕ್ಷಕರು ಸ್ವತಹ ತಾವು ಅತ್ಯಂತ ಕ್ರಿಯಾಶೀಲರಾಗಿದ್ದು ಸದಾ ಉತ್ಸಾಹದಿಂದ ಚಟುವಟಿಕೆಯಿಂದ  ದೀಪದಂತೆ ಬೆಳಗುತ್ತಾ.   ನಮ್ಮನ್ನೂ ಜ್ಯೋತಿಯಂತೆ ಬೆಳಗಿಸಲು ಶ್ರಮಿಸುತ್ತಾ ಎಲ್ಲಾ ಮಕ್ಕಳ ಜೊತೆ ಬರೆಯಬೇಕು. ಅಗತ್ಯ ಬಿದ್ದರೆ ಸ್ವಲ್ಪ ಮಟ್ಟಿಗೆ ಮಾತಿನ ಪೆಟ್ಟು ನೀಡಲಿ , ಸ್ವಲ್ಪ ದೈಹಿಕ ದಂಡನೆಯನ್ನೂ ನೀಡಲಿ ಆದರೆ ಹೀಯಾಳಿಸಬಾರದು. ನನ್ನ ತಂದೆ ತಾಯಿಗೆ  ಸದಾ ನನ್ನ ಮೇಲೆ ಋಣಾತ್ಮಕ ಭಾವನೆ ಬರುವಂತೆ ನನ್ನ  ತಪ್ಪುಗಳನೆಲ್ಲಾ ಹೇಳಬಾರದು . ನನ್ನ ತಪ್ಪು ತಿದ್ದಿಕೊಳಲು ಉತ್ತಮ ಮಾರ್ಗದರ್ಶನ ನೀಡಬೇಕು.  ಅಂತಹ  ಸನ್ನಿವೇಶ ಸೃಷ್ಟಿಸಬೇಕು .
ಇಂದು  ನನಗಾಗಲಿ ನನ್ನ ಮಕ್ಕಳಿಗಾಗಲಿ ಅಂತಾ ಗುರುಗಳು ಸಿಕ್ಕಿರೂ ಕಲಿಸುವ ಮತ್ತು ಕಲಿಯುವವನ ನಡುವಿನ ವ್ಯವಸ್ಥೆ ನಮ್ಮಿಚ್ಚೆಯಂತೆ ಎಲ್ಲಾ ಕಲಿವ ಪ್ರಕ್ರಿಯೆ ಸರಾಗವಾಗಿ ನಡೆಯಲು ಪೂರಕವಾಗಿಲ್ಲ ಎನ್ನುವ  ವಿಪರ್ಯಾಸದೊಂದಿಗೆ ನನ್ನ ಅನಿಸಿಕೆಗೆ ಇಷ್ಟಕ್ಕೆ ಪೂರ್ಣ ವಿರಾಮ ಹಾಕುವೆ. #ರವಿರಾಜ್ ಸಾಗರ್.

1 comment: