ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Friday 14 October 2016

ಕೃಷಿ ಉದ್ಯಮಾಧಿಪತ್ಯ ಯಾರ ಕೈಲಿದೆ..?

ಕೃಷಿ ಉಧ್ಯಮಾಧಿಪತ್ಯ ಯಾರ ಕೈಲಿದೆ...?

ರೈತರಿಗಾಗಿ ಸ್ವತಂತ್ರ ಭಾರತದಲ್ಲಿ 60 ವರ್ಷಗಳಿಂದ  ಅದೆಷ್ಟು ಯೋಜನೆಗಳು ಬಂದಿವೆ.ಅದೆಷ್ಟು ಸಹಸ್ರ ಲಕ್ಷ ಕೋಟಿ ರೂಪಾಯಿ ಅನುದಾನ ಮಂಜೂರು ಮಾಡಲಾಗಿದೆ ಎಂದು ಲೆಕ್ಕ ಹಾಕಿದರೆ ಭಾರತದ ರೈತರಿಗೆ ಅದನ್ನು ನೇರವಾಗಿ ಹಂಚಿದ್ದರೆ ಅವರೆಲ್ಲ  ಲಕ್ಷಾದೀಶರಾಗಿ ಇರುತ್ತಿ ದರು.ಆದರೆ ಹಾಗಾಗಲೇ ಇಲ್ಲ. ಬದಲಾಗಿ ಕೃಷಿ ಭೂಮಿ ಕಾರ್ಖಾನೆ, ರಿಯಲ್ ಎಸ್ಟೇಟ್ ಉದ್ಯಮ ಕ್ಕೆ ಬಲಿಯಾಯಿತು.
ಆದರೆ ಹಣ ಏನಾಯಿತು . .? ರೈತರ ಹೆಸರಿನ ಯೋಜನೆಗಳ ಹಣ ಅನುಷ್ಠಾನದ ಮಾರ್ಗದಲ್ಲಿಯೇ ಮಂತ್ರಿಗಳು. ರಾಜಕೀಯ ಪಕ್ಷಗಳ ನಾಯಕರು, ಅಧಿಕಾರ ಶಾಹಿಗಳು... ಉದ್ಯಮಿಗಳ ಮನೆ ಸೇರಿ ಅವರ ಆಸ್ತಿ  ಏಣಿಸಲಾಗದಷ್ಟು ಬೆಳೆಯಿತೇ ಹೊರತು ರೈತ ಉದ್ದಾರ ಸಾಧ್ಯ ಆಗಲಿಲ್ಲ.
       ತಾವು ದುಡಿದು ಬಂಡವಾಳ ಹೂಡಿಕೆ ಮಾಡಿ ತಮ್ಮ ಹೊಲದಲಿ ಬೆಳೆಬೆಳೆದ ಬೆಳೆಗೆ ರೈತರಿಗೆ ಲಾಭದ ಬೆಲೆಗೆ ಮಾರಾಟ ಮಾಡುವ  ವ್ಯವಸ್ಥೆ ಇಲ್ಲ. ಆದರೆ ಯಾರನ್ನೋ ದುಡಿಸಿ... ಯಾರದೋ ಕಚ್ಚಾ ವಸ್ತು ಬಳಸುವ ಕಾರ್ಖಾನೆ ಮಾಲೀಕರು, ಉದ್ಯಮಿಗಳು ತಮ್ಮ ಉತ್ಪನ್ನ ವನ್ನು ತಮಗಿಷ್ಟ ಬಂದ ಲಾಭಕ್ಕೆ ಮಾರಾಟ ಮಾಡುವ ವ್ಯವಸ್ಥೆ ಇದೆ. ಇದೆಂತ ನ್ಯಾಯ..?
   ರೈತರ ಉತ್ಪನ್ನಗಳ ಬೆಲೆ ಆತನೇ ನಿರ್ಧರಿಸುವಂತಾಗಿ  ರೈತನಿಗೆ ಸೂಕ್ತ ಲಾಭ ತರುವಂತೆ ಮಾಡುವುದು ನಮ್ಮ ವ್ಯವಸ್ಥೆಯಲ್ಲಾಗಲೇ ಬೇಕಾದ ತುರ್ತು ಬದಲಾವಣೆ ಆಗಿದೆ. ಆದರೆ ಕೃಷಿಯೂ ಉಧ್ಯಮವೆಂದು ಪರಿಗಣಿಸಿ ಕೃಷಿ ಉಧ್ಯಮಾಧಿಪತ್ಯ ರೈತರೇ ಸಾದಿಸುವಂತಾಗುವುದು ಸಾಧ್ಯವೇ...? ನಮ್ಮ ಮಾರುಕಟ್ಟೆಯ ಮೇಲೆ ಹಿಡಿತ ಸಾಧಿಸಿರುವ ವರ್ತಕರ ಗುಂಪು ಇದಕ್ಕೆ ಅವಕಾಶ ನೀಡದು.ಕಬ್ಫು. ಅಡಿಕೆ, ತೆಂಗು,ಹತ್ತಿ.. ತೊಗರಿ ಯಂತಹ ಬೆಳೆ ಮಾರುಕಟ್ಟೆಯೇ ದೊಡ್ಡ ದೊಡ್ಡ  ರಪ್ತುದಾರರ ಹಿಡಿತದಲ್ಲಿದ್ದು ಅದು ಯಾವಾಗ ಬೇಕಾದರೂ ಬೆಲೆ ಏರಿಕೆ, ಇಳಿಕೆ ಮಾಡುವ.... ಕೃತಕ ಅಭಾವ ಸೃಷ್ಟಿಸಿ ಮಾರುಕಟ್ಟೆ ನಿಯಂತ್ರಣ ಮಾಡುವ   ಅವರ ಚಿದಂಬರ ರಹಸ್ಯ ಬಯಲು ಮಾಡಲು ನಮ್ಮ ರೈತ ಒಕ್ಕೂಟ ಗಳು ಮುಂದಾಗಬೇಕು. ಇಲ್ಲವಾದರೆ ರೈತರೆಂದೂ ಕೃಷಿ ಉತ್ಪನ್ನ ಮಾರುಕಟ್ಟೆ ಯ ಹಾವು ಏಣಿ ಆಟ ಆಡುತ್ತ, ನೋಡುತ್ತ ಕೂರಬೇಕಷ್ಟೇ...
ನಿಮ್ಮ ಅನಿಸಿಕೆ ಇದೇ ಆಗಿದ್ದರೆ ಶೇರ್ ಮಾಡಿ. ಆಗದಿದ್ದರೂ ಶೇರ್ ಮಾಡಬಹುದು...
@ ರವಿರಾಜ್ ಸಾಗರ್.

No comments:

Post a Comment