ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Thursday 11 July 2019

ನಿಮ್ಮ ವಾಹನಗಳ ಸರ್ವಿಸ್ ಸೆಂಟರ್ ನಲ್ಲಿ ಮೋಸ ಮಾಡಬಹುದಾದ ಈ ವಿಚಾರ ತಿಳಿಯಿರಿ

6 ತಿಂಗಳಿಗೊಮ್ಮೆ ಗಾಡಿ ಓದ್ಲಿ ಬಿಡ್ಲಿ ಸರ್ವಿಸ್ ಮಾಡ್ಸಿ ಸರ್..!
ಅಯೂ 5000 km ಓದ್ಬಿಟ್ಟಿದೆ ಎಂಜಿನ್ ಆಯಿಲ್ ಚೇಂಜ್ ಮಾಡ್ಬೇಕು ಸರ್...!
ಮೈಲೇಜ್,ಪಿಕಪ್ ಬರ್ತಾ ಇಲ್ವಾ ಸರ್ವಿಸ್ ಮಾಡ್ಸಿಬಿಡಿ ಸರ್ ಎಲ್ಲ ಸರಿ ಆಗುತ್ತೆ
ಗಾಡಿ ಜಿಂಕೆ ಜಿಂಕೆ ತರ ಓಡುತ್ತೆ ನೋಡಿ.

ಹಿಂಗೆಲ್ಲ showroom  service  center , authorised  service  center  or  general  service  center ಗಳಿಗೆ ಹೋದ  ತಕ್ಷಣ ಸರ್ವಿಸ್ advisergalu ಹೇಳೋ ಮೊದಲ್ನೇ ಮಾತ್ಗಳು ಇವೆ ಅಲ್ವಾ.
ನಮಗೆ ಏನ್ ಗೊತ್ತು ಅವರು ಹೇಳಿದ್ದನ್ನ ನಂಬಿಕೊಂಡು ಗಾಡಿ ನ ಕೊಟ್ಟು ಸರಿ ಮಾಡ್ಕೊಡಪ್ಪ ಅಂತ ಹೇಳಿ ಬರ್ತೀವಿ.
ಅವರು  ಕೊಡೊ estimation  ನೋಡಿ ಸರಿ ಮಾಡಿ ಕೆಲಸ ಅಂತ ಹೇಳಿ ಸ್ವಲ್ಪ ನೋಡಿ ಗಾಡಿ ಸರಿಯಾಗಿ service  ಮಾಡಿ ಅಂತ ಹೇಳಿ ಬರ್ತಿತಿವಿ.
ಅವರ estimation  ಯಾವತ್ತಾದ್ರೂ 1500  ರೂಪಾಯಿಗಿಂತ ಕಡಿಮೆ ಇದ್ದಿದ್ದು ನೋಡಿದೀರಾ. ಎಲ್ಲ ಸರಿ ಇರೋ bike  ಅಲ್ಲಿ Engine oil  change  ಮಾಡೋಕೆ 1500  ರೂಪಾಯಿ ಬೇಕಾ ಅನ್ನೋ ಚಿಂತೆ ನಾವ್ ಯಾವತ್ತೂ ಮಾಡಿರಲ್ಲ. ಅಲ್ಲಾ 5000 km  oil  change  ಮಾಡ್ಲೆ ಬೇಕು ಅಂತ ಹೇಳ್ತಾರಲ್ವಾ oil  change  ಮಾಡಿದ್ದಾರ ಇಲ್ವಾ ಅಂತ ನಮಗೆ ಹೀಗ್ ಗೊತ್ತಾಗುತ್ತೆ..?
ಎಲ್ಲ ಎಸ್ಟಿಮೇಶನ್ ಅಲ್ಲೂ(1500 ) .
೧. general  check  up .
೨. air  filter  change .
೩. engine  oil  change
ಇದ್ದೆ ಇರುತ್ತೆ.
ಈ general  check  up  ಅಂದ್ರೆ ಏನು..?
ಬ್ರೇಕ್ , ಕ್ಲಚ್ , ಚೈನ್ ಟೈಟ್ ಇಷ್ಟೇ

air  filter  change  ಅಂತಾರಲ್ವಾ. ಯಾಕ್ air  filter  change  ಮಾಡಬೇಕು..? air  filter  ಹರ್ದು ಹೋಗಿದ್ರೆ ಮಾತ್ರ ಏರ್ ಫಿಲ್ಟರ್ ಚೇಂಜ್ ಮಾಡ್ಸಿ ಇಲ್ಲ ಅಂದ್ರೆ ಅದನ್ನೇ ಕ್ಲೀನ್ ಮಾಡ್ಸಿ ಹಾಕ್ಬೋದು. ಬಹುತೇಕ service  center  ಗಳು ಇದನ್ನೇ ಮಾಡೋದು. ಬಿಲ್ ಮಾತ್ರ ಏರ್ ಫಿಲ್ಟರ್ ಚೇಂಜ್.  ಮಾಡೋದು ಕ್ಲೀನ್ ಅಂಡ್ ರೆಫಿಟ್. ಪಾಪ ನಮ್ಮ ಜನಕ್ಕೆ ಇದೆಲ್ಲ ಗೊತಾಗೋಲ್ಲ ನಂಬ್ಕೊಂಡ್ ಕೂರ್ತ್ರರೇ.

ಇನ್ನು ಆಯಿಲ್ ಚೇಂಜ್. ಸರಿ ಸಿಂಥೆಟಿಕ್ ಓಇಲ್ಡ್ ನೇ ಚೇಂಜ್ ಮಾಡಬೇಕು ಅಂತ ಯಾಕ್ ಫೋರ್ಸ್ ಮಾಡ್ತಾರೆ ಗೊತ್ತ..?
normal  grade  oil  ಅಲ್ಲಿ ಅವ್ರಿಗೆ ಲಾಭ ಇಲ್ಲ ಅದಿಕ್ಕೆ. ನಿಮ್ಮ ವಾಹನಕ್ಕೆ use  ಮಾಡೋ normal  oil  ನಿಮ್ಮ engine  ಗೆ ಸರಿ ಆಗೋ ಅಂತ oil  type  and  grade  without  synthetic  version  ನಲ್ಲೂ ಸಿಕ್ಕುತ್ತೆ ಅದರ ದರ sinthatic  ಗಿಂತ ಅರ್ಧಕ್ಕಿಂತ  ಕಡಿಮೆ ಬೆಲೆ ಇರುತ್ತೆ. ನಿಮ್ಮನ್ನು ದಾರಿ ತಪ್ಪಿಸಲು synthetic  oil  best  sir  ಅಂತಾರೆ, ಯಾಕೆ ಅಂದ್ರೆ pick  up  super  sir  ಅಂತಾರೆ. synthetic  ಆಯಿಲ್ ಹಾಕಿದ್ ತಕ್ಷಣ 100 cc ಗಾಡಿ 1000  cc  ಪಿಕ್ ಅಪ್ ಕೊಡೋಕ್ ಆಗುತ್ತಾ ಹೇಳಿ. ಆದ್ರೆ ನಮ್ಮನ್ನ ನಂಬಿಸ್ತಾರೆ. ನಾವು ನಮ್ಮ ಗಾಡಿ ಗೆ ಒಳ್ಳೇದು ಅಂತ ಹಕುಸ್ಕೊತೀವಿ. ನಿಜ ಹೇಳ್ಬೇಕು ಅಂದ್ರೆ ಸಿಂಥೆಟಿಕ್ ಬೇಕಾಗೇ ಇಲ್ಲ ನಮ್ಮ ದೇಶದಲ್ಲಿ. ಕಾಶ್ಮಿರ ದಂತಹ cold  area  ಲಿ ಬೇಕು but  ಬೆಂಗಳೂರಿನಲ್ಲಿ ಯಾಕ್ synthetic  ಹೇಳಿ.

ಹೆಚ್ಚಿನ ಸರ್ವಿಸ್ ಸ್ಟೇಷನ್ ಗಳು ಸರ್ವಿಸ್ ಮಾಡದೇ ಬಿಲ್ ಮಾಡಿರೋ ಉದಾಹರಣೆ ಇದೆ. ಲಿಸ್ಟ್ ಅಲ್ಲಿ ಇರೋ ಕೆಲಸ ಮಾಡದೇ ಪ್ರಾಮಾಣಿಕವಾಗಿ ವಾಹನಗಳ ಸರ್ವಿಸ್ ಮಾಡದೇ ಅರ್ಧಂಬರ್ಧ ಕೆಲಸ ಮಾಡಿ ದುಡ್ಡು ತಗೊಳ್ತಾ ಇದಾರೆ. ವಾಹನಗಳ ಹೆಚ್ಚಿನ ಬಿಡಿಭಾಗಗಳು ಅಷ್ಟು ಸುಲಭಕ್ಕೆ ಹಾಳಾಗುವವಲ್ಲ ಆದರೆ ಈ ಅಡ್ವೈಸರ್ ಗಾಲ ಮಾತ್ ನಂಬಿಕೊಂಡು ನಮ್ಮ ಗಾಡಿ ಮತ್ತು ನಮ್ಮ ಹಣವನ್ನು ಇವರ ಬಾಯ್ಗೆ ಸುರಿತ ಇದೀವಿ.

ಇನ್ನು GST ಬಗ್ಗೆ ಮಾತಾಡೋಣ್ವ...
ಬಿಲ್ ನಲ್ಲಿ ಸಾಚಾಗಲ ತರ GST ಪ್ರಿಂಟ್ ಮಾಡೋ ಇವರು 100  ರಲ್ಲಿ 40 % GST ಕಟ್ಟೋದೆ ಇಲ್ಲ. ಆದ್ರೆ ಗ್ರಹಕಾರತ್ರ GST ವಸೂಲಿ ಮಾಡಿ ತಮ್ಮ ಲಾಭಂಶ ಜಾಸ್ತಿ ಮಾಡಿಕೊಳ್ತಿದಾರೆ.
ಅಲ್ಲಿ ಕಟ್ಟೋ GST ಅನ್ನು ನಾವು ನಮ್ಮ ರಿಟರ್ನ್ಸ್ ಅಲ್ಲಿ ತೋರಿಸಿಕೊಳ್ಳಬಹುದು ಆದರೆ ಸರ್ವಿಸ್ ಸ್ಟೇಷನ್ ನಲ್ಲಿ ಕಟ್ಟೋದೆ ಇಲ್ಲ.

ಎಚ್ಚರ ಗ್ರಾಹಕ ಎಚ್ಚರ. ದಯಮಾಡಿ ಕಣ್ಣು ಮುಚ್ಚಿ service  station  ಗಳನ್ನ ನಂಬಬೇಡಿ. ಪೆ ಮಾಡೋ ಮೊದಲು ಮಾಡಿರೋ ಕೆಲಸ explain  ಮಾಡೋಕ್ ಹೇಳಿ. ಕಂಪೈರ್ ಮಾಡಿ. ಬಿಡಿಬಾಗ ಬದಲಾವಣೆಯ ಬಿಲ್ ಇದ್ರೆ ಹಳೆ ಭಾಗಗಳನ್ನ ಕೊಡೋದಿಕ್ಕೆ ಹೇಳಿ. ಎಚ್ಚರ ವಹಿಸಿ ಮೋಸ ಹೋಗದಿರಿ

ಈ information usefull ಆಗ್ಬಹುದು ಅಂತ ಬಯಸುತ್ತೇವೆ. ಇಷ್ಟ ಆಗಿದ್ರೆ ನಮ್ಮ್ ಬ್ಲಾಗ್ subskrib ಮಾಡಿ.. Keep supporting us . 🙏🙏🙏👍👍👍
ವಾಟ್ಸಾಪ್ ಕೃಪೆ ಮಾಹಿತಿ ಸಂಗ್ರಹ

No comments:

Post a Comment