ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Thursday 18 July 2019

ಒಲವಿನ ಪಂಚಾಂಗ

ಒಲವಿನ ಪಂಚಾಂಗ
""""""""""""""""
ನಾ ಏನಂದರೂ ಮುನಿಯಳು ಅವಳು 
ಸದಾ ಚಂದ್ರ ಮುಖಿ, ಹಸನ್ಮುಖಿ. ..
ನಾನು ಜ್ವಾಲಾಮುಖಿ. !
ಅದರೂ ಅವಳ ಪ್ರೇಮದ ಪರಿಗೆ
ಕರಗಿದ ನಾನು ನಿತ್ಯ ಸುಖಿ...!
           ಕ್ಷಮಯಾ ಧರಿತ್ರಿ...
           ರವಿಯ  ಸದಾ ಸುತ್ತುವಳು...
            ಪ್ರೇಮದ  ಕಕ್ಷೆಯಲಿ..
ಕೆಲವೊಮ್ಮೆ  ದುತ್ತನೆ 
ಗ್ರಹಣ ಎದುರಾಗುವುದು..!.
ಆದರೂ. ..
ಒಲವಿನ ಪಂಚಾಂಗದಲಿ
ಸಹಬಾಳ್ವೆಯ  ಸಂವತ್ಸರ..
ಪ್ರೇಮ ಶಕೆ,  ಪ್ರೀತಿ ಪರ್ವ.
ಪ್ರಣಯ ಋತು,ಶೃಂಗಾರ  ಮಾಸ.!.

No comments:

Post a Comment