ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Wednesday 2 September 2020

ಮಕ್ಕಳ ಸಂರಕ್ಷಣೆ, ಸೈಬರ್ ಕ್ರೈಮ್ ಕುರಿತು ಪೊಲೀಸ್ ಪ್ರಕಟಣೆ, ಸಾರ್ವಜನಿಕ ಸಂದೇಶಗಳು

*ಶಿವಮೊಗ್ಗ ಜಿಲ್ಲಾ ಪೊಲೀಸ್* 
*ಸಿ.ಇ.ಎನ್, ಮತ್ತು ಅಪರಾಧ ಪೋಲೀಸ್ ಠಾಣೆ ಶಿವಮೊಗ್ಗ ಜಿಲ್ಲೆ*
             *ಸಾರ್ವಜನಿಕ ಸಂದೇಶಗಳು*
1.
ಸುಂದರ ಯುವತಿಯರ ಫೋಟೋ ಹಾಕಿಕೊಂಡು ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ನಂತರ ಪೋನ್ ನಂಬರ್ ಪಡೆದುಕೊಂಡು ವೀಡಿಯೋ ಕಾಲ್ ಮಾಡಿ, ಬಟ್ಟೆ ತೆಗೆದು ನಗ್ನವಾಗಿ ಮಾತಾಡಿ ನಂತರ ಸದರಿ ವೀಡಿಯೋವನ್ನು ಪೇಸ್ ಬುಕ್ ನಲ್ಲಿ ಶೇರ್ ಮಾಡುವುದಾಗಿ ಹೆದರಿಸಿ ಹಣ ಕೀಳುವವರ ಬಗ್ಗೆ ಎಚ್ಚರಿಕೆಯಿಂದಿರಿ. ( ಸೆಕ್ಸ್ ಟಾರ್ಷನ್ ) ಅಪರಿಚಿತ ವ್ಯಕ್ತಿ ಗಳ ಪ್ರೆಂಡ್ ರಿಕ್ವೆಸ್ಟ್ ಅಕ್ಸೆಪ್ಟ್ ಮಾಡಬೇಡಿ.

2.
ಆರೋಪಿಗಳು  ಬ್ಯಾಂಕ್ ಮಾನೇಜರ್ ಎಂದು 

 ನಿಮ್ಮ ATM BLOCK
ಆಗಿದೆ ಎಂದು ಫೋನ್ ಮಾಡಿ CARD NO/CVV NO/ OTP ಅನ್ನು ಪಡೆದು ಮೋಸ ಮಾಡುವರು.
ಈ ಬಗ್ಗೆ ಎಚ್ಚರ ಇರಲಿ, ಯಾರಿಗೂ ಯಾವುದೇ ಕಾರಣಕ್ಕೂ OTP ಅನ್ನು ನೀಡಬೇಡಿ. .!

3.
ಗೂಗಲ್ ನಲ್ಲಿ ಮತ್ತು ಟ್ರೂ  ಕಾಲರ್ ನಲ್ಲಿ ಸಿಗುವ ಎಲ್ಲಾ ಮಾಹಿತಿಗಳು ನಿಜವೆಂದು
ನಂಬಬೇಡಿ. ಗೂಗಲ್ ಪೇ,ಪೋನ್ ಪೇ ಇತ್ಯಾದಿಗಳ ಬಗ್ಗೆ ಅರಿವಿಲ್ಲದೇ ಅವುಗಳನ್ನು ಹಣ ವರ್ಗಾವಣೆಗೆ ಬಳಸಬೇಡಿ.
 ಯಾವುದೆ ಲಿಂಕ್ ಸಂದೇಶಗಳನ್ನು ಕ್ಲಿಕ್ ಮಾಡಬೇಡಿ & ಫಾರವರ್ಡ ಮಾಡಬೇಡಿ.

4, 
ಕ್ಲಬ್ ಫ್ಯಾಕ್ಟರಿ ಮತ್ತು ಇತರೆ ಸೈಟ್ ಗಳ ನಕಲಿ ಕಸ್ಟಮರ್ ಕೇರ್ ನಂಬರ್‌ಗಳಿಗೆ ಕಾಲ್ ಮಾಡಿ
ಮೋಸ ಹೋಗಬೇಡಿ.

5, 
ಕೌನ್ ಬನೇಗಾ ಕರೋಡ್ ಪತಿ ,ಭಾರಿ ಮೊತ್ತದ ಲಾಟರಿ ↑ ದಿನಪತ್ರಿಕೆ, ಟಿವಿ ಮಾಧ್ಯಮಗಳ
ಮೂಲಕ ಜಾಹೀರಾತು ನೀಡಿ ಆಮಿಷಗಳ ಮೂಲಕ ಟ್ರಾನ್ಸ್‌ಪೋರ್ಟ್ ಫಿ, ಇತ್ಯಾದಿ
ಫೀಗಳೆಂದು ಅವರ ಖಾತೆಗಳಿಗೆ ಹಣ ಹಾಕಿಸಿಕೊಳ್ಳುವ ವಂಚಕರಿಂದ ದೂರವಿರಿ.!

6. 
ಸೈನಿಕರ/ಯೋಧರ ಹೆಸರಿನಲ್ಲಿ ಆನ್ ಲೈನ್ ಮೂಲಕ OLX ಹಾಗೂ ಇತರೆ ವೆಬ್ ಸೈಟ್ ಗಳ
ಮೂಲಕ ಕಡಿಮೆ ಬೆಲೆಗೆ ಬೈಕ್, ಕಾರು ಇತ್ಯಾದಿ ಕೊಡುವುದಾಗಿ ನಂಬಿಸಿ ಮೋಸ
ಮಾಡುವವರಿದ್ದಾರೆ ಹುಷಾರಾಗಿರಿ.

7, 
ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಪೋಟೋ/ವೀಡಿಯೋ ಕಳುಹಿಸುವವರ ಮತ್ತು ನಕಲಿ
- ಅಕೌಂಟ್ ಕ್ರಿಯೇಟ್ ಮಾಡುವವರ ವಿರುದ್ದ ಕಾನೂನು ಕ್ರಮ ಜರುಗಿಸಲಾಗುವುದು.

8. 
ಎಟಿಎಂ ಕಾರ್ಡಗಳನ್ನು ಬಳಸದೇ ಇದ್ದಾಗ ಅವುಗಳನ್ನು SWITCH OFF / SWITCH ON ಮಾಡುವ ಹಾಗೂ ಎಟಿಎಂ ಕಾರ್ಡನ ದಿನದ ವ್ಯವಹಾರದ ಮಿತಿಯನ್ನು ನಿಗದಿಗೊಳಿಸುವ ಸುರಕ್ಷತಾ
ಆ್ಯಪ್ ಗಳನ್ನು ಬ್ಯಾಂಕ್ ಅಧಿಕಾರಿಗಳನ್ನು ಸಂಪರ್ಕಿಸಿ ಸಲಹೆ ಪಡೆದು ಬಳಸಿ. 
ಎಟಿಎಂ ಸೆಂಟರ್‌ನಲ್ಲಿ ಸಹಾಯ ಮಾಡುವ ನೆಪದಲ್ಲಿ ಎಟಿಎಂ ಕಾರ್ಡಗಳನ್ನು ನಿಮಗೆ
ಗೊತ್ತಿಲ್ಲದಂತೆ ಬದಲಿಸಿ ಮೋಸ ಮಾಡುವವರ ಬಗ್ಗೆ ಎಚ್ಚರವಿರಲಿ

9, 
ಮಕ್ಕಳ ಅಶ್ಲೀಲ, ಲೈಂಗಿಕ ದೃಶ್ಯದ ಫೋಟೋ  ವೀಡಿಯೋಗಳನ್ನು ವೀಕ್ಷಿಸುವುದು, ಡೌನ್
- ಲೋಡ್ ಮಾಡುವುದು, ಶೇಖರಣೆ ಮಾಡುವುದು ಹಾಗೂ ಫಾರ್‌ವರ್ಡ ಮಾಡುವುದು ಶಿಕ್ಷಾರ್ಹ ಅಪರಾಧವಾಗಿರುತ್ತದೆ,
10, ಸಾರ್ವಜನಿಕರು ಸೈಬರ್ ಕ್ರೈಂಗೆ ಸಂಬಂಧಪಟ್ಟ ದೂರುಗಳನ್ನು ಆನ್ ಲೈನ್
- ಮೂಲಕವೂ ದಾಖಲಿಸಬಹುದು. ವಿಳಾಸ:www.cybercrime.gov.in
- ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:-
ಜಿಲ್ಲಾಪೋಲೀಸ್ ಕಂಟ್ರೋಲ್‌ರೂಂ ನಂ. 100/08182-261413
ಸಿ.ಇ.ಎಫ್. ಕೈಂ ಪೊಲೀಸ್ ಠಾಣೆ ನಂ. 08182-261426,ಮೊ: 9480803383

No comments:

Post a Comment